ಆನ್‌ಲೈನ್ ಲೋನ್ APP ಹಾವಳಿ ಹೆಚ್ಚಳ, ಶುರುವಾಯ್ತು ಕಿರುಕುಳ
ಬೆಂಗಳೂರು, ಜೂ. 13: ಬೆಂಗಳೂರು ಪೊಲೀಸರ ನಿರಾಸಕ್ತಿ ಹಾಗೂ ಕಾನೂನಿನ ತೊಡಕಿನಿಂದ ಮತ್ತೆ ಆನ್‌ಲೈನ್ ಲೋನ್ ಆಪ್‌ಗಳ ಉಪಟಳ ಶುರುವಾಗಿದೆ. ಬಿಡಿಗಾಸು ಸಾಲ ಮಾಡಿದವರು ಆಶ್ಲೀಲ ಸಂದೇಶ ಹಾಗೂ ಬೈಯ್ಗಳ ಕಿರುಕುಳ ಅನುಭವಿಸುತ್ತಿದ್ದಾರೆ.
ವರ್ಷದ ಹಿಂದೆ ಮೂರು ರಾಜ್ಯಗಳ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದ ಆನ್‌ಲೈನ್ ಲೋನ್ ಆಪ್‌ಗಳ ಉಪಟಳ ಮತ್ತೆ ಶುರುವಾಗಿದೆ. ತುರ್ತು ಅಗತ್ಯಕ್ಕೆ ಬಿಡಿಗಾಸು ಸಾಲ ಕೊಟ್ಟು ಮೂರು ಪಟ್ಟು ಬಡ್ಡಿ ಪೀಕುವ ಲೋನ್ ಆಪ್‌ಗಳು ಸಾಲ ವಾಪಸು ಮಾಡದಿದ್ದರೆ ಸಾಲಗಾರರ ಮೊಬೈಲ್ ಮಾಹಿತಿ ಕದ್ದು ಅಶ್ಲೀಲಗೊಳಿಸಿ ಮಾನಗೇಡಿ ಕೆಲಸ ಆರಂಭಿಸಿವೆ. ಈ ಲೋನ್ ಆಪ್‌ಗಳ ಕಿರುಕುಳದಿಂದ ಸಾರ್ವಜನಿಕರು ಹೈರಾಣ ಆಗಿದ್ದಾರೆ.
ಆನ್‌ಲೈನ್ ಲೋನ್ ಆಪ್‌ಗಳ ಉಪಟಳಕ್ಕೆ ಕೆಲವರು ಬಲಿಯಾಗಿದ್ದೇ ತಡ, ತೆಲಂಗಾಣದಲ್ಲಿ ಪೊಲೀಸರು ಸರಣಿ ಕಾರ್ಯಾಚರಣೆ ನಡೆಸಿದ್ದರು. ಆ ಬಳಿಕ ಕರ್ನಾಟಕದಲ್ಲಿ ಸಿಸಿಬಿ ಪೊಲೀಸರು ಸರಣಿ ಕೇಸು ದಾಖಲಿಸಿ ಆನ್‌ಲೈನ್ ಲೋನ್ ಆಪ್‌ಗಳ ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ಇದರ ಬೆನ್ನಲ್ಲೇ ತಮಿಳುನಾಡು ಪೊಲೀಸರು ಸಹ ಆನ್‌ಲೈನ್ ಲೋನ್ ಆಪ್‌ಗಳ ಹೆಡೆಮುರಿ ಕಟ್ಟಲು ತನಿಖೆ ಆರಂಭಿಸಿದ್ದರು. ಈ ವೇಳೆ ಆನ್‌ಲೈನ್ ಲೋನ್ ಆಪ್ ಗಳ ಸದ್ದು ಸ್ವಲ್ಪ ಮಟ್ಟಿಗೆ ಅಡಗಿತ್ತು.
ವಿಪರ್ಯಾಸವೆಂದರೆ ಇದೀಗ ಪುನಃ ಆನ್‌ಲೈನ್ ಲೋನ್ ಆಪ್‌ಗಳ ಕಿರುಕುಳಕ್ಕೆ ಸಾರ್ವಜನಿಕರು ಬೇಸತ್ತಿದ್ದಾರೆ. ಮೂರು ಕಾಸಿಗೆ ಮರ್ಯಾದೆ ತೆಗೆದು ಅಶ್ಲೀಲ ಸಂದೇಶ ಕಳುಹಿಸುವ ಆಪ್‌ಗಳ ದುಷ್ಕೃತ್ಯದಿಂದ ಮುಗ್ಧ ಜೀವಗಳು ಬಲಿಯಾಗುತ್ತಿವೆ.

ಲೋನ್ ಆಪ್‌ನಿಂದ ಕಿರುಕುಳ
ಕ್ವಿಕ್ ಕ್ಯಾಷ್ ಮೂಲಕ 12 ವ್ಯಕ್ತಿಯೊಬ್ಬ ಹನ್ನೆರಡು ಸಾವಿರ ರೂ. ಸಾಲ ಪಡೆದಿದ್ದರು. ಬಡ್ಡಿ ಸಮೇತ ಸಾಲವನ್ನು ಜೂ. 04 ರಂದೇ ಬಡ್ಡಿ ಸಮೇತ ಪಾವತಿ ಮಾಡಿದ್ದಾರೆ. ಇದೀಗ ಬಡ್ಡಿ ಸಮೇತ 12 ಸಾವಿರ ಪಾವತಿಸುವಂತೆ ಆನ್‌ಲೈನ್ ಲೋನ್ ಕಂಪನಿ ಸಂದೇಶ ರವಾನಿಸಿದೆ. ಇನ್ನು ಲೋನ್ ಕೊಡುವಾಗಲೇ ಸಾಲಗಾರರನ ಮೊಬೈಲ್‌ನಲ್ಲಿರುವ ಸಂಪೂರ್ಣ ಡಾಟಾ ಕದ್ದು ಇದೀಗ ಸಾಲ ವಾಪಸು ಕೊಡದಿದ್ದರೆ ನಿನ್ನ ಆಪ್ತರಿಗೆ ಲೋನ್ ಡೀಫಾಲ್ಟರ್ ಹೆಸರಿನಲ್ಲಿ ಅಶ್ಲೀಲ ಸಂದೇಶ ಕಳುಹಿಸುವ ಬೆದರಿಕೆ ಹಾಕಿದೆ. ಸಾಲ ಕಟ್ಟಿ ಪುನಃ ಸಾಲ ಕಟ್ಟಲಾಗದೇ ಬೆಂಗಳೂರಿನ ವಿನಯ್ ಎಂಬುವರು ಇದೀಗ ಸೈಬರ್ ಠಾಣೆ ಮೆಟ್ಟಿಲೇರಿದ್ದಾರೆ.

ಲೋನ್ ಆಪ್ ಕಡಿವಾಣಕ್ಕೆ ಕಾನೂನೇ ಇಲ್ಲ:
ಕಳೆದ ವರ್ಷ ದಕ್ಷಿಣ ಭಾರತದ ಕರ್ನಾಟಕ, ತೆಲಂಗಾಣ, ತಮಿಳುನಾಡು ರಾಜ್ಯಗಳಲ್ಲಿ ಸುಮಾರು 200 ಕ್ಕಿಂತಲೂ ಹೆಚ್ಚ ಆನ್‌ಲೈನ್ ಲೋನ್ ಆಪ್‌ಗಳು ಬಂದ್ ಅಗಿದ್ದವು. ಇದೀಗ ಹೊಸ ಹೆಸರಿನಲ್ಲಿ ಹೊಸ ಅವತಾರ ಎತ್ತಿವೆ. ಯಾವುದೇ ಕಂಪನಿ ಸಾರ್ವಜನಿಕರಿಗೆ ಲೋನ್ ಕೊಡಬೇಕಾದರೆ ಆರ್‌ಬಿಐ ನಲ್ಲಿ ನೋಂದಣಿ ಮಾಡಬೇಕು. ಆರ್‌ಬಿಐ ನಲ್ಲಿ ನೋಂದಣಿ ಮಾಡಿದ ಕಂಪನಿಗಳ ಪರವಾನಗಿ ಹೆಸರಿನಲ್ಲಿ ಇದೀಗ ಲೋನ್ ಆಪ್ ಕಂಪನಿಗಳು ಜನ ಸಾಮಾನ್ಯರನ್ನು ಸುಲಿಗೆ ಮಾಡುತ್ತಿವೆ. ಈ ಲೋನ್ ಆಪ್‌ಗಳ ಕಾರ್ಯತಂತ್ರದಿಂದ ಅವುಗಳ ವಿರುದ್ಧ ಕ್ರಮ ಜರುಗಿಸಲು ಕಾನೂನು ತೊಡಕು ಎದುರಾಗಿದೆ. ಕೇಸು ದಾಖಲಾಗದೇ ಲೋನ್ ಆಪ್‌ಗಳ ವಿರುದ್ಧ ಕ್ರಮ ಜರುಗಿಸಲಾಗದೇ ಪೊಲೀಸರು ಸುಮ್ಮನಾಗುತ್ತಿದ್ದಾರೆ. ಇನ್ನು ಸಾಲ ಸಂಸ್ಥೆಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಿದ್ದ ಅರ್ ಬಿಐ ಎಚ್ಚರಿಕೆ ನೀಡಿದೆ ವಿನಃ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿಲ್ಲ.

ಪೊಲೀಸರ ಇಚ್ಛಾ ಶಕ್ತಿ ಕೊರತೆ:
ಕಳೆದ ಒಂದೂವರೆ ವರ್ಷದ ಹಿಂದೆ ಸಿಸಿಬಿ ಪೊಲೀಸರು ಕರ್ನಾಟಕದ ವಿವಿಧ ಲೋನ್ ಆಪ್‌ಗಳ ಮೇಲೆ ದಾಳಿ ಮಾಡಿ ಬುದ್ಧಿ ಕಲಿಸಿದ್ದರು. ಇದೀಗ ಲೋನ್ ಆಪ್‌ಗಳ ವಂಚನೆ ಬಗ್ಗೆ ಕೇಳುವರೇ ಗತಿಯಿಲ್ಲದಂತಾಗಿದೆ. ಪೊಲೀಸರ ಇಚ್ಛಾಶಕ್ತಿಯ ಕೊರತೆ ಕಾರಣ ಲೋನ್ ಆಪ್ ಗಳ ವಂಚನೆ ರಾರಾಜಿಸುತ್ತಿದೆ. ಲೋನ್ ಆಪ್‌ಗಳ ಅಕ್ರಮದ ಬಗ್ಗೆ ದೂರು ಕೊಟ್ಟರೂ ಪೊಲೀಸರು ಅದರ ಬಗ್ಗೆ ಹೆಚ್ಚು ಆಸಕ್ತಿ ತೋರಿದಂತೆ ಕಾಣುತ್ತಿಲ್ಲ. ಹೀಗಾಗಿ ಆಡಿದ್ದೇ ಆಟ ಎಂಬಂತೆ ಸಾಲಗರರಿಗೆ ಲೋನ್ ಆಪ್‌ಗಳು ಚಿತ್ರಹಿಂಸೆ ನೀಡುತ್ತಿವೆ.

ಸಾಲದ ಜತೆಗೆ ಮೊಬೈಲ್ ವಿವರ ಕಳ್ಳತನ:
ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಆನ್‌ಲೈನ್ ಲೋನ್ ಆಪ್ ಅಂತ ಟೈಪ್ ಮಾಡಿದರೆ ಸಾಕು, ನೂರಾರು ಆಪ್ ಗಳ ಸಾಲು ಕಣ್ಣೆದುರು ಬರುತ್ತವೆ. ನಿಮಿಗಷ್ಟವಾದ ಆಪ್ ಡೌನ್‌ಲೋಡ್ ಮಾಡುವ ಪ್ರಕ್ರಿಯೆ ಮುಗಿಸುವ ವೇಳೆಗೆ, ನೀವು ಯಾರು? ನಿಮ್ಮ ಸಂಪರ್ಕದಲ್ಲಿರುವ ವ್ಯಕ್ತಿಗಳು ಎಷ್ಟು ಮಂದಿ? ಎಲ್ಲಾ ಮಾಹಿತಿಯನ್ನು ಆಪ್ ಕದ್ದಿರುತ್ತದೆ. ನೀವು ತುರ್ತು ಸಾಲ ಆಯ್ಕೆ ಮಾಡಿಕೊಂಡರೆ, ನಿಮ್ಮ ಆಧಾರ್, ಪಾನ್ ನಂಬರ್, ಬ್ಯಾಂಕ್ ಖಾತೆ ವಿವರ ಜತೆಗೆ ಲೈವ್ ಪೋಟೋಗಳನ್ನು ಕೂಡ ಆಪ್ ತೆಗೆದುಕೊಳ್ಳುತ್ತದೆ. ಆನ್‌ಲೈನ್‌ನಲ್ಲಿ ಅರ್ಜಿ ತುಂಬಿದ ಕೂಡಲೇ ನಿಮ್ಮ ಬ್ಯಾಂಕ್ ಖಾತೆಗೆ ಸಾಲದ ಮೊತ್ತ ಬಿದ್ದಿರುತ್ತದೆ. ಕನಿಷ್ಠ ಐದು ಸಾವಿರ ದಿಂದ ಐವತ್ತು ಸಾವಿರ ವರೆಗೂ ಸಾಲ ನೀಡುವ ಆಪ್‌ಗಳು ನೂರಾರು ಇವೆ. ಲೋನ್ ಪಾವತಿ ಮಾಡದೇ ಇದ್ದಾಗ ಕದ್ದ ಮಾಹಿತಿಯನ್ನು ಲೋನ್ ರೀಕವರಿಗೆ ದುರ್ಬಳಕೆಗೆ ಬಳಿಸಿಕೊಳ್ಳುತ್ತವೆ.

ಮೊಬೈಲ್ ಸಂಪರ್ಕ ಸಂಖ್ಯೆಗಳೇ ಸಾಲಕ್ಕೆ ಮಾನದಂಡ:
ಆನ್‌ಲೈನ್ ಆಪ್‌ಗಳು ಕೊಡುವ ಸಾಲದ ಪ್ರಮಾಣ ಕನಿಷ್ಠ ಐದು ಸಾವಿರದಿಂದ ಐವತ್ತು ಸಾವಿರ ವರೆಗೂ ನೀಡುತ್ತವೆ. ಸಾಲದ ಕಂತುಗಳು ಒಂದು ವಾರಕ್ಕೆ ಶುರುವಾಗುತ್ತವೆ. ಸಾಲ ಪಡೆದ ಬಳಿಕ ನಿಗಧಿತ ಕಂತಿನಂತೆ ಪಾವತಿ ಮಾಡದಿದ್ದರೆ ಕ್ಷಣಕ್ಕೊಂದು ಬಯ್ಗುಳ ಕರೆ ಬರುತ್ತದೆ. ಜತೆಗೆ ಅಶ್ಲೀಲ ಸಂದೇಶಗಳು ಮೊಬೈಲ್‌ಗೆ ಬರುತ್ತವೆ. ಮೊದಲು ಕಾಲ್ ಸೆಂಟರ್‌ನಿಂದ ಕರೆ ಮಾಡಿ ಬಾಯಿಗೆ ಬಂದಂತೆ ಬೈದು ಹಿಂಸೆ ಕೊಡುತ್ತಾರೆ. ಇದಾಗಿಯೂ ಪಾವತಿಸದಿದ್ದರೆ ಲೋನ್ ಆಪ್‌ಗಳು ಸಾಲಗಾರನ ಪೋಟೊ ಮಾರ್ಪ್ ಮಾಡಿ ಆಪ್ತರಿಗೆ ರವಾನಿಸಿ ಮಾನವನ್ನು ಹರಾಜು ಹಾಕುತ್ತವೆ.

ಅಶ್ಲೀಲ ಸಂದೇಶ ಕಳಿಸಿದ್ರೆ ಕೇಸು ಹಾಕಿ:
ಆನ್‌ಲೈನ್ ಲೋನ್ ಆಪ್‌ಗಳ ಸಹವಾಸಕ್ಕೆ ಹೋಗದೇ ಇರುವುದು ಉತ್ತಮ. ಒಂದು ವೇಳೆ ಹೋಗಿ ತೆಗೆದುಕೊಂಡಿದ್ದರೆ, ಕಾನೂನು ಬದ್ಧ ಬಡ್ಡಿ ಮತ್ತುಸಾಲ ತೀರಿಸುವುದು ಒಳಿತು. ಇದಕ್ಕೂ ಮೀರಿ ಅಶ್ಲೀಲ ಸಂದೇಶ ಅಥವಾ ಬೆದರಿಕೆ ಹಾಕಿದ್ರೆ ಮೊದಲು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿ. ಅಶ್ಲೀಲ ಸಂದೇಶ ಕಳುಹಿಸಿ ಮಾನ ಹರಾಜು ಹಾಕಿದರೆ ಆ ಕಂಪನಿ ವಿರುದ್ಧ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಲು ಅವಕಾಶವಿದೆ. ಇನ್ನು ಆರ್‌ಬಿಐ ನೀತಿಗಳನ್ನು ಗಾಳಿಗೆ ತೂರಿ ಕಾರ್ಯ ನಿರ್ವಹಿಸುತ್ತಿರುವ ಈ ಲೋನ್ ಆಪ್‌ಗಳ ದಂಧೆಗೆ ಪೊಲೀಸರು ಕಡಿವಾಣ ಹಾಕಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಆದರೆ, ಪೊಲೀಸರು ತಾಳಿರುವ ನಿರ್ಲಕ್ಷ್ಯ ಮನೋಭಾವದಿಂದ ಇದೀಗ ಲೋನ್ ಆಪ್‌ಗಳ ವಹಿವಾಟು ಮತ್ತು ಕಿರುಕುಳ ಪರಕಾಷ್ಠೆ ತಲುಪಿದೆ.
Recommended Video
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications