Get Updates
Get notified of breaking news, exclusive insights, and must-see stories!

ತಾಜ್ ಹೋಟೆಲ್ ಮುಡಿಗೆ ಮತ್ತೊಂದು ಕಿರೀಟ

ಮುಂಬೈ, ಜೂನ್ 16; ಭಾರತೀಯ ಹೊಟೇಲ್ ಕಂಪನಿಯ 'ತಾಜ್' ಅನ್ನು ಬ್ರಾಂಡ್ ಫೈನಾನ್ಸ್ ಸಲಹಾ ಸಂಸ್ಥೆಯ ಇತ್ತೀಚಿನ ವರದಿಯ ಪ್ರಕಾರ ವಿಶ್ವದ ಪ್ರಬಲ ಹೋಟೆಲ್ ಬ್ರ್ಯಾಂಡ್ ಎಂದು ಹೆಸರಿಸಿದೆ.

ಬ್ರ್ಯಾಂಡ್ ಮೌಲ್ಯಮಾಪನ ಸಲಹಾ ಸಂಸ್ಥೆ "ಬ್ರಾಂಡ್ ಫೈನಾನ್ಸ್" ನ ಇತ್ತೀಚಿನ ವರದಿಯ ಪ್ರಕಾರ ಇಂಡಿಯನ್ ಹೋಟೆಲ್ಸ್ ಕಂಪನಿಯ 'ತಾಜ್' ಅನ್ನು ವಿಶ್ವದ ಪ್ರಬಲ ಹೋಟೆಲ್ ಬ್ರ್ಯಾಂಡ್ ಎಂದು ರೇಟ್ ಮಾಡಲಾಗಿದೆ.

ವಿವಿಧ ವರದಿಗಳ ಪ್ರಕಾರ ಗ್ರಾಹಕರ ಸೇವೆ, ಉದ್ಯೋಗಿಗಳ ತೃಪ್ತಿ ಮತ್ತು ಕಾರ್ಪೊರೇಟ್ ಖ್ಯಾತಿ ಮತ್ತು ಅದರ ವಿಶ್ವ ದರ್ಜೆಯ ಗ್ರಾಹಕ ಸೇವೆಗಾಗಿ ಅನುಗುಣವಾದ ಎಎಎ (AAA) ರೇಟಿಂಗ್‌ನೊಂದಿಗೆ ತಾಜ್ 100 ರಲ್ಲಿ 88.9 ರ ಒಟ್ಟಾರೆ ಬ್ರ್ಯಾಂಡ್ ಸಾಮರ್ಥ್ಯ ಸೂಚ್ಯಂಕವನ್ನು ಪಡೆದುಕೊಂಡಿದೆ.

Indian Luxurious Hotel Taj Named As Worlds Strongest Hotel Brand

ಬ್ರಾಂಡ್ ಫೈನಾನ್ಸ್‌ನ 'ಹೋಟೆಲ್‌ಗಳು 50 2022' ವಾರ್ಷಿಕ ವರದಿಯು ಜಾಗತಿಕವಾಗಿ ಅತ್ಯಂತ ಮೌಲ್ಯಯುತ ಮತ್ತು ಉತ್ತಮ ಹೋಟೆಲ್ ಬ್ರಾಂಡ್‌ಗಳನ್ನು ಪಟ್ಟಿ ಮಾಡುತ್ತದೆ.

ಬ್ರಾಂಡ್ ಫೈನಾನ್ಸ್‌ನ ಪಟ್ಟಿ ಮಾಡಿರುವ ವಿಶ್ವದ ಹತ್ತು ಪ್ರಬಲ ಹೋಟೆಲ್ ಬ್ರ್ಯಾಂಡ್‌ಗಳು ಹೀಗಿವೆ, ತಾಜ್ ಹೋಟೆಲ್ ಜೊತೆಗೆ ಪ್ರೀಮಿಯರ್ ಇನ್, ಹಿಲ್ಟನ್ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳು, ಹ್ಯಾಂಪ್ಟನ್ ಬೈ ಹಿಲ್ಟನ್, ಎಂಬಸಿ ಸೂಟ್ಸ್ ಹೋಟೆಲ್‌, ಜೆಡಬ್ಲ್ಯೂ ಮ್ಯಾರಿಯಟ್ ಮತ್ತು ಶಾಂಗ್ರಿ-ಲಾ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳು, ರೆಸಿಡೆನ್ಸ್ ಇನ್ ಮ್ಯಾರಿಯಟ್, ವಾಲ್ಡೋರ್ಫ್ ಆಸ್ಟೋರಿಯಾ ಹೋಟೆಲ್‌ಗಳು ಮತ್ತು ರೆಸಾರ್ಟ್ ಮತ್ತು ಡಬ್ಲ್ಯು ಹೋಟೆಲ್‌ಗಳು ಸ್ಥಾನ ಪಡೆದಿವೆ.

Indian Luxurious Hotel Taj Named As Worlds Strongest Hotel Brand

ತಾಜ್ ಬ್ರಾಂಡ್ ಮೌಲ್ಯ ಹೆಚ್ಚಳ; ತಾಜ್ ಹೋಟೆಲ್ಸ್ ಬ್ರಾಂಡ್ ಮೌಲ್ಯ ಶೇಕಡಾ 6ರಷ್ಟು ಹೆಚ್ಚಾಗಿದ್ದು, 314 ಮಿಲಿಯನ್‌ ಡಾಲರ್ ಗೆ ಏರಿಕೆಯಾಗಿದೆ, ಶ್ರೇಯಾಂಕದಲ್ಲಿ ಪ್ರಬಲವಾದ ಬ್ರ್ಯಾಂಡ್ ಆಗಿದ್ದು, 100 ರಲ್ಲಿ 88.9 ಬ್ರಾಂಡ್ ಸಾಮರ್ಥ್ಯ ಸೂಚ್ಯಂಕ (BSI) ಸ್ಕೋರ್ ಮತ್ತು ಅನುಗುಣವಾದ AAA ಬ್ರ್ಯಾಂಡ್ ರೇಟಿಂಗ್ ಹೊಂದಿದೆ ಎಂದು ಬ್ರಾಂಡ್ ಫೈನಾನ್ಸ್ ತನ್ನ ವರದಿಯಲ್ಲಿ ತಿಳಿಸಿದೆ.

ಕೋವಿಡ್ -19 ಸಾಂಕ್ರಾಮಿಕ ಮತ್ತು ನಂತರ ಆದ ಲಾಕ್‌ಡೌನ್‌ಗಳು ಪ್ರಪಂಚದಾದ್ಯಂತದ ಇತರ ಹೋಟೆಲ್‌ಗಳಂತೆ ತಾಜ್ ಮೇಲೆ ಕೂಡ ಪರಿಣಾಮ ಬೀರಿದ್ದವು. ಆದರೆ ಲಾಕ್‌ಡೌನ್ ಅವಧಿಯಲ್ಲಿ ಪ್ರವಾಸಿಗರ ನಿರೀಕ್ಷೆಗೆ ತಕ್ಕಂತೆ ಮಾರ್ಪಾಟು ಮಾಡಿಕೊಳ್ಳಲು ಈ ಸಮಯವನ್ನು ಬಳಸಿಕೊಂಡಿತು, ತನ್ನ ಸೇವೆ, ಗುಣಮಟ್ಟದಲ್ಲಿ ತನ್ನನ್ನು ತಾನು ಮತ್ತಷ್ಟು ಉತ್ತಮಪಡಿಸಿಕೊಂಡಿತು.

ಎರಡನೇ ಬಾರಿಗೆ ಮೊದಲ ಸ್ಥಾನ; ಇಂಡಿಯನ್ ಹೋಟೆಲ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪುನೀತ್ ಛತ್ವಾಲ್ ಮಾತನಾಡಿ, ತಾಜ್ ಸತತವಾಗಿ ಎರಡನೇ ಬಾರಿಗೆ ವಿಶ್ವದ ಪ್ರಬಲ ಹೋಟೆಲ್ ಬ್ರ್ಯಾಂಡ್ ಎಂದು ಗುರುತಿಸಲ್ಪಟ್ಟಿರುವುದು ನಮಗೆ ತುಂಬಾ ಹೆಮ್ಮೆ ತಂದಿದೆ. ಇದು ತಾಜ್ ಅನ್ನು ಜಾಗತಿಕವಾಗಿ ಉದ್ಯಮದಲ್ಲಿನ ಶ್ರೇಷ್ಠತೆಯ ಅತ್ಯಂತ ಪ್ರಶಂಸನೀಯ ಮಾನದಂಡ ಎಂದು ಹೇಳಿದ್ದಾರೆ.

ಪ್ರಯಾಣಿಕರು ವಿಶ್ವ ದರ್ಜೆಯ ಐಷಾರಾಮಿ ಹೋಟೆಲ್‌ಗಳ ಕಡೆಗೆ ಹೆಚ್ಚು ಆಕರ್ಷಿತರಾಗುವುದರ ಜೊತೆಗೆ ಜವಾಬ್ದಾರಿಯುತ ವ್ಯಾಪಾರ ಅಭ್ಯಾಸಗಳನ್ನು ಅನುಸರಿಸುತ್ತಾರೆ, ತಾಜ್ ಭವಿಷ್ಯದಲ್ಲಿ ಆತಿಥ್ಯವನ್ನು ಮತ್ತಷ್ಟು ಉತ್ತಮ ದರ್ಜೆಗೆ ಹೆಚ್ಚಿಸಲು ಸಿದ್ಧವಾಗಿದೆ. ತಾಜ್ ಯಶಸ್ಸು ನಮ್ಮ ಅತಿಥಿಗಳ ದೃಢವಾದ ನಂಬಿಕೆಯ ಸಂಕೇತವಾಗಿದೆ ಮತ್ತು ಇದು ನಮ್ಮ ಸಂಸ್ಥೆಯ ಉದ್ಯೋಗಿಗಳ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸುತ್ತದೆ. ತಾಜ್‌ನ ಪರಂಪರೆಯನ್ನು ಸಾಕಾರಗೊಳಿಸಲು ಉದ್ಯೋಗಿಗಳೇ ಕಾರಣ ಎಂದು ಪುನೀತ್ ಹೇಳಿದ್ದಾರೆ.

Recommended Video

      ದೆಹಲಿ ಪೊಲೀಸರ ದೌರ್ಜನ್ಯ ಬಿಚ್ಚಿಟ್ಟ ಕಾಂಗ್ರೆಸ್ ಸಂಸದೆ: ವಿಡಿಯೋ ಶೇರ್ ಮಾಡಿದ ಶಶಿ ತರೂರ್ | Oneindia Kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+