ಭಾರತದ ವಿದೇಶಿ ವಿನಿಮಯ ಮೀಸಲು ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ
ನವದೆಹಲಿ, ಡಿಸೆಂಬರ್ 26: ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಒತ್ತಡಕ್ಕೆ ಸಿಲುಕಿರುವ ಸಂದರ್ಭದಲ್ಲಿ ಭಾರತದ ವಿದೇಶಿ ವಿನಿಮಯ ಮೀಸಲು ದಾಖಲೆಯ ಏರಿಕೆ ಕಂಡಿದ್ದು, ಹೊಸ ಗರಿಷ್ಠ ಮಟ್ಟವನ್ನು ತಲುಪಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಸಾಪ್ತಾಹಿಕ ಮಾಹಿತಿಯ ಪ್ರಕಾರ, ಡಿಸೆಂಬರ್ 18 ಕ್ಕೆ ಕೊನೆಗೊಂಡ ವಾರದಲ್ಲಿ ದೇಶದ ವಿದೇಶಿ ವಿನಿಮಯ ಸಂಗ್ರಹವು 2.56 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದ್ದು, ಸಾರ್ವಕಾಲಿಕ ಗರಿಷ್ಠ 581.131 ಬಿಲಿಯನ್ ಡಾಲರ್‌ಗಳನ್ನು ತಲುಪಿದೆ. ಜೊತೆಗೆ ವಿಶ್ವದಲ್ಲಿಯೇ ಐದನೇ ಅತಿದೊಡ್ಡ ವಿದೇಶಿ ವಿನಿಮಯ ಸಂಗ್ರಹ ಹೊಂದಿದೆ.
ಕಳೆದ ವಾರದಲ್ಲಿ ವಿದೇಶಿ ವಿನಿಮಯ ಮೀಸಲು 778 ಮಿಲಿಯನ್ ಡಾಲರ್ ಇಳಿದು, 578.568 ಬಿಲಿಯನ್ ಡಾಲರ್‌ಗೆ ತಲುಪಿದೆ. ವಿದೇಶಿ ಕರೆನ್ಸಿ ಆಸ್ತಿಗಳ (ಎಫ್‌ಸಿಎ) ಹೆಚ್ಚಳವು ಒಟ್ಟಾರೆ ನಿಕ್ಷೇಪಗಳ ಅತಿದೊಡ್ಡ ಅಂಶವಾಗಿದೆ. ಎಫ್‌ಸಿಎಗಳು, ಚಿನ್ನದ ಮೀಸಲು, ಎಸ್‌ಡಿಆರ್, ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಯೊಂದಿಗೆ ದೇಶದ ಮೀಸಲು ಸ್ಥಾನವು ವಿದೇಶೀ ವಿನಿಮಯ ಸಂಗ್ರಹದ ಅಂಶಗಳಾಗಿವೆ.

ಎಫ್‌ಸಿಎಗಳು 1.382 ಬಿಲಿಯನ್ ಡಾಲರ್‌ನಿಂದ 537.727 ಬಿಲಿಯನ್‌ಗೆ ಏರಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಸಾಪ್ತಾಹಿಕ ಅಂಕಿ ಅಂಶಗಳು ತೋರಿಸುತ್ತವೆ. ಇದರಲ್ಲಿ ವಿದೇಶಿ ವಿನಿಮಯ ನಿಕ್ಷೇಪಗಳಲ್ಲಿರುವ ಯೂರೋ, ಪೌಂಡ್ ಮತ್ತು ಯೆನ್ ಸೇರಿವೆ.
ವಾರದ ಆಧಾರದ ಮೇಲೆ ಚಿನ್ನದ ಸಂಗ್ರಹವು 1.008 ಬಿಲಿಯನ್ ಏರಿಕೆಯಾಗಿ 37.02 ಬಿಲಿಯನ್ ಡಾಲರ್‌ಗೆ ತಲುಪಿದೆ ಎಂದು ಅಂಕಿ ಅಂಶಗಳು ತೋರಿಸಿದೆ.












Click it and Unblock the Notifications