• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜಿಯೋಫೋನ್ ದೀಪಾವಳಿ ಬಂಪರ್ ಆಫರ್ ಇನ್ನೊಂದು ತಿಂಗಳಿಗೆ ವಿಸ್ತರಣೆ

|

ಬೆಂಗಳೂರು, ನವೆಂಬರ್ 04: ಜಿಯೋಫೋನ್ ದೀಪಾವಳಿ 2019 ಕೊಡುಗೆ ಎಂಬ ಹೆಸರಿನ ಒಂದು ಬಾರಿಯ ವಿಶೇಷ ಕೊಡುಗೆಯನ್ನು ಜಿಯೋ ಪ್ರಕಟಿಸಿತ್ತು. ಬೇಡಿಕೆ ಹೆಚ್ಚಾಗಿದ್ದರಿಂದ ಈ ಕೊಡುಗೆಯನ್ನು ಇನ್ನೊಂದು ತಿಂಗಳಿಗೆ ವಿಸ್ತರಣೆ ಮಾಡಲಾಗಿದೆ.

ಜಿಯೋಫೋನ್ ದೀಪಾವಳಿ ಆಫರ್ ನೀಡಿದ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಪಡೆದುಕೊಂಡಿದ್ದು, ಹಲವು ಮಂದಿ ಜಿಯೋ ಪೋನ್ ಕೊಳ್ಳಲು ಮುಗಿಬೀಳುತ್ತಿದ್ದರು. ಈ ಹಿನ್ನಲೆಯಲ್ಲಿ ಜಿಯೋಫೋನ್ ಕಳೆದ 3 ವಾರಗಳಲ್ಲಿ ಅಭೂತಪೂರ್ವ ದಾಖಲೆಯ ಬೇಡಿಕೆಯನ್ನು ಸೃಷ್ಟಿಸಿಕೊಂಡಿದೆ. ಹಾಗಾಗಿ ಜಿಯೋ ಫೋನ್ ಆಫರ್ ಅನ್ನು ಹೆಚ್ಚುವರಿ ಒಂದು ತಿಂಗಳು (ನವೆಂಬರ್) ಮುಂದುವರಿಸಲು ಜಿಯೋ ನಿರ್ಧರಿಸಿದೆ.

ದಸರಾ ಹಾಗೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ, ಜಿಯೋಫೋನ್ ಕೇವಲ ₹699ರ ವಿಶೇಷ ಬೆಲೆಯಲ್ಲಿ ದೊರಕಲಿದೆ. ₹1,500ರ ಸಾಮಾನ್ಯ ಬೆಲೆಯ ಹೋಲಿಕೆಯಲ್ಲಿ ಇದು ₹700ರ ಸ್ಪಷ್ಟ ಉಳಿತಾಯವಾಗಿದ್ದು, ಇದಕ್ಕೆ ನಿಮ್ಮ ಹಳೆಯ ಫೋನನ್ನು ವಿನಿಮಯ ಮಾಡಬೇಕು ಎನ್ನುವಂತಹ ಯಾವ ವಿಶೇಷ ನಿಬಂಧನೆಯೂ ಇರುವುದಿಲ್ಲ

ಜಿಯೋಪೋನ್ ದೀಪಾವಳಿ ಸಮಯದಲ್ಲಿ ಜಿಯೋ ಕುಟುಂಬವನ್ನು ಸೇರಲು ಸಾಧ್ಯವಾಗದ ಫೀಚರ್ ಫೋನ್ ಬಳಕೆದಾರರನ್ನು ಆಕರ್ಷಿಸಲು ಮುಂದಾಗಿತ್ತು, ಈ ಸಂದರ್ಭದಲ್ಲಿ ಬಳಕೆದಾರಿಂದ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನಲೆಯಲ್ಲಿ, ದೀಪಾವಳಿ ಹಬ್ಬದ ಕೊಡುಗೆಯ ಲಾಭಗಳನ್ನು ಪಡೆಯಲು ಮತ್ತು ಜಿಯೋ ಡಿಜಿಟಲ್ ಲೈಫ್‌ ಆರಂಭಿಸಲು ಮತ್ತೆ ಅವಕಾಶವನ್ನು ನೀಡಲಾಗಿದ್ದು, ಇನ್ನೂ ಒಂದು ತಿಂಗಳು ಈ ಆಫರ್ ಪಡೆದುಕೊಳ್ಳಲು ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ.

ಈ ಆಫರ್ ಅನ್ನು ಒಂದು ತಿಂಗಳು ವಿಸ್ತರಿಸಿರುವುದರಿಂದ 2G ಫೀಚರ್ ಫೋನ್ ಬಳಕೆದಾರರು ಜಿಯೋಫೋನ್ ಪ್ಲಾಟ್‌ಫಾರ್ಮ್‌ಗೆ ಆಗಮಿಸಬಹುದಾಗಿದೆ. ಈ ಮೂಲಕ ಸ್ಮಾರ್ಟ್ ಫೋನ್ ಬಳಕೆಯ ಅನುಭವನ್ನು ಸಿಂಗಲ್-ಲಾರ್ಗೆಸ್ಟ್ 4 ಜಿ ಡಿವೈಸ್ ನಲ್ಲಿ ಪಡೆಯಬಹುದಾಗಿದೆ.

ಜಿಯೋಫೋನ್ ದೀಪಾವಳಿ ಕೊಡುಗೆಯ ಲಾಭಗಳು

ಜಿಯೋಫೋನ್ ದೀಪಾವಳಿ ಕೊಡುಗೆಯ ಲಾಭಗಳು

ಜಿಯೋಫೋನ್ ದೀಪಾವಳಿ ಕೊಡುಗೆಯ ಭಾಗವಾಗಿ ಜಿಯೋ ಫೋನ್ ರೂ.699ಕ್ಕೆ ದೊರೆಯುತ್ತಿದೆ. (ಮೂಲತಃ 1,500 ರೂ.ಗಳಿಗೆ ಮಾರಾಟವಾಗುತ್ತಿತ್ತು) ಮತ್ತು ಇನ್ನೊಂದು ತಿಂಗಳು (ನವೆಂಬರ್) ಈ ಆಫರ್ ಲಭ್ಯವಿರುತ್ತದೆ.

ದೀಪಾವಳಿ ಕೊಡುಗೆಯ ಲಾಭವಾಗಿ ರೂ.700 ಮೌಲ್ಯದ ಹೆಚ್ಚುವರಿ ಡೇಟಾ ಪ್ರಯೋಜನಗಳನ್ನು ಬಳಕೆದಾರರಿಗೆ ಜಿಯೋ ನೀಡಲಿದೆ. ಜಿಯೋ ಪೋನ್ ಕೊಳ್ಳುವ ಗ್ರಾಹಕರು ಮೊದಲು ಮಾಡಿಸುವ 7 ರೀಚಾರ್ಜ್‌ಗಳಲ್ಲಿ ಜಿಯೋ ಹೆಚ್ಚುವರಿಯಾಗಿ ಪ್ರತಿ ರೀಚಾರ್ಜ್‌ನಲ್ಲಿ (ರೂ. 99 X7) ರೂ.99 ಮೌಲ್ಯದ ಡೇಟಾವನ್ನು ಉಚಿತವಾಗಿ ಸೇರಿಸುತ್ತದೆ. ಇದರಿಂದಾಗಿ ರೂ.700 ಮೌಲ್ಯದ ಹೆಚ್ಚುವರಿ ಡೇಟಾವು ಜಿಯೋಫೋನ್ ಬಳಕೆದಾರರಿಗೆ ದೊರೆಯಲಿದೆ. ಈ ಲಾಭದಿಂದಾಗಿ ಫೀಚರ್ ಪೋನ್ ಬಳಕೆದಾದರರು ಇನ್ನು ಮುಂದೆ ಮನರಂಜನೆ, ಪಾವತಿ, ಇ-ಕಾಮರ್ಸ್, ಶಿಕ್ಷಣ, ಕಲಿಕೆ, ರೈಲು ಮತ್ತು ಬಸ್ ಬುಕಿಂಗ್ ಮತ್ತು ಇನ್ನೂ ಹೆಚ್ಚಿನ ಲಾಭವನ್ನು ಜಿಯೋ ಫೋನ್‌ನಲ್ಲಿ ಪಡೆದುಕೊಳ್ಳಬಹುದಾಗಿದೆ.

2ಜಿಯಿಂದ 4ಜಿಗೆ ಬದಲಾಯಿಸಿಕೊಳ್ಳಿ

2ಜಿಯಿಂದ 4ಜಿಗೆ ಬದಲಾಯಿಸಿಕೊಳ್ಳಿ

ಜಿಯೋಫೋನ್ ಮೇಲೆ ₹800ರ ಉಳಿತಾಯ ಹಾಗೂ ₹700 ಮೌಲ್ಯದ ಡೇಟಾ ಸೇರಿ, ಪ್ರತಿ ಜಿಯೋಫೋನ್ ಮೇಲೆ ₹1,500ರಷ್ಟು ಲಾಭ ದೊರಕುತ್ತಿದೆ. ಅಭಿವೃದ್ಧಿಹೊಂದುತ್ತಿರುವ ಡಿಜಿಟಲ್ ಇಂಡಿಯಾಗಾಗಿ ₹1,500ರ ಈ ಲಾಭ ಜಿಯೋದ ದೀಪಾವಳಿ ಉಡುಗೊರೆಯಾಗಿದೆ. ಹಬ್ಬದ ತಿಂಗಳಿನಲ್ಲಿ ಲಭ್ಯವಿರುವ ಈ ಒಂದು ಬಾರಿಯ ಕೊಡುಗೆಯನ್ನು ಬಳಸಿಕೊಳ್ಳಲು ಹಾಗೂ ಜಿಯೋಫೋನ್ ವೇದಿಕೆಗೆ ಉನ್ನತೀಕರಿಸಿಕೊಳ್ಳಲು 2ಜಿ ಸೇವೆಗಳನ್ನು ಬಳಸುತ್ತಿರುವ ಎಲ್ಲ ಭಾರತೀಯರನ್ನೂ ಜಿಯೋ ಆಹ್ವಾನಿಸುತ್ತಿದೆ.

ಕಾರ್ಯಕಾರಿ ನಿರ್ದೇಶಕ ಮುಖೇಶ್

ಕಾರ್ಯಕಾರಿ ನಿರ್ದೇಶಕ ಮುಖೇಶ್

"ಕೈಗೆಟುಕುವ ಬೆಲೆಯ ಅಂತರಜಾಲದಿಂದ ಹಾಗೂ ಡಿಜಿಟಲ್ ಕ್ರಾಂತಿಯ ಫಲಗಳಿಂದ ಯಾವ ಭಾರತೀಯರೂ ವಂಚಿತರಾಗದಂತೆ ಜಿಯೋ ಖಾತರಿಪಡಿಸಲಿದೆ. 'ಜಿಯೋಫೋನ್ ದೀಪಾವಳಿ ಉಡುಗೊರೆ'ಯನ್ನು ನೀಡುವ ಮೂಲಕ, ಆರ್ಥಿಕ ಪಿರಮಿಡ್‌ನ ಕೆಳಭಾಗದಲ್ಲಿರುವ ಪ್ರತಿಯೊಬ್ಬ ಹೊಸ ವ್ಯಕ್ತಿಯನ್ನೂ ಅಂತರಜಾಲದ ಅರ್ಥವ್ಯವಸ್ಥೆಗೆ ಕರೆತರುವ ನಿಟ್ಟಿನಲ್ಲಿ ನಾವು ₹1,500 ಮೊತ್ತದ ಹೂಡಿಕೆ ಮಾಡುತ್ತಿದ್ದೇವೆ. ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸಿನ ಡಿಜಿಟಲ್ ಇಂಡಿಯಾ ಆಂದೋಲನದ ಯಶಸ್ಸಿನ ಕುರಿತು ನಮಗಿರುವ ಬದ್ಧತೆಯನ್ನೂ ಇದು ತೋರಿಸುತ್ತದೆ." ಎಂದು ಕಾರ್ಯಕಾರಿ ನಿರ್ದೇಶಕ ಮುಖೇಶ್ ಡಿ. ಅಂಬಾನಿ ಹೇಳಿದ್ದಾರೆ.

35 ಕೋಟಿ ಭಾರತೀಯರ ಕೈಗೆ ಸ್ಮಾರ್ಟ್‌ಫೋನ್ ತಲುಪಿಲ್ಲ

35 ಕೋಟಿ ಭಾರತೀಯರ ಕೈಗೆ ಸ್ಮಾರ್ಟ್‌ಫೋನ್ ತಲುಪಿಲ್ಲ

ಇನ್ನೂ 2ಜಿ ಜಾಲವನ್ನು ಬಳಸುತ್ತಿರುವ ಸುಮಾರು 35 ಕೋಟಿ ಭಾರತೀಯರ ಕೈಗೆ ಸ್ಮಾರ್ಟ್‌ಫೋನ್ ಇನ್ನೂ ತಲುಪಿಲ್ಲ. ಸವಲತ್ತುಗಳ ದೃಷ್ಟಿಯಿಂದ ಅವರು ನಮ್ಮ ದೇಶದಲ್ಲೇ ಅತ್ಯಂತ ಹಿಂದುಳಿದವರಾಗಿದ್ದು ಜಿಯೋಫೋನ್‌ನ ಕಡಿಮೆ ಬೆಲೆಯೂ ಅವರ ಕೈಗೆಟುಕುತ್ತಿಲ್ಲ. ಇದೀಗ ಈ 35 ಕೋಟಿ 2ಜಿ ಬಳಕೆದಾರರು ಡೇಟಾ ಸೇವೆಗಳನ್ನು ಸಂಪೂರ್ಣವಾಗಿ ತೊರೆಯುವ, ಇಲ್ಲವೇ ಕಡಿಮೆ ಗುಣಮಟ್ಟದ 2ಜಿ ಡೇಟಾಕ್ಕೆ ಅತ್ಯಂತ ಹೆಚ್ಚು ಶುಲ್ಕ ತೆರುವ ಕಠಿಣ ಆಯ್ಕೆಯನ್ನು ಎದುರಿಸುತ್ತಿದ್ದಾರೆ. ಅವರಿಗೆ ಉಚಿತ ವಾಯ್ಸ್ ಕರೆಗಳ ಸೌಲಭ್ಯವೂ ಇಲ್ಲ, ಅಂತರಜಾಲವನ್ನು ಬಳಸುವ ಅವಕಾಶವೂ ಇಲ್ಲ.

English summary
The feature phone users who were not able to avail the JioPone Diwali offer, now get another month to avail the benefits of the festive offer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X