ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ 10 ದೇಶಗಳಲ್ಲಿ ವಾಸಿಸುವ ಭಾರತೀಯರಿಗೆ ಶೀಘ್ರದಲ್ಲೇ UPI ಸೇವೆಗಳ ಸೌಲಭ್ಯ- ಯಾವ ದೇಶಗಳು ನೋಡಿ

|
Google Oneindia Kannada News

ನವದೆಹಲಿ, ಜನವರಿ 12: ಇತರ ದೇಶಗಳಲ್ಲಿರುವ ಭಾರತೀಯರು ತಮ್ಮ ಅಂತರರಾಷ್ಟ್ರೀಯ ಮೊಬೈಲ್ ಸಂಖ್ಯೆಗಳನ್ನು ಬಳಸಿಕೊಂಡು ಏಕೀಕೃತ ಪಾವತಿಗಳ ಇಂಟರ್ಫೇಸ್ (UPI) ಅನ್ನು ಪ್ರವೇಶಿಸಲು ಶೀಘ್ರದಲ್ಲೇ ಸಾಧ್ಯವಾಗಲಿದೆ.

10 ದೇಶಗಳಲ್ಲಿನ ಅನಿವಾಸಿ ಭಾರತೀಯರು (NRI) ತಮ್ಮ ಭಾರತದ ಫೋನ್ ಸಂಖ್ಯೆಯನ್ನು ಅವಲಂಬಿಸದೆಯೇ ವಹಿವಾಟುಗಳಿಗಾಗಿ UPI ಸೇವೆಗಳನ್ನು ಪಡೆಯಬಹುದು.

ಹತ್ತು ದೇಶಗಳ ಪಟ್ಟಿ ಇಲ್ಲಿದೆ

1- ಸಿಂಗಾಪುರ
2- ಯುಎಸ್ (ಅಮೆರಿಕ)
3- ಆಸ್ಟ್ರೇಲಿಯಾ
4- ಕೆನಡಾ
5- ಹಾಂಗ್ ಕಾಂಗ್
6- ಓಮನ್
7- ಕತಾರ್
8- ಸೌದಿ ಅರೇಬಿಯಾ
9- ಯುಎಇ ( Abu Dhabi, Ajman, Dubai, Fujairah, Ras al-Khaimah, Sharjah, Umm al-Quwain )
10- ಯುಕೆ (ಇಂಗ್ಲೆಂಡ್‌)

Indians Living In These 10 Countries Can Soon Make UPI Payments

ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ ಪ್ರಕಾರ, ಅಂತರಾಷ್ಟ್ರೀಯ ಮೊಬೈಲ್ ಸಂಖ್ಯೆಗಳೊಂದಿಗೆ NRE/NRO (ಹೊರಗಿನ ಅನಿವಾಸಿ ಮತ್ತು ಸಾಮಾನ್ಯ ಅನಿವಾಸಿ) ಖಾತೆಗಳು UPI ಬಳಸಿ ವಹಿವಾಟು ನಡೆಸಬಹುದು.

ಪಾವತಿಗಳ ನಿಗಮವು ಪಾಲುದಾರ ಬ್ಯಾಂಕ್‌ಗಳಿಗೆ ನಿರ್ದೇಶನಗಳನ್ನು ಅನುಸರಿಸಲು ಏಪ್ರಿಲ್ 30 ರವರೆಗೆ ಸಮಯವನ್ನು ನೀಡಿದೆ.

NRE ಖಾತೆಯು NRI ಗಳಿಗೆ ವಿದೇಶಿ ಗಳಿಕೆಯನ್ನು ಭಾರತಕ್ಕೆ ವರ್ಗಾಯಿಸಲು ಸಹಾಯ ಮಾಡುತ್ತದೆ. ಆದರೆ NRO ಖಾತೆಯು ಭಾರತದಲ್ಲಿ ಗಳಿಸಿದ ಆದಾಯವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

Indians Living In These 10 Countries Can Soon Make UPI Payments

ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (FEMA) ನಿಯಮಾವಳಿಗಳ ಪ್ರಕಾರ ಅಂತಹ ಖಾತೆಗಳನ್ನು ಅನುಮತಿಸಲಾಗಿದೆ ಎಂದು ಬ್ಯಾಂಕ್‌ಗಳು ಖಚಿತಪಡಿಸಿಕೊಳ್ಳಲ್ಲವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಾರ್ಗಸೂಚಿಗಳನ್ನು ಅನುಸರಿಸುವುದು ಮತ್ತು ಮನಿ ಲಾಂಡರಿಂಗ್ ಅಥವಾ ಭಯೋತ್ಪಾದನೆಗೆ ಹಣಕಾಸು ಒದಗಿಸುವುದರಿಂದ ರಕ್ಷಿಸುವುದು ಸವಾಲಿನ ಸಂಗತಿಯಾಗಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟ ಸಮಿತಿಯು ರುಪೇ ಡೆಬಿಟ್ ಕಾರ್ಡ್‌ಗಳು ಮತ್ತು ಕಡಿಮೆ ಮೌಲ್ಯದ BHIM-UPI ವಹಿವಾಟುಗಳನ್ನು ಉತ್ತೇಜಿಸುವ ₹ 2,600 ಕೋಟಿ ಯೋಜನೆಗೆ ಅನುಮೋದನೆ ನೀಡಿದೆ.

UPI ಕ್ರಮವು ಅಂತರರಾಷ್ಟ್ರೀಯ ವಿದ್ಯಾರ್ಥಿಗಳು, ವಿದೇಶದಲ್ಲಿ ವಾಸಿಸುವ ಕುಟುಂಬ ಮತ್ತು ಸ್ಥಳೀಯ ವ್ಯವಹಾರಗಳಿಗೆ ಸಹಾಯ ಮಾಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯೋಜನೆಯಡಿಯಲ್ಲಿ, ರುಪೇ ಮತ್ತು ಯುಪಿಐ ಬಳಸಿ ವಹಿವಾಟುಗಳನ್ನು ಉತ್ತೇಜಿಸಲು ಬ್ಯಾಂಕುಗಳಿಗೆ ಆರ್ಥಿಕ ಪ್ರೋತ್ಸಾಹವನ್ನು ನೀಡಲಾಗುತ್ತದೆ.

Indians Living In These 10 Countries Can Soon Make UPI Payments

'ರುಪೇ ಡೆಬಿಟ್ ಕಾರ್ಡ್‌ಗಳು ಮತ್ತು BHIM-UPI ವಹಿವಾಟುಗಳ ಪ್ರಚಾರಕ್ಕೆ ಸಂಬಂಧಿಸಿದಂತೆ ಕ್ಯಾಬಿನೆಟ್ ನಿರ್ಧಾರ ತೆಗೆದುಕೊಂಡಿದೆ. ಈ ಮೂಲಕ ಡಿಜಿಟಲ್ ಪಾವತಿಯಲ್ಲಿ ಭಾರತದ ಪ್ರಗತಿಯನ್ನು ಇನ್ನಷ್ಟು ಬಲಪಡಿಸಲಾಗುವುದು' ಎಂದು ಪ್ರಧಾನಿ ಮೋದಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಕೇವಲ ಆರು ವರ್ಷಗಳಲ್ಲಿ UPI ವಹಿವಾಟುಗಳಲ್ಲಿ ಭಾರಿ ಬೆಳವಣಿಗೆ ಕಂಡುಬಂದಿದೆ. ಡಿಸೆಂಬರ್‌ನಲ್ಲಿ ₹ 12 ಲಕ್ಷ ಕೋಟಿಗೂ ಹೆಚ್ಚು ಮೌಲ್ಯದ ಯುಪಿಐ ವಹಿವಾಟು ನಡೆದಿದೆ.

English summary
Non Resident Indians (NRIs) in 10 countries can access UPI services for transactions without having to depend on their India phone number,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X