Get Updates
Get notified of breaking news, exclusive insights, and must-see stories!

Fixed Deposit: ಈ 7 ಬ್ಯಾಂಕ್‌ಗಳಿಂದ ಫಿಕ್ಸೆಡ್ ಡೆಪಾಸಿಟ್‌ಗೆ ಹೆಚ್ಚಿನ ಬಡ್ಡಿ: ಇಲ್ಲಿದೆ ಬ್ಯಾಂಕ್‌ಗಳ ಪಟ್ಟಿ

ನಿಮ್ಮ ಬಳಿ ಇದ್ದು, ಆ ಹಣವನ್ನು ಮಾರುಕಟ್ಟೆಯಲ್ಲಿ ಹೂಡ ಬಯಸುತ್ತಿದ್ದಾರಾ? ಅಥವಾ ಸ್ಮಾಲ್‌ ಇನ್ವೆಸ್ಟಮೆಂಟ್‌ ಸ್ಕೀಮ್‌ನಲ್ಲಿ ಹೂಡಿಕೆ ಮಾಡಲು ಬಯಸಿದ್ದೀರಾ? ಹಾಗಿದ್ದರೆ, ನೀವು ಈ ಸುದ್ದಿಯನ್ನು ಓದಿ. ಯಾವುದೇ ಹೆಚ್ಚಿನ ರಿಸ್ಕ್‌ ಇಲ್ಲದೆ ನೀವು ನಿಮ್ಮ ಹಣವನ್ನು ಈ ಬ್ಯಾಂಕ್‌ಗಳಲ್ಲಿ ಇಟ್ಟು ಲಾಭ ಪಡೆಯಬಹುದಾಗಿದೆ.

ಮಾರುಕಟ್ಟೆಯಲ್ಲಿ ಹಣ ಹೂಡುವುದು ಕೊಂಚ ರಿಸ್ಕ್‌. ಆದರೆ ಹಲವು ಬ್ಯಾಂಕ್‌ಗಳು ತಮ್ಮ ಬ್ಯಾಂಕ್‌ಗಳಲ್ಲಿ ಫಿಕ್ಸ್‌ ಡಿಪಾಸಿಟ್‌ ಇಟ್ಟಲ್ಲಿ ಉತ್ತಮ ಹಣವನ್ನು ಗಳಿಸ ಬಹುದು ಎಂದು ತಿಳಿಸುತ್ತಿವೆ. ಹಿರಿಯ ನಾಗರಿಕರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸುವುದರ ಹೊರತಾಗಿ, 9.5% ವರೆಗೆ ಬಡ್ಡಿಯನ್ನು ನೀಡುವ ಅಂತಹ ಬ್ಯಾಂಕುಗಳೂ ಇವೆ. ಬ್ಯಾಂಕ್ ತನ್ನ ಗ್ರಾಹಕರಿಗೆ ಕನಿಷ್ಠ 2 ಕೋಟಿ ಎಫ್‌ಡಿಗಳಿಗೆ ಹೆಚ್ಚಿನ ಬಡ್ಡಿಯನ್ನು ನೀಡುತ್ತಿದೆ. ಹಿರಿಯ ನಾಗರಿಕರಿಗೆ ಶೇ.4.75ರಿಂದ ಶೇ.9.5ರಷ್ಟು ಬಡ್ಡಿ ನೀಡಲಾಗುತ್ತಿದೆ.

Highest interest on fixed deposit from these 7 banks Here is the list of banks

ಹೆಚ್‌ಡಿಎಫ್‌ಸಿ ಬ್ಯಾಂಕ್

HDFC ಬ್ಯಾಂಕ್ 4 ದಿನಗಳಿಂದ 14 ದಿನಗಳ ಠೇವಣಿಗಳ ಮೇಲೆ 4.75% ಬಡ್ಡಿಯ ಲಾಭವನ್ನು ನೀಡುತ್ತಿದೆ. ಆದರೆ, 390 ದಿನಗಳಿಂದ 15 ತಿಂಗಳವರೆಗಿನ ಠೇವಣಿಗಳ ಮೇಲೆ 7.25% ಬಡ್ಡಿಯನ್ನು ನೀಡಲಾಗುತ್ತಿದೆ.

ಹಿರಿಯ ನಾಗರಿಕರಿಗೆ ಡಿಸಿಬಿ ಬ್ಯಾಂಕ್ ವಿಶೇಷ ಬಡ್ಡಿ

ಡಿಸಿಬಿ ಬ್ಯಾಂಕ್ 7.85% ವರೆಗೆ ಬಡ್ಡಿಯನ್ನು ನೀಡುತ್ತಿದೆ. 12 ತಿಂಗಳು, 1 ದಿನ ಮತ್ತು 12 ತಿಂಗಳಿಂದ 10 ದಿನಗಳ FD ಗಳ ಮೇಲೆ 7.75% ರಿಂದ 7.85% ಬಡ್ಡಿ ನೀಡಲಾಗುತ್ತಿದೆ. ಇನ್ನು ಹಿರಿಯ ನಾಗರಿಕರು 8.25% ರಿಂದ 8.35% ಬಡ್ಡಿಯ ಲಾಭವನ್ನು ಪಡೆಯಲಿದ್ದಾರೆ.

Highest interest on fixed deposit from these 7 banks Here is the list of banks

ಫಿನ್‌ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್

ಫಿನ್‌ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ 750 ದಿನಗಳ ಠೇವಣಿಗಳ ಮೇಲೆ 9.21% ಬಡ್ಡಿಯನ್ನು ನೀಡುತ್ತಿದೆ. ಈ ಶೇಕಡಾವಾರು ಬಡ್ಡಿಯ ಲಾಭವನ್ನು ಹಿರಿಯ ನಾಗರಿಕರಿಗೆ ಸಹ ನೀಡಲಾಗುತ್ತಿದೆ.

ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್

ಯೂನಿಟಿ ಸ್ಮಾಲ್ ಫೈನಾನ್ಸ್ ಬ್ಯಾಂಕ್ 1001 ದಿನಗಳ ಫಿಕ್ಸ್‌ ಡಿಪಾಸಿಟ್‌ ಮೇಲೆ 9.5% ಬಡ್ಡಿಯನ್ನು ಬ್ಯಾಂಕ್‌ ನೀಡುತ್ತಿದೆ. ಹಿರಿಯ ನಾಗರಿಕರಿಗೆ ಈ ಪ್ರಯೋಜನವನ್ನು ನೀಡಲು ಬ್ಯಾಂಕ್‌ ಮುಂದಾಗಿದೆ.

ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್

ಬೇರೆ ಬ್ಯಾಂಕ್‌ಗಳು ನೀಡುವಂತೆ ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಸಹ ಗ್ರಾಹಕರನ್ನು ತನ್ನತ್ತ ಸೆಳೆಯಲು ಪ್ಲ್ಯಾನ್ ಮಾಡಿಕೊಂಡಿದೆ. ಈ ಬ್ಯಾಂಕ್‌ FD ಮೇಲೆ ಹೆಚ್ಚಿನ ಬಡ್ಡಿಯ ಲಾಭವನ್ನು ನೀಡುತ್ತಿದೆ. 444 ದಿನಗಳ ಎಫ್‌ಡಿಯಲ್ಲಿ ಹಿರಿಯ ನಾಗರಿಕರಿಗೆ 9% ಬಡ್ಡಿದರವನ್ನು ಒದಗಿಸಲು ಮುಂದಾಗಿದೆ.

ಉತ್ಕರ್ಷ್ ಸಣ್ಣ ಹಣಕಾಸು ಬ್ಯಾಂಕ್

ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ತನ್ನ ಗ್ರಾಹಕರಿಗೆ ಹೆಚ್ಚಿನ ಬಡ್ಡಿಯ ಲಾಭವನ್ನು ನೀಡುತ್ತಿದೆ. ಹಿರಿಯ ನಾಗರಿಕರು 2 ರಿಂದ 3 ವರ್ಷಗಳ ಫಿಕ್ಸ್‌ ಡಿಪಾಸಿಟ್‌ ಮೇಲೆ 9.1% ಬಡ್ಡಿದರವನ್ನು ಪಡೆಯುತ್ತಾರೆ.

ಕೋಟಕ್ ಮಹೀಂದ್ರಾ ಬಡ್ಡಿ ದರಗಳು

ಕೋಟಕ್ ಮಹೀಂದ್ರಾ 3 ವರ್ಷಗಳಿಂದ 4 ವರ್ಷಗಳಿಗಿಂತ ಕಡಿಮೆ ಅವಧಿಯ FD ಗಳ ಮೇಲೆ 6.50% ರಿಂದ 7% ಬಡ್ಡಿಯನ್ನು ನೀಡುತ್ತಿದೆ. ಬ್ಯಾಂಕ್ ಸಾಮಾನ್ಯ ನಾಗರಿಕರಿಗೆ 2.75% ರಿಂದ 7.25% ಮತ್ತು ಹಿರಿಯ ನಾಗರಿಕರಿಗೆ 3.25% ರಿಂದ 7.75% ವರೆಗೆ ಬಡ್ಡಿ ನೀಡಲು ಮುಂದಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+