• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಲೂಸ್ಮಾರ್ಟ್ ಜೊತೆ ಜಿಯೋ-ಬಿಪಿ ಒಪ್ಪಂದ, ಇವಿ ಚಾರ್ಜಿಂಗ್ ಕೇಂದ್ರ ಸ್ಥಾಪನೆ

|
Google Oneindia Kannada News

ಮುಂಬೈ, ಸೆಪ್ಟೆಂಬರ್ 10: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ಬಿಪಿ ನಡುವಿನ ಇಂಧನ ಹಾಗೂ ಸಾರಿಗೆ ಜಂಟಿ ಉದ್ಯಮವಾದ ʻಜಿಯೋ-ಬಿಪಿʼಯು ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ವಿದ್ಯುತ್‌ ಚಾಲಿತ ವಾಹನಗಳ (ʻಇವಿʼ) ಚಾರ್ಜಿಂಗ್ ಕೇಂದ್ರಗಳ ಜಾಲವನ್ನು ಸ್ಥಾಪಿಸಲು ಮುಂದಾಗಿದೆ. ಇದಕ್ಕಾಗಿ ಭಾರತದ ಮೊದಲ ಮತ್ತು ಅತಿದೊಡ್ಡ ಸಂಪೂರ್ಣ ವಿದ್ಯುತ್‌ಚಾಲಿತ ಬಾಡಿಗೆ ವಾಹನಗಳ (ಆಲ್‌ ಎಲೆಕ್ಟ್ರಿಕ್‌ ರೈಡ್-ಹೇಲಿಂಗ್) ವೇದಿಕೆಯಾದ ʻಬ್ಲೂಸ್ಮಾರ್ಟ್ʼನೊಂದಿಗೆ ಪಾಲುದಾರಿಕೆಯನ್ನು ಘೋಷಿಸಿದೆ. ಪಾಲುದಾರಿಕೆಯ ಭಾಗವಾಗಿ ʻಜಿಯೋ-ಬಿಪಿʼಯು ದೇಶಾದ್ಯಂತ ಪ್ರಯಾಣಿಕರ ಎಲೆಕ್ಟ್ರಿಕ್ ವಾಹನಗಳು ಮತ್ತು ಫ್ಲೀಟ್‌ಗಳಿಗಾಗಿ ಚಾರ್ಜಿಂಗ್‌ ಕೇಂದ್ರಗಳನ್ನು ಸ್ಥಾಪಿಸಲಿದೆ.

ʻಬ್ಲೂಸ್ಮಾರ್ಟ್ʼ, ತನ್ನ ಸಂಪೂರ್ಣ ವಿದ್ಯುತ್‌ಚಾಲಿತ ವಾಹನಗಳ ಮೂಲಕ, ದೆಹಲಿ ಎನ್‌ಸಿಆರ್‌ನಲ್ಲಿ ವಿಶ್ವಾಸಾರ್ಹ, ಶೂನ್ಯ-ಸರ್ಜ್ ಮತ್ತು ಶೂನ್ಯ ಮಾಲಿನ್ಯದ ದ್ವಿಚಕ್ರವಾಹನ ಬಾಡಿಗೆ ಸೇವೆಯನ್ನು ಒದಗಿಸುತ್ತಿದ್ದು, ಆ ಮೂಲಕ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿ ತಂದಿದೆ. ಅತಿ ಹೆಚ್ಚು ʻಇವಿʼ ವಾಹನಗಳನ್ನು ಹೊಂದಿರುವ ʻಬ್ಲೂಸ್ಮಾರ್ಟ್ ʼ ತನ್ನ ಸೇವಾ ಜಾಲವನ್ನು ಭಾರತದಾದ್ಯಂತ ಇತರ ಪ್ರಮುಖ ನಗರಗಳಿಗೂ ವಿಸ್ತರಿಸುವ ಗುರಿಯನ್ನು ಹೊಂದಿದೆ.

ಭಾರತದೆಲ್ಲೆಡೆ 1000ಕ್ಕೂ ಹೆಚ್ಚು ಇವಿ ಚಾರ್ಜಿಂಗ್ ಕೇಂದ್ರ: ಮೊಇವಿಂಗ್ ಭಾರತದೆಲ್ಲೆಡೆ 1000ಕ್ಕೂ ಹೆಚ್ಚು ಇವಿ ಚಾರ್ಜಿಂಗ್ ಕೇಂದ್ರ: ಮೊಇವಿಂಗ್

ಈ ಪಾಲುದಾರಿಕೆಯ ಮೂಲಕ ಎರಡೂ ಕಂಪನಿಗಳು ಪ್ರಸ್ತುತ ʻಬ್ಲೂಸ್ಮಾರ್ಟ್ʼ ಅಸ್ತಿತ್ವದಲ್ಲಿರುವ ನಗರಗಳಲ್ಲಿ ಸೂಕ್ತ ಸ್ಥಳಗಳಲ್ಲಿ ಇವಿ ಚಾರ್ಜಿಂಗ್ ಮೂಲಸೌಕರ್ಯದ ಯೋಜನೆ, ಅಭಿವೃದ್ಧಿ ಮತ್ತು ಕಾರ್ಯಾಚರಣೆಯಲ್ಲಿ ಸಹಯೋಗ ಹೊಂದಲಿವೆ. ದಿಲ್ಲಿಯ ನ್ಯಾಷನಲ್‌ ಕ್ಯಾಪಿಟಲ್‌ ಪ್ರದೇಶದಲ್ಲಿ ಮೊದಲ ಹಂತದಲ್ಲಿ ಈ ಪಾಲುದಾರಿಕೆ ಅನುಷ್ಠಾನಗೊಳ್ಳಲಿದೆ. ಇದರಡಿ ಸ್ಥಾಪಿಸಲಾಗುವ ಪ್ರತಿಯೊಂದು ಇವಿ ಚಾರ್ಜಿಂಗ್ ಕೇಂದ್ರವೂ ಕನಿಷ್ಠ 30 ವಾಹನಗಳ ನಿಲುಗಡೆ ಸಾಮರ್ಥ್ಯ ಹೊಂದಿರಲಿವೆ ಮತ್ತು ಈ ಕೇಂದ್ರಗಳೆಲ್ಲವೂ ನಗರ ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿರುತ್ತವೆ.

ಕಾರ್ಯನಿರ್ವಾಹಕ ಅಧಿಕಾರಿ ಹರೀಶ್ ಸಿ. ಮೆಹ್ತಾ

ಕಾರ್ಯನಿರ್ವಾಹಕ ಅಧಿಕಾರಿ ಹರೀಶ್ ಸಿ. ಮೆಹ್ತಾ

ಸಹಯೋಗದ ಬಗ್ಗೆ ಮಾತನಾಡಿದ ಜಿಯೋ-ಬಿಪಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರೀಶ್ ಸಿ. ಮೆಹ್ತಾ ಅವರು, "ದೇಶದಲ್ಲಿ ʻಇವಿʼ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಜಿಯೋ-ಬಿಪಿ ಮುಂಚೂಣಿಯಲ್ಲಿದೆ. ಗ್ರಾಹಕರಿಗೆ ಅತ್ಯಾಧುನಿಕ ಇವಿ ತಂತ್ರಜ್ಞಾನ ಒದಗಿಸಲು ʻಜಿಯೋ-ಬಿಪಿʼ ಉದ್ದೇಶಿಸಿದೆ. ಬ್ಲೂಸ್ಮಾರ್ಟ್‌ನೊಂದಿಗಿನ ನಮ್ಮ ಪಾಲುದಾರಿಕೆಯು ಕಡಿಮೆ ಇಂಗಾಲ ಹೊರಸೂಸುವ, ಶುದ್ಧ ಮತ್ತು ಹೆಚ್ಚು ಕೈಗೆಟುಕುವ ಆಯ್ಕೆಗಳನ್ನು ನೀಡುವ ನಮ್ಮ ಧ್ಯೇಯೋದ್ದೇಶ ಸಾಧನೆಯಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಿದೆ,ʼʼ ಎಂದರು.

ವಿದ್ಯುತ್ ವಾಹನ (ಇವಿ) ಚಾರ್ಜಿಂಗ್ ಮೂಲಸೌಕರ್ಯಕ್ಕೆ ಮಾರ್ಗದರ್ಶನ ನೀಡಲು ಕೈಪಿಡಿವಿದ್ಯುತ್ ವಾಹನ (ಇವಿ) ಚಾರ್ಜಿಂಗ್ ಮೂಲಸೌಕರ್ಯಕ್ಕೆ ಮಾರ್ಗದರ್ಶನ ನೀಡಲು ಕೈಪಿಡಿ

 ಸಿಇಒ ಅನ್ಮೋಲ್ ಜಗ್ಗಿ

ಸಿಇಒ ಅನ್ಮೋಲ್ ಜಗ್ಗಿ

ʻಬ್ಲೂಸ್ಮಾರ್ಟ್ʼನ ಸಹ-ಸಂಸ್ಥಾಪಕ ಮತ್ತು ಸಿಇಒ ಅನ್ಮೋಲ್ ಜಗ್ಗಿ ಅವರು ಮಾತನಾಡಿ, "ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವ ಇವಿ ವಾಹನಗಳಿಗೆ ಶಕ್ತಿ ತುಂಬಲು ಬೃಹತ್‌ ಇವಿ ಚಾರ್ಜಿಂಗ್‌ ಸೂಪರ್ ಹಬ್‌ಗಳನ್ನು ʻಬ್ಲೂಸ್ಮಾರ್ಟ್ʼ ನಿರ್ವಹಿಸುತ್ತಿದೆ. ಜಿಯೋ-ಬಿಪಿ ಜೊತೆ ನಮ್ಮ ಪಾಲುದಾರಿಕೆಯು ಭಾರತಕ್ಕೆ ವಿಶ್ವದರ್ಜೆಯ ಇವಿ ಚಾರ್ಜಿಂಗ್ ಮೂಲಸೌಕರ್ಯ ಪರಿಹಾರಗಳನ್ನು ಒದಗಿಸುವ ನಮ್ಮ ಸಾಮರ್ಥ್ಯಕ್ಕೆ ಕನ್ನಡಿ ಹಿಡಿದಿದೆ,ʼʼ ಎಂದರು. ಜಿಯೋ-ಬಿಪಿ ಜೊತೆ ಪಾಲುದಾರಿಕೆ ಹೊಂದಲು ನಾವು ಅತೀವ ಉತ್ಸುಕರಾಗಿದ್ದೇವೆ ಮತ್ತು ಈ ವ್ಯೂಹಾತ್ಮಕ ಸಹಯೋಗವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಬದ್ಧರಾಗಿದ್ದೇವೆ ಎಂದು ಹೇಳಿದರು.

ಮೂಲಮಾದರಿಗಳ ಅಭಿವೃದ್ಧಿಗೆ ʻಡಿಎಸ್‌ಟಿʼ ಮುಂದಾಳತ್ವ

ಮೂಲಮಾದರಿಗಳ ಅಭಿವೃದ್ಧಿಗೆ ʻಡಿಎಸ್‌ಟಿʼ ಮುಂದಾಳತ್ವ

ಸಾರ್ವಜನಿಕ ಅಥವಾ ಖಾಸಗಿ ಚಾರ್ಜಿಂಗ್ ಪಾಯಿಂಟ್‌ಗಳ ಸದೃಢ ಹಾಗೂ ವ್ಯಾಪಕ ಜಾಲ ನಿರ್ಮಾಣವು ಇವಿ ಪರಿವರ್ತನೆಯನ್ನು ಬೆಂಬಲಿಸಲು ನಿರ್ಣಾಯಕವಾಗಿದೆ. "ಭಾರತದಲ್ಲಿ ಇವಿ ಪರಿಸರ ವ್ಯವಸ್ಥೆಯ ಅಗತ್ಯಗಳಿಗೆ ಅನುಗುಣವಾಗಿರುವ, ವೆಚ್ಚ-ಪರಿಣಾಮಕಾರಿ ಚಾರ್ಜಿಂಗ್ ಜಾಲ ಅಗತ್ಯವಾಗಿದೆ. ಈ ಬೇಡಿಕೆಗೆ ಬೆಂಬಲಿಸುವ ನಿಟ್ಟಿನಲ್ಲಿ, ಇವಿ ಚಾರ್ಜಿಂಗ್‌ಗಾಗಿ ಭಾರತೀಯ ಮಾನದಂಡಗಳು ಮತ್ತು ಮೂಲಮಾದರಿಗಳ ಅಭಿವೃದ್ಧಿಗೆ ʻಡಿಎಸ್‌ಟಿʼ ಮುಂದಾಳತ್ವ ವಹಿಸುತ್ತಿದೆ. ಈ ಕೈಪಿಡಿಯಲ್ಲಿ ವ್ಯಾಖ್ಯಾನಿಸಲಾದ ಅಗ್ಗದ ಇವಿ ಚಾರ್ಜ್ ಪಾಯಿಂಟ್‌ಗಳ ಯೋಜನಾ ಮಾದರಿಯು ಮುಂದೆ ಈ ವಲಯದಲ್ಲಿ ಬರುವಂತಹ ಮಾನದಂಡಗಳೊಂದಿಗೆ ಉತ್ತಮವಾಗಿ ಹೊಂದಿಕೊಳ್ಳುತ್ತದೆ. ಜೊತೆಗೆ ಚಾರ್ಜಿಂಗ್ ಮೂಲಸೌಕರ್ಯದ ತ್ವರಿತ ವಿಸ್ತರಣೆಗೂ ಬೆಂಬಲಿಸಬಹುದು," ಎಂದು ಡಿಎಸ್‌ಟಿ ಕಾರ್ಯದರ್ಶಿ ಡಾ. ಅಶುತೋಷ್ ಶರ್ಮಾ ಹೇಳಿದರು.

ಪ್ರತಿ 3 ‍X 3 ಗ್ರಿಡ್‌ಗೆ ಕನಿಷ್ಠ ಒಂದು ಚಾರ್ಜಿಂಗ್ ಕೇಂದ್ರ

ಪ್ರತಿ 3 ‍X 3 ಗ್ರಿಡ್‌ಗೆ ಕನಿಷ್ಠ ಒಂದು ಚಾರ್ಜಿಂಗ್ ಕೇಂದ್ರ

ಪ್ರತಿ 3 ‍X 3 ಗ್ರಿಡ್‌ಗೆ ಕನಿಷ್ಠ ಒಂದು ಚಾರ್ಜಿಂಗ್ ಕೇಂದ್ರವನ್ನು ಹೊಂದುವ ಅಥವಾ ಹೆದ್ದಾರಿಯಲ್ಲಿ ಪ್ರತಿ 25 ಕಿ.ಮೀ.ಗೆ ಒಂದು ಚಾರ್ಜಿಂಗ್ ಕೇಂದ್ರವನ್ನು ಹೊಂದುವ ರಾಷ್ಟ್ರೀಯ ಗುರಿಯನ್ನು ಇಂಧನ ಸಚಿವಾಲಯವು ಹೊಂದಿದೆ. ಆದಾಗ್ಯೂ ಸ್ಥಳೀಯ ಗುರಿಗಳ ನಿಗದಿ ಮತ್ತು ಯೋಜನೆಯನ್ನು ನಗರ ಸ್ಥಳೀಯ ಸಂಸ್ಥೆಗಳು ಅಥವಾ ರಾಜ್ಯದ ನೋಡಲ್ ಏಜೆನ್ಸಿಗಳಿಗೆ ಬಿಡಲಾಗಿದೆ.

ಪ್ರಾಥಮಿಕವಾಗಿ ನಗರಪಾಲಿಕೆಗಳು ಮತ್ತು ಡಿಸ್ಕಾಂಗಳಂತಹ ಯೋಜನಾ ಅನುಷ್ಠಾನ ಸಂಸ್ಥೆಗಳನ್ನು ಉದ್ದೇಶಿಸಿ ಈ ಕೈಪಿಡಿಯನ್ನು ತಯಾರಿಸಲಾಗಿದ್ದರೂ ಚಾರ್ಜಿಂಗ್ ಮೂಲಸೌಕರ್ಯವನ್ನು ಸ್ಥಾಪಿಸುವ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭಗೊಳಿಸುವ ನಿಯಂತ್ರಣ ಕ್ರಮಗಳನ್ನು ಇದು ಎತ್ತಿ ಹಿಡಿಯುತ್ತದೆ. ಈ ಕೈಪಿಡಿಗೆ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಮತ್ತು ಬೃಹತ್ ಕೈಗಾರಿಕಾ ಇಲಾಖೆಗಳಿಂದ ಬೆಂಬಲ ದೊರೆತಿದೆ.

English summary
Jio-bp, the fuel and mobility joint venture between Reliance Industries Ltd and bp, has announced a partnership with BluSmart, an all-electric ride-hailing platform to set up a network of commercial large scale EV charging stations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X