ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊನೆ ದಿನಾಂಕದ ಬಳಿಕ ಐಟಿ ರಿಟರ್ನ್ಸ್ ಫೈಲ್ ಮಾಡೋದು ಹೇಗೆ?

By Mahesh
|
Google Oneindia Kannada News

ಬೆಂಗಳೂರು, ಆಗಸ್ಟ್ 08: ಆದಾಯ ತೆರಿಗೆ ಪಾವತಿಗೆ ಆಗಸ್ಟ್ 05, 2017 ಕೊನೆ ದಿನಾಂಕವಾಗಿದ್ದು, ನಾನಾ ಕಾರಣಗಳಿಂದ ಅನೇಕ ಉದ್ಯೋಗಿಗಳು ನಿಗದಿತ ಸಮಯಕ್ಕೆ ಸರಿಯಾಗಿ ರಿಟರ್ನ್ಸ್ ಫೈಲ್ ಮಾಡುವಲ್ಲಿ ವಿಫಲರಾಗುತ್ತಾರೆ.

ನಿಗದಿತ ದಿನಾಂಕದೊಳಗೆ ತೆರಿಗೆ ಪಾವತಿಸಿಲ್ಲವೇ? ಹಾಗಾದರೆ ಇಲ್ಲಿ ಓದಿ...ನಿಗದಿತ ದಿನಾಂಕದೊಳಗೆ ತೆರಿಗೆ ಪಾವತಿಸಿಲ್ಲವೇ? ಹಾಗಾದರೆ ಇಲ್ಲಿ ಓದಿ...

ಪ್ರಸಕ್ತ ವರ್ಷ ವಿಳಂಬವಾಗಿ ಐಟಿ ರಿಟರ್ನ್ಸ್ ಸಲ್ಲಿಕೆಗೆ ಯಾವುದೇ ದಂಡ ವಿಧಿಸುತ್ತಿಲ್ಲ. ಆದರೆ, ಕೊನೆ ದಿನಾಂಕದ ನಂತರ ರಿಟರ್ನ್ಸ್ ಫೈಲ್ ಮಾಡಿದರೆ ಕೆಲವು ಸೌಲಭ್ಯಗಳಿಂದ ವಂಚಿತರಾಗುತ್ತಾರೆ.

ವಿಳಂಬವಾಗಿ ಫೈಲ್ ಮಾಡುವುದರಿಂದ ಲಾಭವಂತೂ ಸಿಗುವುದಿಲ್ಲ. ಕೆಲ ವಿಭಾಗಗಳಿಂದ ಸಿಗಬಹುದಾದ ವಿನಾಯತಿ, ರೀ ಫಂಡ್ ಎಲ್ಲವೂ ಕೈ ತಪ್ಪುತ್ತದೆ. ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಕಳೆದ ಬಜೆಟ್ ನಲ್ಲಿ ಘೋಷಿಸಿದ ಹೊಸ 'ದಂಡ' ನೀತಿ ಪ್ರಸಕ್ತ ವರ್ಷಕ್ಕೆ ಅನ್ವಯವಾಗುವುದಿಲ್ಲ. ನಿಗದಿತ ಅವಧಿಯೊಳಗೆ ಐಟಿ ರಿಟರ್ನ್ಸ್ ಸಲ್ಲಿಸದಿದ್ದರೆ ಮೊದಲಿಗೆ 5,000 ಹಾಗೂ ನಂತರ 10,000 ರು ದಂಡ ವಿಧಿಸಲಾಗುತ್ತದೆ.

How to file Income Tax returns after deadline

ವಿಳಂಬವಾಗಿದ್ದರೆ ಹಣ ಪಾವತಿ ಹೇಗೆ?

ವಿಳಂಬವಾಗಿದ್ದಲ್ಲಿ ಚಲನ್ 280ರ ಮೂಲಕ ಆನ್ ಲೈನ್ ನಲ್ಲಿ ಹಣ ಪಾವತಿ ಮಾಡಬೇಕಾಗುತ್ತದೆ. ಒಂದು ವೇಳೆ ನೀವು ಆಫ್ ಲೈನ್ ಮೂಲಕ ಹಣ ಪಾವತಿಸುವುದಾದರೂ ಇದೇ ಚಲನ್ ಡೌನ್ ಲೋಡ್ ಮಾಡಿಕೊಂಡು ಸಂಬಂಧಿಸಿದ ಬ್ಯಾಂಕ್ ಶಾಖೆಗೆ ಸಲ್ಲಿಸಬೇಕಾಗುತ್ತದೆ. ಚೆಕ್ ಅಥವಾ ನಗದು ಮೂಲಕ ಹಣ ಸಂದಾಯ ಮಾಡಬೇಕಾಗುತ್ತದೆ.

ಆನ್ ಲೈನ್ ನಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಹೇಗೆ?ಆನ್ ಲೈನ್ ನಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಹೇಗೆ?

* ಆದಾಯ ತೆರಿಗೆ ವೆಬ್ ತಾಣಕ್ಕೆ ಭೇಟಿ ನೀಡಿ.

-ಆನ್ ಲೈನ್ ಮೂಲಕ ಆದಾಯ ತೆರಿಗೆ ಪಾವತಿ ಮಾಡುವವರು ಆದಾಯ ತೆರಿಗೆ ಇಲಾಖೆ ವೆಬ್ ಸೈಟ್ (https://incometaxindiaefiling.gov.in/) ನಲ್ಲಿ ನೋಂದಣಿ ಮಾಡಿಕೊಂಡು ಸುಲಭವಾಗಿ ಪಾವತಿ ಮಾಡಬಹುದು.
* ಚಲನ್ 280 ನ್ನು ಸೆಲೆಕ್ಟ್ ಮಾಡಿಕೊಳ್ಳಿ

* ನಿಮ್ಮ ಮಾಹಿತಿ ಅಂದರೆ, ಪ್ಯಾನ್ ನಂಬರ್, ಅಡ್ರೆಸ್, ವರ್ಷ, ಮೇಜರ್ ಹೆಡ್ ಕೋಡ್, ಮೈನರ್ ಹೆಡ್ ಕೋಡ್, ಪಾವತಿಯ ರೀತಿ, ಬ್ಯಾಂಕ್ ಹೆಸರು ಎಲ್ಲವನ್ನು ನಮೂದಿಸಬೇಕಾಗುತ್ತದೆ

(ಮೇಜರ್ ಹೆಡ್ ಗೆ ಸಂಬಂಧಿಸಿ 020 ಅಥವಾ 021 ರಲ್ಲಿ ತೆರಿಗೆ ಮೌಲ್ಯಕ್ಕೆ ಅನುಗುಣವಾಗಿ ಒಂದನ್ನು ಟಿಕ್ ಮಾಡಬೇಕಾಗುತ್ತದೆ)

* ಶಿಕ್ಷಣಕ್ಕೆ ಸಂಬಂಧಿಸಿದ ಸೆಸ್ ನ್ನು ದಾಖಲು ಮಾಡಬೇಕಾಗುತ್ತದೆ.

* ನಂತರ ನಿಮ್ಮ ಬ್ಯಾಂಕ್ ಖಾತೆಯಿಂದ ನೇರವಾಗಿ ಹಣ ಸಂದಾಯವಾಗುತ್ತದೆ. ನಿಮಗೆ ಅಕ್ ನಾಲೆಡ್ಜಮೆಂಟ್ ಸಹ ದೊರೆಯುತ್ತದೆ ಅದರೊಂದಿಗೆ ಚಲನ್ ಐಡೆಂಟಿಫಿಕೇಶನ್ ನಂಬರ್ ವೊಂದನ್ನು (ಸಿಐಎನ್) ನೀಡಲಾಗುತ್ತದೆ. ಚಲನ್ ಐಡೆಂಟಿಫಿಕೇಶನ್ ನಂಬರ್ ಬಗ್ಗೆ ತಿಳಿದುಕೊಳ್ಳಿ

ನಿಮ್ಮ ಚಲನ್ ಕುರಿತಾದ ಮಾಹಿತಿಯನ್ನು ಎನ್ಎಸ್ ಡಿಎಲ್-ಟಿಐಎನ್ ವೆಬ್ ತಾಣದ ಮೂಲಕ ಚಲನ್ ನಂಬರ್ ಬಳಸಿ ಪರಿಶೀಲನೆ ಮಾಡಬಹುದು.

English summary
How to file Income Tax returns after deadline? many people have still not filed their income tax returns due to various reasons. There are certain benefits that an individual loses if he/she files the return after the deadline even though there is no fee for late filing for this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X