• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇಂಡೋನೇಷಿಯಾದಿಂದ ವೀಸಾ ಆನ್ ಅರೈವಲ್, ನೇರ ವಿಮಾನ!

By Mahesh
|

ಬೆಂಗಳೂರು, ಸೆ. 09: ಬೆಂಗಳೂರು ಸೇರಿದಂತೆ ಭಾರತದ ಪ್ರಮುಖ ನಗರಗಳಾದ ಮುಂಬೈ, ಚೆನ್ನೈ, ದೆಹಲಿಯಿಂದ ಇಂಡೋನೇಷ್ಯಾಗೆ ನೇರ ವಿಮಾನಯಾನ ಸಂಪರ್ಕ ಕಲ್ಪಿಸಲು ಕೇಂದ್ರ ಸರ್ಕಾರದ ಸಚಿವಾಲಯದ ಜೊತೆ ಮಾತುಕತೆ ನಡೆಸುವುದಾಗಿ ಇಂಡೋನೇಷ್ಯಾದ ಪ್ರವಾಸೋದ್ಯಮ ಸಚಿವ ಹಾರಿಸ್ ಯಾಹ್ಯ ಹೇಳಿದರು. ಇದರ ಜೊತೆಗೆ ವೀಸಾ ಆನ್ ಅರೈವಲ್ ಸೌಲಭ್ಯವನ್ನು ವಿಸ್ತರಿಸಲಾಗುವುದು ಎಂದಿದ್ದಾರೆ.

ಪಾಟಾ ಸಮ್ಮೇಳನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಂಡೋನೇಷ್ಯಾ ಪ್ರವಾಸಿಗರಿಗೆ ಹೆಚ್ಚು ಆಕರ್ಷಣೆಯಾಗಿದೆ. ಚೀನಾದಿಂದ ನಮ್ಮ ದೇಶಕ್ಕೆ ಹೆಚ್ಚು ಪ್ರವಾಸಿಗರು ಬರುತ್ತಿದ್ದಾರೆ. [ಹೃದಯ್, ಪ್ರಸಾದ್ ಪ್ರವಾಸೋದ್ಯಮ ಯೋಜನೆ ಜಾರಿ: ಅನಂತ್]

ಭಾರತದಿಂದ ಇಂಡೋನೇಷ್ಯಾಕ್ಕೆ ವಾರ್ಷಿಕವಾಗಿ 2 ಲಕ್ಷ ಮಂದಿ ಆಗಮಿಸುತ್ತಿದ್ದಾರೆ. ನೇರ ವಿಮಾನಯಾನ ಸೌಲಭ್ಯ ಇಲ್ಲದಿರುವುದು ಇದಕ್ಕೆ ಕಾರಣ, ಈ ಸಂಖ್ಯೆಯನ್ನು ಡಿಸೆಂಬರ್ ವೇಳೆಗೆ 2,70,000ಕ್ಕೇರಿಸಲು ಯೋಜಿಸಲಾಗಿದೆ ಎಂದರು.

Indonesia may offer Indians visa on arrival

ಎಲ್ಲೆಲ್ಲಿಗೆ ನೇರ ವಿಮಾನಯಾನ: ಜಕಾರ್ತಾದಿಂದ ನವದೆಹಲಿ, ಮುಂಬೈ, ಚೆನ್ನೈ ಹಾಗೂ ಬೆಂಗಳೂರಿಗೆ ನೇರ ವಿಮಾನ ಸೌಲಭ್ಯ ಕಲ್ಪಿಸಲಾಗುತ್ತದೆ. 39ನೇ ಫೆಸಿಪಿಕ್ ಏಷ್ಯಾ ಟ್ರಾವೆಲ್ ಅಸೋಸಿಯೇಷನ್ ಟ್ರಾವೆಲ್ ಮಾರ್ಟ್ (PATA) ಸೆಪ್ಟೆಂಬರ್ 7 ರಿಂದ 9, 2016ರ ತನಕ ಆಯೋಜನೆಗೊಂಡಿದೆ. ಹೀಗಾಗಿ ನೇರ ವಿಮಾನಯಾನ ಸೌಲಭ್ಯ ಉಭಯ ದೇಶಗಳ ವ್ಯಾಪಾರ, ವ್ಯವಹಾರಕ್ಕೆ ನೆರವಾಗಲಿದೆ. [ಕರ್ನಾಟಕದಲ್ಲಿ ಯಾವ ಸಂಸ್ಥೆ ಎಲ್ಲೆಲ್ಲಿ, ಎಷ್ಟು ಹೂಡಿಕೆ?]

ವೀಸಾ ಆನ್ ಅರೈವಲ್: ಇಂಡೋನೇಷ್ಯಾ ಈಗಾಗಲೇ 15 ದೇಶಗಳಿಗೆ ಉಚಿತ ವೀಸಾ ಸೌಲಭ್ಯ ನೀಡುತ್ತಿದೆ. ಮುಂದಿನ ದಿನಗಳಲ್ಲಿ 30 ದೇಶಗಳಿಗೆ ವೀಸಾ ಸೌಲಭ್ಯ ವಿತರಿಸುವ ಚಿಂತನೆ ಇದೆ. ಭಾರತಕ್ಕೆ ಉಚಿತ ವೀಸಾ ಸೌಲಭ್ಯ ನೀಡುವುದಾಗಿ ಘೋಷಿಸಿದರು.
ಇಂಡೋನೇಷ್ಯಾದ ಕಲೆ ಮತ್ತು ಸಂಸ್ಕೃತಿಗಳ ಬಗ್ಗೆ ವಿವರಣೆ ನೀಡಿದರು. [ವೀಸಾ ಆನ್ ಅರೈವಲ್ ಪಡೆದ 43 ದೇಶಗಳ ಪಟ್ಟಿ]

ಮಲೇಷ್ಯಾದ ಪ್ರವಾಸೋದ್ಯಮ ಇಲಾಖೆಯ ಡೆಪ್ಯೋಟಿ ಜನರಲ್ ಡಾಟೋ ಹಾಜಿ ಅಜೀಜ್ ನೂರುದ್ದೀನ್ ಮಾತನಾಡಿ, ಮಲೇಷಿಯಾದಲ್ಲಿ 1000ಕ್ಕೂ ಹೆಚ್ಚು ದ್ವೀಪಗಳಿವೆ ನೀವು ಯಾವುದೇ ಹೆಸರು ಹೇಳಿದರೂ ಆ ಹೆಸರಿನ ದ್ವೀಪ ನಮ್ಮಲ್ಲಿ ಸಿಗುತ್ತವೆ ಎಂದರು.

ಮಧುಚಂದ್ರಕ್ಕೆ ಮಲೇಷಿಯಾ ಹೇಳಿ ಮಾಡಿಸಿದ ಸ್ಥಳ. ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಮಲೇಷಿಯಾ ಸರ್ಕಾರ ಹೊಸ ಹೊಸ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುತ್ತವೆ. ಈ ವರ್ಷ ದೀಪಾವಳಿ-ಕ್ರಿಸ್‌ಮಸ್ ಸೇರಿದಂತೆ 50ಕ್ಕೂ ಹೆಚ್ಚು ಬೃಹತ್ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು indonesia ಸುದ್ದಿಗಳುView All

English summary
The Indonesian government is planning to include India under its Free Visa on Arrival programme. “Currently we are offering Free Visa on Arrival to 43 countries. In the second phase, we plan to include India and that will happen by January,” Arief Yahya, Indonesia’s Tourism Minister

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more