• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡೈಲಿಹಂಟ್ ವಿಡಿಯೋ ''ಜೋಶ್'' App ಏನಿದರ ವಿಶೇಷ?

|

ಬೆಂಗಳೂರು, ಸೆಪ್ಟೆಂಬರ್ 09: ದೇಶದ ನಂಬರ್ ಒನ್ ಸ್ಥಳೀಯ ಭಾಷೆಯ ಕಂಟೆಂಟ್ ಡಿಸ್ಕವರಿ ಪ್ಲಾಟ್ ಫಾರ್ಮ್ ಆಗಿರುವ ಡೈಲಿಹಂಟ್ ತನ್ನ ಮೇಡ್ ಇನ್ ಇಂಡಿಯಾ ಕಿರು ವಿಡಿಯೋ ಆ್ಯಪ್ ಆದ ''ಜೋಷ್'' ಅನ್ನು ಇಂದು ಅಧಿಕೃತವಾಗಿ ಬಿಡುಗಡೆ ಮಾಡಿತು. ಬೀಟಾ ಫೇಸ್ ಮೂಲಕ ಅತ್ಯದ್ಭುತವಾದ ಸೆಳೆತವನ್ನು ಹೊಂದಿರುವ ಜೋಶ್ ಡೈಲಿಹಂಟ್ ಭಾರತ್ ಗೆ ನೀಡುತ್ತಿರುವ ಹೆಮ್ಮೆಯ ಗೌರವವಾಗಿದೆ.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ಸೃಜನಾತ್ಮಕ ಸೌಂದರ್ಯ ಮತ್ತು ವೈವಿಧ್ಯತೆಯು ಇಲ್ಲಿ ಮೇಳೈಸಿದೆ. ಕಳೆದ 45 ದಿನಗಳಲ್ಲಿ ಬೀಟಾ ಬಿಡುಗಡೆಯ ಜೋಷ್ ಸಂಖ್ಯೆಗಳು ಸ್ಫೋಟಗೊಂಡಿವೆ: 200+ ಎ-ಶ್ರೇಯಾಂಕದ ಎಕ್ಸ್ ಕ್ಲೂಸಿವ್ ಕ್ರಿಯೇಟರ್ ಗಳು, 4 ಮೆಗಾ ಮ್ಯೂಸಿಕ್ ಲೇಬಲ್ ಗಳು, 50+ ದಶಲಕ್ಷ ಡೌನ್ಲೋಡ್ ಗಳು, ಪ್ರತಿದಿನ 1+ ಬಿಲಿಯನ್ ವಿಡಿಯೋ ಪ್ಲೇಗಳು, 23+ ಮಿಲಿಯನ್ ದೈನಂದಿನ ಸಕ್ರಿಯ ಬಳಕೆದಾರರು (ಡಿಎಯುಗಳು), ಪ್ರತಿ ಡಿಎಯು ಪ್ರತಿದಿನ 21+ ನಿಮಿಷಗಳ ಬಳಕೆ ಮತ್ತು 5 ಲಕ್ಷಕ್ಕೂ ಅಧಿಕ ಯೂಸರ್ ಜನರೇಟೆಡ್ ಕಂಟೆಂಟ್(ಯುಜಿಸಿ) ಕಂಟೆಂಟ್ ಕ್ರಿಯೇಟರ್ ಗಳು ಇದ್ದಾರೆ.

ಅದ್ಧೂರಿ ಬಿಡುಗಡೆ ಕಂಡ ಭಾರತದ ಶಾರ್ಟ್ ವಿಡಿಯೋ ಆ್ಯಪ್ 'ಜೋಷ್'

ಈ ಪ್ಲಾಟ್ ಫಾರ್ಮ್ ನ ಮೊದಲ ಸವಾಲೆಂದರೆ, #JoshMeinAajaa ಗೆ ಹೆಚ್ಚುತ್ತಿರುವ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಇದರ ಬಿಡುಗಡೆಯಾದ ಕೇವಲ 96 ಗಂಟೆಗಳಲ್ಲಿ ದೇಶಾದ್ಯಂತ 200 ಟಾಪ್ ಕ್ರಿಯೇಟರ್ ಗಳು ಅಮಿತಾಭ್ ಭಟ್ಟಾಚಾರ್ಯ ಬರೆದು, ಕ್ಲಿಂಟನ್ ಸಿರಿಜಿಯೋ ಸಂಯೋಜನೆ ಇರುವ ವೈರಲ್ ಆಗಿರುವ ''ಜೋಶ್ ಗೀತೆ'' ಯನ್ನು ಪ್ರದರ್ಶಿಸಿದ್ದಾರೆ. ಈ ಸವಾಲು 953 ದಶಲಕ್ಷ ವಿಡಿಯೋ ವೀಕ್ಷಣೆಯಾಗಿದ್ದರೆ, 269.1 ದಶಲಕ್ಷ ಹಾರ್ಟ್ಸ್/ಲೈಕ್ಸ್ ಮತ್ತು 307 ಕೆ ಯುಜಿಸಿ ವಿಡಿಯೋ ಅಪ್ ಲೋಡ್ ಗಳನ್ನು ಗಳಿಸಿದೆ.

ಡೈಲಿಹಂಟ್ ನ ಸಂಸ್ಥಾಪಕರಾದ ವೀರೇಂದ್ರ ಗುಪ್ತಾ

ಡೈಲಿಹಂಟ್ ನ ಸಂಸ್ಥಾಪಕರಾದ ವೀರೇಂದ್ರ ಗುಪ್ತಾ

ಡೈಲಿಹಂಟ್ ನ ಸಂಸ್ಥಾಪಕರಾದ ವೀರೇಂದ್ರ ಗುಪ್ತಾ ಅವರು ಮಾತನಾಡಿ, ''ಜೋಷ್ ಮೂರು ದೊಡ್ಡ ಭರವಸೆಗಳಿಗೆ ನಮ್ಮ ಬದ್ಧತೆಯ ಅಭಿವ್ಯಕ್ತಿಯಾಗಿದೆ. ಮೊದಲನೆಯದಾಗಿ, ಡಿಜಿಟಲ್ ಭಾರತ್ ಮತ್ತು ಆತ್ಮನಿರ್ಭರ್ ಭಾರತ್ ಉಪಕ್ರಮಗಳಲ್ಲಿ ನಮ್ಮ ಪಾಲ್ಗೊಳ್ಳುವಿಕೆಯ ಪಾತ್ರ ವಹಿಸುವುದು, ಎರಡನೆಯದಾಗಿ, ನಮ್ಮ ದೇಶದ ಪ್ರತಿಯೊಂದು ಮೂಲೆಮೂಲೆಯಲ್ಲಿಯೂ ಇರುವ ದೊಡ್ಡ ಮತ್ತು ದೇಸೀಯವಾದ ಪರಿಸರ ವ್ಯವಸ್ಥೆಯಲ್ಲಿನ ಪ್ರತಿಭಾನ್ವಿತ ಕ್ರಿಯೇಟರ್ ಗಳನ್ನು ಸಬಲೀಕರಣಗೊಳಿಸುವುದು. ಮೂರನೆಯದಾಗಿ, ಭಾರತದ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿಯನ್ನು ಉತ್ತೇಜನಗೊಳಿಸುವುದು ಮತ್ತು ಅದನ್ನು ದೊಡ್ಡ ಮಟ್ಟದಲ್ಲಿ ಕಾರ್ಯರೂಪಕ್ಕೆ ತರುವುದಾಗಿದೆ. ಜೋಶ್ ನಂತಹ ಪ್ಲಾಟ್ ಫಾರ್ಮ್ ನ ಯಶಸ್ಸು ಭಾರತ್ ನ ಯಶಸ್ಸಾದಂತೆ'' ಎಂದು ಅಭಿಪ್ರಾಯಪಟ್ಟರು.

ಡೈಲಿಹಂಟ್ ನ ಸಹ-ಸಂಸ್ಥಾಪಕ ಉಮಂಗ್ ಬೇಡಿ

ಡೈಲಿಹಂಟ್ ನ ಸಹ-ಸಂಸ್ಥಾಪಕ ಉಮಂಗ್ ಬೇಡಿ

ಡೈಲಿಹಂಟ್ ನ ಸಹ-ಸಂಸ್ಥಾಪಕ ಉಮಂಗ್ ಬೇಡಿ ಅವರು ಮಾತನಾಡಿ, ''ದೇಶದ ಅತ್ಯುತ್ತಮ ಕ್ರಿಯೇಟರ್ ಗಳು, ಅತಿ ದೊಡ್ಡ ಮ್ಯೂಸಿಕ್ ಲೇಬಲ್ ಗಳು, ಹಾಟ್ ಎಂಟರ್ ಟೇನ್ಮೆಂಟ್ ಮಾದರಿ, ಅಸಾಧಾರಣವಾದ ಬಳಕೆದಾರ ಜನಸಂಖ್ಯಾಶಾಸ್ತ್ರ ಮತ್ತು ಅತಿ ದೊಡ್ಡ ಸ್ಥಳೀಯ ಭಾಷೆಯ ಪ್ಲಾಟ್ ಫಾರ್ಮ್ ಆಗುವ ಮೂಲಕ ಜೋಶ್ ಒಂದು ಮಹಾಘಟ ಬಂಧನವಾಗಿದೆ. ಇದು ನಿಜವಾಗಿಯೂ ಭಾರತ್ ಗಾಗಿ, ಭಾರತ್ ನಿಂದ ಭಾರತ ನಿರ್ಮಿತವಾಗಿದ್ದು, 10 ಭಾರತೀಯ ಭಾಷೆಗಳಲ್ಲಿ ಕಿರು ವಿಡಿಯೋ ಪ್ಲಾಟ್ ಫಾರ್ಮ್ ಆಗಿದೆ. ಅದು ಅಗಾಧವಾದ ಜನಪ್ರಿಯತೆಯನ್ನು ಗಳಿಸಿರುವುದಕ್ಕೆ ನಮಗೆ ಅತ್ಯಂತ ಆನಂದ ಉಂಟಾಗಿದೆ'' ಎಂದು ತಿಳಿಸಿದರು.

ಕ್ರಿಯೇಟರ್ ಮೊದಲು, ಗ್ರಾಹಕ-ಕೇಂದ್ರಿತ ಆಪ್

ಅಭಿಮಾನಿಗಳ ನೆಚ್ಚಿನ ಜೋಶ್ ಈಗ ತನ್ನ ಪ್ಲಾಟ್ ಫಾರ್ಮ್ ನಲ್ಲಿ 200+ ಎಕ್ಸ್ ಕ್ಲೂಸಿವ್ ಕ್ರಿಯೇಟರ್ಸ್ ಅನ್ನು ಹೊಂದಿದೆ. ಇದರಲ್ಲಿ ಭಾರತದ ದೊಡ್ಡದಾದ ಫೈಸಲ್(ಫೈಸು) ಶೇಖ್ ಮತ್ತು ಅವರ ತಂಡ 07 ಪಾಲ್ಸ್, ಸಮೀಕ್ಷಾ ಸೂದ್ ಮತ್ತು ಮತ್ತು ಆಕೆಯ ತೀನ್ ತಿಗಾಡ ಎದುರಾಳಿಗಳು, ಭಾವಿನ್ ಭಾನುಶಾಲಿ ಹಾಗೂ ವಿಶಾಲ್ ಪಾಂಡೆ ಮತ್ತು ಅದ್ನಾನ್ ಶೇಖ್ ಸೇರಿದ್ದಾರೆ. ಭಾರತ್ ನ ನಿಜವಾದ ಮತ್ತು ಸಂಪೂರ್ಣ ಪ್ರಾತಿನಿಧ್ಯ ಹೊಂದಿರುವ ನಂಬಲಾಗದಷ್ಟು ಪ್ರತಿಭಾವಂತ ಕಲಾವಿದರನ್ನು ಸೇರಿಸಲು ಈ ಪಟ್ಟಿಯು ಮೀರಿದೆ.

ಸೃಜನಶೀಲತೆಗೆ ಸಂಗೀತದ ಶಕ್ತಿಯನ್ನು ತುಂಬುತ್ತಿರುವ ಜೋಶ್ ಭಾರತದ ಅತಿದೊಡ್ಡ ಮ್ಯೂಸಿಕ್ ಲೇಬಲ್ ಆಗಿರುವ ಟಿ-ಸೀರೀಸ್, ಸೋನಿ, ಝೀ ಮ್ಯೂಸಿಕ್ ಮತ್ತು ದಿವೋ ಮ್ಯೂಸಿಕ್ ಬಳಕೆದಾರರಿಗೆ ಎಲ್ಲಾ ಭಾರತೀಯ ಕಿರು ವಿಡಿಯೋ ಪ್ಲಾಟ್ ಫಾರ್ಮ್ ಗಳಲ್ಲಿ ಅತಿ ದೊಡ್ಡ ಮತ್ತು ವಿಸ್ತಾರವಾದ ಸಂಗೀತದ ಕಣಜಗಳಲ್ಲಿ ಒಂದಾಗಿದೆ.

ಟಿ- ಸೀರೀಸ್ ವ್ಯವಸ್ಥಾಪಕ ನಿರ್ದೇಶಕ ಭೂಷಣ್

ಟಿ- ಸೀರೀಸ್ ವ್ಯವಸ್ಥಾಪಕ ನಿರ್ದೇಶಕ ಭೂಷಣ್

ಟಿ- ಸೀರೀಸ್ ವ್ಯವಸ್ಥಾಪಕ ನಿರ್ದೇಶಕ ಭೂಷಣ್ ಕುಮಾರ್ ಅವರು ಮಾತನಾಡಿ, ''ಸಂಗೀತವು ಸಮುದಾಯಗಳನ್ನು ಹಿಡಿದಿಟ್ಟುಕೊಳ್ಳುವ ಸಾಧನವಾಗಿದ್ದು, ಇದು ಯಾವಾಗಲೂ ಇರುತ್ತದೆ. ನಾವು ಟಿ-ಸೀರೀಸ್ ನಲ್ಲಿ ಜೋಶ್ ನಲ್ಲಿ ಪಾಲುದಾರರಾಗಿರುವುದಕ್ಕೆ ನಮಗೆ ಸಂತಸ ಎನಿಸುತ್ತಿದೆ. ಕಂಟೆಂಟ್ ಕ್ರಿಯೇಶನ್ ನಲ್ಲಿ ಸಂಗೀತವು ಪ್ರಮುಖ ಭಾಗವಾಗಿರುವುದರಿಂದ, ಸಂಗೀತ ಮತ್ತು ಕ್ರಿಯೇಟರ್ ಗಳ ನಡುವೆ ಬಲವಾದ ಬಂಧಕ್ಕೆ ಒಂದು ರೂಪ ಕೊಡಲು ನೆರವಾಗುವ ಬ್ರ್ಯಾಂಡ್ ಗಳೊಂದಿಗೆ ಪಾಲುದಾರಿಕೆಯನ್ನು ಹೊಂದಲು ನಮಗೆ ಹೆಮ್ಮೆ ಎನಿಸುತ್ತಿದೆ'' ಎಂದು ತಿಳಿಸಿದರು.

ಟಿ-ಸೀರೀಸ್ ನ ಅಧ್ಯಕ್ಷ ನೀರಜ್ ಕಲ್ಯಾಣ್ ಅವರು ಮಾತನಾಡಿ, ''ನಿಯಮಬದ್ಧವಾದ ಸಂಗೀತದ ಲೋಕವಾದ ಜೋಶ್ ಗೆ ನಾವು ಸ್ವಾಗತ ಕೋರುತ್ತಿದ್ದೇವೆ. ತನ್ನ ಆರಂಭ ಮಾಡುತ್ತಿರುವ ಜೋಶ್ ನೊಂದಿಗೆ ಪಾಲುದಾರರಾಗುತ್ತಿರುವುದಕ್ಕೆ ನಮಗೆ ಸಂತಸವೆನಿಸುತ್ತಿದೆ ಮತ್ತು ಜೋಶ್ ನಲ್ಲಿ ಕ್ರಿಯೇಟರ್ ಗಳು ತಮ್ಮ ಕ್ರಿಯೇಟಿವಿಟಿ ಮತ್ತು ಪ್ರತಿಭೆಯನ್ನು ಅಭಿವ್ಯಕ್ತಗೊಳಿಸುವ ಭಾಗವಾಗಿ ನಾವು ಪ್ರಮುಖ ಪಾತ್ರ ವಹಿಸಲಿದ್ದೇವೆ'' ಎಂದು ಹೇಳಿದರು.

  Online Class ನೆಪದಲ್ಲಿ ಜೂಜಾಟ , ಪೋಷಕರೇ ಎಚ್ಚರ! | Oneindia Kannada
  ಝೀ ಮ್ಯೂಸಿಕ್ ಕಂಪನಿಯ ಬಿಸಿನೆಸ್ ಹೆಡ್ ಅನುರಾಗ್ ಬೇಡಿ

  ಝೀ ಮ್ಯೂಸಿಕ್ ಕಂಪನಿಯ ಬಿಸಿನೆಸ್ ಹೆಡ್ ಅನುರಾಗ್ ಬೇಡಿ

  ಝೀ ಮ್ಯೂಸಿಕ್ ಕಂಪನಿಯ ಬಿಸಿನೆಸ್ ಹೆಡ್ ಅನುರಾಗ್ ಬೇಡಿ ಅವರು ಮಾತನಾಡಿ, ''ಜೋಶ್ ಅನ್ನು ಆರಂಭ ಮಾಡುತ್ತಿರುವ ಡೈಲಿಹಂಟ್ ನ ತಂಡಕ್ಕೆ ನಾವು ಅಭಿನಂದನೆ ಸಲ್ಲಿಸುತ್ತಿದ್ದೇವೆ. ಉತ್ತಮ ವಿಷಯವನ್ನು ಬಳಸುವ ಅನುಭವವನ್ನು ಸೃಷ್ಟಿಸುವ ಆಶಯದೊಂದಿಗೆ ನಾವು ಜೋಶ್ ತಂಡದೊಂದಿಗೆ ಪಾಲುದಾರರಾಗುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ. ಸಂಗೀತ ಉದ್ಯಮ ಮತ್ತು ಗ್ರಾಹಕರಿಗೆ ಕಂಟೆಂಟ್ ಬಳಸುವ ಅನುಭವಕ್ಕೆ ಸಾಮೂಹಿಕ ಭವಿಷ್ಯಕ್ಕೆ ಸಕಾರಾತ್ಮಕವಾದ ರೂಪ ನೀಡುವ ಸಹಯೋಗಗಳೊಂದಿಗೆ ನಾವು ಸಕಾರಾತ್ಮಕವಾಗಿದ್ದೇವೆ'' ಎಂದು ತಿಳಿಸಿದರು.

  English summary
  Josh Is the India's best “Made in India” short videos app to enjoy the most viral & trending short videos in your own Language that you can watch anytime anywhere.Dailyhunt is India’s #1 local language content platform offering 1M+ new content artifacts every day in 14 languages.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X