ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಟೆಲ್-ಜಿಯೋ ಡೀಲ್: 1,894.5 ಕೋಟಿ ಹೂಡಿಕೆ ಮಾಡಿದ ಅಮೆರಿಕಾದ ದೈತ್ಯ ಕಂಪನಿ

|
Google Oneindia Kannada News

ನವದೆಹಲಿ, ಜೂನ್ 3: ಏಷ್ಯಾದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್‌ ಜಿಯೋ ಕಂಪನಿಯಲ್ಲಿ ಹಣ ಹೂಡಲು ವಿಶ್ವದ ದೈತ್ಯ ಕಂಪನಿಗಳೇ ಪೈಪೋಟಿಗೆ ಬಿದ್ದಿವೆ. ಇದೇ ಸಾಲಿಗೆ ಈಗ ಅಮೆರಿಕಾದ ದೈತ್ಯ ಸೆಮಿಕಂಡಕ್ಟರ್ ಸಂಸ್ಥೆ ಇಂಟೆಲ್ ಜಿಯೋದಲ್ಲಿ ಹೂಡಿಕೆ ಮಾಡಿದೆ.

Recommended Video

Saroj Khan no more,ಬಾಲಿವುಡ್‌ನ ಹಿರಿಯ ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ನಿಧನ | Oneindia Kannada

ಒಂದರ ಹಿಂದೆ ಮತ್ತೊಂದರಂತೆ ಬೃಹತ್ ಕಂಪನಿಗಳೇ ಈಗಾಗಲೇ ಜಿಯೋದಲ್ಲಿ ಪಾಲನ್ನು ಖರೀದಿಸಿವೆ. ಇದೀಗ ಇಂಟೆಲ್ ಸಂಸ್ಥೆಯು ಜಿಯೋ ಕಂಪನಿಯಲ್ಲಿ 1,894.5 ಕೋಟಿ ರುಪಾಯಿ ಹೂಡಿಕೆ ಮಾಡಿದೆ. ಈ ಮೂಲಕ ಮುಕೇಶ್ ಅಂಬಾನಿ ಮತ್ತೊಂದು ಬೃಹತ್ ಕಂಪನಿಗೆ ಗಾಳ ಹಾಕಿದ್ದಾರೆ.

ಆರ್‌ಐಎಲ್‌ನಲ್ಲಿ 0.39 ಪರ್ಸೆಂಟ್ ಪಾಲು ಖರೀದಿ

ಆರ್‌ಐಎಲ್‌ನಲ್ಲಿ 0.39 ಪರ್ಸೆಂಟ್ ಪಾಲು ಖರೀದಿ

ಹೌದು, ಅಷ್ಟು ಮೊತ್ತದ ಹಣಕ್ಕೆ ಶೇಕಡಾ 0.39 ಇಷ್ಟೇ ಸಿಗೋದ ಅನ್ನೂದು ನಿಮಗೆ ಅನುಮಾನ ಮೂಡಿಸಬಹುದು. ಹೌದು, ಆರ್‌ಐಎಲ್ ಷೇರುಗಳ ಮೌಲ್ಯವೇ ಅಂತದ್ದು. ಇಂಟೆಲ್‌ 1,894.5 ಕೋಟಿ ರುಪಾಯಿ ಹೂಡಿಕೆ ಮಾಡಿ ಜಿಯೋದಲ್ಲಿ ಶೇಕಡಾ 0.39 ಪರ್ಸೆಂಟ್ ಪಾಲು ಖರೀದಿ ಮಾಡಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಪೂರ್ಣ ಸಾಲ ಮುಕ್ತವಾಗಿದ್ದು ಹೇಗೆ ?ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಪೂರ್ಣ ಸಾಲ ಮುಕ್ತವಾಗಿದ್ದು ಹೇಗೆ ?

11 ವಾರದಲ್ಲಿ ಜಿಯೋ 12 ಡೀಲ್

11 ವಾರದಲ್ಲಿ ಜಿಯೋ 12 ಡೀಲ್

ಇದು ಕೇಳಲು ಆಶ್ಚರ್ಯವಾದ್ರೂ ಇಡೀ ವಿಶ್ವವೇ ಈ ರೀತಿಯಾದ ಬೃಹತ್ ವೇದಿಕೆಗೆ ಸಾಕ್ಷಿಯಾಗಿದೆ. ಇಂಟೆಲ್‌ನೊಂದಿಗಿನ ಒಪ್ಪಂದ 11 ವಾರಗಳಲ್ಲಿ ಅಂತಹ 12 ನೇ ಹೂಡಿಕೆಯಾಗಿದೆ. ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ ರಿಲಯನ್ಸ್ ಮಾರಾಟ ಮಾಡಿದ ಒಟ್ಟು ಪಾಲನ್ನು 25.09 ಪ್ರತಿಶತಕ್ಕೆ ತಲುಪಿದೆ. ಮುಂಬೈ ಮೂಲದ ಆರ್‌ಐಎಲ್ ಈಗ ಫೇಸ್‌ಬುಕ್ ನೇತೃತ್ವದ ವಿಶ್ವದ ಕೆಲವು ಪ್ರಮುಖ ಟೆಕ್ ಹೂಡಿಕೆದಾರರಿಂದ ಒಟ್ಟು 1,17,588.45 ಕೋಟಿ ರುಪಾಯಿ ಸಂಗ್ರಹಿಸಿದೆ. ಅತಿ ಹೆಚ್ಚು ಹೂಡಿಕೆದಾರನಾದ ಫೇಸ್‌ಬುಕ್ ಏಪ್ರಿಲ್ 22 ರಂದು ಶೇಕಡಾ 9.99 ಪಾಲನ್ನು 43,574 ಕೋಟಿ ರುಪಾಯಿಗೆ ಖರೀದಿಸಿದೆ.

ಯಾವೆಲ್ಲಾ ಕಂಪನಿಗಳು ಹೂಡಿಕೆ ಮಾಡಿವೆ?

ಯಾವೆಲ್ಲಾ ಕಂಪನಿಗಳು ಹೂಡಿಕೆ ಮಾಡಿವೆ?

ಮುಕೇಶ್ ಅಂಬಾನಿ ಒಡೆತನದ ಆರ್‌ಐಎಲ್‌ನಲ್ಲಿ ಏಪ್ರಿಲ್ 22, 2020ರಿಂದ ಇಲ್ಲಿಯವರೆಗಿನ ಅವಧಿಯಲ್ಲಿ ಫೇಸ್‌ಬುಕ್, ಸಿಲ್ವರ್ ಲೇಕ್, ವಿಸ್ತಾ ಈಕ್ವಿಟಿ ಪಾರ್ಟ್‌ನರ್ಸ್, ಜನರಲ್ ಅಟ್ಲಾಂಟಿಕ್, ಕೆಕೆಆರ್, ಮುಬಾದಲ, ಎಡಿಐಎ, ಟಿಪಿಜಿ ಹಾಗೂ ಎಲ್ ಕ್ಯಾಟರ್‌ಟನ್ ಸೇರಿದಂತೆ ಇದೀಗ ಇಂಟೆಲ್ ಸೇರಿ ಮುಂಚೂಣಿ ಜಾಗತಿಕ ಹೂಡಿಕೆದಾರರಿಂದ ಜಿಯೋ ಪ್ಲಾಟ್‌ಫಾರ್ಮ್ಸ್ 1,17,588.45 ಕೋಟಿ ರೂ.ಗಳ ಹೂಡಿಕೆ ಪಡೆದುಕೊಂಡಂತಾಗಿದೆ.

ರಿಲಯನ್ಸ್ ಜಿಯೋದಲ್ಲಿ 11,367 ಕೋಟಿ ಹೂಡಿಕೆ ಮಾಡಿದ ಸೌದಿ ಅರೇಬಿಯಾ ಪಿಐಎಫ್ರಿಲಯನ್ಸ್ ಜಿಯೋದಲ್ಲಿ 11,367 ಕೋಟಿ ಹೂಡಿಕೆ ಮಾಡಿದ ಸೌದಿ ಅರೇಬಿಯಾ ಪಿಐಎಫ್

ಸಾಲ ಮುಕ್ತ ಕಂಪನಿ ರಿಲಯನ್ಸ್

ಸಾಲ ಮುಕ್ತ ಕಂಪನಿ ರಿಲಯನ್ಸ್

ಇಂಟೆಲ್ ಡೀಲ್‌ಗೂ ಮುನ್ನವೇ ರಿಲಯನ್ಸ್ ಇಂಡಸ್ಟ್ರೀಸ್ ಕೇವಲ 58 ದಿನಗಳಲ್ಲಿ 1,68,818 ಕೋಟಿ ರೂ. ಜಿಯೋ ಪ್ಲಾಟ್‌ಫಾರ್ಮ್‌ನಲ್ಲಿ 10 ದೊಡ್ಡ ಕಂಪನಿಗಳೊಂದಿಗೆ 11 ಒಪ್ಪಂದಗಳ ಮೂಲಕ ಪಡೆದಿತ್ತು. ಇದು 1,15,693.95 ಕೋಟಿ ರುಪಾಯಿ ಆಕರ್ಷಿಸಿದೆ. ಇತ್ತೀಚೆಗೆ ಆರ್‌ಐಎಲ್‌ನ 53,124.20 ಕೋಟಿ ರೂ.ಗಳ ಹಕ್ಕುಗಳ ವಿತರಣೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ರೀತಿಯಾಗಿ, ಮುಖೇಶ್ ಅಂಬಾನಿಯ ಆರ್‌ಐಎಲ್ ಒಟ್ಟು 58 ದಿನಗಳಲ್ಲಿ 1,68,818 ಕೋಟಿ ರೂ.ಗಳ ಹಣವನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ.

ರಿಲಯನ್ಸ್ ಜಿಯೋವನ್ನು ಹಾಡಿ ಹೊಗಳಿದ ಅಮೆರಿಕಾ: ಚೀನಾದ ಹುವಾಯಿಗೆ ಟಾಂಗ್ರಿಲಯನ್ಸ್ ಜಿಯೋವನ್ನು ಹಾಡಿ ಹೊಗಳಿದ ಅಮೆರಿಕಾ: ಚೀನಾದ ಹುವಾಯಿಗೆ ಟಾಂಗ್

English summary
Intel Corp will invest Rs 1,894.5 crore in Jio Platforms in exchange for a 0.39 percent stake. The deal of intel the 12th such investment in 11 weeks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X