ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊನೆಗೂ ಕ್ರೆಡಿಟ್ ಕಾರ್ಡ್ ಕೊಟ್ಟ ಬ್ಯಾಂಕ್

By Mahesh
|
Google Oneindia Kannada News

IDBI Bank joins the credit card bandwagon
ಬೆಂಗಳೂರು, ಜ.21: ಪರ್ಯಾಯ ಸಾರ್ವಜನಿಕ ವಲಯದ ಬ್ಯಾಂಕ್ ಎಂದೇ ಕರೆಯಲ್ಪಡುವ ಐಡಿಬಿಐ ಬ್ಯಾಂಕ್ ಕೊನೆಗೂ ತನ್ನ ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್ ವಿತರಿಸಲು ಮುಂದಾಗಿದೆ.

1964ರಲ್ಲಿ ಅರಂಭಗೊಂಡ ಐಡಿಬಿಐ ಬ್ಯಾಂಕ್ ಆರ್ಥಿಕ ಸೇವಾ ಸಂಸ್ಥೆಯಾಗಿ ಕಾರ್ಯನಿರ್ವಹಿಸುವ ಅಭಿವೃದ್ಧಿ ಶೀಲ ಬ್ಯಾಂಕ್ ಎಂದು ಆರ್ ಬಿಐನಿಂದ ಗುರುತಿಸಲ್ಪಟ್ಟಿದೆ. ಈಗ ವಾಣಿಜ್ಯ ಉದ್ದೇಶಿತ ಬ್ಯಾಂಕಿಂಗ್ ಸೇವೆ ಆರಂಭಿಸಿ 9 ವರ್ಷಗಳ ನಂತರ ಈಗ ತನ್ನ ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್ ನೀಡಲು ಮುಂದಾಗಿದೆ. ಸುಮಾರು 5 ಲಕ್ಷ ಕಾರ್ಡ್ ಗಳನ್ನು ಮುಂದಿನ ಮೂರು ವರ್ಷಗಳಲ್ಲಿ ವಿತರಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಮೊದಲ ವರ್ಷದಲ್ಲಿ 1 ಲಕ್ಷ ಕಾರ್ಡ್ ವಿತರಣೆಯಾಗಲಿದೆ.

ಸುಮಾರು 1 ಕೋಟಿಗೂ ಅಧಿಕ ಗ್ರಾಹಕರನ್ನು ಹೊಂದಿರುವ ಐಡಿಬಿಐ ತನ್ನ ಗ್ರಾಹಕರಿಗೆ ಮ್ಯಾಗ್ನೆಟಿಕ್ ಸ್ಟಿಪ್ ಹೊಂದಿರುವ ಇಎಂವಿ(ಯುರೋಪೇ, ಮಾಸ್ಟರ್ ಕಾರ್ಡ್ ಹಾಗೂ ವೀಸಾ) ಚಿಪ್ ಕಾರ್ಡ್ ನೀಡುತ್ತಿದೆ.

ಇಎಂವಿ ಜಾಗತಿಕ ಸುರಕ್ಷಿತ ಗುಣಮಟ್ಟ ಕಾಯ್ದುಕೊಳ್ಳುವಿಕೆಯಾಗಿದ್ದು ಮೈಕ್ರೊ ಪ್ರೊಸೆಸರ್ ಚಿಪ್ ಕಾರ್ಡ್ ತಂತ್ರಜ್ಞಾನದ ಮೂಲಕ ಭದ್ರತೆ ಅಧಿಕವಾಗಿದೆ ಎನ್ನಬಹುದು. ವಿಶ್ವದೆಲ್ಲೆಡೆ ಈ ಕಾರ್ಡ್ ಸುರಕ್ಷಿತವಾಗಿ ಬಳಸಬಹುದಾಗಿದೆ. ಪ್ಲಾಟಿನಮ್, ಸ್ನಿಗೇಚರ್ ಹಾಗೂ ಕಾರ್ಪೊರೇಟ್ ಮಾದರಿಯಲ್ಲಿ ಕಾರ್ಡ್ ಲಭ್ಯವಿದೆ.

2013ರ ನವೆಂಬರ್ ಅಂತ್ಯದ ಎಣಿಕೆಯಂತೆ ಸುಮಾರು 18.77 ಮಿಲಿಯನ್ ಕ್ರೆಡಿಟ್ ಕಾರ್ಡ್ ಬಳಕೆದಾರರನ್ನು ದೇಶ ಹೊಂದಿದೆ. ಸುಮಾರು 12,789 ಕೋಟಿ ರು ಸಾಲ ಕ್ರೆಡಿಟ್ ಕಾರ್ಡ್ ಮೂಲಕ ಪಡೆಯಲಾಗಿದೆ ಎಂದು ಅಂದಾಜಿಸಲಾಗಿದೆ.

ಮುಂಬೈನಲ್ಲಿ ಕೇಂದ್ರ ಕಚೇರಿ ಹೊಂದಿರುವ ಐಡಿಬಿಐ ಬ್ಯಾಂಕ್ Securities and Exchange Board of India (SEBI), National Stock Exchange of India (NSE), the National Securities Depository Limited (NSDL), the Stock Holding Corporation of India Limited (SHCIL), the Credit Analysis & Research Ltd, the Exim Bank (India), the Small Industries Development Bank of India (SIDBI), the Entrepreneurship Development Institute of India ಮುಂತಾದ ಸಂಸ್ಥೆಗಳ ಸ್ಥಾಪಕ ಸಂಸ್ಥೆ ಎನಿಸಿದೆ. ಗ್ರಾಹಕ ಬ್ಯಾಂಕಿಂಗ್, ಕಾರ್ಪೊರೇಟ್ ಬ್ಯಾಂಕಿಂಗ್, ವಿಮೆ, ಬಂಡವಾಳ ಬ್ಯಾಂಕಿಂಗ್, ಖಾಸಗಿ ಬ್ಯಾಂಕಿಂಗ್, ಸಾಲ, ಈಕ್ವಿಟಿ, ಆಸ್ತಿ ನಿರ್ವಹಣೆ, ಕೃಷಿ ಸಾಲ ಮುಂತಾದ ಕ್ಷೇತ್ರಗಳ ಆರ್ಥಿಕ ನಿರ್ವಹಣೆ ಐಡಿಬಿಐ ಮಾಡುತ್ತಾ ಬಂದಿದೆ.

English summary
IDBI Bank joins the credit card bandwagon : Nearly nine years after becoming a full-fledged commercial bank, IDBI Bank has decided to issue credit cards to its customers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X