ಮಲ್ಯ-ಯುಕೆಯಿಂದ ಕೋರ್ಟಿನ ಕಟಕಟೆಗೆ ಈಗ ಸಾಧ್ಯ!

Posted By:
Subscribe to Oneindia Kannada

ನವದೆಹಲಿ, ಫೆಬ್ರವರಿ 09: ಮನಿ ಲಾಂಡ್ರಿಂಗ್ ಹಾಗೂ ಬ್ಯಾಂಕ್ ಸಾಲ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ಬಾರಿ ರೆಡ್ ಕಾರ್ನರ್, ಜಾಮೀನು ರಹಿತ ವಾರೆಂಟ್, ನೋಟಿಸ್ ಪಡೆದಿರುವ ಉದ್ಯಮಿ ಮಲ್ಯರನ್ನು ಕರೆತರುವ ಪ್ರಕ್ರಿಯೆಗೆ ವಿದೇಶಾಂಗ ಸಚಿವಾಲಯ ಚಾಲನೆ ನೀಡಿದೆ. ಈ ಕುರಿತಂತೆ ಇಂಗ್ಲೆಂಡಿನ ಹೈಕಮಿಷನರ್ ಗೆ ಅಧಿಕೃತ ಮನವಿಯನ್ನು ಭಾರತ ಸರ್ಕಾರ ಕಳಿಸಿದೆ.

ಈ ಹಿಂದೆ ಅನೇಕ ಬಾರಿ ರೆಡ್ ಕಾರ್ನರ್, ಜಾಮೀನು ರಹಿತ ವಾರೆಂಟ್, ನೋಟಿಸುಗಳು ಜಾರಿಯಾದರೂ ಮಲ್ಯ ಅವರ ಪಾಸ್ ಪೋರ್ಟ್ ಜಪ್ತಿ ಮಾಡಲು ಆಗಿರಲಿಲ್ಲ. ಸದ್ಯ ವಿದೇಶದಲ್ಲಿರುವ ಮಲ್ಯ ಅವರ ಸಂಪರ್ಕ ಕೂಡಾ ಸಾಧ್ಯವಾಗಿರಲಿಲ್ಲ.

'ನಾನು ಭಾರತಕ್ಕೆ ಬರಬೇಕು ಅಂತಿದೀನಿ. ಅದರೆ ಏನು ಮಾಡ್ತೀರಿ, ಪಾಸ್ ಪೋರ್ಟ್ ಮುಟ್ಟುಗೋಲು ಹಾಕಿಕೊಂಡಿದ್ದಾರೆ. ನನ್ನ ಹತ್ತಿರ ಪಾಸ್ ಪೋರ್ಟ್ ಇಲ್'ಲ ಎಂದು ಮದ್ಯದ ದೊರೆ ವಿಜಯ್ ಮಲ್ಯ, ತಮ್ಮ ಲಾಯರ್ ಮೂಲಕ ದೆಹಲಿ ಹೈಕೋರ್ಟಿಗೆ ವಕೀಲ ಮೂಲಕ ತಿಳಿಸಿದ್ದರು.

ಇದಕ್ಕೆ ಪೂರಕವಾಗಿ ಬ್ರಿಟನ್ ಸರ್ಕಾರ ಕೂಡಾ ಈ ಬಗ್ಗೆ ಇರುವ ಕಾನೂನು ತೊಡಕನ್ನು ಮುಂದಿಟ್ಟಿತ್ತು. ಈಗ ತೊಡಕೆಲ್ಲವೂ ನಿವಾರಣೆಯಾಗಿದ್ದು, ಮಲ್ಯರನ್ನು ಭಾರತದ ಕೋರ್ಟಿನ ಕಟಕಟೆಗೆ ಕರೆತರುವ ಪ್ರಕ್ರಿಯೆಗೆ ತ್ವರಿತಗತಿಯಲ್ಲಿ ಚಾಲನೆ ಸಿಕ್ಕಿದೆ.

India sends extradition request to UK for VIjay Mallya

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India has sent an extradition request for liquor baron Vijay Mallya on Thursday. The extradition request has been sent to the British High Commission and the Ministry for External Affairs said that it has an extraordinary treaty with the UK and there is a legitimate case against Mallya.
Please Wait while comments are loading...