ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

12 ವರ್ಷ ಬಳಿಕ ಪೆಪ್ಸಿಕೋಗೆ 'ಸಿಇಒ' ಇಂದ್ರಾ ನೂಯಿ ಗುಡ್ ಬೈ!

By Mahesh
|
Google Oneindia Kannada News

ನ್ಯೂಯಾರ್ಕ್, ಆಗಸ್ಟ್ 06: ತಂಪು ಪಾನೀಯ ಕ್ಷೇತ್ರದ ದಿಗ್ಗಜ ಸಂಸ್ಥೆ ಪೆಪ್ಸಿಕೋದ ಪ್ರಥಮ ಮಹಿಳಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ( ಸಿಇಒ) ಇಂದ್ರಾ ನೂಯಿ ಅವರು ತಮ್ಮ ಸಿಇಒ ಹುದ್ದೆಯನ್ನು ತೊರೆಯುತ್ತಿರುವುದಾಗಿ ಘೋಷಿಸಿದ್ದಾರೆ.

ಚೆನ್ನೈ ಮೂಲದ ಇಂದ್ರಾ ನೂಯಿ ಅವರು 12 ವರ್ಷಗಳ ಬಳಿಕ ಪೆಪ್ಸಿಕೋ ಸಂಸ್ಥೆಯ ಜವಾಬ್ದಾರಿಯನ್ನು ಮತ್ತೊಬ್ಬರಿಗೆ ವಹಿಸುತ್ತಿದ್ದಾರೆ. ಅಕ್ಟೋಬರ್ 03ರಂದು ಸಿಇಒ ಹುದ್ದೆಯಿಂದ ಇಳಿಯಲಿದ್ದಾರೆ.

ಯುವಕರಿಗೆ ಪೆಪ್ಸಿ, ಕೋಕ್ ವೃದ್ಧರಿಗೆ : ನೂಯಿಯುವಕರಿಗೆ ಪೆಪ್ಸಿ, ಕೋಕ್ ವೃದ್ಧರಿಗೆ : ನೂಯಿ

ಸಂಸ್ಥೆಯ ಅಧ್ಯಕ್ಷ ರಾಮೊನ್‌ ಲಾಗುರ್ತಾ(54) ಅವರು ನೋಯಿ ಸ್ಥಾನದ ಜವಾಬ್ದಾರಿ ನಿಭಾಯಿಸಲಿದ್ದಾರೆ ಎಂದು ಸಂಸ್ಥೆ ಹೇಳಿದೆ. ಸಿಇಒ ಹುದ್ದೆ ತೊರೆದರೂ ಇಂದ್ರಾ ನೂಯಿ ಅವರು 2019ರ ವರ್ಷಾಂತ್ಯದ ತನಕ ಸಂಸ್ಥೆಯ ಚೇರ್ಮನ್ ಆಗಿ ಮುಂದುವರೆಯಲಿದ್ದಾರೆ.

Indra Nooyi to step down after 12 years as PepsiCo CEO

ಚೆನ್ನೈನಲ್ಲಿ ಹುಟ್ಟಿದ ಇಂದ್ರಾ ಕೃಷ್ಣಮೂರ್ತಿ ಅವರು ಸದ್ಯ ಕನೆಕ್ಟಿಕಿಟ್ ನ ಗ್ರೀನ್ ವಿಚ್ ನ ನಿವಾಸಿ, ಅಮೆರಿಕದ ಪೌರತ್ವ ಹೊಂದಿರುವ ಇಂದ್ರಾ, 2014ರಲ್ಲಿ ವಿಶ್ವದ 100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರು. 2015ರ ಫಾರ್ಚೂನ್ ಪಟ್ಟಿಯಲ್ಲಿ ವಿಶ್ವದ ಎರಡನೇ ಪ್ರಭಾವಿ ಮಹಿಳೆ ಎಂಬ ಗೌರವಕ್ಕೆ ಪಾತ್ರರಾದರು.


ಮದ್ರಾಸ್‌ ಕ್ರಿಶ್ಚಿಯನ್‌ ಕಾಲೇಜಿನ ಪದವೀಧರೆ, ಐಐಎಂ, ಕೋಲ್ಕತ್ತಾದಿಂದ ಎಂಬಿಎ, ಯೇಲ್ ವಿವಿಯಿಂದ ಎಂಎಸ್ ಪದವಿ ಪಡೆದುಕೊಂಡಿದ್ದಾರೆ.

ಪೆಪ್ಸಿಕೋ ಇಂಡಿಯಾ ಸಿಇಒ ಡಿ ಶಿವಕುಮಾರ್ ರಾಜೀನಾಮೆಪೆಪ್ಸಿಕೋ ಇಂಡಿಯಾ ಸಿಇಒ ಡಿ ಶಿವಕುಮಾರ್ ರಾಜೀನಾಮೆ

1994ರಲ್ಲಿ ಹಿರಿಯ ಉಪಾಧ್ಯಕ್ಷೆಯಾಗಿ ಯೋಜನೆ ವಿಭಾಗದಲ್ಲಿ ಸಂಸ್ಥೆಗೆ ಸೇರಿ, ಸಿಇಒ ಆಗಿ ಸಂಸ್ಥೆಯನ್ನು ವಿಸ್ತರಿಸಿದರು. ಜೂನ್ ತಿಂಗಳಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ನ ಸ್ವತಂತ್ರ ಮಹಿಳಾ ನಿರ್ದೇಶಕಿಯಾಗಿ ಕೂಡಾ ಗೌರವ ಪಡೆದುಕೊಂಡರು.

ತಮಿಳುನಾಡಿನಲ್ಲಿ ಪೆಪ್ಸಿ, ಕೋಕಾಕೋಲಾಗೆ ನಿಷೇಧತಮಿಳುನಾಡಿನಲ್ಲಿ ಪೆಪ್ಸಿ, ಕೋಕಾಕೋಲಾಗೆ ನಿಷೇಧ

ಪೌಷ್ಟಿಕ ಆಹಾರ, ಪರಿಸರ ಸಂರಕ್ಷಣೆಯತ್ತ ಸಂಸ್ಥೆ ಹೆಜ್ಜೆ ಇರಿಸಿದೆ. ಇಂಥ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ್ದು ನನ್ನ ಪುಣ್ಯ, ನನ್ನ ಮನದಲ್ಲಿ ಮಿಶ್ರ ಭಾವನೆಗಳಿವೆ. 24ವರ್ಷಗಳ ಕಾಲ ಇಲ್ಲಿ ಕಳೆದಿದ್ದೇನೆ. ನನ್ನ ಹೃದಯ ಇಲ್ಲೆ ಇರುತ್ತದೆ. ಪೆಪ್ಸಿಕೋ ಸಂಸ್ಥೆ ಇನ್ನೂ ಉತ್ತಮ ಫಲಿತಾಂಶಗಳನ್ನು ನೀಡುವ ನಿರೀಕ್ಷೆಯಿದೆ ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.

English summary
Pepsico on Monday announced the stepping down of its Indian-origin CEO Indra Nooyi on October 3, however will continue being the chairman until early 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X