Get Updates
Get notified of breaking news, exclusive insights, and must-see stories!

ಕರ್ನಾಟಕದ ವಿಮಾನ ನಿಲ್ದಾಣಗಳು ಫುಲ್ ನಷ್ಟದಲ್ಲಿದೆಯಂತೆ!

ಬೆಂಗಳೂರು, ಅ.10: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಬಿಟ್ಟು, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ನಿಯಂತ್ರಣದಲ್ಲಿರುವ ರಾಜ್ಯದ ವಿಮಾನ ನಿಲ್ದಾಣಗಳೆಲ್ಲವೂ ಭಾರಿ ನಷ್ಟದಲ್ಲಿದೆ ಎಂಬ ಸುದ್ದಿ ಬಂದಿದೆ.

ಸರ್ಕಾರಿ ಹಾಗೂ ಸಾರ್ವಜನಿಕ ಸಹಭಾಗಿತ್ವ(ಪಿಪಿಪಿ)ದಲ್ಲಿ ನಡೆಯುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ಬಿಟ್ಟು ರಾಜ್ಯದಲ್ಲಿರುವ ಮಿಕ್ಕ ವಿಮಾನ ನಿಲ್ದಾಣಗಳು 2011-14ರ ಅವಧಿಯಲ್ಲಿ ಸುಮಾರು 350.78 ಕೋಟಿ ರು.ಗೂ ಅಧಿಕ ನಷ್ಟ ಅನುಭವಿಸಿದೆ. [ರಾಮ್ ಚರಣ್ ಟ್ರೂ ಜೆಟ್ ದೂರು ಪಟ್ಟಿಯಲ್ಲಿ ಟಾಪ್!]

Karnataka airports incur loss of Rs 350 crore in four years

ಅದರೆ, ಇದರಲ್ಲಿ ಅಂಥ ವಿಶೇಷವೇನಿಲ್ಲ, ಎಎಐ ನಿರ್ವಹಿಸುತ್ತಿರುವ ದೇಶದ 125 ವಿಮಾನ ನಿಲ್ದಾಣಗಳ 100 ವಿಮಾನ ನಿಲ್ದಾಣಗಳು ನಷ್ಟ ಅನುಭವಿಸಿವೆ. 8 ವಿಮಾನ ನಿಲ್ದಾಣಗಳು ಮಾತ್ರ ಲಾಭದ ಗೆರೆ ದಾಟುತ್ತಿವೆ.

ಕರ್ನಾಟಕದಲ್ಲಿ ಕೆಐಎ ಅಲ್ಲದೆ ಎಚ್ಎಎಲ್ ಕೂಡಾ ಎಎಐ ನಿಯಂತ್ರಣದಲ್ಲಿದೆ. ಬೆಂಗಳೂರಿನ ಎಚ್ ಎಎಲ್ ವಿಮಾನ ನಿಲ್ದಾಣದಲ್ಲಿ ವಿಐಪಿ ಫ್ಲೈಟ್ ಗಳು, ಚಾರ್ಟೆಡ್ ವಿಮಾನಗಳು ಮಾತ್ರ ಹಾರಾಟ ಮಾಡುತ್ತಿವೆ. ಜೊತೆಗೆ ಬೆಳಗಾವಿ, ಹುಬ್ಬಳ್ಳಿ, ಮಂಗಳೂರು ಹಾಗೂ ಮೈಸೂರಿನಲ್ಲಿ ವಿಮಾನ ಹಾರಾಟ ಯಾವುದೇ ಲಾಭ ತರುತ್ತಿಲ್ಲ.

ಎಚ್ ಎಎಲ್ ವಿಮಾನ ನಿಲ್ದಾಣದಿಂದ 160.75 ಕೋಟಿ ರು ನಷ್ಟವಾಗಿದ್ದರೆ, ಒಟ್ಟಾರೆ, ಈ ಅವಧಿಯಲ್ಲಿ ಕರ್ನಾಟಕದಲ್ಲಿ 350 ಕೋಟಿ ರು ನಷ್ಟವಾಗಿದೆ ಎಂದು ಎಎಐ ಚೇರ್ಮನ್ ಆರ್ ಕೆ ಶ್ರೀವತ್ಸಾ ವಿವರಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+