ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ICT ಅಕಾಡೆಮಿಯಲ್ಲಿ 10 ಕೋಟಿ ರು ಹೂಡಲಿರುವ ಹನಿವೆಲ್

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 7: ಫಾರ್ಚೂನ್ 100 ಕಂಪನಿಯಾದ ಹನಿವೆಲ್‍ನ ಲೋಕೋಪಕಾರಿ ವಿಭಾಗವಾದ ಹನಿವೆಲ್ ಹೋಮ್‍ಟೌನ್ ಸೊಲ್ಯೂಷನ್ಸ್ ಇಂಡಿಯಾ ಫೌಂಡೇಶನ್ (ಎಚ್‍ಎಚ್‍ಎಸ್‍ಐಎಫ್), ದೇಶದ 50 ಕಾಲೇಜುಗಳಲ್ಲಿ ಕೌಶಲ್ಯ ಅಭಿವೃದ್ಧಿಗಾಗಿ ಶ್ರೇಷ್ಠತಾ ಕೇಂದ್ರಗಳನ್ನು ಸೃಷ್ಟಿಸುವ ಸಲುವಾಗಿ ಐಸಿಟಿ ಅಕಾಡೆಮಿಯೊಂದಿಗೆ ಮೂರು ವರ್ಷಗಳ ಪಾಲುದಾರಿಕೆಯನ್ನು ಮಾಡಿಕೊಂಡಿದೆ. ತನ್ನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‍ಆರ್) ಉಪಕ್ರಮದ ಅಂಗವಾಗಿ ಹನಿವೆಲ್ ಈ ಕೇಂದ್ರಗಳನ್ನು ಅಭಿವೃದ್ಧಿಪಡಿಸಲು ಮೊದಲ ವರ್ಷದಲ್ಲಿ 10 ಕೋಟಿ ರೂಪಾಯಿಗಳನ್ನು ನೀಡಲು ಬದ್ಧವಾಗಿದೆ.

ಈ ಕೇಂದ್ರಗಳು ಕೃತಕ ಬುದ್ಧಿಮತ್ತೆ (ಎಐ), ಮಷಿನ್ ಲರ್ನಿಂಗ್ (ಎಂಎಲ್), ಬಿಗ್ ಡೇಟಾ ವಿಶ್ಲೇಷಣೆ ಮತ್ತು ನ್ಯಾನೋ ತಂತ್ರಜ್ಞಾನದಲ್ಲಿ ಸರ್ಟಿಫಿಕೇಶನ್‍ಗಳನ್ನು ನೀಡಲಿವೆ. ಈ ಕೌಶಲ್ಯವನ್ನು ಮೇಲ್ದರ್ಜೆಗೇರಿಸುವ ಕಾರ್ಯಕ್ರಮವು ಯೋಜನೆಯ ಮೂಲಕ ಅರ್ಧದಷ್ಟು ಮಹಿಳೆಯರೂ ಸೇರಿದಂತೆ 15,000 ವಿದ್ಯಾರ್ಥಿಗಳನ್ನು ಸಶಕ್ತಗೊಳಿಸಲಿದೆ ಮತ್ತು ಉದ್ಯೋಗ ನಿಯೋಜನೆಯನ್ನು ಒದಗಿಸಲಿವೆ.

ಈ ಕಾರ್ಯಕ್ರಮವು ಜಾಗತಿಕವಾಗಿ ಮಾನ್ಯತೆ ಪಡೆದ ಪ್ರಮಾಣಪತ್ರವನ್ನು ನೀಡುತ್ತದೆ, ಇದು ಕರ್ನಾಟಕ, ತಮಿಳುನಾಡು ಮತ್ತು ಮಹಾರಾಷ್ಟ್ರದಾದ್ಯಂತ ಶ್ರೇಣಿ -1 ಮತ್ತು ಶ್ರೇಣಿ -2 ನಗರಗಳಲ್ಲಿ ಎಂಜಿನಿಯರಿಂಗ್, ಕಲೆ ಮತ್ತು ವಿಜ್ಞಾನ ಕಾಲೇಜುಗಳಲ್ಲಿ ದಾಖಲಾಗುವ ಸಮಾಜದ ಸೌಲಭ್ಯವಂಚಿತ ವರ್ಗಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಯೋಜನವನ್ನು ನೀಡುತ್ತದೆ. ಎಚ್‍ಎಚ್‍ಎಸ್‍ಐಎಫ್ ಮಹಿಳಾ ವಿದ್ಯಾರ್ಥಿಗಳಿಗಾಗಿ ಕೇಂದ್ರಗಳನ್ನು ಸ್ಥಾಪಿಸುತ್ತಿದ್ದು, ಈ ಮೂಲಕ ದೇಶದ ಕಾರ್ಯಪಡೆಗಳಲ್ಲಿ ಸೇರ್ಪಡೆ ಮತ್ತು ವೈವಿಧ್ಯತೆಯನ್ನು ಉತ್ತೇಜಿಸುವ ಹನಿವೆಲ್ ಬದ್ಧತೆಯನ್ನು ಪ್ರದರ್ಶಿಸುತ್ತಿದೆ.

ಎಚ್‍ಎಚ್‍ಎಸ್‍ಐಎಫ್ ನಿರ್ದೇಶಕರಾದ ಆಶಿಶ್

ಎಚ್‍ಎಚ್‍ಎಸ್‍ಐಎಫ್ ನಿರ್ದೇಶಕರಾದ ಆಶಿಶ್

ಈ ಕುರಿತು ಮಾತನಾಡಿದ ಹನಿವೆಲ್ ಇಂಡಿಯಾ ಅಧ್ಯಕ್ಷ ಮತ್ತು ಎಚ್‍ಎಚ್‍ಎಸ್‍ಐಎಫ್ ನಿರ್ದೇಶಕರಾದ ಆಶಿಶ್ ಗಾಯಕವಾಡ್, "ಉದ್ಯಮ 4.0 ಜನರ ಉತ್ಪಾದಕತೆ, ಆಸ್ತಿ ಪರಿಣಾಮಕಾರಿತ್ವ ಮತ್ತು ಪ್ರಕ್ರಿಯೆಯ ದಕ್ಷತೆಯನ್ನು ಹೆಚ್ಚಿಸಲು ಉದ್ಯೋಗ ಜಗತ್ತನ್ನು ಪರಿವರ್ತಿಸುತ್ತಿರುವಂತೆ ಇದಕ್ಕೆ ಸರಿಯಾದ ಕೌಶಲ್ಯಗಳೊಂದಿಗೆ ಸಜ್ಜುಗೊಂಡ ಭವಿಷ್ಯ-ಸಿದ್ಧ ಕಾರ್ಯಪಡೆಯ ಅವಶ್ಯಕತೆ ಹೆಚ್ಚುತ್ತಿದೆ. ಟೆಕ್ ಸಂಬಂಧಿತ ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯಲು ಡಿಜಿಟಲ್ ಸರಾಗತೆ ಅಗತ್ಯ, ಮತ್ತು ಈ ಕೌಶಲ್ಯದ ಉಪಕ್ರಮಕ್ಕೆ ಕೊಡುಗೆ ನೀಡಲು ಐಸಿಟಿ ಅಕಾಡೆಮಿಯೊಂದಿಗೆ ಪಾಲುದಾರಿಕೆ ಮಾಡಿಕೊಂಡಿರುವ ಬಗ್ಗೆ ಹನಿವೆಲ್ ಹೆಮ್ಮೆಪಡುತ್ತಿದೆ" ಎಂದು ಹೇಳಿದ್ದಾರೆ.

100 ಗಂಟೆಗಳ ತರಗತಿಯ ಅವಧಿ

100 ಗಂಟೆಗಳ ತರಗತಿಯ ಅವಧಿ

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಕಲಿಕಾ ಮಾರ್ಗವು 100 ಗಂಟೆಗಳ ತರಗತಿಯ ಅವಧಿಗಳಾಗಿದ್ದು, ಆಯ್ದ ತಂತ್ರಜ್ಞಾನಗಳಲ್ಲಿ ವೈಯಕ್ತಿಕ ಮಾರ್ಗದರ್ಶನ, ಪ್ರಾವೀಣ್ಯತೆಯ ಮೌಲ್ಯಮಾಪನ, ಪ್ರಮಾಣೀಕರಣ ಮತ್ತು ಕ್ಯಾಂಪಸ್ ನಿಯೋಜನೆಗಳನ್ನು ಒಳಗೊಂಡಿದೆ. ಹನಿವೆಲ್ ನಾಯಕರು ವಿಷಯವನ್ನು ಮೌಲ್ಯಮಾಪನ ಮಾಡಲು, ಅತಿಥಿ ಉಪನ್ಯಾಸಗಳನ್ನು ನೀಡಲು ಮತ್ತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ವೈಯಕ್ತಿಕ ಸಮಯವನ್ನು ನೀಡುತ್ತಾರೆ.

ಐಸಿಟಿ ಅಕಾಡೆಮಿಯ ಅಧ್ಯಕ್ಷ ಡಾ.ಅನ್ಬುತಂಬಿ

ಐಸಿಟಿ ಅಕಾಡೆಮಿಯ ಅಧ್ಯಕ್ಷ ಡಾ.ಅನ್ಬುತಂಬಿ

ಈ ಪಾಲುದಾರಿಕೆಯ ಕುರಿತು ಮಾತನಾಡಿದ ಐಸಿಟಿ ಅಕಾಡೆಮಿಯ ಅಧ್ಯಕ್ಷ ಡಾ.ಅನ್ಬುತಂಬಿ ಭೋಜರಾಜನ್, ''ತಂತ್ರಜ್ಞಾನವು ಪ್ರತಿ ವ್ಯವಹಾರದ ಭಾಗವಾಗಿದೆ. ತಂತ್ರಜ್ಞಾನಗಳು ಬೆಳೆದಂತೆ, ಕೌಶಲ್ಯ ಮತ್ತು ಉದ್ಯೋಗ ಮತ್ತು ಆರ್ಥಿಕ ಅಭಿವೃದ್ಧಿಗೆ ಪ್ರಮುಖವಾಗಿರುತ್ತದೆ. ಐಸಿಟಿ ಅಕಾಡೆಮಿಯಲ್ಲಿ, ನಾವು ನಿರಂತರವಾಗಿ ಕಾರ್ಪೊರೇಟ್‍ಗಳು, ಸರ್ಕಾರ ಮತ್ತು ಅಕಾಡೆಮಿಗಳ ಸಹಯೋಗದೊಂದಿಗೆ ಪಿರಮಿಡ್‍ನ ಕೆಳಭಾಗದಿಂದಲೇ ಸಮರ್ಥನೀಯ ವಾತಾವರಣದ ಪರಿಸರವನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತೇವೆ. ಹನಿವೆಲ್ ಜೊತೆಗಿನ ನಮ್ಮ ಪಾಲುದಾರಿಕೆಯು ಸಮಾಜಕ್ಕೆ ಸೇವೆ ಸಲ್ಲಿಸುವ ನಿಟ್ಟಿನಲ್ಲಿ ಒಂದು ಹೆಜ್ಜೆಯಾಗಿದೆ ಮತ್ತು ಅಗತ್ಯವಿರುವ ವಿದ್ಯಾರ್ಥಿಗಳಿಗೆ ನಾಲ್ಕನೇ ಕೈಗಾರಿಕಾ ಕ್ರಾಂತಿಯಲ್ಲಿ ಅಗತ್ಯವಿರುವ ತಂತ್ರಜ್ಞಾನಗಳಲ್ಲಿ ತರಬೇತಿ ಪಡೆಯಲು ಅನುವು ಮಾಡಿಕೊಡುತ್ತದೆ" ಎಂದು ಬಣ್ಣಿಸಿದರು.

ಭಾರತ ಸರ್ಕಾರದ ಉಪಕ್ರಮವಾದ ಐಸಿಟಿ ಅಕಾಡೆಮಿ, ರಾಜ್ಯ ಸರ್ಕಾರಗಳು ಮತ್ತು ಕೈಗಾರಿಕೆಗಳೊಂದಿಗೆ ಸಹಯೋಗ ಹೊಂದಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಉದ್ಯಮದ ಅವಶ್ಯಕತೆಗಳಿಗೆ ಸರಿಹೊಂದುವ ಕೌಶಲ್ಯಗಳನ್ನು ಹೊಂದಿಸಲು ಮತ್ತು ಶ್ರೇಣಿ -2 ಮತ್ತು ಶ್ರೇಣಿ -3 ನಗರಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗವನ್ನು ಸೃಷ್ಟಿಸುವ ಕಾರ್ಯವನ್ನು ಮಾಡುತ್ತಿದೆ.

ಎಚ್‍ಎಚ್‍ಎಸ್‍ಐಎಫ್ ಕಾರ್ಯಕ್ರಮಗಳು

ಎಚ್‍ಎಚ್‍ಎಸ್‍ಐಎಫ್ ಕಾರ್ಯಕ್ರಮಗಳು

ಎಚ್‍ಎಚ್‍ಎಸ್‍ಐಎಫ್ ಕಾರ್ಯಕ್ರಮಗಳು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳು ಮತ್ತು ಸಂಬಂಧಿತ ರಾಷ್ಟ್ರೀಯ ನೀತಿಗಳ ಅಡಿಯಲ್ಲಿ ಜಾಗತಿಕ ಮತ್ತು ರಾಷ್ಟ್ರೀಯ ಆದ್ಯತೆಗಳಿಂದ ಪ್ರೇರಿತವಾಗಿವೆ. ಭಾರತ ಸರ್ಕಾರದ ಆರ್ಥಿಕ ಸಮೀಕ್ಷೆ 2020-21 ಸಾಂಕ್ರಾಮಿಕ ನಂತರದ ಅವಧಿಯಲ್ಲಿ "ಜೀವನ ಮತ್ತು ಜೀವನೋಪಾಯವನ್ನು ಉಳಿಸುವುದು" ಮೊದಲ ಆದ್ಯತೆಗಳಲ್ಲಿ ಒಂದಾಗಿದೆ ಎಂದು ಗುರುತಿಸಿದೆ. ಸರ್ಕಾರದ ನೀತಿಗಳು ಆರೋಗ್ಯ ಮೂಲಸೌಕರ್ಯಗಳನ್ನು ಸ್ಥಾಪಿಸುವ, ಸಮುದಾಯಗಳನ್ನು ಜಾಗೃತಗೊಳಿಸುವ ಮತ್ತು ಸಬಲೀಕರಣಗೊಳಿಸುವ ಮತ್ತು ಜೀವನೋಪಾಯವನ್ನು ಮರುಸ್ಥಾಪಿಸುವ ಅಗತ್ಯವನ್ನು ಪ್ರತಿಬಿಂಬಿಸುತ್ತವೆ. ಅಂತೆಯೇ, STEMನ ಕಾರ್ಯಕ್ರಮಗಳು ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ, ಲಿಂಗ ಸಮಾನತೆ, ನೈಸರ್ಗಿಕ ಸಂಪನ್ಮೂಲಗಳು ಮತ್ತು ಪರಿಸರ, ಸಮಗ್ರ ಗ್ರಾಮೀಣ ಅಭಿವೃದ್ಧಿ ಮತ್ತು ವಿಪತ್ತು ನಿರ್ವಹಣೆಯ ಮೇಲೆ ಕೇಂದ್ರೀಕರಿಸುತ್ತವೆ.

English summary
Honeywell (HHSIF) and ICT Academy Collaborate to develop 50 centres of Excellence For Skilling In India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X