ಟಿಸಿಎಸ್ ಚೇರ್ಮನ್ ಸ್ಥಾನದಿಂದ ಮಿಸ್ತ್ರಿ ಹೊರಕ್ಕೆ, ಹುಸೇನ್ ಹೊಸ ಅಧ್ಯಕ್ಷ

Posted By:
Subscribe to Oneindia Kannada

ಮುಂಬೈ, ನವೆಂಬರ್ 10: ದೇಶದ ಅತಿದೊಡ್ಡ ಸಾಫ್ಟ್ ವೇರ್ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) ಚೇರ್ಮನ್ ಸೈರಸ್ ಮಿಸ್ತ್ರಿ ಅವರನ್ನು ಹೊರಕ್ಕೆ ಹಾಕಲಾಗಿದೆ. ಮಿಸ್ತ್ರಿ ಅವರ ಸ್ಥಾನಕ್ಕೆ ಇಶಾತ್ ಹುಸೈನ್ ಅವರನ್ನು ನೇಮಕ ಮಾಡಿ ಟಾಟಾ ಸನ್ಸ್ ಕಂಪನಿ ಆದೇಶಿಸಿದೆ. ಟಾಟಾ ಸನ್ಸ್ ಈ ವಿಚಾರವನ್ನು ಬಾಂಬೆ ಷೇರು ವಿನಿಮಯ ಕೇಂದ್ರಕ್ಕೆ ತಿಳಿಸಿದೆ.

Ishaat Hussain replaces Cyrus Mistry as TCS chairman

ಹುಸೈನ್ ಅವರು ನೂತನ ಅಧ್ಯಕ್ಷರಾಗಿದ್ದಾರೆ. ಹುಸೈನ್ ಅವರು ಅವರ ಸ್ಥಾನಕ್ಕೆ ಹೊಸ ಅಧ್ಯಕ್ಷರ ನೇಮಕ ಮಾಡುವವರೆಗೆ ಕಂಪನಿಯ ಅಧ್ಯಕ್ಷರಾಗಿರುತ್ತಾರೆ ಬಿಎಸಿ ಗೆ ಟಿಸಿಎಸ್ ಹೇಳಿಕೆ ನೀಡಿದೆ. ಮಿಸ್ತ್ರಿ ಅವರನ್ನು ಕಂಪನಿಯ ನಿರ್ದೇಶಕ ಸ್ಥಾನದಿಂದ ಕಿತ್ತು ಹಾಕಲು ವಿಶೇಷ ಸಾಮಾನ್ಯ ಸಭೆ ಕರೆಯುವಂತೆಯೂ ಟಾಟಾ ಸನ್ಸ್ ನೋಟಿಸ್ ಜಾರಿ ಮಾಡಿದೆ. 45 ದಿನಗಳಲ್ಲಿ
ವಿಶೇಷ ಸಾಮಾನ್ಯ ಸಭೆ ನಡೆಯಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Tata Consultancy Services (TCS) on Thursday announced that Ishaat Hussain will be the new Chairman of the board of directors of the company in place of Cyrus Mistry with immediate effect.
Please Wait while comments are loading...