• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಧಿವೇಶನ ಸಂದರ್ಭದಲ್ಲೇ ಜಿಎಸ್ಟಿ ಸಭೆ, ನ್ಯಾಪ್ಕಿನ್ ಸೇರಿ 40 ವಸ್ತು ಬೆಲೆ ಇಳಿಕೆ?

By Mahesh
|

ನವದೆಹಲಿ, ಜುಲೈ 20: ಮುಂಗಾರು ಅಧಿವೇಶನದಲ್ಲಿ ಮಹತ್ವದ ಮಸೂದೆ ಮಂಡನೆ, ಅವಿಶ್ವಾಸ ನಿರ್ಣಯ ಎದುರಿಸುತ್ತಿರುವ ಕೇಂದ್ರ ಸರ್ಕಾರವು, ದೇಶಾ ಜನತೆಗೆ ಶನಿವಾರದ ಬಳಿಕ ಕೊಂಚ ನೆಮ್ಮದಿಯ ಸುದ್ದಿ ನೀಡುವ ಸಾಧ್ಯತೆ ಹೆಚ್ಚಿದೆ.

ಶನಿವಾರ(ಜುಲೈ 21)ದಂದು ದೆಹಲಿಯಲ್ಲಿ ನಡೆಯಲಿರುವ ಜಿಎಸ್​ಟಿ ಮಂಡಳಿ ಸಭೆ ಸೇರಲಿದೆ. ನ್ಯಾಪ್ಕಿನ್, ಕೈಮಗ್ಗ, ಕರಕುಶಲ ಉತ್ಪನ್ನ ಸೇರಿದಂತೆ 40ಕ್ಕೂ ಅಧಿಕ ಸರಕು, ಸೇವೆಗಳ ತೆರಿಗೆ ಹೊರೆ ಇಳಿಸುವ ಸಾಧ್ಯತೆ ಕಂಡು ಬಂದಿದೆ.

ಜಿಎಸ್​ಟಿ ಜಾರಿಯಾಗಿ ಒಂದು ವರ್ಷವಾಗಿದ್ದು, ಇಲ್ಲಿ ತನಕ 328 ಸರಕು, ಸೇವೆಗಳ ಮೇಲಿನ ತೆರಿಗೆ ಇಳಿಸಲಾಗಿದೆ. ಇದೀಗ ಜಿಎಸ್​ಟಿಯ ವಿವಿಧ ಸ್ತರದಲ್ಲಿರುವ, ಜನಸಾಮಾನ್ಯರ ಅಧಿಕ ಬಳಕೆಯ 40ಕ್ಕೂ ಅಧಿಕ ಉತ್ಪನ್ನಗಳ ತೆರಿಗೆ ಪ್ರಮಾಣ ಕಡಿಮೆ ಮಾಡುವ ಪ್ರಸ್ತಾವನೆ ಮಂಡಳಿ ಮುಂದಿದೆ.

40 ಉತ್ಪನ್ನಗಳ ತೆರಿಗೆ ಇಳಿಕೆಯಿಂದ ರಾಜ್ಯಗಳ ತೆರಿಗೆ ಸಂಗ್ರಹದ ಮೇಲೆ ಯಾವುದೇ ದೊಡ್ಡ ಪರಿಣಾಮ ಉಂಟಾಗದೆಂಬುದು ಕೇಂದ್ರ ಸರ್ಕಾರದ ವಾದ. ಆದರೆ ಶೇ.28ರ ತೆರಿಗೆ ಸ್ತರದಲ್ಲಿನ ಉತ್ಪನ್ನಗಳ ಮೇಲಿನ ತೆರಿಗೆ ಸದ್ಯಕ್ಕೆ ಇಳಿಕೆಯಾಗುವ ಸಾಧ್ಯತೆಯಿಲ್ಲ. ರಾಜ್ಯ ಸರ್ಕಾರಗಳೊಂದಿಗೆ ಪ್ರತ್ಯೇಕ ಚರ್ಚೆ ನಡೆಸಿ ಈ ಬಗ್ಗೆ ನಿರ್ಧಾರವಾಗಲಿದೆ. ಚಿನ್ನ , ವಜ್ರದ ಮೇಲಿನ ಶೇ.3ರ ತೆರಿಗೆ ಹೊರತುಪಡಿಸಿ ದೇಶದಲ್ಲಿ ಸದ್ಯಕ್ಕೆ ಶೇ.5, 12, 18 ಹಾಗೂ 28ರ ತೆರಿಗೆ ಸ್ತರವಿದೆ. ಶೇ.28ರ ಪಟ್ಟಿಯಲ್ಲಿ 49 ಉತ್ಪನ್ನ ಹಾಗೂ ಸೇವೆಗಳಿವೆ.

ಯಾವ ವಸ್ತುಗಳ ಮೇಲೆ ತೆರಿಗೆ ಇಲ್ಲ

ಯಾವ ವಸ್ತುಗಳ ಮೇಲೆ ತೆರಿಗೆ ಇಲ್ಲ

ಲಕೋಟೆಯಲ್ಲಿ ಪ್ಯಾಕ್ ಮಾಡದ ಆಹಾರ ಧಾನ್ಯಗಳು, ಹಾಲು, ಮೊಟ್ಟೆ, ಮೊಸರು, ಲಸ್ಸಿ, ಪನ್ನೀರ್, ಬ್ರಾಂಡ್ ಅಲ್ಲದ ನೈಸರ್ಗಿಕ ಜೇನು ತುಪ್ಪ, ತರಕಾರಿ, ಪ್ಯಾಕ್ ಮಾಡದ ಗೋಧಿ, ಮೈದಾ, ಕಡಲೆ ಹಿಟ್ಟು, ಉಪ್ಪು, ಗರ್ಭನಿರೋಧಕಗಳು, ಕಚ್ಛಾ ಸೆಣಬು, ಕಚ್ಛಾ ರೇಷ್ಮೆ ಜಿಎಸ್ಟಿಯಿಂದ ಮುಕ್ತವಾಗಿವೆ. ಇನ್ನು ಶಿಕ್ಷಣ ಮತ್ತು ಆರೋಗ್ಯ ವಲಯವನ್ನು ಜಿಎಸ್ಟಿಯಿಂದ ಹೊರಗಿಡಲಾಗಿದೆ. ಎರಡೂ ಸೇವೆಗಳ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ

ಕೃಷಿ ಮೇಲೆ ಸೆಸ್

ಕೃಷಿ ಮೇಲೆ ಸೆಸ್

ಕೃಷಿ ಬಜೆಟ್ ಪ್ರಮಾಣ ಏರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ ಶೇ.1 ಕೃಷಿ ಸೆಸ್ ಹಾಕುವ ಬಗ್ಗೆ ಚಿಂತನೆ ಮಾಡಿದೆ. ಇದರ ಜತೆಗೆ ಬಹು ನಿರೀಕ್ಷಿತ ಡಿಜಿಟಲ್ ವ್ಯವಹಾರಗಳಿಗೆ ಉತ್ತೇಜನ ನೀಡುವ ಅಂಶದ ಪ್ರಸ್ತಾವನೆ ಕೂಡ ಮಂಡಳಿ ಮುಂದಿದೆ. ಇದಾದ ಬಳಿಕ ರಾಜ್ಯ ಸರ್ಕಾರಗಳು ಕೂಡಾ ಅಗತ್ಯಕ್ಕೆ ತಕ್ಕಂತೆ ಸೆಸ್ ಹೇರಬಹುದಾಗಿದೆ.

ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲಿಯಂ ಇಲ್ಲ

ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲಿಯಂ ಇಲ್ಲ

ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲಿಯಂ ಉತ್ಪನ್ನಗಳನ್ನು ತರುವುದರಿಂದ ಪೆಟ್ರೋಲ್ ಮೇಲಿನ ಬೆಲೆ ನಿಯಂತ್ರಣ ಸಾಧ್ಯವಿದ್ದು, ಪ್ರತಿ ಲೀಟರ್ ಪೆಟ್ರೋಲ್ ಬೆಲೆ 38ರು ಆಗಲಿದೆ ಎಂಬ ಎಣಿಕೆಯಿದೆ. ಆದರೆ, ಪೆಟ್ರೋಲ್-ಡಿಸೇಲ್ ಮೇಲೆ ಸಂಪೂರ್ಣ ಜಿಎಸ್ಟಿ ಪ್ರಪಂಚದಲ್ಲಿ ಎಲ್ಲೂ ಜಾರಿಗೆ ಬಂದಿಲ್ಲ. ಭಾರತದಲ್ಲೂ ಜಿಎಸ್ಟಿ ಜೊತೆ ಆಯಾ ರಾಜ್ಯಗಳ ಸೆಸ್ ಹಾಗೂ ಇನ್ನಿತರ ತೆರಿಗೆಗಳ ಸಮ್ಮಿಶ್ರದೊಂದಿಗೆ ಜಾರಿಗೊಳಿಸಬೇಕಾಗುತ್ತದೆ. ಈ ಬಗ್ಗೆ ಆಯಾ ರಾಜ್ಯಗಳ ಜತೆ ಮಾತುಕತೆ ನಡೆಸಬೇಕಿದ್ದು, ಸದ್ಯಕ್ಕೆ ಜಿಎಸ್ಟಿ ವ್ಯಾಪ್ತಿಗೆ ಇಂಧನ ಉತ್ಪನ್ನಗಳು ಸೇರುತ್ತಿಲ್ಲ

ಶೇ 28ರ ಸ್ಲ್ಯಾಬಿನ ವಸ್ತುಗಳ ತೆರಿಗೆ ಇಳಿಕೆ ಇಲ್ಲ

ಶೇ 28ರ ಸ್ಲ್ಯಾಬಿನ ವಸ್ತುಗಳ ತೆರಿಗೆ ಇಳಿಕೆ ಇಲ್ಲ

ಶೇ28ರ ಸ್ಲ್ಯಾಬ್ ನಲ್ಲಿ ಭಾರಿ ಬದಲಾವಣೆ ಅಗತ್ಯ. ಸಿಮೆಂಟ್, ಚ್ಯೂಯಿಂಗ್ ಗಂ, ಸುಗಂಧ ದ್ರವ್ಯಗಳು, ಶ್ಯಾಂಪೂ, ಸೌಂದರ್ಯ ವರ್ಧಕಗಳು, ಪಟಾಕಿ ಮತ್ತು ಬೈಕ್ ಗಳು ಶೇಕಡಾ 28 ತೆರಿಗೆಗೆ ಒಳಪಟ್ಟಿವೆ. ಶೇ.28ರ ಪಟ್ಟಿಯಲ್ಲಿ 49 ಉತ್ಪನ್ನ ಹಾಗೂ ಸೇವೆಗಳಿವೆ. ಈ ವಸ್ತುಗಳ ಮೇಲಿನ ತೆರಿಗೆ ಇಳಿಕೆ ಸದ್ಯಕ್ಕೆ ಸಾಧ್ಯವಿಲ್ಲ. ತೆರಿಗೆ ದರದಲ್ಲಿ ಭಾರಿ ಕಡಿತ, ಸಬ್ಸಿಡಿ ನಿರೀಕ್ಷೆ ಇತ್ತು. ಈ ಸಭೆಯಲ್ಲಿ ಶೇ 28ರ ಸ್ಲ್ಯಾಬ್ ವಸ್ತುಗಳ ಮೇಲಿನ ತೆರಿಗೆ ತಗ್ಗಿಸುವ ಯಾವುದೇ ಪ್ರಸ್ತಾವನೆ ಇಲ್ಲ.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Tax rates on 30-40 items across various slabs may be cut, with the GST Council set to approve wide-ranging changes in laws to further simplify the indirect tax system in its next meeting on Saturday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more