ಜಿಯೊನಿ ಮೊಬೈಲ್ ಗೆ ಕೊಹ್ಲಿ ರಾಯಭಾರಿ

Posted By: Chethan
Subscribe to Oneindia Kannada

ನವದೆಹಲಿ, ಜ.9: ಭಾರತದಲ್ಲಿ ತನ್ನದೇ ಆದ ಬ್ರಾಂಡ್ ಮೌಲ್ಯವನ್ನು ಹೊಂದಿರುವ ಜಿಯೋನಿ ಮೊಬೈಲ್ ಸಂಸ್ಥೆಯು , ಭಾರತೀಯ ಕ್ರಿಕೆಟ್ ತಂಡದ ನಾಯಕರಾದ ವಿರಾಟ್ ಕೊಹ್ಲಿಯವರನ್ನು ತನ್ನ ಪ್ರಚಾರ ರಾಯಭಾರಿಯನ್ನಾಗಿ ನೇಮಿಸಿದೆ.

ಉದ್ಯಾನ ನಗರಿಯಲ್ಲಿ ಸೋಮವಾರ ನಡೆದ ಸಂಸ್ಥೆಯ ಕಾರ್ಯಕ್ರಮದಲ್ಲಿ ಕೊಹ್ಲಿ ರಾಯಭಾರತ್ವವನ್ನು ಪ್ರಕಟಿಸಲಾಯಿತು. ಸಮಾರಂಭದಲ್ಲಿ ವಿರಾಟ್ ಕೊಹ್ಲಿ ಆಗಮಿಸಿ ಎಲ್ಲರ ಗಮನ ಸೆಳೆದರು.

ಕೆಲ ದಿನಗಳ ಹಿಂದೆ, ಬಾಲಿವುಡ್ ನಟಿ ಆಲಿಯಾ ಭಟ್ ಅವರನ್ನು ಜಿಯೋನಿ ಸಂಸ್ಥೆಯು ತನ್ನ ಮಹಿಳಾ ಪ್ರಚಾರ ರಾಯಭಾರಿಯನ್ನಾಗಿ ನೇಮಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

Kohli becomes brand ambassador for Gionee

ಸೋಮವಾರ ನಡೆದ ಸಮಾರಂಭದಲ್ಲಿ ಸಭಿಕರುನ್ನುದ್ದೇಶಿಸಿ ಮಾತನಾಡಿದ ವಿರಾಟ್ ಕೊಹ್ಲಿ, "ಕ್ರಿಕೆಟ್ ನಲ್ಲಿ ಹೇಗೆ ಬದ್ಧತೆಯನ್ನು ಹೊಂದುತ್ತೇನೋ, ಪ್ರಚಾರ ರಾಯಭಾರತ್ವದ ಜವಾಬ್ದಾರಿಯಲ್ಲೂ ಅದೇ ಬದ್ಧತೆ ತೋರುತ್ತೇನೆ. ಸಮಾಜದಿಂದ ಪಡೆದ್ದನ್ನು ಸಮಾಜಕ್ಕೆ ಮರಳಿಸುವ ಗುರಿಯನ್ನು ಜಿಯೋನಿ ಸಂಸ್ಥೆ ಹೊಂದಿದ್ದು, ಈ ಸಂಸ್ಥೆಯೊಂದಿಗಿನ ನನ್ನ ಪಯಣ ದೀರ್ಘವಾಗಿರಲಿದೆ ಎಂದು ಆಶಿಸುತ್ತೇನೆ'' ಎಂದು ತಿಳಿಸಿದರು.

ಸಮಾರಂಭದಲ್ಲಿ ಜಿಯೋನಿ ಸಂಸ್ಥೆಯ ಕಾರ್ಯ ನಿರ್ವಾಹಕ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅರವಿಂದ ಆರ್. ವೊಹ್ರಾ ಸೇರಿದಂತೆ ಹಲವರು ಗಣ್ಯರು ಭಾಗವಹಿಸಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Mobile manufacturers Gionee appoints Kohli as brand ambassador. Recently, bollywood actress Alia Bhat was appointed as ambassadon for the company.
Please Wait while comments are loading...