• search

ಮಲ್ಯರನ್ನು ಇರಿಸುವ ಮುಂಬೈ ಜೈಲಿನಲ್ಲಿ ಏನೇನುಂಟು?

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts
    ವಿಜಯ್ ಮಲ್ಯ ಸೇರಲಿರುವ ಮುಂಬೈ ಆರ್ಥರ್ ರೋಡ್ ಜೈಲ್ ನಲ್ಲಿ ಏನೆಲ್ಲಾ ಇದೆ? | Oneindia kannada

    ಲಂಡನ್, ಆಗಸ್ಟ್ 24: ಹತ್ತು ಹಲವು ಬ್ಯಾಂಕ್ ಗಳಿಗೆ ಸಾವಿರಾರು ಕೋಟಿ ರು ವಂಚಿಸಿ, ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯರನ್ನು ಭಾರತಕ್ಕೆ ಕರೆ ತರುವ ಪ್ರಯತ್ನ ಇನ್ನು ಜಾರಿಯಲ್ಲಿದೆ. ಭಾರತದ ಜೈಲಿನ ಪರಿಸ್ಥಿತಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಮಲ್ಯರಿಗೆ ಭಾರತದ ತನಿಖಾಧಿಕಾರಿಗಳು ಪ್ರತ್ಯುತ್ತರ ನೀಡಿದ್ದು, ಮುಂಬೈನ ಜೈಲಿನ ವಿಡಿಯೋವನ್ನು ಕೋರ್ಟಿಗೆ ಸಲ್ಲಿಸಿದ್ದಾರೆ.

    ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ನಡೆದ ವಿಚಾರಣೆ ಸಂದರ್ಭದಲ್ಲಿ ಮಲ್ಯ ಅವರು, ತಮ್ಮ ಬಳಿ 14,000 ಕೋಟಿ ರು ಮೌಲ್ಯದ ಆಸ್ತಿ ಇದ್ದು, ಇದನ್ನು ಮಾರಿ, ಸಾಲ ವಾಪಸ್ ಮಾಡುತ್ತೇನೆ ಎಂದು ಒಪ್ಪಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

    ಮುಂಬೈ ಜೈಲಲ್ಲಿ ಗಾಳಿ, ಬೆಳಕಿರಲ್ಲ, ಎಂದ ಮಲ್ಯ, ವಿಡಿಯೋ ಕೇಳಿದ ಜಡ್ಜ್!

    ಆದರೆ, ಮುಂಬೈನ ಜೈಲುಗಳಲ್ಲಿ ಗಾಳಿ, ಬೆಳಕು ಇರಲ್ಲ ಎಂದು ಮಲ್ಯ ಪರ ವಕೀಲರು ಎತ್ತಿದ್ದ ಆಕ್ಷೇಪಕ್ಕೆ ಉತ್ತರವಾಗಿ ಜೈಲಿನ ಸೆಲ್ ವಿಡಿಯೋ ಮಾಡಿ ಕಳಿಸಲಾಗಿದೆ.

    ಮುಂಬೈಯಲ್ಲಿರುವ ಆರ್ಥರ್ ರೋಡ್ ಜೈಲಿನಲ್ಲಿ ಮಲ್ಯರನ್ನು ಇರಿಸಲು ನಿರ್ಧರಿಸಲಾಗಿದೆ ಎಂದು ಭಾರತದ ಪರ ವಕೀಲರು ಹೇಳಿದರು.

    ಮಲ್ಯ ಹಸ್ತಾಂತರ: ಲಂಡನ್ ಕೋರ್ಟ್ ತೀರ್ಪು ಸೆ. 12ಕ್ಕೆ ಮುಂದೂಡಿಕೆ

    ಆ ಜೈಲಿನ ಬರಾಕ್ ಸಂಖ್ಯೆ 12ರಲ್ಲಿರುವ ಸೌಲಭ್ಯಗಳು ಮತ್ತು ವಿವಿಧ ವಿವರಗಳನ್ನು ತೋರಿಸುವ ವೀಡಿಯೊವೊಂದನ್ನು ಸಲ್ಲಿಸಲಾಗಿದೆ.

    ಸೆಲ್ ನ ಸುರಕ್ಷತೆ ಬಗ್ಗೆ ಭಯ ಬೇಡ

    ಸೆಲ್ ನ ಸುರಕ್ಷತೆ ಬಗ್ಗೆ ಭಯ ಬೇಡ

    ಮಲ್ಯರನ್ನು ಇರಿಸುವ ಸೆಲ್, ಬ್ಯಾರಕ್ ಹಾಗೂ ಇಡೀ ಜೈಲಿನ ಮೇಲೆ ನಿಗಾ ಇಡಲು ಸಿಸಿಟಿವಿ ಕ್ಯಾಮರಾಗಳನ್ನು ಕೂಡ ಅಳವಡಿಸಲಾಗಿದೆ. ಭದ್ರತಾ ದೃಷ್ಟಿಯಿಂದ ಒಳಗೂ ಮತ್ತು ಹೊರಗೂ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಲಾಗಿದೆ. ದಿನದ 24 ಗಂಟೆಗಳ ಕಾಲ ಜೈಲುವಾಸಿಗಳ ಮೇಲೆ ಸಿಬ್ಬಂದಿಗಳ ನಿಗಾ ಇರುತ್ತದೆ. ಬ್ಯಾರಕ್‌ ಒಳಗಡೆ ದಿನಕ್ಕೆ ನಾಲ್ಕು ಬಾರಿ ಆಹಾರವನ್ನು ನೀಡಲಾಗುತ್ತದೆ.

    ಸಾಲ ಮರು ಪಾವತಿ ಬಗ್ಗೆ ಮೋದಿಗೆ ಪತ್ರ

    ಸಾಲ ಮರು ಪಾವತಿ ಬಗ್ಗೆ ಮೋದಿಗೆ ಪತ್ರ

    ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಲ್ಲಿ 9 ಸಾವಿರ ಕೋಟಿ ರುಗಳಿಗೂ ಅಧಿಕ ಸಾಲ ಮಾಡಿಕೊಂಡು 2016ರ ಮಾರ್ಚ್ ತಿಂಗಳಿನಲ್ಲಿ ಯುಕೆಗೆ ಹಾರಿದ ಮಲ್ಯ ಅವರನ್ನು ಭಾರತಕ್ಕೆ ಕರೆತರಲು ಜಾರಿ ನಿರ್ದೇಶನಾಲಯ ಸತತ ಪ್ರಯತ್ನ ನಡೆಸಿದೆ.

    ಮನಿಲಾಂಡ್ರಿಂಗ್ ಪ್ರಕರಣದಲ್ಲಿ ರೆಡ್ ಕಾರ್ನರ್, ಜಾಮೀನು ರಹಿತ ವಾರೆಂಟ್ ಪಡೆದಿರುವ ಮಲ್ಯ ಅವರು ತಾವು ಮೋದಿ ಅವರಿಗೆ ಏಪ್ರಿಲ್ 2016ರಲ್ಲಿ ಬರೆದಿದ್ದ ಪತ್ರದ ಬಗ್ಗೆ ಮತ್ತೊಮ್ಮೆ ಮಲ್ಯ ಪ್ರಸ್ತಾಪಿಸಿದ್ದಾರೆ. ಸೆ.12ರಂದು ನಡೆಯುವ ವಿಚಾರಣೆ ವೇಳೆ ಕೂಡಾ ಇದನ್ನು ಪ್ರಸ್ತಾಪಿಸುವ ಸಾಧ್ಯತೆಯಿದೆ.

    ಮಲ್ಯ ಇರುವ ಸೆಲ್ ನಲ್ಲಿ ಏನೆಲ್ಲ ಸೌಲಭ್ಯ

    ಮಲ್ಯ ಇರುವ ಸೆಲ್ ನಲ್ಲಿ ಏನೆಲ್ಲ ಸೌಲಭ್ಯ

    ಟಿವಿ ಸೆಟ್, ವೈಯಕ್ತಿಕ ಟಾಯ್ಲೆಟ್, ಹಾಸಿಗೆ, ವಾಷಿಂಗ್‌ ಪ್ರದೇಶ, ಸೂರ್ಯನ ಬೆಳಕು ಬೀಳುವಂತ ಒಂದು ಅಂಗಳವಿರುವ ಸೆಲ್ ಇದಾಗಿದೆ. ಮುಂಬೈನ ಆರ್ಥರ್‌ ರೋಡ್‌ನಲ್ಲಿರುವ ಜೈಲಿನ ಬ್ಯಾರಕ್‌ ನಂಬರ್‌ 12ನಲ್ಲಿ ಮಲ್ಯರನ್ನು ಇರಿಸಲು ಸಕಲ ವ್ಯವಸ್ಥೆ ಮಾಡಲಾಗಿದೆ. ಜೈಲಿನ ಕೋಣೆ ಹೇಗಿದೆ ಎನ್ನುವ ಕುರಿತಂತೆ 6-8 ನಿಮಿಷಗಳ ವಿಡಿಯೋವನ್ನು ಚಿತ್ರಿಸಿ, ಕೋರ್ಟಿಗೆ ಸಲ್ಲಿಸಲಾಗುವುದು.

    ಸೆಟ್ಲ್ ಮೆಂಟ್ ಗೆ ಎಸ್ ಬಿಐ ಒಪ್ಪಲಿಲ್ಲ

    ಸೆಟ್ಲ್ ಮೆಂಟ್ ಗೆ ಎಸ್ ಬಿಐ ಒಪ್ಪಲಿಲ್ಲ

    ನಾನು ಹಲವು ಬಾರಿ ಮನವಿ ಮಾಡಿದರೂ ಸರ್ಕಾರಿ ಸ್ವಾಮ್ಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಪ್ಪಲಿಲ್ಲ. 4400 ಕೋಟಿ ರು ನೀಡಿ ಒಂದೇ ಸಲಕ್ಕೆ ಸೆಟ್ಲ್ ಮೆಂಟ್ ಮಾಡಿಕೊಳ್ಳುವ ಇರಾದೆ ಇತ್ತು. ಆದರೆ, ನಮ್ಮ ಆಫರ್ ಗೆ ಬೆಲೆ ನೀಡಬೇಕಿತ್ತು. ಈ ಸೆಟ್ಲ್ ಮೆಂಟ್ ಮಾಡಿಕೊಂಡಿದ್ದರೆ ನಮಗೆ 8400 ಕೋಟಿ ರು ನಷ್ಟವಾಗುತ್ತಿತ್ತು. ಆದರೆ, ಸಾಲ ತೀರುತ್ತಿತ್ತು. ಆಗ ಇದ್ದ ಯುಪಿಎ ಸರ್ಕಾರ ಇದಕ್ಕೆ ಆಸ್ಪದ ನೀಡಲಿಲ್ಲ. ಈಗ ನಿಮ್ಮ ಸರ್ಕಾರದಿಂದ ನನಗೆ ಅವಕಾಶ ನೀಡಿದರೆ, ನಾನು ಸೆಟ್ಲ್ ಮೆಂಟ್ ಗೆ ಸಿದ್ಧ ಎಂದು 9 ಸಾವಿರ ಕೋಟಿ ಸಾಲ ಹೊತ್ತುಕೊಂಡಿರುವ ಮಾರ್ಚ್ 2016ರಿಂದ ಭಾರತದಿಂದ ಪರಾರಿಯಾಗಿರುವ ಮಲ್ಯ ಅವರು ಮಾಧ್ಯಮಗಳ ಮುಂದೆ ಹೇಳಿದರು.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Know details of Mallya's cell Mumbai Jail video : A television set, personal toilet and bedding, a washing area and a courtyard to take a stroll in the sunlight are just some of the highlights of Barrack Number 12 of Mumbai's Arthur Road Jail, the prospective residence of fugitive tycoon Vijay Mallya

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more