ಆಭರಣ ಖರೀದಿಸುವ ಗ್ರಾಹಕ ಟ್ರ್ಯಾಕಿಂಗ್ ವಿರುದ್ಧ ಶರವಣ ಕಿಡಿ
ಬೆಂಗಳೂರು, ಆಗಸ್ಟ್ 23: ಆಭರಣ ಖರೀದಿಸುವ ಗ್ರಾಹಕರನ್ನು ಟ್ರ್ಯಾಕ್ ಮಾಡಿ ವ್ಯಾಪಾರ ವಹಿವಾಟಿಗೆ ಧಕ್ಕೆ ತರುವ, ಖಾಸಗಿತನಕ್ಕೆ ಅಡ್ಡಿಯುಂಟು ಮಾಡುವ ಎಚ್.ಯು.ಐ.ಡಿ [ಹಾಲ್ ಮಾರ್ಕ್ ಯುನಿಕ್ ಐಡಿ] ವ್ಯವಸ್ಥೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಜುವೆಲ್ಲರಿ ಅಸೋಸಿಯೇಷನ್ ಅಧ್ಯಕ್ಷ ಡಾ. ಟಿ.ಎ. ಶರವಣ ನೇತೃತ್ವದಲ್ಲಿಂದು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯಿತು.
ಆಭರಣ ಮಾರಾಟಗಾರರು ಸಾಂಕೇತಿಕವಾಗಿ ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಬೆಂಗಳೂರು ಪ್ರೆಸ್ ಕ್ಲಬ್ ಬಳಿ ಪ್ರತಿಭಟನೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ಟಿ.ಎ. ಶರವಣ, ಆಭರಣ ಖರೀದಿದಾರರ ಜಾಡು ಪತ್ತೆ ಮಾಡುವ ತಂತ್ರಜ್ಞಾನದಿಂದ ಸಾಕಷ್ಟು ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಗ್ರಾಹಕರು ಮತ್ತು ಆಭರಣ ಖರೀದಿದಾರರ ನಡುವಣ ಬಾಂಧವ್ಯಕ್ಕೆ ಇದರಿಂದ ಧಕ್ಕೆಯಾಗುತ್ತಿದೆ. ನಮಗೆ ಗ್ರಾಹಕರ ವಿಶ್ವಾಸ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಜತೆಗೆ ಎಚ್.ಯು.ಐ.ಡಿ ಜಾರಿ ಮಾಡಿ ಪರೋಕ್ಷವಾಗಿ ಮಾನಸಿಕ ಒತ್ತಡ ಹೇರುವ ಜತೆಗೆ ಅಧಿಕಾರಿಗಳು ದುಡ್ಡು ಮಾಡಲು ಸರ್ಕಾರವೇ ಅವಕಾಶ ಮಾಡಿಕೊಟ್ಟಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
90 ಸಾವಿರ ವ್ಯಾಪಾರಿಗಳ ನೋಂದಣಿ, 1 ಕೋಟಿಗೂ ಹೆಚ್ಚು ಆಭರಣಗಳಿಗೆ ಹಾಲ್‌ಮಾರ್ಕ್

ಹಾಲ್ ಮಾರ್ಕ್ ಅಳವಡಿಸುವುದಕ್ಕೆ ತಕರಾರಿಲ್ಲ
ಆಭರಣಗಳಿಗೆ ಹಾಲ್ ಮಾರ್ಕ್ ಅಳವಡಿಸುವ ಸರ್ಕಾರದ ತೀರ್ಮಾನಕ್ಕೆ ನಮ್ಮ ತಕರಾರಿಲ್ಲ. ಈಗಾಗಲೇ ಇದನ್ನು ಸ್ವಾಗತಿಸಿ ಅನುಷ್ಠಾನಕ್ಕೆ ತಂದಿದ್ದೇವೆ. ಆದರೆ ಕೆಲವೊಂದು ತುರ್ತು ಸಂದರ್ಭಗಳಲ್ಲಿ ಮದುವೆ ಮತ್ತಿತರ ಸಮಾರಂಭಗಳಿಗೆ ಮಾಂಗಲ್ಯ, ಬಳೆ, ಉಂಗುರ ಮತ್ತಿತರ ಆಭರಣಗಳನ್ನು ಖರೀದಿಸಲು ಗ್ರಾಹಕರಿಗೆ ತೊಂದರೆಯಾಗುತ್ತಿದೆ. ಚಿನ್ನ ತಯಾರಿಸಿದ ನಂತರ ಹಾಲ್ ಮಾರ್ಕ್ ಹಾಕಲು ವಿಳಂಬವಾಗುತ್ತಿದೆ. ಇದರಿಂದ ಗ್ರಾಹಕರ ವಿಶ್ವಾಸ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಡಾ. ಟಿ.ಎ. ಸರವಣ ಹೇಳಿದರು.
ದೇಶಾದ್ಯಂತ ಎಚ್.ಯು.ಐ.ಡಿ ಜಾರಿಮಾಡಿರುವ ಕೇಂದ್ರದ ತೀರ್ಮಾನದ ವಿರುದ್ಧ ಕಾನೂನು ಹೋರಾಟಕ್ಕೆ ಅಣಿಯಾಗಿದ್ದೇವೆ. ದೇಶದ ಎಲ್ಲಾ ಕಡೆಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ನಿರ್ಧರಿಸಲಾಗಿದೆ.

ಗ್ರಾಹಕರು ಹಾಗೂ ಮಾಲಿಕರಿಗೆ ಸಮಸ್ಯೆ ಎದುರಾಗುತ್ತಿದೆ
ಆಭರಣ ಕೈಗಾರಿಕೆಯಿಂದ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಆದಾಯ ದೊರೆಯುತ್ತಿದೆ. ಗ್ರಾಹಕರು ಮತ್ತು ಆಭರಣ ಮಾರಾಟಗಾರರ ವಿರುದ್ಧವಾಗಿರುವ ಈ ನಿಯಮವನ್ನು ಕೈಬಿಡದಿದ್ದರೆ ಮುಂಬರುವ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಆರಂಭಿಕ ಹಂತದಲ್ಲಿ ಇಂದು ಬೀದಿಗಿಳಿದು ಹೋರಾಟ ಮಾಡುತ್ತಿದ್ದೇವೆ. ಎರಡು ಲಕ್ಷ ರೂಪಾಯಿಗಿಂತ ಹೆಚ್ಚು ಮೊತ್ತದ ಖರೀದಿ ಮಾಡುವವರಿಂದ ಸೂಕ್ತ ದಾಖಲೆ ಪಡೆದು ಆಭರಣ ಮಾರಾಟ ಮಾಡುತ್ತಿದ್ದೇವೆ. ಚಿನ್ನದ ಚೈನ್ ಗೆ ಬೇರೆ, ಡಾಲರ್ ಗೆ ಬೇರೆ ಹಾಲ್ ಮಾರ್ಕ್ ಹಾಕಿಸುವಂತೆ ಒತ್ತಡ ಹೇರಲಾಗುತ್ತಿದೆ. ದುರಂತವೆಂದರೆ ಹಾಲ್ ಮಾರ್ಕ್ ಕೇಂದ್ರಗಳಲ್ಲಿ ಸೂಕ್ತ ಮೂಲ ಸೌಕರ್ಯ ಇಲ್ಲ. ಸಿಬ್ಬಂದಿ ಸಂಖ್ಯೆ ಹೆಚ್ಚಿಲ್ಲ. ಇದರಿಂದ ಹಬ್ಬದ ಸಂದರ್ಭಗಳಲ್ಲಿ ಗ್ರಾಹಕರು ಹಾಗೂ ಮಾಲಿಕರಿಗೆ ಸಮಸ್ಯೆ ಎದುರಾಗುತ್ತಿದೆ.

ದೇವೇಗೌಡರ ನೇತೃತ್ವದಲ್ಲಿ ಕೇಂದ್ರ ಸರ್ಕಾರಕ್ಕೆ ದೂರು
ಹೀಗಾಗಿ ನಮ್ಮ ಸಂಘಟನೆಯಿಂದ ದೆಹಲಿಗೆ ತೆರಳಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ನೇತೃತ್ವದಲ್ಲಿ ಕೇಂದ್ರ ಸರ್ಕಾರಕ್ಕೆ ನಮ್ಮ ಸಮಸ್ಯೆಗಳ ಕುರಿತು ಮನವರಿಕೆ ಮಾಡಿಕೊಡಲಾಗುವುದು ಎಂದು ಹೇಳಿದರು. ದೇಶದಲ್ಲಿ ಇನ್ನೂ 6 ರಿಂದ 7 ಕೋಟಿ ಆಭರಣಗಳಿಗೆ ಹಾಲ್ ಮಾರ್ಕ್ ಹಾಕುವುದು ಬಾಕಿ ಉಳಿದಿದೆ. ದಿನಕ್ಕೆ ಕೇವಲ 2 ಲಕ್ಷ ಆಭರಣಗಳಿಗೆ ಮಾತ್ರ ಹಾಲ್ ಮಾರ್ಕ್ ಹಾಕುವ ಸಾಮರ್ಥ್ಯವನ್ನು ಈ ಸಂಸ್ಥೆ ಹೊಂದಿದೆ. ಇದರಿಂದ ವ್ಯಾಪಾರ ವಹಿವಾಟಿನಲ್ಲಿ ಭಾರೀ ನಷ್ಟ ಉಂಟಾಗುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರವೇ ಹೊಣೆ ಎಂದು ಆಪಾದಿಸಿದರು. ಸುದ್ದಿಗೋ಼ಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ರವಿ ಕುಮಾರ್, ಪ್ರಕಾಶ್, ನೇಮಿಚಂದ್, ಚೇತನ್ ಉಪಸ್ಥಿತರಿದ್ದರು.

350ಕ್ಕೂ ಹೆಚ್ಚಿನ ಸಂಘಟನೆಗಳು ಈ ಪ್ರತಿಭಟನೆಗೆ ಬೆಂಬಲ
ದೇಶದ ನಾಲ್ಕೂ ವಲಯಗಳ ಮತ್ತು ಆಭರಣ ಉದ್ಯಮದ 350ಕ್ಕೂ ಹೆಚ್ಚಿನ ಸಂಘಟನೆಗಳು ಈ ಪ್ರತಿಭಟನೆಗೆ ಬೆಂಬಲ ನೀಡಿವೆ. ಚಿನ್ನದ ಆಭರಣಗಳ ತಯಾರಕರು, ಸಗಟು ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಗೆ ಜೂನ್ 16 ರಿಂದ ಹಾಲ್‌ಮಾರ್ಕ್ ಕಡ್ಡಾಯವಾಗಿದ್ದರೂ ಅವರಿಗೆ ಸಾಕಷ್ಟು ಸಮಯ ನೀಡುವ ಸಲುವಾಗಿ ಆಗಸ್ಟ್ ಅಂತ್ಯದವರೆಗೆ ಯಾವುದೇ ದಂಡ ವಿಧಿಸಲಾಗುವುದಿಲ್ಲ ಎಂದು ವಿತ್ತ ಸಚಿವಾಲಯ ತಿಳಿಸಿದೆ. ಇನ್ನು, ಹಳೆಯ ಆಭರಣಗಳನ್ನು ಸಹ ಆಭರಣಕಾರರಿಂದ ಸಾಧ್ಯವಾದರೆ ಹಾಲ್‌ಮಾರ್ಕ್ ಮಾಡಬಹುದು. ಅಥವಾ ಕರಗಿಸಿ ಹೊಸ ಆಭರಣಗಳನ್ನು ಮಾಡಿದ ನಂತರ ಹಾಲ್‌ಮಾರ್ಕ್ ಗುರುತು ಮಾಡಬಹುದು ಎಂದು ಸಹ ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಹೇಳಿದೆ.

ಹಾಲ್‌ಮಾರ್ಕಿಂಗ್‌ನ ವೇಗದ ಕುರಿತು ಮಾತನಾಡಿದ ಬಿಐಎಸ್
ಹಾಲ್‌ಮಾರ್ಕಿಂಗ್‌ನ ವೇಗದ ಕುರಿತು ಮಾತನಾಡಿದ ಬಿಐಎಸ್ ಮಹಾ ನಿರ್ದೇಶಕರು, ಹಾಲ್‌ಮಾರ್ಕಿಂಗ್ ವೇಗದಲ್ಲಿ ಕ್ರಮೇಣ ಮತ್ತು ತೃಪ್ತಿದಾಯಕ ಹೆಚ್ಚಳ ಕಂಡುಬಂದಿದೆ ಎಂದು ಹೇಳಿದರು. 2021 ರ ಜುಲೈ 1 ರಿಂದ ಜುಲೈ 15 ರವರೆಗಿನ ಹದಿನೈದು ದಿನಗಳಲ್ಲಿ 14.28 ಲಕ್ಷ ಆಭರಣಗಳಿಗೆ ಹಾಲ್‌ಮಾರ್ಕ್ ಮಾಡಲಾಗಿದೆ, ಆದರೆ ಈ ಸಂಖ್ಯೆ ಆಗಸ್ಟ್ 1 ರಿಂದ ಆಗಸ್ಟ್ 15 ರ ಅವಧಿಯಲ್ಲಿ 41.81 ಲಕ್ಷಕ್ಕೆ ಹೆಚ್ಚಾಗಿದೆ. 2021 ರ ಆಗಸ್ಟ್ 20 ರಂದು ಒಂದೇ ದಿನದಲ್ಲಿ 3 ಲಕ್ಷ 90 ಸಾವಿರ ಆಭರಣಗಳನ್ನು ಹಾಲ್‌ಮಾರ್ಕ್ ಮಾಡಲಾಗಿದೆ. ಒಂದು ವರ್ಷದಲ್ಲಿ 10 ಕೋಟಿ ಆಭರಣಗಳನ್ನು ಹಾಲ್‌ಮಾರ್ಕ್ ಮಾಡಲು ಯಾವುದೇ ಸಮಸ್ಯೆ ಇರುವುದಿಲ್ಲ. ಇದು ದೇಶಾದ್ಯಂತ ಹಾಲ್‌ಮಾರ್ಕಿಂಗ್ ಕಡ್ಡಾಯವಾದರೆ ಹಾಲ್‌ಮಾರ್ಕ್ ಮಾಡಲಾಗುವ ಅಂದಾಜು ಸಂಖ್ಯೆಯ ಆಭರಣಗಳಾಗಿವೆ ಎಂದರು.
ಬಿಐಎಸ್, ಆಭರಣಗಳ ಬಿ-ಟಿ-ಬಿ ಚಲನೆಯನ್ನು ಟ್ರ್ಯಾಕಿಂಗ್ ಮಾಡುತ್ತಿದೆ ಮತ್ತು ಆಭರಣ ವ್ಯಾಪಾರಿಗಳು ಬಿಐಎಸ್ ಪೋರ್ಟಲ್‌ನಲ್ಲಿ ಮಾರಾಟದ ವಿವರಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ ಎಂಬುದು ಸಂಪೂರ್ಣ ತಪ್ಪು ಮಾಹಿತಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪ್ರಶ್ನೆಗಳಿಗೆ ಉತ್ತರಿಸಿದ ಬಿಐಎಸ್ ಮಹಾ ನಿರ್ದೇಶಕರು ಸ್ಪಷ್ಟಪಡಿಸಿದರು. ಆಭರಣ ವ್ಯಾಪಾರಿಗಳು ಅಂತಹ ಯಾವುದೇ ವಿವರ ನೀಡಬೇಕಾದ ಅವಶ್ಯಕತೆ ಇಲ್ಲ ಎಂದು ಅವರು ಹೇಳಿದರು.
Recommended Video

ಹಾಲ್‌ಮಾರ್ಕಿಂಗ್ ಪ್ರತಿಯೊಬ್ಬರಿಗೂ ಪ್ರಯೋಜನಕಾರಿ
ಹಾಲ್‌ಮಾರ್ಕಿಂಗ್ ಪ್ರತಿಯೊಬ್ಬರಿಗೂ ಪ್ರಯೋಜನಕಾರಿ ಹೆಚ್ ಯು ಐ ಡಿ- ಆಧಾರಿತ ಹಾಲ್‌ಮಾರ್ಕಿಂಗ್ ಪ್ರತಿಯೊಬ್ಬರಿಗೂ ಪ್ರಯೋಜನಕಾರಿಯಾಗಿದೆ ಎಂದು ಅವರು ಪುನರುಚ್ಚರಿಸಿದರು, ಏಕೆಂದರೆ ಇದು ಉದ್ಯಮದ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆಯನ್ನು ತರುತ್ತದೆ, ಗ್ರಾಹಕರು ತಮ್ಮ ಹಣಕ್ಕೆ ಸರಿಯಾದ ಆಭರಣವನ್ನು ಪಡೆಯುವ ಹಕ್ಕನ್ನು ಖಾತ್ರಿಪಡಿಸುತ್ತದೆ ಮತ್ತು ಇನ್ಸ್‌ಪೆಕ್ಟರ್ ರಾಜ್ ನಿಂದ ಮುಕ್ತಿ ನೀಡುತ್ತದೆ ಎಂದು ಹೇಳಿದರು.
ಈ ಯೋಜನೆಯ ಅನುಷ್ಠಾನದಲ್ಲಿ ಉದ್ಯಮದ ಸದಸ್ಯರು ತಮ್ಮ ಸಂಪೂರ್ಣ ಸಹಕಾರವನ್ನು ನೀಡಬೇಕು. ಉದ್ಯಮದ ನಿಜವಾದ ಬೇಡಿಕೆಗಳನ್ನು ಈಡೇರಿಸಲು ಸರ್ಕಾರವು ಸಂಪೂರ್ಣವಾಗಿ ಬದ್ಧವಾಗಿರುವುದರಿಂದ ಮುಷ್ಕರ ಮತ್ತು ಅಂತಹ ಚಟುವಟಿಕೆಗಳಿಂದ ದೂರವುಳಿಯಬೇಕು ಎಂದು ಅವರು ಮನವಿ ಮಾಡಿದರು.
-
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್












Click it and Unblock the Notifications