ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶದ ವಿತ್ತೀಯ ಕೊರತೆ ಬಜೆಟ್ ಅಂದಾಜಿನ ಶೇ. 83.2ಕ್ಕೆ ತಲುಪಿದೆ

|
Google Oneindia Kannada News

ನವದೆಹಲಿ, ಆಗಸ್ಟ್‌ 01: ಬಜೆಟ್ ಅಂದಾಜಿಕ್ಕಿಂತಲೂ ದೇಶದ ಹಣಕಾಸಿನ ಕೊರತೆಯು ಶೇಕಡಾ 83.2ಕ್ಕೆ ತಲುಪಿದೆ. ಅಂದರೆ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ 6.62 ಲಕ್ಷ ಕೋಟಿ ರೂಪಾಯಿ ವಿಸ್ತರಿಸಿದೆ.

ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಸರ್ಕಾರದ ತೆರಿಗೆ ಆದಾಯವು ಶೇ. 32.6ರಷ್ಟು ಕುಸಿದಿದೆ, ಇದು ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಆರ್ಥಿಕತೆಗೆ ಆಗಿರುವ ಹಾನಿ ಮತ್ತು ನಂತರದ ಲಾಕ್‌ಡೌನ್‌ ಪರಿಣಾಮ ಎಂದು ಒತ್ತಿ ಹೇಳುತ್ತದೆ.

ತೆರಿಗೆ ಸಂಗ್ರಹ ಇಳಿಕೆ, ವಿತ್ತೀಯ ಕೊರತೆ ಹೆಚ್ಚಳತೆರಿಗೆ ಸಂಗ್ರಹ ಇಳಿಕೆ, ವಿತ್ತೀಯ ಕೊರತೆ ಹೆಚ್ಚಳ

ಕಳೆದ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ಕೊನೆಯಲ್ಲಿ ಹಣಕಾಸಿನ ಕೊರತೆಯು ಬಜೆಟ್ ಅಂದಾಜಿನ ಶೇಕಡಾ 61.4 ರಷ್ಟಿತ್ತು. ಈ ಸಮಯದಲ್ಲಿ, ಸರ್ಕಾರದ ಹೆಚ್ಚಿನ ಖರ್ಚುಗಳನ್ನು ಮೂಲದಿಂದ ಪೂರೈಸಲಾಗುತ್ತಿದೆ.

Indias Fiscal Deficit Touches 83.2% Of Annual Target In April-June Quarter

ಫೆಬ್ರವರಿಯಲ್ಲಿ ಮಂಡಿಸಲಾದ 2020-21ರ ಹಣಕಾಸು ವರ್ಷದ ಸಾಮಾನ್ಯ ಬಜೆಟ್‌ನಲ್ಲಿ ಪ್ರಸಕ್ತ ಹಣಕಾಸು ವರ್ಷದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಣಕಾಸಿನ ಕೊರತೆಯನ್ನು 7.96 ಲಕ್ಷ ಕೋಟಿ ರೂ. ಅಥವಾ ಜಿಡಿಪಿಯ ಶೇಕಡಾ 3.5 ರಷ್ಟನ್ನು ನಿಗದಿಪಡಿಸಿದ್ದಾರೆ. ಆದಾಗ್ಯೂ, ಕೋವಿಡ್ -19 ಬಿಕ್ಕಟ್ಟಿನಿಂದ ಉಂಟಾದ ಆರ್ಥಿಕ ಅಡೆತಡೆಗಳನ್ನು ಗಮನದಲ್ಲಿಟ್ಟುಕೊಂಡು ಈ ಅಂಕಿಅಂಶಗಳನ್ನು ಪರಿಷ್ಕರಿಸಬಹುದು. ಕಂಟ್ರೋಲರ್ ಜನರಲ್ ಆಫ್ ಅಕೌಂಟ್ಸ್ (ಸಿಜಿಎ) ದ ಮಾಹಿತಿಯ ಪ್ರಕಾರ, ಹಣಕಾಸಿನ ಕೊರತೆಯು ಜೂನ್ ಅಂತ್ಯದ ವೇಳೆಗೆ 6,62,363 ಕೋಟಿ ರೂಪಾಯಿಯಷ್ಟಿದೆ.

ಹಣಕಾಸಿನ ಕೊರತೆಯು 7 ವರ್ಷಗಳ ಗರಿಷ್ಠ 2019-20ನೇ ಹಣಕಾಸು ವರ್ಷದಲ್ಲಿ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಶೇಕಡಾ 4.6 ಕ್ಕೆ ತಲುಪಿದೆ. ಆದಾಯ ಸಂಗ್ರಹಣೆಯಲ್ಲಿನ ಇಳಿಕೆ ಇದಕ್ಕೆ ಮುಖ್ಯ ಕಾರಣ. ಸಿಜಿಎ ಅಂಕಿಅಂಶಗಳ ಪ್ರಕಾರ, ಈ ವರ್ಷ ಸರ್ಕಾರದ ಆದಾಯವು 1,50,008 ಕೋಟಿ ರೂ. ಅಥವಾ ಬಜೆಟ್ ಅಂದಾಜಿನ ಶೇಕಡಾ 7.4 ರಷ್ಟಿದೆ. ಹಿಂದಿನ ಆರ್ಥಿಕ ವರ್ಷದ ಇದೇ ಅವಧಿಯಲ್ಲಿ ಇದು ಶೇಕಡಾ 14.5 ರಷ್ಟಿತ್ತು.

ಹಣಕಾಸು ವರ್ಷದ ಮೊದಲ 3 ತಿಂಗಳಲ್ಲಿ ತೆರಿಗೆಯಿಂದ ಬರುವ ಆದಾಯ 1,34,822 ಕೋಟಿ ರೂ. ಇದು ಬಜೆಟ್ ಅಂದಾಜಿನ ಶೇಕಡಾ 8.2 ರಷ್ಟಿದೆ. ಹಿಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದ ತೆರಿಗೆ ಆದಾಯ ಅಂದಾಜು ಶೇಕಡಾ 15.2 ರಷ್ಟಿತ್ತು.

ಸರ್ಕಾರದ ಒಟ್ಟು ರಶೀದಿಗಳು ಬಜೆಟ್ ಅಂದಾಜಿನ ಶೇಕಡಾ 6.8, ಅಂದರೆ 1,53,581 ಕೋಟಿ ರೂ. ಬಜೆಟ್‌ನಲ್ಲಿ ಸರ್ಕಾರವು ಒಟ್ಟು ರಶೀದಿಗಳನ್ನು 22.45 ಲಕ್ಷ ಕೋಟಿ ರೂ. ಜೂನ್ ಅಂತ್ಯದವರೆಗೆ ಸರ್ಕಾರದ ಒಟ್ಟು ಖರ್ಚು 8,15,944 ಲಕ್ಷ ಕೋಟಿ ರೂ. ಅಂದರೆ ಬಜೆಟ್ ಅಂದಾಜಿನ ಶೇಕಡಾ 26.8ರಷ್ಟು. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಒಟ್ಟು ಖರ್ಚು ಶೇ 25.9 ರಷ್ಟಿತ್ತು.

English summary
The Fisal deficit at the end of the june to Rs 6.62 Lakh crore or 83.2% Of full year budget estimate of Rs 7.96 Lakh crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X