ನಾರಾಯಣ ಮೂರ್ತಿ ವಿವಾದ: ಇನ್ಫಿ ಷೇರು ಮೌಲ್ಯ ಕುಸಿತ
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ರಾವ್ ಅವರ ವೇತನವನ್ನು ಗಣನೀಯವಾಗಿ ಹೆಚ್ಚಿಸಿರುವುದಕ್ಕೆ ಸಂಸ್ಥೆಯ ಸಂಸ್ಥಾಪಕರಲ್ಲೊಬ್ಬರಾದ ನಾರಾಯಣ ಮೂರ್ತಿ ತೀವ್ರ ಆಕ್ಷೇಪವೇ ಷೇರು ಇಳಿಕೆಗೆ ಕಾರಣ.
ಮುಂಬೈ, ಏಪ್ರಿಲ್ 4: ಇನ್ಫೋಸಿಸ್ ಸಂಸ್ಥಾಪಕರು ಹಾಗೂ ಆ ಸಂಸ್ಥೆಯ ಪ್ರಸಕ್ತ ಆಡಳಿತ ಮಂಡಳಿಯ ನಡುವೆ ನಡೆಯುತ್ತಿರುವ ಗುದ್ದಾಟವು ಷೇರು ಮಾರುಕಟ್ಟೆಯಲ್ಲಿ ಆ ಕಂಪನಿಯ ಮೌಲ್ಯದ ಮೇಲೆ ಪರಿಣಾಮ ಬೀರಿದೆ.[ಇನ್ಫಿ ಸಿಒಒ ವೇತನ ಹೆಚ್ಚಳ ಪ್ರಮಾಣಕ್ಕೆ ನಾರಾಯಣ ಮೂರ್ತಿ ಅಸಮಾಧಾನ]
ಇತ್ತೀಚೆಗೆ, ಇನ್ಫೋಸಿಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ರಾವ್ ಅವರ ವೇತನವನ್ನು ಗಣನೀಯವಾಗಿ ಹೆಚ್ಚಿಸಿರುವುದಕ್ಕೆ ಸಂಸ್ಥೆಯ ಸಂಸ್ಥಾಪಕರಲ್ಲೊಬ್ಬರಾದ ನಾರಾಯಣ ಮೂರ್ತಿ ಸೋಮವಾರ (ಮಾರ್ಚ್ 3) ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.[ಇನ್ಮೇಲೆ ಐಟಿ- ಬಿಟಿ ಕಂಪೆನಿಗಳಲ್ಲೂ ಮಹಿಳೆಯರಿಗೆ ರಾತ್ರಿ ಪಾಳಿಯಿಲ್ಲ!]

ಇದರ ಪರಿಣಾಮವಾಗಿ, ಇನ್ಫಿ ಷೇರುಗಳ ದರವು ಶೇ. 1.3ರಷ್ಟು ಇಳಿಕೆಯಾಗಿದೆ. ಸೋಮವಾರ ಮಧ್ಯಾಹ್ನದ ಹೊತ್ತಿಗೆ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ (ಬಿಎಸ್ ಇ) ಪ್ರತಿ ಷೇರಿನ ಬೆಲೆ 1,006 ರು. ಗಳಿಗೆ ಇಳಿದಿದೆ ಎಂದು ಎನ್ ಡಿ ಟಿವಿ ಹೇಳಿದೆ.












Click it and Unblock the Notifications