• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನವೆಂಬರ್‌ನಲ್ಲಿ ಭಾರತದ ಚಿನ್ನದ ಆಮದು ಕುಸಿತ: ಆಭರಣಗಳಿಗೆ ಇರಲಿಲ್ಲ ಡಿಮ್ಯಾಂಡ್

|

ನವದೆಹಲಿ, ಡಿಸೆಂಬರ್ 05: ವಿಶ್ವದ ಎರಡನೇ ಅತಿದೊಡ್ಡ ಚಿನ್ನದ ಆಮದುದಾರ ದೇಶವಾದ ಭಾರತದಲ್ಲಿ ನವೆಂಬರ್‌ ತಿಂಗಳಿನಲ್ಲಿ ಹಳದಿ ಲೋಹದ ಆಮದು ಕುಸಿದಿದೆ. ಒಂದು ರೀತಿಯಲ್ಲಿ 2020ರ ವರ್ಷ ಆಭರಣ ಮಾರಾಟಗಾರರಿಗೆ ಅತ್ಯಂತ ಕೆಟ್ಟ ವರ್ಷ ಅಂದ್ರೆ ತಪ್ಪಾಗಲಾರದು. ಇದಕ್ಕೆ ಕಾರಣ ಆಭರಣದ ಅಂಗಡಿಗಳಲ್ಲಿ ಬೇಡಿಕೆ ಮಟ್ಟ ತೀವ್ರವಾಗಿ ಕುಸಿದಿರುವುದು.

ಪ್ರತಿ ವರ್ಷ ಅಕ್ಟೋಬರ್ - ನವೆಂಬರ್‌ ತಿಂಗಳ ಹಬ್ಬದ ಸೀಸನ್‌ನಲ್ಲಿ ಚಿನ್ನದ ಆಭರಣಗಳಿಗೆ ಹೆಚ್ಚಿನ ಬೇಡಿಕೆ ಇರುತ್ತದೆ. ಅದರಲ್ಲೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಾಮಾನ್ಯವಾಗಿ ಬೇಡಿಕೆ ಹೆಚ್ಚಾಗಿಯೇ ಇರುತ್ತದೆ. ಆದರೆ ದೀಪಗಳ ಹಬ್ಬದಲ್ಲೂ ಬೇಡಿಕೆ ಇಲ್ಲದ ಕಾರಣ ಕಳೆದ ತಿಂಗಳು ಭಾರತದ ಚಿನ್ನದ ಆಮದು ಕುಸಿಯಿತು.

ಮತ್ತಷ್ಟು ಎತ್ತರಕ್ಕೆ ಚಿನ್ನದ ಬೆಲೆ: ಸತತ 4ನೇ ದಿನ ಏರಿಕೆ

ಮಾಹಿತಿಯು ಅಧಿಕೃತವಾಗಿ ಹೊರಬೀಳದೆ ಇದ್ದರೂ, ಅಂಕಿ-ಅಂಶಗಳ ಕುರಿತು ತಿಳಿದವರ ಪ್ರಕಾರ ನವೆಂಬರ್‌ನಲ್ಲಿ ಚಿನ್ನದ ಆಮದು ಶೇಕಡಾ 41ರಷ್ಟು ಇಳಿದು 33.1 ಟನ್‌ಗಳಿಗೆ ಇಳಿದಿದೆ. ಆದರೆ ಆಮದು ಪ್ರಮಾಣ ಅಕ್ಟೋಬರ್‌ನಲ್ಲಿ ದಾಖಲಾಗಿದ್ದ 29 ಟನ್‌ಗಿಂತ ಸುಧಾರಣೆಯನ್ನು ಕಂಡಿದೆ.

ಕೊರೊನಾವೈರಸ್ ಸಾಂಕ್ರಾಮಿಕ ಕಾರಣ ಚಿನ್ನದ ಬೆಲೆ ಏರಿಕೆ ಹಾಗೂ ದುರ್ಬಲ ಆರ್ಥಿಕತೆಯು ಚಿನ್ನವನ್ನು ಖರೀದಿಸುವ ಖರೀದಿದಾರರ ಸಾಮರ್ಥ್ಯವನ್ನು ಕುಗ್ಗಿಸುವುದರಿಂದ, 2020ರಲ್ಲಿ ಭಾರತದ ಆಭರಣಕಾರರು ತಮ್ಮ ಕೆಟ್ಟ ವರ್ಷವನ್ನು ಎದುರಿಸಿದ್ದಾರೆ.

ಕೊರೊನಾವೈರಸ್ ಸಾಂಕ್ರಾಮಿಕ, ಚಿನ್ನದ ಬೆಲೆ ಏರಿಕೆ ಮತ್ತು ದುರ್ಬಲ ಆರ್ಥಿಕತೆಯು ಚಿನ್ನವನ್ನು ಖರೀದಿಸುವ ಖರೀದಿದಾರರ ಸಾಮರ್ಥ್ಯವನ್ನು ಕುಗ್ಗಿಸುವುದರಿಂದ ಭಾರತದಲ್ಲಿನ ಆಭರಣಕಾರರು 2020 ರಲ್ಲಿ ತಮ್ಮ ಕೆಟ್ಟ ವರ್ಷವನ್ನು ಎದುರಿಸಿದ್ದಾರೆ. ಅಖಿಲ ಭಾರತ ರತ್ನ ಮತ್ತು ಆಭರಣ ದೇಶೀಯ ಮಂಡಳಿಯ ಪ್ರಕಾರ, ದೀಪಾವಳಿಯ ಸಮಯದಲ್ಲಿ ದೇಶದ 900 ದಶಲಕ್ಷಕ್ಕೂ ಹೆಚ್ಚು ಹಿಂದೂಗಳು ಆಭರಣಗಳನ್ನು ಖರೀದಿಸುವ ದೊಡ್ಡ ಸಂದರ್ಭವಾಗಿದೆ. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದಲ್ಲಿ ಶೇಕಡಾ 70ರಷ್ಟು ಮಾತ್ರ ಮಾರಾಟವಾಗಿದೆ.

ಬ್ಲೂಮ್‌ಬರ್ಗ್‌ ವರದಿಯ ಪ್ರಕಾರ, ಜನವರಿಯಿಂದ ನವೆಂಬರ್ ತಿಂಗಳವರೆಗೆ ಭಾರತದ ಚಿನ್ನದ ಆಮದು ಶೇಕಡಾ 63ರಷ್ಟು ಇಳಿದು 220.2 ಟನ್‌ಗಳಿಗೆ ತಲುಪಿದೆ.

English summary
Gold imports by India tumbled last month as the festival of lights failed to revive demand in the world’s second-biggest consumer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X