ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಫೋಸಿಸ್ ಮೈಸೂರು ಕ್ಯಾಂಪಸ್‍ಗೆ ಅಮೆರಿಕದ ಗ್ರೀನ್ ಪ್ರಶಸ್ತಿ

|
Google Oneindia Kannada News

ಮೈಸೂರು, ಸೆಪ್ಟೆಂಬರ್ 14: ಇನ್ಫೋಸಿಸ್ ಮೈಸೂರು ಕ್ಯಾಂಪಸ್‍ಗೆ ಯುನೈಟೆಡ್ ಸ್ಟೇಟ್ಸ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ (ಯುಎಸ್‍ಜಿಬಿಸಿ) ಲೀಡ್ ಇಬೋಮ್(ಇಂಧನ ಮತ್ತು ಪರಿಸರ ವಿನ್ಯಾಸದ ನಾಯಕತ್ವ- ಅಸ್ತಿತ್ವದಲ್ಲಿರುವ ಕಟ್ಟಡದ ಕಾರ್ಯಾಚರಣೆ ಮತ್ತು ನಿರ್ವಹಣೆ) ಪ್ಲಾಟಿನಂ ಪ್ರಮಾಣಪತ್ರ ಪ್ರದಾನ ಮಾಡಿದೆ.

ಇನ್ಫೋಸಿಸ್ ಈಗ 18.25 ದಶಲಕ್ಷ ಚದರ ಅಡಿಯ ಹಸಿರು ಕಟ್ಟಡವಾಗಿದ್ದು, ಈ ಪೈಕಿ 16.9 ದಶಲಕ್ಷ ಚದರ ಅಡಿ ಲೀಡ್ ಪ್ಲಾಟಿನಂ ದರ್ಜೆ ಹಾಗೂ 1.35 ದಶಲಕ್ಷ ಚದರ ಅಡಿಯಷ್ಟು ಜಿಆರ್‍ಐಎಚ್‍ಎ 5-ಸ್ಟಾರ್ ದರ್ಜೆಯ ಕಟ್ಟಡಗಳೆಂಬ ಹೆಗ್ಗಳಿಕೆಗೆ ಪಾತ್ರವಾಗಿವೆ.

ಬೆಂಗಳೂರಿನ ಇನ್ಫೋಸಿಸ್‍ಗೆ ಸಿಲ್ವರ್ ವಿನ್ನರ್- ಜಾಗತಿಕ ಪ್ರಶಸ್ತಿ ಬೆಂಗಳೂರಿನ ಇನ್ಫೋಸಿಸ್‍ಗೆ ಸಿಲ್ವರ್ ವಿನ್ನರ್- ಜಾಗತಿಕ ಪ್ರಶಸ್ತಿ

ಅಧಿಕ ಕಾರ್ಯಕ್ಷಮತೆಯ ಹಸಿರು ಕಟ್ಟಡಗಳ ವಿನ್ಯಾಸ, ನಿರ್ಮಾಣ ಮತ್ತು ಕಾರ್ಯನಿರ್ವಹಣೆಯ ವಿಷಯದಲ್ಲಿ ಲೀಡ್ ಗ್ರೀನ್ ಬಿಲ್ಡಿಂಗ್ ರೇಟಿಂಗ್ ವ್ಯವಸ್ಥೆಯು ಜಾಗತಿಕವಾಗಿ ಸ್ವೀಕಾರಾರ್ಹವಾದ ಮಾನದಂಡವಾಗಿದೆ. ಲೀಡ್ ಪ್ಲಾಟಿನಂ ಐಟಿ ಕಚೇರಿಯಲ್ಲಿನ ಸ್ಥಳಾವಕಾಶ ವಿಭಾಗದಲ್ಲಿ ನೀಡಿರುವ ಪ್ರಮಾಣಪತ್ರದಂತೆ ಇನ್ಫೋಸಿಸ್ ಅತಿ ವಿಶಾಲವಾದ ಕಟ್ಟಡ ಪ್ರದೇಶವನ್ನು ಹೊಂದಿದೆ.

ತನ್ನ ಕ್ಯಾಂಪಸ್ ಸುಸ್ಥಿರ ಹಾಗೂ ಸಂಪನ್ಮೂಲ ದಕ್ಷವಾಗಲೆಂದು, ಇನ್ಫೋಸಿಸ್ 2008ರಿಂದಲೂ ಎರಡು ಅಗ್ರ ಕಾರ್ಯತಂತ್ರಗಳನ್ನು ಅನುಸರಿಸುತ್ತಿದೆ. ಅವೆಂದರೆ- ಹೊಸ ಕಟ್ಟಡಗಳನ್ನು ಅತ್ಯಧಿಕ ಇಂಧನ ದಕ್ಷತೆಯುಳ್ಳಂತೆ ವಿನ್ಯಾಸಗೊಳಿಸುವುದು ಮತ್ತು ಹಳೆಯ ಕಟ್ಟಡಗಳಲ್ಲಿ ರೆಟ್ರೋಫಿಟ್ಸ್ ಅಂದರೆ ಹೊಸ ಹೊಸದನ್ನು ಅಳವಡಿಸುವುದು.

ಕಟ್ಟಡ ನಿರ್ವಹಣಾ ವ್ಯವಸ್ಥೆ

ಕಟ್ಟಡ ನಿರ್ವಹಣಾ ವ್ಯವಸ್ಥೆ

ಮೈಸೂರು ಕ್ಯಾಂಪಸ್ ನಲ್ಲಿ, ಬೃಹತ್ ಪ್ರಮಾಣದ ರೆಟ್ರೋಫಿಟ್ ಯೋಜನೆಗಳ ಮೂಲಕ ದಕ್ಷತೆಯ ಸುಧಾರಣೆಯನ್ನು ಸಾಧಿಸಲಾಗಿದೆ. ಅಂದರೆ, ಪ್ರಸ್ತುತ ಇರುವಂಥ ಕಟ್ಟಡಗಳಲ್ಲಿ ಫುಡ್ ಕೋರ್ಟ್, ತರಬೇತಿ ಕೇಂದ್ರ, ಅತಿಥಿ ಗೃಹಗಳು ಹಾಗೂ ಕ್ರೀಡಾ ಸಂಕೀರ್ಣಗಳನ್ನು ನಿರ್ಮಿಸಲಾಗಿದೆ.

ಅಷ್ಟೇ ಅಲ್ಲದೆ, ಚಿಲ್ಲರ್ ಸ್ಥಾವರಗಳು, ವಾಯು ನಿರ್ವಹಣಾ ಘಟಕಗಳ ಸಂಪೂರ್ಣ ಮರುವಿನ್ಯಾಸ, ಕಟ್ಟಡ ನಿರ್ವಹಣಾ ವ್ಯವಸ್ಥೆ(ಬಿಎಂಎಸ್)ಯ ರೆಟ್ರೋಫಿಟ್, ಯುಪಿಎಸ್ ರೆಟ್ರೋಫಿಟ್, ಲೈಟಿಂಗ್ ರೆಟ್ರೋಫಿಟ್ ಇತ್ಯಾದಿಗಳನ್ನೂ ಪೂರ್ಣಗೊಳಿಸಲಾಗಿದೆ.

ಈ ಎಲ್ಲ ಯೋಜನೆಗಳಿಂದಾಗಿ ಇನ್ಫೋಸಿಸ್‍ನ ಕಾರ್ಯನಿರ್ವಹಣಾ ವೆಚ್ಚವು ತಗ್ಗಲು ಸಹಾಯಕವಾದದ್ದು ಮಾತ್ರವಲ್ಲ, ಸಲಕರಣೆಗಳ ಬಾಳಿಕೆ ಹೆಚ್ಚಿಸುವಲ್ಲಿ, ಆರೋಗ್ಯಕರ ಒಳಾಂಗಣ ವಾಯು ಗುಣಮಟ್ಟ ಸೃಷ್ಟಿ ಮತ್ತು ವಾಸಿಸುವವರ ಆರಾಮದಾಯಕತೆ ಮತ್ತು ತೃಪ್ತಿಯನ್ನು ಸುಧಾರಿಸುವಲ್ಲಿ ಇದು ನೆರವಾಗಿದೆ.

ಈ ಮಾನ್ಯತೆ ಸಿಗಲು ಕೊಡುಗೆ ನೀಡಿರುವ ಗುಣವಿಶೇಷ

ಈ ಮಾನ್ಯತೆ ಸಿಗಲು ಕೊಡುಗೆ ನೀಡಿರುವ ಗುಣವಿಶೇಷ

ಜಲ ದಕ್ಷತೆ: 2017ರಲ್ಲಿ ಒಂದು ವಿಶಿಷ್ಟ ಸ್ಮಾರ್ಟ್ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಂಡ ಮೊದಲ ಕ್ಯಾಂಪಸ್ ನಮ್ಮದು. ಜೊತೆಗೆ, ಸ್ಮಾರ್ಟ್ ವಾಟರ್ ಮೀಟರ್ ಹಾಗೂ ಅಂತರ್ಜಲ ಒಳನುಗ್ಗಿಸುವ ವ್ಯವಸ್ಥೆಯನ್ನೂ ಅಳವಡಿಸಿಕೊಳ್ಳಲಾಗಿದ್ದು, ಇದರಿಂದ ನೀರಿನ ಬಳಕೆಯನ್ನು ಕಡಿಮೆ ಮಾಡಲು ಮತ್ತು ಗರಿಷ್ಠ ಪ್ರಮಾಣದ ಮಳೆನೀರನ್ನು ಸೆರೆಹಿಡಿಯಲು ನೆರವಾಗಿದೆ. ಹಿಂದಿನ ವಾರ್ಷಿಕ ಅವಧಿಗೆ ಹೋಲಿಸಿದರೆ 2018ರ ವಿತ್ತ ವರ್ಷದಲ್ಲಿ ಕ್ಯಾಂಪಸ್‍ನಲ್ಲಿನ ತಲಾ ನೀರಿನ ಬಳಕೆಯ ಪ್ರಮಾಣವು ಶೇ.20.6 ರಷ್ಟು ಇಳಿಕೆಯಾಗಿದೆ. ಒಟ್ಟಿನಲ್ಲಿ ಮಳೆ ನೀರು ಕೊಯ್ಲಿಗಾಗಿ ವಿವಿಧ ಕೆರೆಗಳನ್ನು ನಿರ್ಮಿಸುವ ಮೂಲಕ ಹಾಗೂ ನೀರಿನ ಬಳಕೆಯನ್ನು ಕಡಿಮೆಗೊಳಿಸಲು ಕ್ರಮ ಕೈಗೊಳ್ಳುವ ಮೂಲಕ ಇನ್ಫೋಸಿಸ್ ಮೈಸೂರು ಕ್ಯಾಂಪಸ್ ಈಗ ಜಲ ಸುಸ್ಥಿರತೆಯ ಮಾದರಿಯಾಗಿ ಬದಲಾಗಿದೆ.

ಪೊಲೀಸರ ಮನೆ ನಿರ್ಮಾಣಕ್ಕೆ ಇನ್ಫೋಸಿಸ್ ನೆರವು: ಪರಮೇಶ್ವರ್‌ ಪೊಲೀಸರ ಮನೆ ನಿರ್ಮಾಣಕ್ಕೆ ಇನ್ಫೋಸಿಸ್ ನೆರವು: ಪರಮೇಶ್ವರ್‌

ಇಂಧನ ದಕ್ಷತೆ

ಇಂಧನ ದಕ್ಷತೆ

ಇಂಧನ ದಕ್ಷತೆ: ಕ್ಯಾಂಪಸ್‍ನಲ್ಲಿ ಸಮಗ್ರ ಕಟ್ಟಡ ನಿರ್ವಹಣಾ ವ್ಯವಸ್ಥೆ(ಐಬಿಎಂಎಸ್)ಗಾಗಿ ಸೆಂಟ್ರಲ್ ಕಮಾಂಡ್ ಸೆಂಟರ್ ಇದ್ದು, ಇದರಿಂದಾಗಿ ಕಟ್ಟಡಗಳ ದಕ್ಷ ನಿರ್ವಹಣೆ ಸಾಧ್ಯವಾಗಿದೆ ಮಾತ್ರವಲ್ಲ, ಇಂಧನ ದಕ್ಷತೆಯ ಗುರಿಯನ್ನೂ ತಲುಪಲಾಗಿದೆ. 2017ರ ವಿತ್ತೀಯ ವರ್ಷಕ್ಕೆ ಹೋಲಿಕೆ ಮಾಡಿದರೆ 2018ರ ವಿತ್ತೀಯ ವರ್ಷದಲ್ಲಿ ಕ್ಯಾಂಪಸ್ ನಲ್ಲಿನ ಇಂಧನ ಬಳಕೆಯ ಪ್ರಮಾಣವು ತಲಾ ಶೇ.5 ರಷ್ಟು ಕಡಿಮೆಯಾಗಿದೆ.

ತ್ಯಾಜ್ಯ ನಿರ್ವಹಣೆ: 2016ರಲ್ಲಿ ಸಂಪೂರ್ಣ ಸ್ವಯಂಚಾಲಿತ ಸೋಲಾರ್-ಹೀಟ್ ಅಸಿಸ್ಟೆಡ್ ಗ್ರೀನ್ ಹೌಸ್ ಡ್ರೈಯರ್ ಅಳವಡಿಸಿಕೊಂಡ ಮೊದಲ ಸಂಸ್ಥೆ ಎಂಬ ಖ್ಯಾತಿಗೂ ಕ್ಯಾಂಪಸ್ ಪಾತ್ರವಾಗಿದೆ. ಇದು ದಿನಕ್ಕೆ 3.5 ಟನ್ ತ್ಯಾಜ್ಯಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರ ಜೊತೆಗೆ, ಕ್ಯಾಂಪಸ್ ನ ಫುಡ್ ಕೋರ್ಟ್ ಗಳಲ್ಲಿ ಉತ್ಪತ್ತಿಯಾಗುವ ಆಹಾರ ತ್ಯಾಜ್ಯಗಳ ವಿಲೇವಾರಿಗೆಂದು ಜೈವಿಕ ಅನಿಲ ಸ್ಥಾವರವನ್ನೂ ಕ್ಯಾಂಪಸ್ ನಲ್ಲಿ ಸ್ಥಾಪಿಸಲಾಗಿದೆ.

ನವೀಕರಿಸಬಹುದಾದ ಇಂಧನ

ನವೀಕರಿಸಬಹುದಾದ ಇಂಧನ

ನವೀಕರಿಸಬಹುದಾದ ಇಂಧನ: ಕ್ಯಾಂಪಸ್‍ನಲ್ಲಿ ಅಳವಡಿಸಲಾದ ಸೌರಶಕ್ತಿಯ ಒಟ್ಟಾರೆ ಸಾಮರ್ಥ್ಯ 603 ಕಿಲೋ ವ್ಯಾಟ್. ಇದು ಗಂಟೆಗೆ 0.9 ದಶಲಕ್ಷ kWh ಸೌರಶಕ್ತಿಯನ್ನು ಉತ್ಪತ್ತಿ ಮಾಡುತ್ತದೆ. 2018ರ ವಿತ್ತ ವರ್ಷದಲ್ಲಿ ಕ್ಯಾಂಪಸ್ 23.65 ದಶಲಕ್ಷ kWh ಹಸಿರು ಶಕ್ತಿಯನ್ನು ಪಡೆದುಕೊಂಡಿದೆ.

ಒಟ್ಟಿನಲ್ಲಿ ಹಲವು ವರ್ಷಗಳಿಂದಲೂ ಇನ್ಫೋಸಿಸ್ ಸುಸ್ಥಿರತೆಯನ್ನು ಹೆಚ್ಚಿಸುವಂಥ ನವನವೀನ ತಂತ್ರಜ್ಞಾನಗಳು ಮತ್ತು ಅಭ್ಯಾಸಗಳನ್ನು ಅಳವಡಿಸಿಕೊಳ್ಳುವಲ್ಲಿ ನಾಯಕತ್ವ ವಹಿಸಿಕೊಂಡು ಬಂದಿದೆ. ಇದರ ಮೂಲಕ, ಪರಿಸರದ ಮೇಲಾಗುವ ಪ್ರತಿಕೂಲ ಪರಿಣಾಮಗಳನ್ನು ಕಡಿಮೆಗೊಳಿಸುತ್ತಾ, ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಗುರಿಯನ್ನು ಸಾಧಿಸಿದೆ.

English summary
The Infosys Mysuru campus has been awarded the LEED EBOM (Leadership in Energy and Environmental Design - Existing Building Operation & Maintenance) Platinum certification by the United States Green Building Council (USGBC).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X