• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಯೋಗಿಗಳಿಗೆ ಬಂಪರ್ ಕೊಡುಗೆ ಕೊಟ್ಟ ಇನ್ಫೋಸಿಸ್ ಕಂಪನಿ!

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 27: ಐಟಿ ವಲಯದ ದೈತ್ಯ ಎನಿಸಿರುವ ಇನ್ಫೋಸಿಸ್ ಕಂಪನಿಯು ತನ್ನ ಉದ್ಯೋಗಿಗಳಿಗೆ ಸಿಹಿಸುದ್ದಿಯನ್ನು ನೀಡಿದೆ. ಕಾರ್ಯವೈಖರಿ ಜೊತೆಗೆ ಹುದ್ದೆಗಳ ಬದಲಾವಣೆ, ಬಡ್ತಿ ಸೇರಿದಂತೆ ಹಲವು ರೀತಿಯ ಉಪಕ್ರಮಗಳನ್ನು ತೆಗೆದುಕೊಂಡಿದೆ. ಆ ಮೂಲಕ ಕ್ಷಣತೆ ದರವನ್ನು ನಿಯಂತ್ರಿಸುವುದಕ್ಕೆ ಸಂಸ್ಥೆಯು ಪ್ರಯತ್ನಿಸುತ್ತಿದೆ.

ಬೆಂಗಳೂರು ಮೂಲದ ಕಂಪನಿಯು ಕೆಲವು ಮೀಸಲು ಕಾರ್ಯಕ್ರಮಗಳನ್ನು ಸಹ ರಚಿಸಿದ್ದು, ಉದ್ಯೋಗಿಗಳ ಬದಲಾವಣೆ, ಹೊಸ ವೃತ್ತಿಜೀವನದೊಂದಿಗೆ ಕಾರ್ಯಶೈಲಿ ಪರಿವರ್ತನೆಗೆ ಹೊಸ ನೀತಿಯನ್ನು ಪರಿಚಯಿಸುತ್ತಿದೆ.

ದಸರಾ ಗಿಫ್ಟ್: ಕೇಂದ್ರ ಸರ್ಕಾರಿ ನೌಕರರರಿಗೆ ತುಟ್ಟಿಭತ್ಯೆ ಹೆಚ್ಚಳ, ಲೆಕ್ಕಾಚಾರ ಹೇಗೆ?ದಸರಾ ಗಿಫ್ಟ್: ಕೇಂದ್ರ ಸರ್ಕಾರಿ ನೌಕರರರಿಗೆ ತುಟ್ಟಿಭತ್ಯೆ ಹೆಚ್ಚಳ, ಲೆಕ್ಕಾಚಾರ ಹೇಗೆ?

2022-23ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ, ಇನ್ಫೋಸಿಸ್ ಕ್ಷೀಣತೆ ದರವು ಶೇ.28.4ರಷ್ಟಿದೆ. ಅದೇ ರೀತಿ ಟಿಸಿಎಸ್ ಕಂಪನಿಯ ಕ್ಷೀಣತೆ ಪ್ರಮಾಣವು ಶೇ.19.7ಕ್ಕೆ ಏರಿಕೆಯಾಗಿದ್ದು, ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ.2.3 ಶೇಕಡಾ ಏರಿಕೆಯಾಗಿದೆ.

ಉದ್ಯೋಗಿಗಳಿಗೆ ಬಡ್ತಿ ನೀಡುವ ಸಂಖ್ಯೆಯಲ್ಲಿ ಹೆಚ್ಚಳ:

ಇನ್ಫೋಸಿಸ್ ಸಂಸ್ಥೆಯು ತನ್ನ ಉದ್ಯೋಗಿಗಳಿಗೆ ನೀಡುವ ಬಡ್ತಿಯ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಿದೆ. ಐದು ವರ್ಷಗಳ ಹಿಂದೆ, ಸುಮಾರು 8,000 ದಿಂದ 10,000 ವಿದ್ದ ಬಡ್ತಿ ಸಂಖ್ಯೆಯನ್ನು 2021-22ರಲ್ಲಿ ಐಟಿ ಪ್ರಮುಖರು 40,000 ಬಡ್ತಿಗಳನ್ನು ನೀಡಿದ್ದಾರೆ. ಈ ವರ್ಷ ಅದರ ಸಂಖ್ಯೆ ಇನ್ನೂ ಹೆಚ್ಚಾಗಬಹುದು ಎಂದು ಇನ್ಫೋಸಿಸ್ ಇವಿಪಿ ಮತ್ತು ಗ್ರೂಪ್ ಎಚ್‌ಆರ್ ಮುಖ್ಯಸ್ಥ ಕ್ರಿಶ್ ಶಂಕರ್ ಹೇಳಿದ್ದಾರೆ.

ಐಟಿ ದೈತ್ಯ ಉದ್ಯೋಗಿಗಳ ಆರಂಭಿಕ ವೃತ್ತಿಜೀವನದ ಬೆಳವಣಿಗೆಯ ಮೇಲೆ "ಆರಂಭಿಕ ವೃತ್ತಿಜೀವನದ ಪ್ರತಿಫಲ" ರೀತಿಯ ಪ್ರೋತ್ಸಾಹದ ಮೇಲೆ ಗಮನ ಹರಿಸುತ್ತಿದೆ. ಇದರಿಂದಾಗಿ ಸಂಸ್ಥೆಯೊಳಗೆ ಅವರ ಬೆಳವಣಿಗೆಯ ಹಾದಿಯನ್ನು ಸ್ಪಷ್ಟಪಡಿಸುತ್ತಾರೆ.

ಟೆಕ್ಕಿಗಳ ವೇಗದ ಬೆಳವಣಿಗೆಗಾಗಿ ಇನ್ಫೋಸಿಸ್ ಹಲವು ಕಾರ್ಯಕ್ರಮಗಳನ್ನು ಪರಿಚಯಿಸಿದೆ. ಇದರಲ್ಲಿ ಉದ್ಯೋಗಿಗಳು ಪರ್ಯಾಯ ಕೌಶಲ್ಯಗಳನ್ನು ಪಡೆದುಕೊಳ್ಳಬಹುದು. ಅಂತೆಯೇ 2019ರಲ್ಲಿ ಇನ್ಫೋಸಿಸ್ ಲಿಮಿಟೆಡ್ ಹೆಚ್ಚಿನ ಕ್ಷೀಣತೆಯ ಮಟ್ಟವನ್ನು ಕಡಿಮೆ ಮಾಡಲು ಕೌಶಲ್ಯ ಕಾರ್ಯಕ್ರಮಗಳು ಮತ್ತು ಪರಿಹಾರ ಆಧಾರಿತ ಪ್ರೋತ್ಸಾಹವನ್ನು ಪರಿಚಯಿಸಿದೆ.

English summary
Infosys company Introduces Promotions, Role Rotations and more Number of Initiatives For Employees.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X