ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಟಾಪ್ 5 ಐಟಿ ಕಂಪನಿಗಳಿಗೆ 50 ಸಾವಿರ ಕೋಟಿ ರು ನಷ್ಟ!

ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವೀಸಾ ನೀತಿ ಫಲವಾಗಿ ಮಂಗಳವಾರ ಭಾರತದ ಷೇರುಪೇಟೆಯಲ್ಲಿ ಐಟಿ ಷೇರುಗಳು ನೆಲಕಚ್ಚಿದ್ದು, ದೇಶದ ಪ್ರಮುಖ ಐದು ಐಟಿ ಕಂಪನಿಗಳಿಗೆ ಸರಿ ಸುಮಾರು 50, 000 ಕೋಟಿ ರು ಮಾರುಕಟ್ಟೆ ಮೌಲ್ಯ ಕಳೆದುಕೊಂಡಿವೆ.

By Mahesh
|
Google Oneindia Kannada News

ಬೆಂಗಳೂರು, ಜನವರಿ 31: ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವೀಸಾ ನೀತಿ ಫಲವಾಗಿ ಮಂಗಳವಾರ ಭಾರತದ ಷೇರುಪೇಟೆಯಲ್ಲಿ ಐಟಿ ಷೇರುಗಳು ನೆಲಕಚ್ಚಿದ್ದು, ದೇಶದ ಪ್ರಮುಖ ಐದು ಐಟಿ ಕಂಪನಿಗಳಿಗೆ ಸರಿ ಸುಮಾರು 50, 000 ಕೋಟಿ ರು ಮೌಲ್ಯದ ಮಾರುಕಟ್ಟೆ ಮೌಲ್ಯ ಕಳೆದುಕೊಂಡಿವೆ.

ಅಮೆರಿಕದ ಸಂಸತ್ತಿನಲ್ಲಿ (ಯುಎಸ್ ಹೌಸ್ ಆಫ್ ರೆಪ್ರಸೆಂಟೇಟಿವ್ಸ್) ಎಚ್-1ಬಿ ವೀಸಾದಾರರಿಗೆ ಕನಿಷ್ಠ ವೇತನವನ್ನು ದುಪ್ಪಟ್ಟಿಗಿಂತಲೂ ಹೆಚ್ಚು ಅಂದರೆ 60,000 ಡಾಲರ್​ನಿಂದ 1,30,000 ಡಾಲರ್​ಗಳಿಗೆ ಏರಿಸಲು ಕರೆ ನೀಡಿದ ಎಚ್-1ಬಿ ವೀಸಾ ಸುಧಾರಣಾ ಮಸೂದೆ ಮಂಡನೆಯಾಗಿದೆ.[ಎಚ್ 1 ಬಿ ಎಫೆಕ್ಟ್: ಇನ್ಫಿ,ವಿಪ್ರೋ, ಟಿಸಿಎಸ್ ಷೇರು ಕುಸಿತ]

 H-1B Visa Impact, Top 5 Indian IT Firms stocks slump Lose 50,000 Crores In Market Value

ಅಮೆರಿಕದ ಸಂಸತ್ತಿನಲ್ಲಿ ಎಚ್ 1 ಬಿ ವೀಸಾದಾರರ ಕನಿಷ್ಠ ವೇತನವನ್ನು ದುಪ್ಪಟ್ಟುಗೊಳಿಸುವ ಮಸೂದೆ ಅಂಗೀಕೃತವಾದರೆ ಭಾರತೀಯ ಐಟಿ ಕಂಪನಿಗಳು ಅಮೆರಿಕದಲ್ಲಿನ ತಮ್ಮ ಯೋಜನೆಗಳಿಗಾಗಿ ಕೆಲಸ ಮಾಡಲು ಎಚ್-1ಬಿ ವೀಸಾದಡಿಯಲ್ಲಿ ನೌಕರರನ್ನು ಪಡೆಯುವುದು ಕಷ್ಟವಾಗುತ್ತದೆ.

ಏಕೆಂದರೆ ಈ ವೇತನ ಮೊತ್ತ ಭಾರತೀಯ ಐಟಿ ರಂಗದ ರಫ್ತು ಆದಾಯದ ಶೇಕಡಾ 60ರಷ್ಟು ಆಗುತ್ತದೆ. ಎಚ್ 1-ಬಿ ವೀಸಾದಂತಹ ಹಲವಾರು ಯೋಜನೆಗಳ ಪರಿಷ್ಕರಣೆಗಾಗಿ ಎಕ್ಸಿಕ್ಯೂಟಿವ್ ಆದೇಶಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗಾಗಲೇ ಸಹಿ ಹಾಕಿದ್ದಾರೆ.

English summary
Indian IT companies crashed today, wiping out over Rs 50,000 crore in the market value of top companies, after a bill was introduced in the US House of Representatives calling for more than doubling the minimum salary of H-1B visa holders to $130,000, from the current $60,000.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X