ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುಧವಾರದಿಂದ ಗ್ರೇಟ್ ಆನ್‌ಲೈನ್ ಶಾಪಿಂಗ್ ಫೆಸ್ಟಿವಲ್

|
Google Oneindia Kannada News

ಬೆಂಗಳೂರು, ಡಿ.9 : ಆನ್‌ಲೈನ್ ಶಾಪಿಂಗ್ ಮಾಡಲು ಬಯಸುತ್ತಿರುವ ಜನರಿಗೆ ಮತ್ತೊಂದು ಅವಕಾಶ ಬಂದಿದೆ. ಗೂಗಲ್ ಆಯೋಜಿಸುವ 'ಗ್ರೇಟ್ ಆನ್‌ಲೈನ್ ಶಾಪಿಂಗ್ ಫೆಸ್ಟಿವಲ್-2014'ಗೆ ಬುಧವಾರ ಚಾಲನೆ ದೊರೆಯಲಿದೆ.

450 ವಿವಿಧ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿರುವ ಗೂಗಲ್ 2012ರಿಂದ ಗ್ರೇಟ್ ಆನ್‌ಲೈನ್ ಶಾಪಿಂಗ್ ಫೆಸ್ಟಿವಲ್ ಆಯೋಜನೆ ಮಾಡುತ್ತಿದೆ. 2014ರ ಫೆಸ್ಟಿವಲ್‌ಗೆ ಬುಧವಾರ ಚಾಲನೆ ದೊರೆಯಲಿದ್ದು, ಶುಕ್ರವಾರ ಅಂತ್ಯಗೊಳ್ಳಲಿದೆ.

Shopping

ಕೆಲವು ದಿನಗಳ ಹಿಂದೆ ಫ್ಲಿಪ್‌ಕಾರ್ಟ್, ಅಮೇಝಾನ್ ನಡೆಸಿದ ಆನ್‌ಲೈನ್ ಶಾಪಿಂಗ್ ಹಬ್ಬದಲ್ಲಿ ಲಕ್ಷಾಂತರ ಜನರು ಭಾಗವಹಿಸಿದ್ದರು. ಇದರಲ್ಲಿ ಲಕ್ಷಾಂತರ ಜನರು ಪಾಲ್ಗೊಂಡಿದ್ದರು. ಈಗ ಮತ್ತೊಮ್ಮೆ ಶಾಪಿಂಗ್ ಮಾಡಲು ಅವಕಾಶ ದೊರೆತಿದೆ. [ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ]

ಹಲವಾರು ಕಂಪನಿಗಳ ಉತ್ಪನ್ನಗಳನ್ನು ಒಂದು ಕಡೆ ಖರೀದಿ ಮಾಡಲು ಶಾಪಿಂಗ್ ಫೆಸ್ಟಿವಲ್ ಅವಕಾಶ ನೀಡಲಿದೆ. ಇಷ್ಟು ವರ್ಷಗಳಿಗಿಂತ ಹೆಚ್ಚಿನ ಗ್ರಾಹಕರು ಈ ಬಾರಿ ಫೆಸ್ಟಿವಲ್‌ನಲ್ಲಿ ಪಾಲ್ಗೊಳ್ಳಬಹುದೆಂದು ನಿರೀಕ್ಷಿಸಲಾಗಿದೆ.

ಅಂದಹಾಗೆ 2013ರ ಶಾಪಿಂಗ್ ಫೆಸ್ಟಿವಲ್‌ನಲ್ಲಿ ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 8 ಗಂಟೆಯ ತನಕ ಹೆಚ್ಚು ಜನರು ಶಾಪಿಂಗ್ ಮಾಡಿದ್ದರು. 18 ರಿಂದ 34 ವರ್ಷದ ವಯೋಮಿತಿಯ ಜನರು ಹೆಚ್ಚಾಗಿ ಶಾಪಿಂಗ್ ಮಾಡಿದ್ದರು.

English summary
Great Online Shopping Festival-2014 (GOSF) slated to begin on Wednesday, online retailers will get another opportunity to push sales. The GOSF one of the biggest ventures of Google, started in 2012.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X