ಇಂದಿನಿಂದಲೇ ಹೋಟೆಲ್ ಗಳಲ್ಲಿ ತೆರಿಗೆ ಇಳಿಕೆ, ಆದರೂ ಇದೆ ಗೊಂದಲ!

Posted By:
Subscribe to Oneindia Kannada

ನವೆಂಬರ್ 15ರಿಂದ ಏಸಿ, ಏಸಿರಹಿತ ಹೊಟೆಲ್ ಗಳಲ್ಲಿ ಸಹ ಜಿಎಸ್ ಟಿ ದರ ಶೇ 12 ಹಾಗೂ 18ರಷ್ಟು ಇದ್ದದ್ದನ್ನು ಶೇ 5ಕ್ಕೆ ಇಳಿಸಲಾಗಿದೆ ಎಂಬ ವಿಷಯ ನಿಮ್ಮ ಗಮನದಲ್ಲಿದೆ ತಾನೆ? ಯಾವುದಕ್ಕೂ ಹೋಟೆಲ್- ರೆಸ್ಟೋರೆಂಟ್ ಗಳಲ್ಲಿ ಬಿಲ್ ಪಡೆಯುವಾಗ ಒಮ್ಮೆ ಪರಿಶೀಲಿಸಿಕೊಳ್ಳಿ.

ಜಿಎಸ್ ಟಿ ಕಡಿಮೆಯಾದರೂ ಹೋಟೆಲ್ ತಿಂಡಿ-ಊಟ ದುಬಾರಿ, 10 ಅಂಶ

ಮಹಾರಾಷ್ಟ್ರದಲ್ಲಿ ಹೋಟೆಲ್ ಗ್ರಾಹಕರಿಗಾಗಿಯೇ ಹೆಲ್ಪ್ ಲೈನ್ ಆರಂಭಿಸಿದ್ದಾರೆ. ಅಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಗಿರೀಶ್ ಬಾಪಟ್ ಮಾತನಾಡಿ, ಜಿಎಸ್ ಟಿಯ ಬದಲಾದ ದರವನ್ನು ಅನ್ವಯಿಸದಿದ್ದರೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಮಧ್ಯರಾತ್ರಿಯಿಂದ 1,800 ಸಾಮಗ್ರಿಗಳ ಬೆಲೆಯಲ್ಲಿ ವ್ಯತ್ಯಾಸ

GST: Maharashtra government tells hoteliers to fall in line or face action

"ನಾವು ಗ್ರಾಹಕರಿಗಾಗಿ ಹೆಲ್ಪ್ ಲೈನ್ ಆರಂಭಿಸಿದ್ದೇವೆ. ಹೋಟೆಲ್ ಅಥವಾ ರೆಸ್ಟೋರೆಂಟ್ ಗಳಲ್ಲಿ ಶೇ 5ರಷ್ಟು ಮಾತ್ರ ತೆರಿಗೆ ವಿಧಿಸಬೇಕು. ಅದಕ್ಕಿಂತ ಹೆಚ್ಚು ದರ ವಿಧಿಸಿದರೆ ಅಂಥವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ" ಎಂದು ತಿಳಿಸಿದ್ದಾರೆ.

ಜಿಎಸ್ಟಿ ಇಳಿಕೆ: ಯಾವ ಯಾವ ಸಾಮಗ್ರಿ ಬೆಲೆ ಕಡಿಮೆ

ಒಂದು ವೇಳೆ ಹೆಚ್ಚಿನ ತೆರಿಗೆ ಹಾಕಿದರೆ ಹೆಲ್ಪ್ ಲೈನ್ ಸಂಖ್ಯೆ 1800225900 ಗೆ ಕರೆ ಮಾಡಿ, ದೂರು ನೀಡುವಂತೆ ಹೇಳಿದ್ದಾರೆ.

ಜಿಎಸ್ಟಿ ಸಭೆ: ಯಾವ ಯಾವ ವಸ್ತು ಮೇಲಿನ ತೆರಿಗೆ ಇಳಿಕೆ?

ಆದರೆ, ಈ ವಿಚಾರವಾಗಿ ಸಿಜಿಎಸ್ ಟಿ (ಕೇಂದ್ರದ ಪಾಲಿನ ತೆರಿಗೆ) ಹಾಗೂ ಎಸ್ ಜಿಎಸ್ ಟಿ (ರಾಜ್ಯದ ಪಾಲಿನ ತೆರಿಗೆ) ಯಾವ ಪ್ರಮಾಣದಲ್ಲಿ ವಿಧಿಸಬೇಕು ಎಂಬ ಬಗ್ಗೆ ಯಾವುದೇ ಸ್ಪಷ್ಟ ಸೂಚನೆ ಇಲ್ಲ ಎಂದು ಪುಣೆಯ ಹೋಟೆಲ್ ಹಾಗೂ ರೆಸ್ಟೋರೆಂಟ್ ಮಾಲೀಕರ ಒಕ್ಕೂಟದ ಅಧ್ಯಕ್ಷ ಗಣೇಶ್ ಶೆಟ್ಟಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Apart from setting up a helpline for consumers, minister for food, civil supplies and consumer protection Girish Bapat said on Tuesday that hoteliers will face action if they do not implement Goods and Services Tax (GST) slash rates on food items from existing 18% to 5 % from Wednesday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ