ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗತ್ತಿನ ಐಟಿ ಹಬ್ ಎನಿಸಿಕೊಂಡ ನಗರಗಳಲ್ಲಿ ಬೆಂಗಳೂರಿಗೆ ಎಷ್ಟನೇ ಸ್ಥಾನ?

|
Google Oneindia Kannada News

ಬೆಂಗಳೂರು, ಆಗಸ್ಟ್ 26: ಏಷ್ಯಾ-ಪೆಸಿಫಿಕ್‌ನಾದ್ಯಂತ ಅಗ್ರ ಟೆಕ್ ಹಬ್‌ಗಳಲ್ಲಿ ಬೆಂಗಳೂರು ಎರಡೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಅಗ್ರಸ್ಥಾನದಲ್ಲಿ ಬೀಜಿಂಗ್ ಕಾಣಿಸಿಕೊಂಡಿದ್ದು, ಎರಡನೇ ಸ್ಥಾನದಲ್ಲಿ ಕರ್ನಾಟಕದ ರಾಜಧಾನಿ ಸ್ಥಾನ ಪಡೆದುಕೊಂಡಿದೆ.

ಬೆಂಗಳೂರಿನ ನಂತರದ ಸ್ಥಾನದಲ್ಲಿ ಚೆನ್ನೈ, ಹೈದರಾಬಾದ್ ಮತ್ತು ದೆಹಲಿ ಮಹಾನಗರಗಳು ಪತ್ತೆಯಾಗಿವೆ. ಈ ಪ್ರದೇಶಗಳಲ್ಲಿ ದೇಶೀಯ ಮತ್ತು ಬಹುರಾಷ್ಟ್ರೀಯ ಕಂಪನಿಗಳಿಂದ ಗುಣಮಟ್ಟದ ಕಚೇರಿ ಸ್ಥಾಪನೆಗೆ ಸ್ಥಳಕ್ಕಾಗಿ ನಿರಂತರ ಬೇಡಿಕೆಯಿದೆ ಎಂದು ಕುಶ್‌ಮನ್ ಮತ್ತು ವೇಕ್‌ಫೀಲ್ಡ್ ವರದಿ ತಿಳಿಸಿದೆ.

ದೇಶದಲ್ಲಿ ಅತಿಹೆಚ್ಚು ಉದ್ಯೋಗ ನೀಡುವ ಮಹಾನಗರವೇ ನಮ್ಮ ಬೆಂಗಳೂರು!ದೇಶದಲ್ಲಿ ಅತಿಹೆಚ್ಚು ಉದ್ಯೋಗ ನೀಡುವ ಮಹಾನಗರವೇ ನಮ್ಮ ಬೆಂಗಳೂರು!

ಕಳೆದ ಆರ್ಥಿಕ ವರ್ಷದಲ್ಲಿ ಭಾರತವೊಂದರಲ್ಲಿ ಅತಿಹೆಚ್ಚು ಉದ್ಯೋಗಿಗಳನ್ನು ಐಟಿ ವಲಯವು ನೇಮಿಸಿಕೊಂಡಿದೆ. ತಾಂತ್ರಿಯ ಕ್ಷೇತ್ರವೊಂದರಲ್ಲೇ ಒಂದು ವರ್ಷದಲ್ಲಿ ಬರೋಬ್ಬರಿ 5 ಲಕ್ಷ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಾಗಿದೆ.

ತಾಂತ್ರಿಕ ವಲಯವೇ ಭಾರತದ ಆರ್ಥಿಕತೆಗೆ ಶಕ್ತಿ

ತಾಂತ್ರಿಕ ವಲಯವೇ ಭಾರತದ ಆರ್ಥಿಕತೆಗೆ ಶಕ್ತಿ

"ಭಾರತದ ಆರ್ಥಿಕತೆಗೆ ಐಟಿ ಮತ್ತು ತಂತ್ರಜ್ಞಾನ-ಚಾಲಿತ ವಲಯಗಳು ಪ್ರಮುಖ ಪ್ರೇರಕ ಶಕ್ತಿಯಾಗಿದೆ," ಎಂದು ಭಾರತ ಮತ್ತು ಆಗ್ನೇಯ ಏಷ್ಯಾದ ಎಂಡಿ ಅನ್ಶುಲ್ ಜೈನ್ ಹೇಳಿದ್ದಾರೆ. "ಭಾರತದಲ್ಲಿ ಐಟಿ ವಲಯಗಳು ಹೆಚ್ಚು ಹೆಚ್ಚು ಹೂಡಿಕೆ ಮಾಡುವುದಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರಮುಖ ನೀತಿಗಳಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದೆ. ಇದರಿಂದ ಜಾಗತಿಕ ಮಟ್ಟದಿಂದ ಹೆಚ್ಚು ಬೇಡಿಕೆಯಿರುವ ವಲಯದಲ್ಲಿ ಹೊಸ ಪ್ರತಿಭೆಗಳನ್ನು ಹುಡುಕುವುದಕ್ಕೆ ಅನುಕೂಲವಾಗಲಿದೆ," ಎಂದಿದ್ದಾರೆ.

ದೇಶಕ್ಕಿಂತ ಬೆಂಗಳೂರಿನಲ್ಲೇ ಅತಿಹೆಚ್ಚು ಗುತ್ತಿಗೆ ಪಾಲು

ದೇಶಕ್ಕಿಂತ ಬೆಂಗಳೂರಿನಲ್ಲೇ ಅತಿಹೆಚ್ಚು ಗುತ್ತಿಗೆ ಪಾಲು

ತಾಂತ್ರಿಕ ವಲಯದ ಕಂಪನಿಗಳು ಬೆಂಗಳೂರನ್ನು ಹುಡುಕಿಕೊಂಡು ಬರುತ್ತಿವೆ. ಜಾಗತಿಕ ಮಟ್ಟದಲ್ಲಿ ಭಾರತದ ಪಾಲು ಎಷ್ಟಿದೆಯೋ ಅದಕ್ಕಿಂತ ಬೆಂಗಳೂರಿನ ಪಾಲು ದೇಶದಲ್ಲಿ ಹೆಚ್ಚಾಗಿರುವುದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ. ಬೆಂಗಳೂರಿನಲ್ಲಿ ತಾಂತ್ರಿಕ ಕಂಪನಿಗಳ ಗುತ್ತಿಗೆ ಪಾಲು ಶೇ.38 ರಿಂದ 40ರಷ್ಟಿದೆ. ಭಾರತದಲ್ಲಿ ಐಟಿ ವಲಯಗಳ ಗುತ್ತಿಗೆ ಪಾಲು ಶೇ.35ರಷ್ಟಿದೆ. ರಾಷ್ಟ್ರದಲ್ಲಿನ ಗುತ್ತಿಗೆ ಪಾಲನ್ನು ಹೋಲಿಸಿದರೆ, ಬೆಂಗಳೂರಿನಲ್ಲಿ ಐಟಿ ವಲಯಗಳ ಗುತ್ತಿಗೆ ಪಾಲು ಹೆಚ್ಚಾಗಿದೆ.

ಚೆನ್ನೈ, ಹೈದ್ರಾಬಾದ್ ಕಡೆಗೆ ಐಟಿ ಕಂಪನಿಗಳ ಹೆಜ್ಜೆ

ಚೆನ್ನೈ, ಹೈದ್ರಾಬಾದ್ ಕಡೆಗೆ ಐಟಿ ಕಂಪನಿಗಳ ಹೆಜ್ಜೆ

ಮೈಕ್ರೋಸಾಫ್ಟ್ ಮತ್ತು ಫೇಸ್ ಬುಕ್ ಕಂಪನಿಗಳು ಹೈದ್ರಾಬಾದ್ ನಗರದ ಅತಿಹೆಚ್ಚು ಪ್ರದೇಶದಲ್ಲಿ ಕಂಪನಿಯನ್ನು ಆರಂಭಿಸುತ್ತಿದೆ. 44 ದಶಲಕ್ಷ ಸ್ಕ್ವೇರ್ ಫೀಟ್ ಜಾಗದಲ್ಲಿ ಕಂಪನಿ ಕಾಮಗಾರಿ ನಡೆಸಲಾಗುತ್ತಿದೆ. ದಕ್ಷಿಣದ ಮತ್ತೊಂದು ನಗರವಾದ ಚೆನ್ನೈ ಎರಡನೇ ಅತಿ ದೊಡ್ಡ ಸಾಫ್ಟ್‌ವೇರ್ ರಫ್ತುದಾರ ಮತ್ತು ಭಾರತದ ಅತಿದೊಡ್ಡ ಡೇಟಾ ಸೆಂಟರ್ ಮಾರುಕಟ್ಟೆಗಳಲ್ಲಿ ಒಂದಾಗಿದೆ. ತಾಂತ್ರಿಕ ಕಂಪನಿಗಳ ಗುತ್ತಿಗೆಯ ಬೆಳವಣಿಗೆಯು ಮುಂದುವರಿಯುತ್ತದೆ ಎಂದು ತಜ್ಞರು ಹೇಳುತ್ತಾರೆ. "ಬೇಡಿಕೆಯು ಇದುವರೆಗೆ ಸ್ಥಿರವಾಗಿದೆ. ಜಾಗತಿಕ ಆರ್ಥಿಕ ಪ್ರಕ್ಷುಬ್ಧತೆಯಿಂದ ಬೇಡಿಕೆಗೆ ಪೆಟ್ಟು ಬೀಳದಿದ್ದರೆ 2019ರ ಮಟ್ಟವನ್ನು ತಲುಪಲು ಸಾಧ್ಯವಿದೆ," ಎಂದು ಸತ್ತ್ವ ಗ್ರೂಪ್‌ನ ನಿರ್ದೇಶಕ ಮಹೇಶ್ ಖೈತಾನ್ ಹೇಳಿದ್ದಾರೆ.

ಐಟಿ ಕಂಪನಿಗಳನ್ನು ಸೆಳೆಯುವುದಕ್ಕೆ ಏನೆಲ್ಲಾ ಕ್ರಮಗಳು?

ಐಟಿ ಕಂಪನಿಗಳನ್ನು ಸೆಳೆಯುವುದಕ್ಕೆ ಏನೆಲ್ಲಾ ಕ್ರಮಗಳು?

ಅಂತಾರಾಷ್ಟ್ರೀಯ ಆಸ್ತಿ ಸಲಹೆಗಾರರ ಪ್ರಕಾರ, ಪ್ರತಿಭೆ, ರಿಯಲ್ ಎಸ್ಟೇಟ್ ಮತ್ತು ವ್ಯಾಪಾರಿ ಪರಿಸರದ ಆಧಾರದ ಮೇಲೆ ಏಷ್ಯಾ ಫೆಸಿಫಿಕ್ ಜಾಗತಿಕ ಮಟ್ಟದಲ್ಲಿ 14 ನಗರಗಳಲ್ಲಿ ತಾಂತ್ರಿಕ ವಲಯವು ನೆಲೆ ಕಂಡುಕೊಂಡಿರುವುದನ್ನು ತೋರಿಸುತ್ತದೆ. ಈ ಸ್ಥಳಗಳಲ್ಲಿ ದೊಡ್ಡ ಮಟ್ಟದ ಗ್ರೇಡ್ ಎ ಕಚೇರಿ ಯೋಜನೆಗಳು ಜಾರಿಯಾಗುತ್ತವೆ. ಬೃಹತ್ ಪ್ರತಿಭಾ ಪೂಲ್ ಮತ್ತು ಕೈಗೆಟುಕುವ ಕಚೇರಿ ಬಾಡಿಗೆಗಳ ಮೂಲಕ ಈ ನಗರಗಳು ಉದ್ಯೋಗಿಗಳನ್ನು ಕೈ ಬೀಸಿ ಕರೆಯುತ್ತವೆ. ಅದೇ ನಿಟ್ಟಿನಲ್ಲಿ ರಾಷ್ಟ್ರೀಯ ಮತ್ತು ಜಾಗತಿಕ ಟೆಕ್ ಕಂಪನಿಗಳನ್ನು ಸಹ ಆಕರ್ಷಿಸುತ್ತಿವೆ.

ಕೋವಿಡ್-19 ಕಾಲದಲ್ಲಿ 1 ಲಕ್ಷ ಮಂದಿ ನೇಮಕ

ಕೋವಿಡ್-19 ಕಾಲದಲ್ಲಿ 1 ಲಕ್ಷ ಮಂದಿ ನೇಮಕ

"ನಾವು ಭಾರತದ ಬಗ್ಗೆ ಸಾಕಷ್ಟು ಬುದ್ದಿವಂತರಾಗಿದ್ದೇವೆ. ಇದು ಪ್ರಾಥಮಿಕವಾಗಿ ಕೆಲವು ಬಾಹ್ಯ ಮತ್ತು ಆಂತರಿಕ ಅಂಶಗಳಿಂದ ನಡೆಸಲ್ಪಡುತ್ತದೆ. ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಇಡೀ ಜಗತ್ತು ತತ್ತರಿಸುತ್ತಿರುವಾಗ, ಭಾರತೀಯ ಐಟಿ ಸೇವೆಗಳು ಸುಮಾರು 1 ಲಕ್ಷ ಜನರನ್ನು ನೇಮಕ ಮಾಡಿಕೊಳ್ಳುವುದರೊಂದಿಗೆ ಅದರಿಂದ ಪ್ರಯೋಜನ ಪಡೆಯಿತು. ಇದರಿಂದ ಆಂತರಿಕ ಮಾರುಕಟ್ಟೆಗೆ ನಾವು ಒಗ್ಗಿಕೊಳ್ಳುವಂತೆ ಮಾಡಿತು," ಎಂದು ಕ್ಯಾಪಿಟಾಲ್ಯಾಂಡ್ ಇನ್ವೆಸ್ಟ್‌ಮೆಂಟ್‌ನ ಇಂಡಿಯಾ ಬಿಸಿನೆಸ್ ಪಾರ್ಕ್‌ನ ಸಿಇಒ ಗೌರಿ ಶಂಕರ್ ನಾಗಭೂಷಣಂ ಹೇಳಿದರು.

ಭಾರತೀಯ ತಂತ್ರಜ್ಞಾನ ವಲಯವು ಸಾಂಕ್ರಾಮಿಕ ರೋಗದ ಆರಂಭಿಕ ಪರಿಣಾಮಗಳಿಗೆ ಚೇತರಿಸಿಕೊಳ್ಳುತ್ತಿದೆ. ಇದು ತ್ವರಿತವಾಗಿ ಮರುಕಳಿಸಲಿದ್ದು, ಇತರ ಕ್ಷೇತ್ರಗಳನ್ನು ಮೀರಿಸುತ್ತದೆ. ಪ್ರಮುಖ ಭಾರತೀಯ ನಗರಗಳಲ್ಲಿ ಎರಡು ವರ್ಷಗಳಲ್ಲಿ ಕಛೇರಿ ಬಳಕೆ ಮತ್ತು ತಂತ್ರಜ್ಞಾನದ ಉದ್ಯೋಗವು ಸಾಂಕ್ರಾಮಿಕ ಪೂರ್ವದ ಮಟ್ಟಕ್ಕೆ ಸಂಪೂರ್ಣವಾಗಿ ಚೇತರಿಸಿಕೊಂಡಿದೆ ಎಂದರು.

English summary
how Bengaluru stand in Second rank in Asia Pacific top tech hub list. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X