ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವೀಸಾ ಆನ್ ಅರೈವಲ್ ಪಡೆದ 43 ದೇಶಗಳ ಪಟ್ಟಿ

By Mahesh
|
Google Oneindia Kannada News

ಬೆಂಗಳೂರು, ನ.28: ಯುಎಸ್, ಜರ್ಮನಿ, ಇಸ್ರೇಲ್, ಆಸ್ಟ್ರೇಲಿಯಾದ ಸೇರಿದಂತೆ 43 ರಾಷ್ಟ್ರಗಳ ಪ್ರವಾಸಿಗರಿಗೆ ಗುರುವಾರದಿಂದ ವೀಸಾ ಆನ್ ಅರೈವಲ್ ಸೌಲಭ್ಯವನ್ನು ಎನ್ ಡಿಎ ಸರ್ಕಾರ ಘೋಷಿಸಿದೆ. ಈ ಸೌಲಭ್ಯ ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಸಿಕ್ಕಿದ್ದು ಮುಂದಿನ ಹಂತದಲ್ಲಿ ಪಣಜಿಯ ವಿಮಾನನಿಲ್ದಾಣದಲ್ಲೂ ಲಭ್ಯವಿರಲಿದೆ.

ಗೃಹ ಸಚಿವ ರಾಜನಾಥ್ ಸಿಂಗ್ ಘೋಷಿಸಿದ್ದಾರೆ.ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಪ್ರವಾಸೋದ್ಯಮ ಸಚಿವ ಡಾ.ಮಹೇಶ್ ಶರ್ಮಾ ಇ ವೀಸಾ ಸೌಲಭ್ಯವನ್ನು ಲೋಕಾರ್ಪಣೆ ಮಾಡಿದ್ದಾರೆ. ಈ ಸೌಲಭ್ಯದಿಂದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಶೇ 15ರಷ್ಟು ಹೆಚ್ಚಿನ ಪ್ರಗತಿ ಸಾಧಿಸುವ ನಿರೀಕ್ಷೆ ಹೊಂದಲಾಗಿದೆ.

ವೀಸಾ ಆನ್ ಅರೈವಲ್ ಎಲ್ಲೆಲ್ಲಿ ಲಭ್ಯ: ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ಹೈದರಾಬಾದ್, ಬೆಂಗಳೂರು, ಕೊಚ್ಚಿ, ತಿರುವನಂತಪುರಂ.

ಅರ್ಜಿ ಸಲ್ಲಿಸುವುದು ಹೇಗೆ? : ವಿದೇಶಿ ಪ್ರವಾಸಿಗರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ, ತಮ್ಮ ಭಾವಚಿತ್ರ, ಪಾಸ್ ಪೋರ್ಟ್ ವಿವರಗಳನ್ನು ದಾಖಲಿಸಬೇಕು, ಶುಲ್ಕವನ್ನು ಆನ್ ಲೈನ್ ಮೂಲಕವೇ ಪಾವತಿಸಬಹುದು. ಅರ್ಜಿ ಸಲ್ಲಿಸಿದ 72 ಗಂಟೆಗಳ ನಂತರ ಈಟಿಎನಿಂದ ಇಮೇಲ್ ಕಳಿಸಲಾಗುತ್ತದೆ.

List of 43 countries which will get Visa-on-arrival at Goa, Bengaluru airport

ಯಾವ ದೇಶಗಳಿಗೆ ಸೌಲಭ್ಯ ಲಭ್ಯ:
1. ಆಸ್ಟ್ರೇಲಿಯಾ.
2. ಬ್ರೆಜಿಲ್.
3. ಕಾಂಬೋಡಿಯಾ.
4. ಕುಕ್ ದ್ವೀಪ.
5. ಜಿಬೌತಿ.
6. ಫಿಜಿ
7. ಫಿನ್ ಲ್ಯಾಂಡ್.
8. ಜರ್ಮನಿ.
9. ಇಂಡೋನೇಷಿಯಾ.
10. ಇಸ್ರೇಲ್.
11. ಜಪಾನ್.
12. ಜೋರ್ಡಾನ್.
13. ಕೀನ್ಯಾ.
14. ಕಿರಿಬಾತಿ.
15. ಲಾವೋಸ್.
16. ಲಕ್ಸೆಂಬರ್ಗ್.
17. ಮಾರ್ಷಲ್ ದ್ವೀಪ.
18. ಮಾರಿಷಸ್.
19. ಮೆಕ್ಸಿಕೋ.
20. ಮೈಕ್ರೊನೆಷಿಯಾ.
21. ಮ್ಯಾನ್ಮಾರ್.
22. ನೌವೂರು.
23. ನ್ಯೂಜಿಲೆಂಡ್.
24. ನ್ಯೂಯಿ ದ್ವೀಪ.
25. ನಾರ್ವೆ.
26. ಒಮನ್.
27. ಪಲೋ
28. ಪ್ಯಾಲೆಸ್ಟೈನ್
29. ಪಪೂವಾ ನ್ಯೂ ಗ್ಯುನಿಯಾ
30. ಫಿಲಿಫೈನ್ಸ್
31. ರಿಪಬ್ಲಿಕ್ ಆಫ್ ಕೊರಿಯಾ.
32. ರಷ್ಯಾ.
33. ಸಮೋವಾ.
34. ಸಿಂಗಪುರ.
35. ಸಾಲೋಮನ್ ದ್ವೀಪ.
36. ಥೈಲ್ಯಾಂಡ್.
37. ಟೋಂಗಾ.
38. ಟುವಲು
39. ಯುಎಇ.
40. ಉಕ್ರೇನ್.
41. ಯುಎಸ್ಎ
42. ವನೌತು.
43. ವಿಯೆಟ್ನಾಂ

ಮುಂದಿನ ಹಂತದಲ್ಲಿ ಇ ವೀಸಾ ಸೌಲಭ್ಯವನ್ನು ಮೆಕ್ಸಿಕೋ, ಕೀನ್ಯಾ, ಫಿಜಿ ಮುಂತಾದ ದೇಶಗಳಿಗೆ ನೀಡಲಾಗುವುದು ಎಂದು ಗೃಹ ಇಲಾಖೆ ಹೇಳೀದೆ. ಪ್ರವಾಸೋದ್ಯಮ, ಶಿಕ್ಷಣ, ಸಾಂಸ್ಕೃತಿಕ ವಿನಿಯಮ ಹೆಚ್ಚಳಕ್ಕೆ ಈ ಸೌಲಭ್ಯ ಅನುಕೂಲಕರ ಎಂದು ಇಂಡಿಯನ್ ಅಸೋಸಿಯೇಷನ್ ಆಫ್ ಟೂರ್ ಅಪರೇಟರ್ಸ್ ಅಧ್ಯಕ್ಷ ಸುಭಾಷ್ ಗೋಯಲ್ ಪ್ರತಿಕ್ರಿಯಿಸಿದ್ದಾರೆ. ಕಳೆದ ಹತ್ತು ತಿಂಗಳಿನಲ್ಲಿ ಭಾರತ ಸುಮಾರು 51.79 ಲಕ್ಷಕ್ಕೂ ಅಧಿಕ ವಿದೇಶಿ ಪ್ರವಾಸಿಗರನ್ನು ಕಂಡಿದೆ.

English summary
The Centre has extended the visa-on-arrival facility at the Goa airport for tourists from 43 countries, which is expected to bring in a 15% growth in tourism during the ongoing season. Here is the List of 43 countries which will get Visa-on-arrival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X