ಎಸ್ಬಿಐ, ಎಚ್‌ಡಿಎಫ್‌ಸಿ ನಂತರ ಐಸಿಐಸಿಐ ಬಡ್ಡಿದರ ಇಳಿಕೆ
ಬೆಂಗಳೂರು, ಮಾರ್ಚ್ 5: ಸರ್ಕಾರಿ ಸ್ಯಾಮ್ಯದ ಅತಿದೊಡ್ಡ ಬ್ಯಾಂಕ್ ಹಾಗೂ ಮನೆ ಕಟ್ಟಲು ಸಾಲ, ಆರ್ಥಿಕ ನೆರವು ನೀಡುವ ಅತಿದೊಡ್ಡ ಬ್ಯಾಂಕಿಂಗ್ ಸಂಸ್ಥೆ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ, ಖಾಸಗಿ ವಲಯ ಪ್ರಮುಖ ಬ್ಯಾಂಕ್ ಎಚ್‌ಡಿಎಫ್‌ಸಿ ನಂತರ ಐಸಿಐಸಿಐ ಕೂಡಾ ಗೃಹಸಾಲದ ಮೇಲಿನ ಬಡ್ಡಿದರ ಇಳಿಕೆ ಮಾಡಿದೆ. ಹೊಸ ದರವು ಮಾರ್ಚ್ 5ರಿಂದಲೇ ಜಾರಿಗೆ ಬರಲಿದ್ದು, ಮಾರ್ಚ್ 31ರ ತನಕ ಜಾರಿಯಲ್ಲಿರಲಿದೆ.
ಸಾಲದ ಮೊತ್ತ ಹಾಗೂ ಸಿಬಿಲ್ ಸ್ಕೋರ್ ಮೇಲೆ ಬಡ್ಡಿದರವು ಅವಲಂಬಿತವಾಗಿರುತ್ತದೆ. ಉತ್ತಮ ರಿಪೇಮೆಂಟ್ ಇತಿಹಾಸ ಹೊಂದಲು ಗ್ರಾಹಕರಿಗೆ ಉತ್ತಮ ದರದಲ್ಲಿ ಸೌಲಭ್ಯ ನೀಡುವುದು ಉದ್ದೇಶ ಎಂದು ಸಂಸ್ಥೆ ಹೇಳಿದೆ. 75 ಲಕ್ಷ ರು ತನಕದ ಸಾಲಕ್ಕೆ ಶೇ 6.70 ರಿಂದ ಬಡ್ಡಿದರ ಹಾಗೂ 75 ಲಕ್ಷ ರು ಗೂ ಅಧಿಕ ಮೊತ್ತಕ್ಕೆ ಶೇ 6.75 ರಂತೆ ಬಡ್ಡಿದರ ವಿಧಿಸಲಾಗುತ್ತಿದೆ.
ಗೃಹಸಾಲ ಮಾರುಕಟ್ಟೆಯಲ್ಲಿ ಎಸ್ಬಿಐ ಶೇ 34 ರಷ್ಟು ಹಾಗ ವಾಹನ ಸಾಲ ವಿಭಾಗದಲ್ಲಿ ಶೇ 33 ರಷ್ಟು ಪಾಲು ಹೊಂದಿದೆ.

ಖಾತೆ ಹೊಂದಿಲ್ಲದಿದ್ದರೂ ಸಾಲ ಪಡೆಯಿರಿ
ಐಸಿಐಸಿಐ ಬ್ಯಾಂಕ್ ಗ್ರಾಹಕರಲ್ಲದಿದ್ದರೂ ಗೃಹಸಾಲ ಬಯಸುವವರಿಗೆ ಸುಲಭವಾಗಿ ಆನ್ ಲೈನ್ ಮೂಲಕವೇ ಸಾಲ ಪಡೆಯುವ ಸೌಲಭ್ಯವನ್ನು ಒದಗಿಸಲಾಗಿದೆ. ಮನೆ ಕಟ್ಟುವುದು ಅನೇಕರಿಗೆ ಜೀವಮಾನದ ಕನಸಾಗಿರುತ್ತದೆ. ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ವ್ಯವಸ್ಥೆ ರೂಪಿಸಲಾಗಿದೆ ಎಂದು ಐಸಿಐಸಿಐ ಬ್ಯಾಂಕಿನ ಉನ್ನತ ಅಧಿಕಾರಿ ರವಿ ನಾರಯಣನ್ ಹೇಳೀದ್ದಾರೆ.
ನವೆಂಬರ್ 2020ರಲ್ಲಿ ಸಾಲ, ಭೋಗ್ಯ ನೀಡುವ ಕ್ಷೇತ್ರದಲ್ಲಿ 2 ಟ್ರಿಲಿಯನ್ ವಹಿವಾಟು ನಡೆಸಿದ ಮೊದಲ ಖಾಸಗಿ ವಲಯ ಬ್ಯಾಂಕ್ ಎನಿಸಿಕೊಂಡಿದೆ. ಡಿಸೆಂಬರ್ 31, 2020ರಂತೆ 15,19,353 ಕೋಟಿ ರು ಮೌಲ್ಯ ಹೊಂದಿರುವ ಐಸಿಐಸಿಐ ಸಂಸ್ಥೆಯು ಭಾರತ ಸೇರಿದಂತೆ 15 ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications