ರಿಲಯನ್ಸ್ ಜಿಯೋದಿಂದ ಎರಡು ಹೊಸ ಸಬ್‌ಸೀ ಕೇಬಲ್ ವ್ಯವಸ್ಥೆ ಯೋಜನೆ
ಮುಂಬೈ, ಮೇ 18: ಭಾರತದ ಮುಂಚೂಣಿ 4ಜಿ ಮತ್ತು ಮೊಬೈಲ್ ಬ್ರಾಡ್‌ಬ್ಯಾಂಡ್ ಡಿಜಿಟಲ್ ಸೇವಾ ಪೂರೈಕೆದಾರ ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿ. (ಜಿಯೋ), ಭಾರತವನ್ನು ಕೇಂದ್ರವಾಗಿಟ್ಟುಕೊಂಡು ಅತಿ ದೊಡ್ಡ ಅಂತಾರಾಷ್ಟ್ರೀಯ ಜಲಾಂತರ್ಗಾಮಿ (ಸಬ್‌ಮೆರಿನ್) ಕೇಬಲ್ ವ್ಯವಸ್ಥೆಯನ್ನು ನಿರ್ಮಿಸುತ್ತಿದೆ. ವಿವಿಧ ಪ್ರಮುಖ ಜಾಗತಿಕ ಪಾಲುದಾರರು ಮತ್ತು ವಿಶ್ವದರ್ಜೆಯ ಜಲಾಂತರ್ಗಾಮಿ ಕೇಬಲ್ ಪೂರೈಕೆದಾರ ಸಬ್‌ಕಾಮ್ ಸಹಯೋಗದೊಂದಿಗೆ ಜಿಯೋ ಪ್ರಸ್ತುತ ಪ್ರದೇಶದೆಲ್ಲೆಡೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಡೇಟಾ ಬೇಡಿಕೆಗೆ ಬೆಂಬಲ ಒದಗಿಸುವ ನಿಟ್ಟಿನಲ್ಲಿ ಮುಂದಿನ ತಲೆಮಾರಿನ ಎರಡು ಕೇಬಲ್ ವ್ಯವಸ್ಥೆಗಳನ್ನು ಅಳವಡಿಸುತ್ತಿದೆ.
ಇಂಡಿಯಾ-ಏಷ್ಯಾ-ಎಕ್ಸ್‌ಪ್ರೆಸ್ (ಐಎಎಕ್ಸ್) ವ್ಯವಸ್ಥೆಯು, ಭಾರತವನ್ನು ಪೂರ್ವಾಭಿಮುಖವಾಗಿ ಸಿಂಗಪುರ ಹಾಗೂ ಅದರಾಚೆಗೂ ಸಂಪರ್ಕಿಸುತ್ತದೆ. ಇಂಡಿಯಾ-ಯುರೋಪ್-ಎಕ್ಸ್‌ಪ್ರೆಸ್ (ಐಇಎಕ್ಸ್) ವ್ಯವಸ್ಥೆಯು, ಪಶ್ಚಿಮಾಭಿಮುಖವಾಗಿ ಭಾರತವನ್ನು ಮಧ್ಯಪ್ರಾಚ್ಯ ಹಾಗೂ ಯುರೋಪ್ ಜತೆ ಸಂಪರ್ಕಿಸಲಿದೆ. ಈ ವ್ಯವಸ್ಥೆ ತಡೆರಹಿತ ಅಂತರ್ ಸಂಪರ್ಕ ಹೊಂದಿರಲಿದೆ.
ಜತೆಗೆ ಸೇವೆಯನ್ನು ಜಾಗತಿಕವಾಗಿ ವಿಸ್ತರಿಸಲು ಜಗತ್ತಿನ ಪ್ರಮುಖ ಅಂತರ್ ವಿನಿಮಯ ಬಿಂದುಗಳು ಮತ್ತು ವಿಚಾರ ಕೇಂದ್ರಗಳನ್ನು ಸಂಪರ್ಕಿಸಲಿದೆ. ಭಾರತದ ಒಳಗೆ-ಹೊರಗೆ ಮಾಹಿತಿ ಹಾಗೂ ಕ್ಲೌಡ್ ಸೇವೆಗಳಿಗೆ ಗ್ರಾಹಕ ಮತ್ತು ಉದ್ಯಮ ಬಳಕೆದಾರರ ಸಾಮರ್ಥ್ಯವನ್ನು ಐಎಎಕ್ಸ್ ಮತ್ತು ಐಇಎಕ್ಸ್ ವೃದ್ಧಿಸಲಿವೆ.

ಫೈಬರ್ ಆಪ್ಟಿಕ್ ಸಬ್‌ಮೆರಿನ್ ಟೆಲಿಕಮ್ಯುನಿಕೇಷನ್ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ನೆಟ್‌ವರ್ಕ್ ನಕ್ಷೆಯಲ್ಲಿ ಭಾರತವನ್ನು ಕೇಂದ್ರವನ್ನಾಗಿಸಿವೆ. 2016ರಲ್ಲಿ ಜಿಯೋ ಸೇವೆಗಳು ಆರಂಭವಾದಾಗಿನಿಂದ ಭಾರತಕ್ಕೆ ಹೆಚ್ಚಿದ ಪ್ರಾಮುಖ್ಯ, ಬೆರಗು ಮೂಡಿಸುವ ಬೆಳವಣಿಗೆ ಮತ್ತು ಡೇಟಾ ಬಳಕೆಯಲ್ಲಿನ ಬೃಹತ್ ಬದಲಾವಣೆಯನ್ನು ಇದು ಗುರುತಿಸಿದೆ.
ಈ ಅಧಿಕ ಸಾಮರ್ಥ್ಯದ ಮತ್ತು ಅಧಿಕ ವೇಗದ ವ್ಯವಸ್ಥೆಗಳು 16,000 ಕಿಮೀಗೂ ಅಧಿಕ ದೂರದವರೆಗೆ 200 ಟಿಬಿಪಿಎಸ್‌ಗಿಂತಲೂ ಹೆಚ್ಚು ಸಾಮರ್ಥ್ಯವನ್ನು ಒದಗಿಸಲಿವೆ.
'ಡಿಜಿಟಲ್ ಸೇವೆಗಳು ಮತ್ತು ಡೇಟಾ ಬಳಕೆಯಲ್ಲಿನ ಭಾರತದ ಸ್ಫೋಟಕ ಪ್ರಗತಿಯಲ್ಲಿ ಜಿಯೋ ಮುಂಚೂಣಿಯಲ್ಲಿದೆ. ವಿಡಿಯೋ ಸ್ಟ್ರೀಮಿಂಗ್, ರಿಮೋಟ್ ವರ್ಕ್‌ಫೋರ್ಸ್, 5ಜಿ, ಐಒಟಿ ಹಾಗೂ ಮುಂತಾದ ಬೇಡಿಕೆಗಳನ್ನು ಈಡೇರಿಸಲು, ತನ್ನ ಪ್ರಪ್ರಥಮ ಭಾರತ-ಕೇಂದ್ರಿತ ಐಎಎಕ್ಸ್ ಮತ್ತು ಐಇಎಕ್ಸ್ ಸಬ್‌ಸೀ ವ್ಯವಸ್ಥೆಯನ್ನು ನಿರ್ಮಿಸಲು ಮುಂದಾಳತ್ವ ತೆಗೆದುಕೊಳ್ಳುತ್ತಿದೆ' ಎಂದು ರಿಲಯನ್ಸ್ ಜಿಯೋ ಅಧ್ಯಕ್ಷ ಮ್ಯಾಥ್ಯೂ ಊಮ್ಮೆನ್ ಹೇಳಿದ್ದಾರೆ.
-
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
April 13 Horoscope: 12 ರಾಶಿಗಳಿಗೆ ಇಂದು ಪ್ರೇಮ, ಹಣಕಾಸು, ಉದ್ಯೋಗದಲ್ಲಿ ಏನು ಹೇಳುತ್ತದೆ ನಿಮ್ಮ ರಾಶಿ? -
Bengaluru power cut: ಬೆಂಗಳೂರಿನ ಹಲವೆಡೆ ಹೆಚ್ಚಾಯ್ತು ದಿಢೀರ್ ಪವರ್ ಕಟ್, ಹೈರಾಣಾದ ಜನ: ಬೆಸ್ಕಾಂ ಕೊಟ್ಟ ಉತ್ತರ ಇಲ್ಲಿದೆ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
Hardik vs Krunal: ತಮ್ಮ ಹಾರ್ದಿಕ್ ವಿಕೆಟ್ ಕಿತ್ತ ಬೌಲರ್ಗಿಂತ ಹೆಚ್ಚಾಗಿ ಸಂಭ್ರಮಿಸಿದ ಕೃನಾಲ್ ಪಾಂಡ್ಯ, ಭಾರಿ ವೈರಲ್ -
Namma Metro: ಪ್ರಯಾಣಿಕರಿಗೆ ಸಿಹಿ ಸುದ್ದಿ, ಹಳದಿ ಮಾರ್ಗಕ್ಕಾಗಿ ಬಂತು ಹೊಸ ಡ್ರೈವರ್ ಲೆಸ್ ರೈಲು












Click it and Unblock the Notifications