ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಳಕೆದಾರರ ಸಂಖ್ಯೆ: ಟ್ವಿಟ್ಟರ್ ಹಿಂದಿಕ್ಕಿದ ಇನ್ ಸ್ಟಾಗ್ರಾಮ್

|
Google Oneindia Kannada News

ನ್ಯೂಯಾರ್ಕ್, ಡಿ. 12 : ಫೋಟೋ ಶೇರಿಂಗ್ ತಾಣ ಇನ್ ಸ್ಟಾಗ್ರಾಮ್ ಟ್ವಿಟ್ಟರ್ ನ್ನು ಹಿಂದಿಕ್ಕಿದೆ! ಹೌದು ಒಟ್ಟು ಆಕ್ಟೀವ್ ಯುಸರ್ ಗಳ ಸಂಖ್ಯೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟ್ಟರ್ ಹಿಂದೆ ಬಿದ್ದಿದೆ.

ಒಂಭತ್ತು ತಿಂಗಳಲ್ಲಿಯೇ ಇನ್ ಸ್ಟಾಗ್ರಾಮ್ 200 ಮಿಲಿಯನ್ ಬಳಕೆದಾರರನ್ನು ಪಡೆದುಕೊಂಡಿದೆ. ಪ್ರತಿ ತಿಂಗಳು 300 ಮಿಲಿಯನ್ ಜನ ನಮ್ಮ ಸೇವೆಯನ್ನು ಬಳಸುತ್ತಿದ್ದು, ಟ್ವಿಟ್ಟರ್ ನ 284 ಮಿಲಿಯನ್ ಹಿಂದಿಕ್ಕಲಾಗಿದೆ ಎಂದು ಕಂಪನಿ ಹೇಳಿದೆ.

Instagram

ಇನ್ ಸ್ಟಾಗ್ರಾಮ್ ಬಳಕೆದಾರರು ಪ್ರತಿದಿನ 70 ಮಿಲಿಯನ್ ಫೋಟೋ ಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ನಮ್ಮ ಜಾಲತಾಣ ಸೆಲೆಬ್ರಿಟಿಗಳ, ವಿವಿಧ ಬ್ರ್ಯಾಂಡ್ ಗಳ ಮತ್ತು ಕ್ರೀಡಾಪಟುಗಳ ಪೇಜ್ ತೆರೆಯುವ ಉದ್ದೇಶ ಹೊಂದಿದೆ. ಈ ಬಗ್ಗೆ ಚಿಂತನೆಗಳು ನಡೆಯುತ್ತಿದ್ದು ಶೀಘ್ರ ಕಾರ್ಯರೂಪಕ್ಕೆ ಬರಲಿವೆ ಎಂದು ಇನ್ ಸ್ಟಾಗ್ರಾಮ್ ಸಿಇಒ ಕೆವಿನ್ ಸೈಸ್ಟ್ರೋಮ್ ತಿಳಿಸಿದ್ದಾರೆ.

ಒಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನ ಪೈಪೋಟಿ ಹೆಚ್ಚಾಗುತ್ತಿದ್ದು, ಜನ ಯಾವುದನ್ನು ಯಾಕೆ ಆಯ್ಕೆ ಮಾಡಿಕೊಳ್ಳುತ್ತಾರೆ? ಎಂಬುದರ ಮೇಲೆ ಅದರ ಯಶಸ್ಸು ನಿರ್ಧರಿತವಾಗುತ್ತದೆ.

ಏನಿದು ಇನ್ ಸ್ಟಾಗ್ರಾಮ್?
ಸರಳವಾಗಿ ಹೇಳಬೇಕೆಂದರೆ ಇದೊಂದು ಫೋಟೋ ಅಥವಾ ವಿಡಿಯೋ ಹಂಚಿಕೊಳ್ಳುವ ಅಪ್ಲಿಕೇಶನ್. ಸ್ನೇಹಿತರು ಅಥವಾ ಜಾಲತಾಣದಲ್ಲಿ ವಿಡಿಯೋ ಹಂಚಲು ಇದು ತೆಗೆದುಕೊಳ್ಳುವ ಸಮಯ ಕೇವಲ 15 ಸೆಕೆಂಡ್. 2010ರಲ್ಲಿ ಆರಂಭವಾದ ಸಂಸ್ಥೆ ಸದ್ಯ ಸಾಮಾಜಿಕ ಜಾಲತಾಣದ ದೈತ್ಯ ಫೇಸ್ ಬುಕ್ ಕೈಯಲ್ಲಿದೆ. ಅತಿ ಶೀಘ್ರವಾಗಿ ಹೆಚ್ಚಿನ ಬಳಕೆದಾರರನ್ನು ಸೆಳೆದ ಖ್ಯಾತಿ ಇನ್ ಸ್ಟಾಗ್ರಾಮ್ ಗೆ ಸಲ್ಲುತ್ತದೆ.

ಗೂಗಲ್ ಪ್ಲೇ ಸರ್ವಿಸ್, ಆಪ್ ಸ್ಟೋರ್, ವಿಂಡೋಸ್ ಫೋನ್ ಸ್ಟೋರ್ ಗಳಲ್ಲಿ ಈ ಅಪ್ಲಿಕೇಶನ್ ಲಭ್ಯವಿದೆ. ಐಫೋನ್, ಐಪ್ಯಾಡ್ ಮತ್ತು ಎಲ್ಲ ಬಗೆಯ ಆಂಡ್ರಾಡ್ ಮೊಬೈಲ್ ಗಳು ಈ ಅಪ್ಲಿಕೇಶನ್ ಗೆ ಸಪೋರ್ಟ್ ಮಾಡುತ್ತವೆ.

English summary
Photo sharing site Instagram has moved ahead of Twitter in terms of highest active users. Nine months after it reached the 200-million user mark,Instagram says it now has 300 million people using the service every month, beating Twitter's 284 million active users.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X