• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಚಿದಂಬರಂ ಹೇಳಿದ್ದಕ್ಕೆ ನನ್ನ ಸಹಮತವಿದೆ, ರೂಪಾಯಿ ಕುಸಿತ ಕೆಟ್ಟದ್ದೇನಲ್ಲ'

By ಮನೋಜ್ ಲಾಡ್ವಾ
|

'ಚಿದಂಬರಂ ಹೇಳಿದ್ದಕ್ಕೆ ನನ್ನ ಸಹಮತವಿದೆ, ರೂಪಾಯಿ ಕುಸಿತ ಕೆಟ್ಟದ್ದೇನಲ್ಲ'

ನರ್ಸರಿ ಪದ್ಯಗಳು ಮಕ್ಕಳಿಗಾಗಿ ಸೃಷ್ಟಿಯಾಗಿದ್ದರೂ, ಈ ಸಣ್ಣ ಪದ್ಯಗಳ ಹಿಂದೆ ಬಹುದೊಡ್ಡ ಸತ್ಯಗಳು ಅಡಗಿರುತ್ತವೆ. ಭಾರತದ ರೂಪಾಯಿ ಸೇರಿದಂತೆ ಹೆಚ್ಚುತ್ತಿರುವ ಕಚ್ಚಾ ತೈಲದ ಬೆಲೆಯ ಹಿಂದೆ ಬಿದ್ದಿರುವ ಏರುತ್ತಾ ಹೋಗುತ್ತಿರುವ ಮಾರುಕಟ್ಟೆ ಕರೆನ್ಸಿಗಳು, ಇರಾನ್ ಮತ್ತು ಸಿರಿಯಾದಿಂದ ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಉದ್ವಿಗ್ನತೆ, ರಷ್ಯಾ ಮೇಲಿನ ನಿರ್ಬಂಧ ಮತ್ತು ಎಲ್ಲೆಡೆ ಕೆಡುತ್ತಿರುವ ಬೃಹತ್ ಆರ್ಥಿಕ ಪರಿಸ್ಥಿತಿಗಳನ್ನು ನೋಡಿದಾಗ, ಇಂಗ್ಲಿಷ್ ಮಾತನಾಡುವ ಜಗತ್ತಿನಾದ್ಯಂತ ಈಗಲೂ ಪುಟಾಣಿ ಮಕ್ಕಳ ನರ್ಸರಿ ಪದ್ಯ ನೆನಪಿಗೆ ಬರುತ್ತದೆ.

ಹಂಪ್ಟಿ ಡಂಪ್ಟಿ ಸ್ಯಾಟ್ ಆನ್‌ ಎ ವಾಲ್
ಹಂಪ್ಟಿ ಡಂಪ್ಟಿ ಹ್ಯಾಡ್ ಎ ಗ್ರೇಟ್ ಫಾಲ್

ಡಾಲರ್ ಎದುರು ಭಾರತದ ರೂಪಾಯಿ ಬೆಲೆ ಇತ್ತೀಚೆಗೆ 72.50 ಕ್ಕೆ ಏರಿತ್ತು. ಕೊನೆಗೆ ಅತ್ಯಲ್ಪ ಚೇತರಿಕೆ ಕಂಡು 71.75 ರೂ.ಗೆ ಏರಿದೆ. ನರೇಂದ್ರ ಮೋದಿ ಸರ್ಕಾರ ರೂಪಾಯಿ ಮೌಲ್ಯ ಕುಸಿತವನ್ನು ತಡೆಗಟ್ಟಲು ವಿಫಲವಾಗಿರುವ ಅಂಶವನ್ನು ಮುಂದಿಟ್ಟುಕೊಂಡು ದೇಶದ ಅನೇಕ ವಿರೋಧ ಪಕ್ಷಗಳ ನಾಯಕರು, ಮುಖ್ಯವಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸತತ ದಾಳಿ ನಡೆಸುತ್ತಿದ್ದಾರೆ.

ತೈಲ ಬೆಲೆ ಮತ್ತೆ ಏರಿಕೆ: ಪೆಟ್ರೋಲ್ ಬೆಲೆಯಲ್ಲಿ 35 ಪೈಸೆ ಹೆಚ್ಚಳ

ಮೋದಿ ಸರ್ಕಾರ ಆರ್ಥಿಕತೆಯನ್ನು ಸರಿಯಾಗಿ ನಿರ್ವಹಿಸಿಲ್ಲ ಎಂಬುದಕ್ಕೆ ಇದು ಸಾಕ್ಷಿ ಎಂದು ಅವರು ಕಿರುಚುತ್ತಿದ್ದಾರೆ. ಈ ಆರೋಪ ಎಷ್ಟು ಸರಿ? ಮತ್ತು ರೂಪಾಯಿ ಮೌಲ್ಯ ಏಕೆ ಕುಸಿಯುತ್ತಿದೆ?

ಹಂಪ್ಟಿ ಡಂಪ್ಟಿ ಪದ್ಯದ ಮೂಲಕವೇ ನೋಡೋಣ

ಹಂಪ್ಟಿ ಡಂಪ್ಟಿ ಪದ್ಯದ ಮೂಲಕವೇ ನೋಡೋಣ

ಭಾರತದಂತೆಯೇ ಜಾಗತಿಕ ಸ್ಪರ್ಧೆಯಲ್ಲಿರುವ ಕೆಲವು ಸಹ ದೇಶಗಳಲ್ಲಿನ ಮಾರುಕಟ್ಟೆ ಕರೆನ್ಸಿ ಹೇಗೆ ವರ್ತಿಸುತ್ತಿವೆ ಎಂಬುದನ್ನು ನೋಡೋಣ.

ಕಳೆದ ಐದು ವರ್ಷಗಳಲ್ಲಿ ಅರ್ಜೆಂಟೀನಾದ 'ಪೆಸೊ' ಶೇ 546 ರಷ್ಟು ಮೌಲ್ಯ ಕಳೆದುಕೊಂಡಿದೆ. ಟರ್ಕಿಯ 'ಲಿರಾ' ಕರೆನ್ಸಿ 221% ರಷ್ಟು ಕುಸಿದಿದೆ. ಬ್ರೆಜಿಲ್‌ನ 'ರಿಯಲ್' ಶೇ 84ರಷ್ಟು ಪಾತಾಳಕ್ಕೆ ಇಳಿದಿದೆ. ದಕ್ಷಿಣ ಆಫ್ರಿಕಾದ 'ರಾಂಡ್' ಶೇ 51ರಷ್ಟು, ಮೆಕ್ಸಿಕಾದ 'ಪೆಸೊ' ಶೇ 47, ಇಂಡೋನೇಷ್ಯಾದ 'ರೂಪಾಯಿ' ಶೇ 28 ಮತ್ತು ಮಲೇಷ್ಯಾದ 'ರಿಂಗಿಟ್' ಶೇ 27ರಷ್ಟು ಮೌಲ್ಯವನ್ನು ಕಳೆದುಕೊಂಡಿವೆ.

ಈ ಎಲ್ಲ ಕರೆನ್ಸಿಗಳಿಗೆ ಹೋಲಿಸಿದರೆ ಭಾರತ ಕಳೆದುಕೊಂಡಿರುವುದು ನಿಭಾಯಿಸಲು ಸಾಧ್ಯವಾದ ಶೇ 16ರಷ್ಟು ಮೌಲ್ಯವನ್ನು. ಹೆಚ್ಚುತ್ತಿರುವ ಮಾರುಕಟ್ಟೆಯಲ್ಲಿ ಚೀನಾದ 'ಯುವಾನ್' ಮಾತ್ರ ಭಾರತದ ರೂಪಾಯಿಗಿಂತ ಅಲ್ಪ ಉತ್ತಮ ಸಾಧನೆ ಮಾಡಿದೆ. ಚೀನಾದ ಕರೆನ್ಸಿಯಲ್ಲಿ ಆಗಿರುವ ಕುಸಿತ ಶೇ 12ರಷ್ಟು.

ಇನ್ನೊಂದು ಮುಖ್ಯ ವಿಚಾರ ಎಂದರೆ, ಅಮೆರಿಕದ ಡಾಲರ್ ಕೂಡ ಈ ಅವಧಿಯಲ್ಲಿ ಶೇ 18ರಷ್ಟು ಮೌಲ್ಯ ಕಳೆದುಕೊಂಡಿದೆ.

ಪೆಟ್ರೋಲ್, ಡಾಲರ್, ಪರಿಸರ ಎಲ್ಲಕ್ಕೂ ಇಥೆನಾಲ್ ಪರಿಹಾರ: ಏನೀ ವಿಚಾರ?

ಜಾಗತಿಕ ಸೋಂಕು

ಜಾಗತಿಕ ಸೋಂಕು

ಮಾರುಕಟ್ಟೆಯಲ್ಲಿ ಕರೆನ್ಸಿಗಳು ಡಾಲರ್ ಎದುರು ತಮ್ಮ ಮೌಲ್ಯ ಕಳೆದುಕೊಳ್ಳುವ ವಿಚಾರದಲ್ಲಿ ಮುಖ್ಯ ತಪ್ಪಿತಸ್ಥರೆಂದರೆ ಟರ್ಕಿಯ 'ಲಿರಾ' ಮತ್ತು ರಷ್ಯಾದ 'ರುಬಲ್'.

ರಷ್ಯಾದ ಆರ್ಥಿಕತೆ ಅಧೋಗತಿಗೆ ತಲುಪಿದೆ. ಹೆಚ್ಚುತ್ತಿರುವ ವಿದೇಶಿ ಸಾಲ, ಶೇ 18ರಷ್ಟು ವಾರ್ಷಿಕ ಹಣದುಬ್ಬರ ಮತ್ತು ಅಮೆರಿಕದೊಂದಿಗಿನ ರಾಜತಾಂತ್ರಿಕ ವೈಮನಸ್ಸು ಈ ಎಲ್ಲಾ ಸನ್ನಿವೇಶಗಳಿಗೆ ಕಾರಣವಾಗುತ್ತಿವೆ.

ಇನ್ನೊಂದೆಡೆ ಅಮೆರಿಕ ಮತ್ತು ಯುರೋಪಿಯನ್ ದೇಶಗಳು ಮಾಸ್ಕೋದ ವಿರುದ್ಧ ಹೇರಿರುವ ನಿರ್ಬಂಧವು ರಷ್ಯಾದ ಆರ್ಥಿಕತೆಯನ್ನು ಸಂಕಷ್ಟಕ್ಕೆ ನೂಕಿದೆ. ಅಂತಾರಾಷ್ಟ್ರೀಯ ಹೂಡಿಕೆದಾರರು ಹರಡುತ್ತಿರು ಮಾರುಕಟ್ಟೆ ಕುಸಿತದ ಸಮಸ್ಯೆಯಿಂದ ಬೆದರಿ ತಮ್ಮ ಎಲ್ಲ ಹೂಡಿಕೆಗಳನ್ನು ತೆಗೆದು ಅಮೆರಿಕ ಮತ್ತು ಪಶ್ಚಿಮ ಯುರೋಪ್‌ನ ಸುರಕ್ಷಿತ ಕರೆನ್ಸಿಗಳತ್ತ ಹೂಡಿದ್ದಾರೆ. ಇದರಿಂದ ರಷ್ಯಾದ ಕರೆನ್ಸಿ ರುಬಲ್, ಟರ್ಕಿಯ ಲಿರಾದಂತೆಯೇ ಕುಸಿತ ಹಾದಿ ಹಿಡಿದಿದೆ.

ಪೆಟ್ರೋಲ್ ದರ ನಿರ್ಧಾರ ಹೇಗೆ? ಯಾರಿಗೆಷ್ಟು ಪಾಲು? ಯಾವ ದೇಶದಲ್ಲೆಷ್ಟು?

ಬೃಹತ್ ಆರ್ಥಿಕತೆಯೆಡೆಗೆ ಭಾರತದ ನಿಲುವು

ಬೃಹತ್ ಆರ್ಥಿಕತೆಯೆಡೆಗೆ ಭಾರತದ ನಿಲುವು

ಹಾಗೆ ನೋಡಿದರೆ ಭಾರತದ ರೂಪಾಯಿಯ ಕುಸಿತ ತುಂಬಾ ಕೆಟ್ಟದ್ದೇನಲ್ಲ. ಉಳಿದ ದೇಶಗಳ ಕರೆನ್ಸಿಗಳು ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿರುವಾಗ ಭಾರತದ ಕರೆನ್ಸಿಯ ಅಪಮೌಲ್ಯವನ್ನು ಶೇ 16ಕ್ಕೆ ನಿಯಂತ್ರಿಸಿರುವುದಕ್ಕೆ ಸರ್ಕಾರವನ್ನು ಶ್ಲಾಘಿಸಬೇಕು.

ಇದಕ್ಕೆ ಆರ್ಥಿಕತೆಯ ಸೂಕ್ತ ನಿರ್ವಹಣೆ ಮತ್ತು ಭಾರಿ ಪ್ರಮಾಣದ ಆರ್ಥಿಕ ಬೆಳವಣಿಗೆಯನ್ನು ಸೃಷ್ಟಿಸುತ್ತಿರುವ ನೀತಿಗಳು ಕಾರಣ.

2014ರಲ್ಲಿ ಅಧಿಕಾರಕ್ಕೆ ಬಂದ ವೇಳೆಯಿಂದಲೂ ಮೋದಿ ಸರ್ಕಾರ, ಹಣಕಾಸು ಸಚಿವ ಅರುಣ್ ಜೇಟ್ಲಿ ರಾಜಕೀಯ ಹಾಗೂ ಅದರಿಂದ ಪ್ರೇರಿತ ಸೌಲಭ್ಯಗಳನ್ನು ರದ್ದುಗೊಳಿಸಿ, ಮುರಿದು ಬಿದ್ದಿದ್ದ ಆರ್ಥಿಕತೆಗೆ ಮರಳಿ ಆಕಾರ ನೀಡಿದ್ದಾರೆ.

ನಾಲ್ಕು ವರ್ಷದ ತಾಳ್ಮೆಯ ಶ್ರಮ ಈಗ ಫಲ ನೀಡುತ್ತಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ (ಏಪ್ರಿಲ್-ಜೂನ್ 2018) ಭಾರತದ ಆರ್ಥಿಕತೆ ಶೇ 8.2 ಬೆಳವಣಿಗೆ ದಾಖಲಿಸಿದೆ.

ವಿಶ್ವಬ್ಯಾಂಕ್, ಐಎಂಎಫ್ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಸೇರಿದಂತೆ ಬಹುತೇಕ ಎಲ್ಲ ಸಂಸ್ಥೆಗಳೂ ವಾರ್ಷಿಕ ಬೆಳವಣಿಗೆ ದರವು ಸುಮಾರು ಶೇ 7.4ರಷ್ಟು ಇರಲಿದೆ ಎಂದು ಅಂದಾಜಿಸಿವೆ. ಈ ಸಂಖ್ಯೆಯು ಶೇ 8ಕ್ಕಿಂತ ಹೆಚ್ಚಾಗುವುದು ಸಾಧ್ಯವಾಗದೆ ಇದ್ದರೂ, ಅದಕ್ಕೆ ಸಮೀಪವಂತೂ ಇರಲಿದೆ ಎನ್ನುವುದು ನನ್ನ ನಿರೀಕ್ಷೆ.

ಇನ್ನು, ಹಣದುಬ್ಬರದ ದರವು ಇದಕ್ಕೆ ಅನುಗುಣವಾಗಿ ಬದಲಾಗುತ್ತಿರುತ್ತದೆ. ಜುಲೈನಲ್ಲಿ ತೈಲ ಬೆಲೆಯ ತೀವ್ರ ಏರಿಕೆಯ ನಡುವೆಯೂ ಶೇ 4.17ರಷ್ಟಿತ್ತು. ವರ್ಷದ ಎರಡನೆಯ ಭಾಗದಲ್ಲಿ ಇದು ಶೇ 4.8ಕ್ಕೆ ಏರಲಿದೆ ಎಂದು ನಿರೀಕ್ಷಿಸಲಾಗಿದ್ದರೂ, ಈಗಲೂ ಅದು ಹಿತಕರ ದರದಲ್ಲಿಯೇ ಉಳಿದುಕೊಂಡಿದೆ.

ಮುಂದಿನ ತಿಂಗಳುಗಳಲ್ಲಿ ಜಾಗತಿಕ ಕಚ್ಚಾ ತೈಲದ ಬೆಲೆ ಇಳಿಕೆಯಾಗದೆ ಇದ್ದರೆ ಸಿಎಡಿ ಶೇ 2.5ಕ್ಕೆ ಏರುವ ಸಂಭವವಿದ್ದರೂ, ಇನ್ನು ಎರಡು ಬಹುಮುಖ್ಯ ಆರ್ಥಿಕ ಸೂಚಕಗಳಾದ ಹಣಕಾಸು ಮತ್ತು ಚಾಲ್ತಿ ಖಾತೆ ಕೊರತೆಗಳು ಸಾಧಾರಣ ಮತ್ತು ಒಪ್ಪಿತ ವಲಯದಲ್ಲಿಯೇ ಇರಲಿದೆ.

ತೈಲ ಮತ್ತು ನವೀಕರಣದ ಒತ್ತಡಗಳು

ತೈಲ ಮತ್ತು ನವೀಕರಣದ ಒತ್ತಡಗಳು

ಭಾರತ, ಜಗತ್ತಿನ ಮೂರನೇ ಅತಿದೊಡ್ಡ ತೈಲ ಆಮದುದಾರ ದೇಶ. ಭಾರತದ ಕಚ್ಚಾ ತೈಲದ ಸರಕಿನ ಮೇಲೆ ಬೀಳುವ ಪ್ರತಿ ಒಂದು ಡಾಲರ್ ಹೊರೆ, ಭಾರತದ ಆಮದು ಶುಲ್ಕವನ್ನು ಒಂದು ಬಿಲಿಯನ್‌ ಡಾಲರ್‌ಗೆ ಹೆಚ್ಚಿಸುತ್ತದೆ. ಮೋದಿ ಸರ್ಕಾರವು ತೀವ್ರಮಟ್ಟದಲ್ಲಿ ನವೀಕರಿಸಬಹುದಾದ ಇಂಧನಗಳ ಬಳಕೆಯ ಹಿಂದೆ ಸಾಗುತ್ತಿರುವುದಕ್ಕೆ ಇದು ಒಂದು ಕಾರಣ.

ಹೈಡ್ರೋಕಾರ್ಬನ್‌ನಿಂದ (ಮತ್ತು ಪರಿಸರಕ್ಕೆ ಮಾರಕವಾದ ಕಲ್ಲಿದ್ದಲಿನಂತಹ ಇಂಧನಗಳು) ನವೀಕರಿಸಬಹುದಾದ ಇಂಧನಕ್ಕೆ ಹೊರಳುವುದು ಆಮದುಗಳ ಮೇಲೆ ಭಾರತಕ್ಕೆ ಕೋಟ್ಯಂತರ ಡಾಲರ್‌ ಉಳಿಸುವುದು ಮಾತ್ರವಲ್ಲದೆ, ಭಾರತದ ಇಂಗಾಲದ ಉತ್ಪತ್ತಿಯ ತಡೆಯ ಪ್ರಯತ್ನವನ್ನು ಸುಧಾರಿಸುವ ಮೂಲಕ ಭವಿಷ್ಯದ ಪೀಳಿಗೆಗೆ ಸ್ವಚ್ಛ ಜಗತ್ತನ್ನು ನೀಡಲು ನೆರವಾಗುತ್ತದೆ.

ಬ್ಲೂಮ್‌ಬರ್ಗ್, ರಾಯಿಟರ್ಸ್ ಮುಂತಾದ ವಿದೇಶಿ ಸುದ್ದಿ ಸಂಸ್ಥೆಗಳು ಹಾಗೂ ಭಾರತೀಯ ಸುದ್ದಿಪತ್ರಿಕೆಗಳಲ್ಲಿ ಪ್ರಕಟವಾಗಿರುವ ಅಸಂಖ್ಯ ವರದಿಗಳು, 2022ರ ವೇಳೆಗೆ ಸೌರಶಕ್ತಿ, ವಾಯು ಶಕ್ತಿ ಮತ್ತು ಜೈವಿಕ ಇಂಧನಗಳ ಮೂಲಕ 160 ಗಿಗಾ ವ್ಯಾಟ್ ಇಂಧನ ಉತ್ಪಾದಿಸುವ ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಗುರಿಯ ಬಗ್ಗೆ ತಿಳಿಸಿವೆ. ಇದು ದೇಶದಾದ್ಯಂತ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಲಿದೆ.

ಸುಂಕ ಕಡಿತ ಸೂಕ್ತ ಪರಿಹಾರ ಅಲ್ಲ ಯಾಕ ೆ?

ಸುಂಕ ಕಡಿತ ಸೂಕ್ತ ಪರಿಹಾರ ಅಲ್ಲ ಯಾಕ ೆ?

ಮಧ್ಯಮ ವರ್ಗದವರ ಮೇಲಿನ ಹೊರೆ ತಗ್ಗಿಸಲು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕಗಳನ್ನು ಕಡಿತಗೊಳಿಸಬೇಕು ಎಂದು ವಿರೋಧಪಕ್ಷಗಳು ಒತ್ತಾಯಿಸುತ್ತಿವೆ. ಆದರೆ ಕ್ಷಮಿಸಿ, ಈ ಬೇಡಿಕೆಯು ರಾಜಕೀಯ ಪ್ರೇರಿತ ಆರ್ಥಿಕ ನಿರ್ವಹಣೆಯಾಗುತ್ತದೆ. ಇದರಿಂದ ಭಾರತ ಹಿಂದೆ ಸಮಸ್ಯೆಗೆ ಸಿಲುಕಿದೆ.

ಸುಂಕ ಕಡಿತ ವಿತ್ತೀಯ ಕೊರತೆಯನ್ನು ಹಿಗ್ಗಿಸುತ್ತದೆ. ಇದರಿಂದ ಖಾಸಗಿ ಹೂಡಿಕೆಗಳ ಉತ್ತೇಜನವಿಲ್ಲದೆ ನಡೆಯುತ್ತಿರುವ ವಿವಿಧ ಸರ್ಕಾರಿ ಯೋಜನೆಗಳಿಗೆ ಹಣದ ಪ್ರಮಾಣ ಕಡಿಮೆಯಾಗಲಿದೆ.

'ಎಕನಾಮಿಕ್ಸ್ ಟೈಮ್ಸ್'ನ ಇತ್ತೀಚಿನ ವರದಿ ಪ್ರಕಾರ, ಹೆಚ್ಚಿನ ಕೈಗಾರಿಕೆಗಳ ಸಾಮರ್ಥ್ಯ ಬಳಕೆ ಪ್ರಮಾಣ ಎರಡು ವರ್ಷಗಳಷ್ಟು ಹೆಚ್ಚಳವಾಗಿದೆ. ಇದರಿಂದ ಅವು ಹೊಸ ಹೂಡಿಕೆಗಳನ್ನು ಮಾಡುವುದನ್ನು ಆರಂಭಿಸುತ್ತಿವೆ.

ವಿತ್ತೀಯ ಕೊರತೆಯ ಹೆಚ್ಚಳವು ವಿದೇಶಿ ಹೂಡಿಕೆದಾರರು ತಮ್ಮ ಹೂಡಿಕೆಗಳನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಮಾಡಬಹುದು. ಇದರಿಂದ ಡಾಲರ್ ಎದುರು ರೂಪಾಯಿ ಮತ್ತಷ್ಟು ಮೌಲ್ಯ ಕಳೆದುಕೊಳ್ಳುತ್ತದೆ. ಹಿಂದಿನ ಯುಪಿಎ ಸರ್ಕಾರದ ಆರ್ಥಿಕತೆಯ ಕೆಟ್ಟ ನಿರ್ವಹಣೆಯ ಫಲಿತಾಂಶವಾಗಿ 2013ರಲ್ಲಿ ಇದ್ದ ಶೋಚನೀಯ ಆರ್ಥಿಕ ಸ್ಥಿತಿಗೆ ಮರಳಬೇಕಾಗುತ್ತದೆ.

ಡಾಲರ್‌ಗೆ 55 ರಷ್ಟಿದ್ದ ರೂಪಾಯಿ ಮೌಲ್ಯ ಶೇ 25ರಷ್ಟು ಕುಸಿತ ಕಂಡು 68 ರೂ.ಗೆ ಕುಸಿದಿತ್ತು. ಆಗಿನ ಗವರ್ನರ್ ರಘುರಾಂ ರಾಜನ್ ಅವರ ಹೋರಾಟದ ಕೌಶಲದ ಫಲವಾಗಿ ಈ ಬಿಕ್ಕಟ್ಟು ಇನ್ನಷ್ಟು ತೀವ್ರವಾಗಲಿಲ್ಲ.

ದಿಟ್ಟ ನಡೆ ಅನುಸರಿಸಬೇಕು

ದಿಟ್ಟ ನಡೆ ಅನುಸರಿಸಬೇಕು

ಪ್ರಬಲ ಕರೆನ್ಸಿಯು ಕೆಲವು ನಾಯಕರ ಅಹಮ್ಮಿಕೆಗೆ ಮಾತ್ರ ಒಳ್ಳೆಯದು ಆದರೆ, ಆರ್ಥಿಕತೆಗೆ ಅದರಲ್ಲಿಯೂ ಅಭಿವೃದ್ಧಿಶೀಲ ಆರ್ಥಿಕತೆಗೆ ಯಾವಾಗಲೂ ಒಳ್ಳೆಯದಲ್ಲ ಎಂದು ಅನೇಕ ಅರ್ಥಶಾಸ್ತ್ರಜ್ಞರು ಮತ್ತು ವಿಶ್ಲೇಷಕರು ಹೇಳುತ್ತಾರೆ.

ಇದಕ್ಕೆ ನನ್ನ ಮಾತನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಬೇಕಿಲ್ಲ. ಮಾಜಿ ಹಣಕಾಸು ಸಚಿವ ಮತ್ತು ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ಅವರು ಇತ್ತೀಚೆಗೆ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಬರೆದ 'ರೂಪಾಯಿ ಕುಸಿತವಾಗಲಿ ಎಂದು ಏಕೆ ಭಾರತ ಬಿಟ್ಟುಬಿಡಬೇಕು' ಎಂಬ ಅಂಕಣವನ್ನು ಉದಾಹರಿಸುತ್ತೇನೆ.

ಅವರು ಬರೆಯುತ್ತಾರೆ, 'ದುರ್ಬಲ ಕರೆನ್ಸಿ ಇತ್ತೀಚಿನ ವರ್ಷಗಳಲ್ಲಿ ದುರ್ಬಲವಾಗಿದ್ದ ರಫ್ತು ಬೆಳವಣಿಗೆಗೆ ನೆರವಾಗುತ್ತದೆ. ದುರ್ಬಲ ರೂಪಾಯಿ ಚೀನಾದಂತಹ ದೇಶಗಳ ಅಗ್ಗದ ಆಮದುಗಳ ಸ್ಪರ್ಧೆಯನ್ನು ನಿಯಂತ್ರಿಸಿ, ದೇಶಿ ಕೈಗಾರಿಕೆಗಳಿಗೆ ಅಗತ್ಯವಾದ ಉತ್ತೇಜನ ನೀಡುತ್ತದೆ.

ಆರ್‌ಬಿಐ ಮತ್ತು ಈಗಿನ ಸರ್ಕಾರ ಸಹನೆಯಿಂದ ಇದೆ. ಇದು ದೈನಂದಿನ ವಾರ್ತೆಗಳು, ಮಾಧ್ಯಮಗಳ ಒತ್ತಡಗಳು, ಲಾಬಿ ಮತ್ತು ರಾಜಕೀಯ ವಾಗ್ದಾಳಿಗಳ ನಡುವೆಯೂ ದೃಢವಾಗಿ ನಿಲ್ಲುವ ಮನೋಭಾವದ ಪ್ರತೀಕ. 2016ರಲ್ಲಿ ಆರ್‌ಬಿಐಗೆ ಹಣದುಬ್ಬರದ ಗುರಿಯನ್ನು ತಲುಪಲು ಮತ್ತು ಬೆಳವಣಿಗೆಯನ್ನು ನಿಭಾಯಿಸಲು ಹೊಸ ನಿಯಮವನ್ನು ನೀಡಲಾಗಿತ್ತು. ಇತ್ತೀಚಿನ ರೂಒಆಯಿ ಮೌಲ್ಯ ಕುಸಿತ ಅದರ ದೃಢತೆಗೆ ಪರೀಕ್ಷೆಯಾಗಿದೆ'.

ಭಾರತ ಧ್ರುವೀಕೃತ ರಾಜಕೀಯ ವಾತಾವರಣದಲ್ಲಿ ವಿರೋಧಪಕ್ಷದ ಹಿರಿಯ ನಾಯಕರೊಬ್ಬರು ಸರ್ಕಾರದ ತುಂಬಾ ಅಗತ್ಯವಾದ ನಡೆಯನ್ನು ಆ ಮುಖಂಡರದ್ದೇ ಪಕ್ಷದ ಅಧ್ಯಕ್ಷರು ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ, ವಾಗ್ದಾಳಿ ನಡೆಸುತ್ತಿರುವಾಗಬಹಿರಂಗವಾಗಿ ಈ ರೀತಿ ಬೆಂಬಲಿಸುವುದು ಕಷ್ಟ.

ಒಂದು ಬಾರಿ, ಹೃದಯಪೂರ್ವಕವಾಗಿ ಚಿದಂಬರಂ ಅವರೊಂದಿಗೆ ಇದ್ದೇನೆ ಎಂದು ನಾನು ಒಪ್ಪಿಕೊಳ್ಳಲೇಬೇಕು.

ಮನೋಜ್ ಲಾಡ್ವಾ ಇಂಡಿಯಾ ಐಎನ್‌ಸಿಯ ಸಂಸ್ಥಾಪಕರು ಮತ್ತು ಎಂಎಲ್‌ಎಸ್ ಚೇಸ್ ಸಮೂಹದ ಕಾರ್ಯನಿರ್ವಾಹಕ @manojladwa

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Founder of India Inc. Manoj Ladwa writes about the fall of rupee value against dollar, that is not bad as compared to many other nations in the world.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more