• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಾತಂತ್ರ್ಯ ಸಂಭ್ರಮ: ಜಿಯೋ ಮಾರ್ಟ್‌, ಟ್ರೆಂಡ್‌ನಲ್ಲಿ ಪೈಸಾ ವಸೂಲ್ ಸೇಲ್‌

|
Google Oneindia Kannada News

ಬೆಂಗಳೂರು, ಆಗಸ್ಟ್‌ 13: ಜಿಯೋ ಮಾರ್ಟ್‌ ಮತ್ತು ಸ್ಮಾರ್ಟ್‌ ಸೂಪರ್ ಸ್ಟೋರ್‌ ಭಾರತದ ಅತಿದೊಡ್ಡ ಮತ್ತು ಅತ್ಯಂತ ನಿರೀಕ್ಷಿತ ದಿನಸಿ ಮಾರಾಟ ಹಬ್ಬ ಫುಲ್ ಪೈಸಾ ವಸೂಲ್ ಸೇಲ್ ಅನ್ನು ಆಗಸ್ಟ್‌ 14 ರಂದು ಜಿಯೋಮಾರ್ಟ್‌ನಲ್ಲಿ ಆರಂಭವಾಗಲಿದೆ. ಆಗಸ್ಟ್ 18 ರ ವರೆಗೆ ಸೇಲ್ ನಡೆಯಲಿದೆ ಮತ್ತು ಸ್ಮಾರ್ಟ್‌ ಸೂಪರ್‌ ಸ್ಟೋರ್‌ಗಳು, ಸ್ಮಾರ್ಟ್‌ ಪಾಯಿಂಟ್ ಮತ್ತು ರಿಲಾಯನ್ಸ್‌ ಫ್ರೆಶ್‌ ಸೇರಿದಂತೆ 1200 ಕ್ಕೂ ಹೆಚ್ಚು ಸ್ಟೋರ್‌ಗಳ ನೆಟ್‌ವರ್ಕ್‌ನಲ್ಲಿ ಇದು ನಡೆಯಲಿದೆ. ಇಡೀ ದಿನಸಿ ಶ್ರೇಣಿಯಲ್ಲಿ ಭಾರಿ ಉಳಿತಾಯವನ್ನು ಗ್ರಾಹಕರಿಗೆ ಒದಗಿಸುವುದು ಈ ಫುಲ್ ಪೈಸಾ ವಸೂಲ್ ಸೇಲ್‌ನ ಮುಖ್ಯ ಅಂಶವಾಗಿದೆ. ಈ ವರ್ಷ ಕೂಡಾ, ಹೋಲಿಸಲಾಗದ ರಿಯಾಯಿತಿಗಳನ್ನು ಪ್ರಮುಖ ಬ್ರ್ಯಾಂಡ್‌ಗಳ ದಿನಸಿ, ಪ್ಯಾಕೇಜ್ ಆಹಾರ, ಮನೆ ಮತ್ತು ವೈಯಕ್ತಿಕ ಆರೈಕೆ, ಡೈರಿ, ಸಾಮಾನ್ಯ ಸಾಮಗ್ರಿಗಳು ಮತ್ತು ಅಪಾರೆಲ್‌ ಐಟಂಗಳ ಮೇಲೆ ಒದಗಿಸಲಾಗುತ್ತಿದೆ.

ವರಮಹಾಲಕ್ಷ್ಮಿ ಹಬ್ಬದಂದು ಗ್ರಾಹಕರಿಗೆ ಟ್ರೆಂಡ್ಸ್ ವಿಶಿಷ್ಟ ಸ್ಪರ್ಧೆ ವರಮಹಾಲಕ್ಷ್ಮಿ ಹಬ್ಬದಂದು ಗ್ರಾಹಕರಿಗೆ ಟ್ರೆಂಡ್ಸ್ ವಿಶಿಷ್ಟ ಸ್ಪರ್ಧೆ

ಬಿಸ್ಕೆಟ್‌ಗಳು, ಚಾಕೊಲೇಟ್‌ಗಳು ಮತ್ತು ಶಾಂಪೂ ಮೇಲೆ 50% ವರೆಗೆ ರಿಯಾಯಿತಿ ಲಭ್ಯವಿದೆ ಮತ್ತು ಸಾಫ್ಟ್‌ ಡ್ರಿಂಕ್‌, ಟೂತ್‌ಪೇಸ್ಟ್, ನೂಡಲ್ಸ್ ಮತ್ತು ಸೋಪ್‌ಗಳ ಮೇಲೆ ಕನಿಷ್ಠ 33% ರಿಯಾಯಿತಿ ಲಭ್ಯವಿದೆ. ಹಾಗೆಯೇ, ಡಿಟರ್ಜಂಟ್ ವಿಭಾಗದಲ್ಲಿ 30% ರಿಯಾಯಿತಿ ಲಭ್ಯವಿದೆ. 1,470 ರೂ. ಮೌಲ್ಯದ ಬಾಸ್ಮತಿ ಅಕ್ಕಿ ಮತ್ತು ತೈಲದ ಕಾಂಬೋ ಅನ್ನು ರೂ. 1,049 ಕ್ಕೆ ಖರೀದಿ ಮಾಡಬಹುದು. ಜಿಯೋಮಾರ್ಟ್‌ ಆಪ್‌ನಲ್ಲಿ ಗ್ರಾಹಕರು ತಮ್ಮ ಮೆಚ್ಚಿನ ಐಟಂಗಳಿಗೆ ಆರ್ಡರ್‌ ಮಾಡಬಹುದು ಮತ್ತು ಮನೆಗೆ ಉಚಿತವಾಗಿ ಡೆಲಿವರಿ ಪಡೆಯಬಹುದು. ಇದರಲ್ಲಿನ ಇನ್ನೂ ಉತ್ತಮ ಸಂಗತಿಯೇನೆಂದರೆ, ಉಚಿತ ಡೆಲಿವರಿ ಸೇವೆಗೆ ಯಾವುದೇ ಕನಿಷ್ಠ ಆರ್ಡರ್‌ ಮಿರಿ ಇಲ್ಲ.

 200 ಕ್ಕೂ ಹೆಚ್ಚು ನಗರಗಳಲ್ಲಿ ಆಫರ್

200 ಕ್ಕೂ ಹೆಚ್ಚು ನಗರಗಳಲ್ಲಿ ಆಫರ್

ಫುಲ್ ಪೈಸಾ ವಸೂಲ್ ಸೇಲ್ ಆಕರ್ಷಕ ಮತ್ತು ಮನರಂಜನೆಯ ಜಾಹೀರಾತು ಕ್ಯಾಂಪೇನ್‌ಗಳಿಗೂ ಹೆಸರಾಗಿದೆ. ಈ ವರ್ಷದ ಮಾರಾಟ ಕ್ಯಾಂಪೇನ್‌ನಲ್ಲಿ ಜನಪ್ರಿಯ ನಟ ನಟಿಯರಾದ ಸತೀಶ್‌ ಷಾ, ಕೇತಕಿ ದವೆ, ಶುಭಾಂಗಿ ಅತ್ರೆ, ಮುಕುಲ್ ಛಡ್ಡಾ, ಆಶ್ಲೇಷ ಥಾಕೂರ್ ಮತ್ತು ತನಿಷ್ಕ್ ಇದ್ದಾರೆ. ಟೆಲಿವಿಷನ್‌, ರೇಡಿಯೋ, ಪ್ರಿಂಟ್, ಆನ್‌ಲೈನ್, ಸಾಮಾಜಿಕ ಮಾಧ್ಯಮ ಮತ್ತು ಒಒಎಚ್‌ ಸೇರಿದಂತೆ ಎಲ್ಲ ಪ್ರಮುಖ ಮಾಧ್ಯಮ ಪ್ಲಾಟ್‌ಫಾರಂಗಳಲ್ಲಿ ಲೈವ್ ಆಗಿರಲಿದೆ ಮತ್ತು ಮಾರಾಟದ ಸಂಪೂರ್ಣ ಅವಧಿಗೆ ಪ್ರಸಾರವಾಗುತ್ತಿರಲಿದೆ.

ಜಿಯೋಮಾರ್ಟ್‌ ಎಂಬುದು ರಿಲಾಯನ್ಸ್ ರಿಟೇಲ್‌ನ ಹೊಸ ವಾಣಿಜ್ಯ ಮಲ್ಟಿ ಕ್ಯಾಟಗರಿ ಆನ್‌ಲೈನ್‌ ಶಾಪಿಂಗ್ ಪ್ಲಾಟ್‌ಫಾರಂ ಉಪಕ್ರಮವಾಗಿದ್ದು, 200 ಕ್ಕೂ ಹೆಚ್ಚು ನಗರಗಳು ಮತ್ತು ಪಟ್ಟಣಗಳಿಗೆ ಸೇವೆ ಒದಗಿಸುತ್ತಿದೆ.

ಉಡುಪಿ ಮತ್ತು ಗೋಕಾಕದಲ್ಲೂ ಜಿಯೋ ಮಾರ್ಟ್ ಸೇವೆ ಲಭ್ಯಉಡುಪಿ ಮತ್ತು ಗೋಕಾಕದಲ್ಲೂ ಜಿಯೋ ಮಾರ್ಟ್ ಸೇವೆ ಲಭ್ಯ

 ಭಾರತದ 75ನೇ ಸ್ವಾತಂತ್ರ್ಯ ದಿನದ ಟ್ರೆಂಡ್ಸ್

ಭಾರತದ 75ನೇ ಸ್ವಾತಂತ್ರ್ಯ ದಿನದ ಟ್ರೆಂಡ್ಸ್

ಭಾರತದ ಅತಿದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ರಿಲಯನ್ಸ್ ರಿಟೇಲ್‌ನ ಉಡುಪು ಮತ್ತು ಪರಿಕರ ಮಾರಾಟ ಮಳಿಗೆ ಟ್ರೆಂಡ್ಸ್, ಭಾರತದ 75ನೇ ಸ್ವಾತಂತ್ರ್ಯ ದಿನವನ್ನು ಅತ್ಯಾಕರ್ಷಕ ಕೊಡುಗೆಗಳೊಂದಿಗೆ ಆಚರಿಸುತ್ತಿದೆ.

ಈ ಸಂದರ್ಭದಲ್ಲಿ ಟ್ರೆಂಡ್ಸ್ ಅತ್ಯಾಕರ್ಷಕ ಕೊಡುಗೆ ನೀಡುತ್ತಿದೆ. ಇಲ್ಲಿ ಗ್ರಾಹಕರು ರೂ .3499/- ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಶಾಪಿಂಗ್ ಮಾಡಿದರೆ ಗ್ರಾಹಕರು ಶೇ 50 ರವರೆಗೆ ರಿಯಾಯಿತಿ ಪಡೆಯಬಹುದು ಮತ್ತು ಹೆಚ್ಚುವರಿ ಶೇ 25 ರಿಯಾಯಿತಿಯನ್ನು ಪಡೆಯಬಹುದು. ಟ್ರೆಂಡ್‌ಗಳಲ್ಲಿನ ಕೊಡುಗೆಗಳ ಶ್ರೇಣಿ ಇಲ್ಲಿಗೆ ಮುಗಿಯುವುದಿಲ್ಲ. ಗ್ರಾಹಕರು ರೂ .4999/- ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಶಾಪಿಂಗ್ ಮಾಡಿದರೆ ಖಚಿತ ಉಡುಗೊರೆಯನ್ನು ಪಡೆಯುತ್ತಾರೆ. HDFC ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಹೊಂದಿರುವವರು, ರೂ .3499/- ರ ಖರೀದಿ ನಡೆಸಿದರೆ ಹೆಚ್ಚುವರಿಯಾಗಿ ಶೇ 10ರಷ್ಟು ರಿಯಾಯಿತಿ ಪಡೆಯಲಿದ್ದಾರೆ. ಆದ್ದರಿಂದ, ಈ ಸ್ವಾತಂತ್ರ್ಯ ದಿನದಂದು ಟ್ರೆಂಡ್ಸ್ ಶಾಪಿಂಗ್ ನ ಫ್ರೀಡಮ್ ಡೇ ಸೇಲ್ ನಲ್ಲಿ ಪಾಲ್ಗೊಳ್ಳಿ.

 ಭಾರತದ ಅತಿದೊಡ್ಡ ಫ್ಯಾಷನ್ ಜಗತ್ತು

ಭಾರತದ ಅತಿದೊಡ್ಡ ಫ್ಯಾಷನ್ ಜಗತ್ತು

ಭಾರತದ ಅತಿದೊಡ್ಡ ಫ್ಯಾಷನ್ ಜಗತ್ತು ಭಾರತದ ಸುರಕ್ಷಿತ ಫ್ಯಾಷನ್ ತಾಣವೂ ಆಗಿದೆ. ಗರಿಷ್ಠ ಸುರಕ್ಷತೆಗಾಗಿ ಶೇ 100% ಟ್ರೆಂಡ್ಸ್ ಸಿಬ್ಬಂದಿಗೆ ಲಸಿಕೆ ನೀಡಲಾಗಿದೆ. ಹಾಗಾಗಿ ಗ್ರಾಹಕರು ಸಂಪೂರ್ಣ ಸುರಕ್ಷಿತ ಮತ್ತು ಚಿಂತೆ ರಹಿತ ಶಾಪಿಂಗ್ ಅನುಭವ ಪಡೆದುಕೊಳ್ಳಬಹುದು.

2007 ರಲ್ಲಿ ಗುರ್‌ಗಾಂವ್‌ನ ಆಂಬಿಯೆನ್ಸ್ ಮಾಲ್‌ನಲ್ಲಿ ತನ್ನ ಮೊದಲ ಮಳಿಗೆಯೊಂದಿಗೆ ಟ್ರೆಂಡ್ಸ್ ಆರಂಭಗೊಂಡಿತು. ಇಂದು ಇದು ದೇಶದ 860 ಕ್ಕೂ ಹೆಚ್ಚು ನಗರಗಳಲ್ಲಿ 1500 ಕ್ಕೂ ಹೆಚ್ಚು ಮಳಿಗೆಗಳನ್ನು ಹೊಂದಿದ್ದು, ಟ್ರೆಂಡ್ಸ್ ಭಾರತದ ನೆಚ್ಚಿನ ಫ್ಯಾಷನ್ ಶಾಪಿಂಗ್ ತಾಣವಾಗಿದೆ ಮತ್ತು ಪ್ರತಿ ದಿನ ಸರಾಸರಿ ಎರಡೂವರೆ ಲಕ್ಷ ಗ್ರಾಹಕರು ಇಲ್ಲಿಗೆ ಭೇಟಿ ನೀಡುತ್ತಾರೆ.

 ರಿಲಯನ್ಸ್ ಟ್ರೆಂಡ್ಸ್ ಬಗ್ಗೆ:

ರಿಲಯನ್ಸ್ ಟ್ರೆಂಡ್ಸ್ ಬಗ್ಗೆ:

858 ನಗರಗಳಾದ್ಯಂತ 1,500ಕ್ಕೂ ಅಧಿಕ ಮಳಿಗೆಗಳ ಪ್ರಬಲ ನೆಟ್‌ವರ್ಕ್ ಹೊಂದಿರುವ ಟ್ರೆಂಡ್ಸ್, ಭಾರತದ ಅತಿ ದೊಡ್ಡ ಹಾಗೂ ವೇಗವಾಗಿ ಬೆಳೆಯುತ್ತಿರುವ ಫ್ಯಾಷನ್ ನೆಲೆಯಾಗಿದೆ. ಇದು ನೂರಕ್ಕೂ ಹೆಚ್ಚು ದೇಶೀ ಹಾಗೂ ಅಂತಾರಾಷ್ಟ್ರೀಯ ಉಡುಪುಗಳು ಮತ್ತು ಸಾಮಗ್ರಿ ಬ್ರ್ಯಾಂಡ್‌ಗಳನ್ನು ಹೊಂದಿದ್ದು, ಪ್ರತಿ ಗ್ರಾಹಕರ ಅಗತ್ಯಗಳನ್ನು ಪೂರೈಸಲು ಪುರುಷರು, ಮಹಿಳೆಯರು ಮತ್ತು ಮಕ್ಕಳ ವಿಭಾಗಗಳಲ್ಲಿ ತನ್ನದೇ ಆದ 20 ಬ್ರ್ಯಾಂಡ್‌ಗಳನ್ನು ಒಳಗೊಂಡಿದೆ.

ರಿಲಯನ್ಸ್ ಟ್ರೆಂಡ್ಸ್‌ನ ಸ್ವಂತ ಬ್ರ್ಯಾಂಡ್‌ಗಳಲ್ಲಿ ಕೆಲವವು, ಆವಾಸ- ಮಹಿಳೆಯರಿಗಾಗಿ ವಿವಿಧ ಶ್ರೇಣಿಯ ಭಾರತೀಯ ದಿರಿಸುಗಳಾದ ಸಲ್ವಾರ್ ಕುರ್ತಾ, ಚೂಡಿದಾರ್ ಹಾಗೂ ಮಿಕ್ಸ್- ಎನ್-ಮ್ಯಾಚ್‌ ಶ್ರೇಣಿಯ ಉಡುಪುಗಳ ಅತ್ಯುತ್ತಮ ಸಂಗ್ರಹಗಳನ್ನು ಇದು ಹೊಂದಿದೆ. ರಿಯೋ- ಯುವ ಮಹಿಳೆಯರಿಗಾಗಿ ಆಕರ್ಷಕ ರೋಮಾಂಚನಕಾರಿ ಶ್ರೇಣಿಯ ಉಡುಪುಗಳು. ಫಿಗ್- ಸೂಕ್ಷ್ಮ, ಸ್ವತಂತ್ರ ಮತ್ತು ವೃತ್ತಿಪರ ಮಹಿಳೆಯರಿಗಾಗಿ ಫ್ಯಾಷನ್ ಉಡುಪು. ಫ್ಯೂಷನ್- ಪೂರ್ವ ಮತ್ತು ಪಶ್ಚಿಮದ ಬೆಸುಗೆ ಹಾಗೂ ಹಿತಕರ ಮತ್ತು ಆಕರ್ಷಕ ಶೈಲಿಯ ಮಹಿಳಾ ಫ್ಯೂಷನ್ ಉಡುಪುಗಳ ಶ್ರೇಣಿ. ನೆಟ್‌ವರ್ಕ್- ಪುರುಷರು ಮತ್ತು ಮಹಿಳೆಯರಿಗೆ ವಿವಿಧ ಶ್ರೇಣಿಯ ಫಾರ್ಮಲ್ ಆಫೀಸ್ ಉಡುಗೆಗಳನ್ನು ಒಳಗೊಂಡಿದೆ.

English summary
JioMart and Smart SuperStore presents Full Paisa Vasool Sale and also Trends Celebrates India’s 75th Independence Day. ಜಿ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X