ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದೇಶಿ ಬಂಡವಾಳ ಆಕರ್ಷಿಸುವ ರಾಷ್ಟ್ರಗಳಲ್ಲಿ ಭಾರತಕ್ಕೆ 9ನೇ ಸ್ಥಾನ

|
Google Oneindia Kannada News

ವಿಶ್ವಸಂಸ್ಥೆ, ಜೂನ್ 17: ವಿಶ್ವದಲ್ಲಿ ವಿದೇಶಿ ಬಂಡವಾಳ ಸೆಳೆಯುವಲ್ಲಿ ಭಾರತವು 9ನೇ ಸ್ಥಾನದಲ್ಲಿದೆ ಎಂದು ವಿಶ್ವಸಂಸ್ಥೆ ವರದಿಯಲ್ಲಿ ಹೇಳಲಾಗಿದೆ. 2019ರಲ್ಲಿ ಭಾರತವು 51 ಶತಕೋಟಿ ಡಾಲರ್‌(3.87 ಲಕ್ಷ ಕೋಟಿ ರೂ.) ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು(ಎಫ್‌ಡಿಐ) ಆಕರ್ಷಿಸಿದೆ. ಆ ಮೂಲಕ ವಿಶ್ವದಲ್ಲಿ ಅತಿ ಹೆಚ್ಚು ಗಳಿಸಿದ 9ನೇ ರಾಷ್ಟ್ರವಾಗಿ ಗುರುತಿಸಿಕೊಂಡಿದೆ ಎಂದು ವಿಶ್ವಸಂಸ್ಥೆ ವರದಿಯಲ್ಲಿ ಹೇಳಲಾಗಿದೆ.

2018ರಲ್ಲಿ ಭಾರತವು ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಆಕರ್ಷಿಸುವಲ್ಲಿ 12ನೇ ಸ್ಥಾನದಲ್ಲಿತ್ತು. ಅಲ್ಲದೆ 42 ಶತಕೋಟಿ ಡಾಲರ್‌ ಬಂಡವಾಳವನ್ನು ಆಕರ್ಷಿಸಿತ್ತು. ಆದರೆ ಕಳೆದ ವರ್ಷ ಭಾರತ ಜಿಗಿತ ಕಂಡಿದ್ದು, 9ನೇ ಸ್ಥಾನಕ್ಕೆ ತಲುಪಿದೆ.

ವಾಣಿಜ್ಯಾಭಿವೃದ್ಧಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಸಮ್ಮೇಳನದಲ್ಲಿ ಈ ವರದಿಯನ್ನು ಬಿಡುಗಡೆ ಮಾಡಲಾಗಿದೆ. ಕೋವಿಡ್‌ ಬಿಕ್ಕಟ್ಟಿನ ನಡುವೆಯೂ ಭಾರತದ ಮಾರುಕಟ್ಟೆಯು ವಿದೇಶಿ ಬಂಡವಾಳವನ್ನು ಆಕರ್ಷಿಸಲಿದೆ. ಈ ಪ್ರಕ್ರಿಯೆ ಮುಂದುವರಿಯಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

 India 9th Largest Recipient Of Foreign Investment In 2019

ಏಷ್ಯಾದಲ್ಲಿ ಎಫ್‌ಡಿಐ ಹೆಚ್ಚು ಆಕರ್ಷಿಸಿದ ಟಾಪ್‌ 5 ದೇಶಗಳಲ್ಲಿ ಭಾರತವೂ ಒಂದು. 2020ರಲ್ಲಿ ಜಾಗತಿಕ ವಿದೇಶಿ ಬಂಡವಾಳದ ಹರಿವು 40 ಪರ್ಸೆಂಟ್‌ರಷ್ಟು ಏರಿಕೆಯಾಗಲಿದೆ ಎಂದು ವರದಿಯಲ್ಲಿ ಅಂದಾಜು ಮಾಡಲಾಗಿದೆ.

2020ರ ಮೊದಲ ತ್ರೈಮಾಸಿಕದಲ್ಲಿ 650 ದಶಲಕ್ಷ ಡಾಲರ್‌ಗೂ ಅಧಿಕ ಡೀಲ್‌ಗಳನ್ನು ಹೂಡಿಕೆದಾರರು ಅಂತಿಮಗೊಳಿಸಲಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

English summary
India received $51 billion in foreign investment in 2019 and was the world’s 9th largest recipient of foreign direct investments (FDI) in 2019, according to UN’s trade body.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X