• search

ರೆಸ್ಟೋರೆಂಟ್ ಗಳಲ್ಲಿ ಬೆಲೆ ಇಳಿಕೆ, ಇಡ್ಲಿ, ಕಾಫಿ ಬೆಲೆ ಎಷ್ಟು?

By Mahesh
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ನವೆಂಬರ್ 15: ಹಣಕಾಸು ಸಚಿವ ಅರುಣ್‌ ಜೈಟ್ಲಿ ನೇತೃತ್ವದಲ್ಲಿ ನಡೆದ 23ನೇ ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ಕೈಗೊಂಡ ನಿರ್ಣಯ ನವೆಂಬರ್ 15ರ ಮಧ್ಯರಾತಿಯಿಂದ ಜಾರಿಗೆ ಬರಲಿದೆ. ಪ್ರಮುಖವಾಗಿ ಎಲ್ಲಾ ರೆಸ್ಟೋರೆಂಟ್ ಮೇಲಿನ ಜಿಎಸ್ ಟಿಯನ್ನು ಶೇ5ಕ್ಕೆ ಮಿತಿಗೊಳಿಸಲಾಗಿದೆ.

  ಎಲ್ಲಾ ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳಿನ ಜಿಎಸ್ಟಿಯನ್ನು ಶೇ5ಕ್ಕೆ ಸೀಮಿತ ಮಾಡಲಾಗಿದ್ದು, ಹವಾ ನಿಯಂತ್ರಿತ (ಎಸಿ) ಹಾಗೂ ನಾನ್ ಎಸಿ ರೆಸ್ಟೋರೆಂಟ್ ಗಳೆರಡಕ್ಕೂ ಅನ್ವಯವಾಗುತ್ತದೆ. ಆದರೆ, ಪಂಚತಾರಾ ಹೋಟೆಲ್ ಗಳಿಗೆ ಅನ್ವಯವಾಗುವುದಿಲ್ಲ.

  ಜಿಎಸ್ಟಿ ಇಳಿಕೆ: ಯಾವ ಯಾವ ಸಾಮಗ್ರಿ ಬೆಲೆ ಕಡಿಮೆ

  ಆದರೆ, Input Tax Credit ಲಾಭವಿಲ್ಲದ ಕಾರಣ, ದೇಶದ ಹಲವಾರು ರೆಸ್ಟೋರೆಂಟ್ ಮಾಲೀಕರು ಜಿಎಸ್ಟಿ ತಗ್ಗಿಸಿದರೂ ತಿಂಡಿ ಬೆಲೆ ಏರಿಕೆ ಮಾಡಲು ಮುಂದಾಗಿದ್ದಾರೆ.

  ಗ್ರಾಹಕರೇ ಗಮನಿಸಿ! 177 ವಸ್ತುಗಳ ಮೇಲಿನ ಜಿಎಸ್ಟಿ ಇಳಿಕೆ

  ಹೀಗಾಗಿ, ಗ್ರಾಹಕರ ಜೇಬಿಗೆ ಮತ್ತೆ ಕತ್ತರಿ ಬಿದ್ದರೂ ಅಚ್ಚರಿ ಪಡಬೇಕಾಗಿಲ್ಲ. ಆದರೆ, ಬೆಂಗಳೂರಿನ ಹೋಟೆಲ್ ಮಾಲೀಕರ ಸಂಘವು ಈ ಜಿಎಸ್ಟಿ ಬದಲಾವಣೆಯನ್ನು ಸ್ವಾಗತಿಸಿದ್ದು, ಇಂದಿನಿಂದ ದರ ತಗ್ಗಿಸುವುದಾಗಿ ಹೇಳಿದೆ.

  ಬದಲಾದ ಹೋಟೆಲ್ ಜಿಎಸ್ಟಿ

  ಬದಲಾದ ಹೋಟೆಲ್ ಜಿಎಸ್ಟಿ

  ಇಂದಿನಿಂದ ಬದಲಾದ ಹೋಟೆಲ್ ಜಿಎಸ್ಟಿ

  ಇಲ್ಲಿಯವರೆಗೆ 18% ಇದ್ದ ಜಿಎಸ್ಟಿ ಇಂದಿನಿಂದ 5% ಆಗಿ ಬದಲಾಗುವುದರಿಂದ ತಿಂಡಿ ತಿನಿಸುಗಳ

  ಬೆಲೆ ಕಡಿಮೆ ಆಗಿದೆ. ಇದರಿಂದ ಸಹಜವಾಗಿ ತಿಂಡಿ ಪ್ರಿಯರಿಗೆ ಖುಷಿಯಾಗಿದೆ.


  ಹಿಂದಿನ ಮತ್ತು ಈಗಿನ ಬೆಲೆಗಳ ಪಟ್ಟಿ

  (ರುಪಾಯಿ ಗಳಲ್ಲಿ)

  * ಕಾಫಿ 44 ಹೊಸ ದರ 39

  * ಸಿಂಗಲ್ ಇಡ್ಲಿ 34 ಹೊಸ ದರ 30

  * ಮಸಾಲೆ ದೋಸೆ 86 ಹೊಸ ದರ 76

  * ವಡೆ 44 ಹೊಸ ದರ 41

  * ಬಿಸಿಬೇಳೆಬಾತ್ 80 ಹೊಸ ದರ 71

  ಕೆಟರಿಂಗ್ ಸರ್ವೀಸ್ ಮೇಲೆ ತೆರಿಗೆ

  ಕೆಟರಿಂಗ್ ಸರ್ವೀಸ್ ಮೇಲೆ ತೆರಿಗೆ

  ಶೇ 5 ರಷ್ಟು ತೆರಿಗೆ ಮಿತಿ ಸ್ಲ್ಯಾಬ್ ನಲ್ಲಿ ಪ್ರತಿ ದಿನಕ್ಕೆ 7,500 ರು ಗೂ ಅಧಿಕ ಶುಲ್ಕ ವಿಧಿಸುವ ಹೋಟೆಲ್ ರೂಮ್ ಗಳಿಗೆ ಶೇ 18ರಷ್ಟು ತೆರಿಗೆ ಮುಂದುವರೆಯಲಿದೆ. ಜತೆಗೆ ಹೊರಾಂಗಣ ಕೆಟರಿಂಗ್ ಸರ್ವೀಸ್ ಮೇಲೂ ಶೇ 18ರಷ್ಟು ತೆರಿಗೆ ವಿಧಿಸಲಾಗಿದೆ.

  ಆದರೆ, ರೆಸ್ಟೋರೆಂಟ್ ಗಳಿಗೆ Input Tax Credit ಲಾಭವನ್ನು ಸರ್ಕಾರ ನೀಡುತ್ತಿಲ್ಲ. ರೆಸ್ಟೋರೆಂಟ್ ಗಳಿಂದ ಗ್ರಾಹಕರಿಗೆ ಹೊರೆಯಾಗುವುದನ್ನು ಮಾತ್ರ ತಪ್ಪಿಸುತ್ತಿದೆ.

  ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರ ಪ್ರತಿಕ್ರಿಯೆ

  ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರ ಪ್ರತಿಕ್ರಿಯೆ

  ನಮ್ಮ ಮನವಿಯನ್ನು ಮೋದಿ ಸರ್ಕಾರ ಆಲಿಸಿದಕ್ಕೆ ಖುಷಿ ಪಟ್ಟು ಜನರಿಗೆ ನಾವು ಕೊಡೋ ಉಡುಗೊರೆ ಎಂದು ಹೋಟೆಲ್ ಮಾಲೀಕರ ಸಂಘ ದ ಅಧ್ಯಕ್ಷ ಚಂದ್ರ ಶೇಖರ್ ಹೆಬ್ಬಾರ್ ಹೇಳಿದ್ದಾರೆ.

  ಜಿಎಸ್ ಟಿ ಮಾತ್ರ ವಲ್ಲದೆ ಮುಖ್ಯ ಮೆನುವಿನಲ್ಲಿ ಇಡ್ಲಿ, ದೋಸೆ, ಸೇರಿದಂತೆ ನಾನಾ ತಿಂಡಿ ಗಳಿಗೆ ಎರಡರಿಂದ ಮೂರು ರೂ ಇಳಿಕೆ ಮಾಡಲಾಗಿದೆ

  ಎಲ್ಲ ಹೋಟೆಲ್ ಗೂ ಬೆಂಗಳೂರು ಹೋಟೆಲ್ ಸಂಘ ಮೆನುವಿನಲ್ಲಿ ದರ ಇಳಿಕೆ ಮಾಡುವಂತೆ ಸೂಚನೆ ನೀಡಿದೆ

  ಶೇ 18ರ ತೆರಿಗೆ ಯಾವ ಹೋಟೆಲ್ ಗೆ ಅನ್ವಯ

  ಶೇ 18ರ ತೆರಿಗೆ ಯಾವ ಹೋಟೆಲ್ ಗೆ ಅನ್ವಯ

  ಪಂಚತಾರಾ ಹೋಟೆಲ್, ಅತಿಥಿ ಗೃಹಗಳು, ಕ್ಲಬ್ ಗಳಲ್ಲಿನ ಊಟ, ವಸತಿ ಉದ್ದೇಶದ ಕ್ಯಾಂಪ್ ಗಳು, ಕನ್ವೆನ್ಷನ್ ಸೆಂಟರ್, ತಾತ್ಕಾಲಿಕ ವ್ಯವಸ್ಥೆಗಳು (ರೂಮೊಂದಕ್ಕೆ ಪ್ರತಿ ದಿನಕ್ಕೆ ರೂ. 7500ಕ್ಕಿಂತ ಹೆಚ್ಚು).

  ರೂಮ್ ಬಾಡಿಗೆ ದರ 1000ರೂ-2500 ಪ್ರತಿ ರೂಮ್/ದಿನಕ್ಕೆ ಇರುವ ಹೋಟೆಲ್ ಗಳ ಮೇಲೆ ಶೇ 12ರಷ್ಟು ಜಿಎಸ್ಟಿ ಜಾರಿಯಲ್ಲಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  GST for all Restuarants fixed at 5 percent Foodies Happy but several restaurant owners are not convinced that a lower tax will make up for their loss of input tax.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more