ಸೂಪರ್ ಸ್ಟಾರ್ ರಜನಿ ಸಿನ್ಮಾ ವಿರುದ್ಧ ತಿರುಗಿಬಿದ್ದ ಟೆಲಿಕಾಂ ಆಪರೇಟರ್ಸ್
ಬೆಂಗಳೂರು, ನವೆಂಬರ್ 28: ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಅಭಿನಯದ 2.0 ಸಿನಿಮಾ ಬಿಡುಗಡೆಗೂ ಮುನ್ನ ವಿವಾದಕ್ಕೆ ಕಾರಣವಾಗಿದೆ. ಈ ಚಿತ್ರದಿಂದ ಸಾರ್ಜಜನಿಕರಿಗೆ ಕೆಟ್ಟ ಸಂದೇಶ ರವಾನೆಯಾಗಲಿದೆ, ಈ ಚಿತ್ರ ಬಿಡುಗಡೆಗೆ ತಡೆ ನೀಡಬೇಕು ಎಂದು ಕೋರಿ ಟೆಲಿಕಾಂ ಟವರ್ ಕಂಪನಿಗಳು, ಸೆನ್ಸಾರ್ ಮಂಡಳಿ ಮೊರೆ ಹೋಗಿವೆ.
ಈ ಸಿನಿಮಾದಲ್ಲಿ ಮೊಬೈಲ್ಗಳು ಹಾಗೂ ಸಿಗ್ನಲ್ ಟವರ್ನಿಂದ ವಿಕಿರಣಗಳು ಹೊರಹೊಮ್ಮಿ ಅದು ಮನುಷ್ಯರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬ ತಪ್ಪು ಸಂದೇಶ ರವಾನಿಸುತ್ತಿದೆ ಎಂದು ಟೆಲಿಕಾಂ ಟವರ್ ಕಂಪನಿಗಳು ಆರೋಪಿಸಿವೆ.
ಈ ಚಿತ್ರಕ್ಕೆ ನೀಡಿರುವ ಸೆನ್ಸಾರ್ ಪ್ರಮಾಣ ಪತ್ರವನ್ನು ಹಿಂಪಡೆಯಬೇಕು. ಈ ಸಮಸ್ಯೆ ಇತ್ಯರ್ಥವಾಗುವ ತನಕ ಸಿನಿಮಾ ಬಿಡುಗಡೆ ಮಾಡಬಾರದು ಎಂದು Cellular Operators Association of India (COAI) ಆಗ್ರಹಿಸಿದೆ.

ಟೆಲಿಕಾಂ ಆಪರೇಟರ್ಸ್ ಗಳ ವಿರೋಧ
ಸಿನಿಮಾಟೋಗ್ರಾಫ್ ಕಾಯ್ದೆ 1952 ಉಲ್ಲಂಘನೆಯಾಗಿದೆ, ಐಪಿಸಿ ಸೆಕ್ಷನ್ 268, 505, 499 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಸಿಒಎಐ ಆಗ್ರಹಿಸಿದೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರ ಪಾತ್ರವು ಸೆಲ್ ಫೋನ್ ಗಳ ವಿರುದ್ಧ ಸಮರ ಸಾರುವುದನ್ನು ಕಾಣಬಹುದು. ರಜನಿಕಾಂತ್ ಅವರು ಚಿಟ್ಟಿ ಹೆಸರಿನ ರೋಬೋ ಹಾಗೂ ಡಾ. ವಸೀಗರನ್ ಆಗಿ ಕಾಣಿಸಿಕೊಂಡಿದ್ದಾರೆ. ಶಂಕರ್ ನಿರ್ದೇಶನದ ಚಿತ್ರವು ನವೆಂಬರ್ 28ರಂದು ತೆರೆ ಕಾಣಲು ಸಿದ್ಧವಾಗಿದೆ.

ಜಿಯೋ, ವೋಡಾಫೋನ್, ಏರ್ಟೆಲ್ ನಿಂದ ವಿರೋಧ
ರಿಲಯನ್ಸ್ ಜಿಯೋ, ಭಾರ್ತಿ ಏರ್ ಟೆಲ್ ಹಾಗೂ ವೋಡಾಫೋನ್ ಐಡಿಯಾ ಕೂಡಾ ಈ ಚಿತ್ರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಸೂಪರ್ ಸ್ಟಾರ್ ಸಿನಿಮಾವು ಸಾರ್ವಜನಿಕರ ಮೇಲೆ ಭಾರಿ ಪರಿಣಾಮ ಬೀರುವ ನಿರೀಕ್ಷೆ ಇದ್ದೇ ಇರುತ್ತೆ. ಸೆಲ್ ಫೋನ್, ಮೊಬೈಲ್ ಟವರ್ ನಿಂದ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ತಪ್ಪು ಸಂದೇಶ ಸಾರುವುದು ಎಷ್ಟು ಸರಿ ಎಂದು ವಕ್ತಾರರು ಹೇಳಿದ್ದಾರೆ.

ಚಿತ್ರದ ಟ್ರೇಲರ್ ನೋಡಿ ಬೆಚ್ಚಿದ ಕಂಪನಿಗಳು
ಮೊಬೈಲ್ ಟವರ್ಗಳು ಹಾಗೂ ಮೊಬೈಲ್ನಿಂದ ಹೊರಹೊಮ್ಮುವ ವಿಕಿರಣಗಳು ಪಕ್ಷಿಗಳಿಗೆ, ಮಕ್ಕಳಿಗೆ ಹಾಗು ಇನ್ನು ಕೆಲವು ಮಾನವ ಚಟುವಟಿಕೆಗಳಿಗೆ ಅಪಾಯಕಾರಿ ಎಂಬ ತಪ್ಪು ಕಲ್ಪನೆ ಇದೆ. 2.0 ಸಿನಿಮಾ ಅದನ್ನೇ ಪ್ರತಿಪಾದಿಸುತ್ತಿದೆ ಹಾಗಾಗಿ ನಾವು ಸೆನ್ಸಾರ್ ಮಂಡಳಿ ಮೊರೆ ಹೋಗಿದ್ದೇವೆ ಎಂದು ಮಾಥಿವ್ ಅವರು ತಿಳಿಸಿದ್ದಾರೆ.

ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ
2.0 ಸಿನಿಮಾ ಬಿಡುಗಡೆಗೆ ತಡೆ ಕೋರಲಾಗಿದೆ. ಚಿತ್ರಕ್ಕೆ ನೀಡಿರುವ ಪ್ರಮಾಣ ಪತ್ರವನ್ನು ಸೆನ್ಸಾರ್ ಮಂಡಳಿ ಹಿಂಪಡೆಯಬೇಕು, ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾದ ಟ್ರೇಲರ್ನ ಲಿಂಕ್ಗಳನ್ನು ಅಂತರ್ಜಾಲದಿಂದ ತೆಗೆದುಹಾಕಬೇಕು ಎಂದು ಸೆಲ್ಯುಲಾರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಸಿಒಎಐ) ಮಹಾ ನಿರ್ದೇಶಕ ರಂಜನ್ ಮಾಥಿವ್ ಅವರು ಆಗ್ರಹಿಸಿದ್ದಾರೆ.
-
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು? -
92,00,00,000 ರೂಪಾಯಿ ಬಹುಮಾನ, ಈತನ ಬಗ್ಗೆ ಸುಳಿವು ನೀಡಿದರೆ ನಿಮಗೂ ಸಿಗಲಿದೆ ಹಣ... Mojtaba Khamenei -
Shri Gandhada Gudi Serial: "ಶ್ರೀಗಂಧದಗುಡಿ" ಸೀರಿಯಲ್ಗೆ ಗುಡ್ಬೈ ಹೇಳಿದ ಸಂಜನಾ ಬುರ್ಲಿ, ಕಾರಣ ಇಲ್ಲಿದೆ












Click it and Unblock the Notifications