ತೆರಿಗೆ ಅವ್ಯವಹಾರ: ಕಾಗ್ನಿಜೆಂಟ್ ಬ್ಯಾಂಕ್ ಖಾತೆ ಜಪ್ತಿ
ಚೆನ್ನೈ, ಮಾರ್ಚ್ 28: ಪ್ರಮುಖ ಸಾಫ್ಟ್ ವೇರ್ ಸಂಸ್ಥೆ ಕಾಗ್ನಿಜೆಂಟ್ ಟೆಕ್ನಾಲಜಿ ಸಲ್ಯೂಶನ್ ಗೆ ಸೇರಿದ ಕೆಲ ಬ್ಯಾಂಕ್ ಖಾತೆಗಳನ್ನು ಆದಾಯ ತೆರಿಗೆ ಇಲಾಖೆಯು ಜಪ್ತಿ ಮಾಡಿದೆ. ತೆರಿಗೆ ವಂಚನೆ, ಡಿವಿಡೆಂಟ್ ವಿತರಣೆ ಅವ್ಯವಹಾರ ಆರೋಪವನ್ನು ಸಂಸ್ಥೆ ಮೇಲೆ ಹೊರೆಸಲಾಗಿದೆ. ಹೀಗಾಗಿ, ಸಂಸ್ಥೆಯ ಚೆನ್ನೈನಲ್ಲಿರುವ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
2016-17ನೇ ಹಣಕಾಸು ವರ್ಷದಲ್ಲಿ ಕಾಗ್ನಿಜೆಂಟ್ ಕಂಪನಿ 2,500 ಕೋಟಿ ರು ತೆರಿಗೆ ಬಾಕಿ ಉಳಿಸಿಕೊಂಡಿತ್ತು. ಈ ಬಗ್ಗೆ ನೋಟಿಸ್ ನೀಡಲಾಗಿತ್ತು. ಈ ವಿಚಾರ ಕೋರ್ಟ್ ಮೆಟ್ಟಿಲೇರಿತ್ತು.

ಕಾಗ್ನಿಜೆಂಟ್ ಕಂಪನಿಯಲ್ಲಿ 2.60 ಲಕ್ಷ ಉದ್ಯೋಗಿಗಳಿದ್ದಾರೆ. 2016-17ನೇ ಸಾಲಿನಲ್ಲಿ ನೀಡಲಾದ ಡಿವಿಡೆಂಡ್ ಮೊತ್ತದ ಶೇ 20ರಷ್ಟಕ್ಕೆ ದಾಖಲೆಗಳಿಲ್ಲ, ಇದು ಡಿವಿಡೆಂಡ್ ವಿತರಣೆ ಕಾಯ್ದೆಯ ಉಲ್ಲಂಘನೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಗಳು ಆರೋಪಿಸಿದ್ದಾರೆ. ಆದರೆ, ಯಾವುದೇ ರೀತಿ ಕಾನೂನು ಉಲ್ಲಂಘಿಸಿಲ್ಲ ಎಂದು ಕಾಂಗ್ನಿಜೆಂಟ್ ಪ್ರತಿಕ್ರಿಯಿಸಿದೆ.












Click it and Unblock the Notifications