ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾನ್ಯತಾ ಟೆಕ್‌ಪಾರ್ಕ್‌ ಸಮೀಪ ಇನ್ಫಿ ಹೊಸ ಕ್ಯಾಂಪಸ್!

By Mahesh
|
Google Oneindia Kannada News

ಬೆಂಗಳೂರು, ನವೆಂಬರ್ 06 : ಬೆಂಗಳೂರಿನ ಉತ್ತರ ಭಾಗದ ಮಾನ್ಯತಾ ಟೆಕ್‌ಪಾರ್ಕ್‌ ಸಮೀಪದಲ್ಲಿ ದೇಶದ ಎರಡನೇ ಅತಿದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ತನ್ನ ಹೊಸ ಕ್ಯಾಂಪಸ್ ಆರಂಭಿಸುತ್ತಿದೆ.

ನಾಗವಾರ-ಥಣಿಸಂದ್ರ ರಸ್ತೆಯ 96 ಎಕರೆ ಪ್ರದೇಶದಲ್ಲಿ 1.77 ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಕ್ಯಾಂಪಸ್ ನಿರ್ಮಾಣದ ಜವಾಬ್ದಾರಿಯನ್ನು ಕಾರ್ಲೆ ಟೌನ್ ಸೆಂಟರ್ ಪಡೆದುಕೊಂಡಿದೆ.

Infosys new facility at Hebbal to house 1,600 engineers

10,000 ಕೋಟಿ ರು ವೆಚ್ಚದ ಕಾರ್ಲೆ ಟೌನ್ ಸೆಂಟರ್ ನಿರ್ಮಾಣವಾಗುತ್ತಿದ್ದು, ಇಲ್ಲಿನ ಇನ್ಫೋಸಿಸ್ ಹೊಸ ಕ್ಯಾಂಪಸಿನಲ್ಲಿ 1,600 ಉದ್ಯೋಗಿಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ. ಇದು ಬೆಂಗಳೂರಿನಲ್ಲಿ ಎರಡನೇ ಅತಿ ದೊಡ್ಡ ಕ್ಯಾಂಪಸ್ ಆಗಲಿದೆ.

2014ರಲ್ಲಿ ಐಟಿ ವಿಶೇಷ ಆರ್ಥಿಕ ವಲಯ ಅಡಿಯಲ್ಲಿ ಇಲ್ಲಿ ಕ್ಯಾಂಪಸ್ ನಿರ್ಮಾಣಕ್ಕೆ ಇನ್ಫೋಸಿಸ್ ಮುಂದಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಆದರೆ, ಈ ಎಲ್ಲಾ ಬೆಳವಣಿಗೆ ಬಗ್ಗೆ ಇನ್ಫೋಸಿಸ್ ನ ಕಾರ್ಯಕಾರಿ ಉಪಾಧ್ಯಕ್ಷ ರಾಮದಾಸ್ ಕಾಮತ್ ಅವರು ಪ್ರತಿಕ್ರಿಯಿಸಲು ನಿರಾಕರಿಸಿದರು.

ಎಲೆಕ್ಟ್ರಾನಿಕ್ ಸಿಟಿ ಯಲ್ಲಿ ಇನ್ಫೋಸಿಸ್ ನ ಕೇಂದ್ರ ಕಚೇರಿಯಿದ್ದರೂ, ಪುಣೆ ಕ್ಯಾಂಪಸಿನಲ್ಲಿ 33,000 ಉದ್ಯೋಗಿಗಳಿದ್ದಾರೆ. ಬೆಂಗಳೂರಿನಲ್ಲಿ ಡಿಕೆನ್ಸನ್ ರಸ್ತೆಯ ಮಣಿಪಾಲ್ ಸೆಂಟರ್, ಹೊಸೂರು ರಸ್ತೆಯ ಈಕ್ವಿನಾಕ್ಸ್, ಜೆಪಿನಗರದ ಮೋಹನ್ ಚೇಂಬರ್ಸ್, ಬೇಗೂರು ಬಳಿ ಗೋಲ್ಡ್ ಹಿಲ್ ಸುಪ್ರೀಂ ಸಾಫ್ಟ್ ವೇರ್ ಪಾರ್ಕ್ ನಲ್ಲಿ ಇನ್ಫೋಸಿಸ್ ತನ್ನ ಕಚೇರಿ ಹೊಂದಿದೆ.

English summary
Infosys is India's second largest IT services company, with its headquarters in Bengaluru. Now Infosys will move into a 1.77 lakh sq ft facility at Karle Town Centre.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X