ಪಿಎಫ್ ವಿಥ್ ಡ್ರಾ ಮಾಡಿದರೆ ಟಿಡಿಎಸ್ ಕಟ್ಟಬೇಕಾಗಿಲ್ಲ!

Written By:
Subscribe to Oneindia Kannada

ನವದೆಹಲಿ, ಮೇ. 31: ಉದ್ಯೋಗಿಗಳಿಗೆ, ಕಾರ್ಮಿಕರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. 50 ಸಾವಿರ ರು. ವರೆಗೆ ಪಿಎಫ್ ವಿಥ್ ಡ್ರಾ ಮಾಡಿದರೆ ನೀವು ಟಿಡಿಎಸ್ ಕಟ್ಟಬೇಕಾಗಿಲ್ಲ. ಹೊಸ ನೀತಿ ಜೂನ್ 1ರಿಂದಲೇ ಅನ್ವಯವಾಗಲಿದೆ.

ಎಂಪ್ಲಾಯ್ ಪ್ರಾವಿಡೆಂಟ್ ಫಂಡ್ ನೀತಿಯಲ್ಲಿ ಮಾಡಿರುವ ಬದಲಾವಣೆ ಮಧ್ಯಮ ವರ್ಗದವರಿಗೆ ನೆರವಾಗುವುದರಲ್ಲಿ ಅನುಮಾನವಿಲ್ಲ. ಈ ಮೊದಲು 30 ಸಾವಿರ ರು. ಗೆ ಇದ್ದ ವಿನಾಯಿತಿಯನ್ನು ಈಗ 50 ಸಾವಿರ ರು. ಗೆ ಏರಿಕೆ ಮಾಡಲಾಗಿದೆ. 1962ರ ಹಣಕಾಸು ಕಾನೂನು 192 ಎ ಗೆ ಮಾಡಿರುವ ತಿದ್ದುಪಡಿ ಹೊಸ ನೀತಿ ಜಾರಿಗೆ ಕಾರಣವಾಗುತ್ತಿದೆ.[ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ಆಗಸ್ಟ್ 31 ಡೆಡ್‌ಲೈನ್]

provident fund

ಯಾಕೆ ಹೊಸ ನೀತಿ: ದೀರ್ಘಾವಧಿ ಹೂಡಿಕೆ ಪ್ರೋತ್ಸಾಹ ಮಾಡಲು ಸರ್ಕಾರ ಈ ನೀತಿಗೆ ಮುಂದಾಗಿದೆ. 50 ಸಾವಿರಕ್ಕೆ ಮಿತಿ ಏರಿಕೆ ಮಾಡಿರುವುದರಿಂದ ಅವಧಿಗೂ ಮುನ್ನವೇ ಹಣ ಡ್ರಾ ಮಾಡುವವರ ಸಂಖ್ಯೆ ಕಡಿಮೆಯಾಗಲಿದ್ದು ದೇಶದ ಸಂಪನ್ಮೂಲ ಕ್ರೋಢಿಕರಣಕ್ಕೆ ಕಾರಣವಾಗಲಿದೆ.

ಪಾನ್ ಕಾರ್ಡ್ ನೀಡಿದರೆ ಶೇ. 10 ನ್ನು ಕಡಿತ ಮಾಡಿಕೊಳ್ಳಲಾಗುತ್ತಿತ್ತು. ಆದರೆ 15 ಜಿ ಮತ್ತು 15 ಎಚ್ ಸಲ್ಲಿಕೆ ಮಾಡಿದರೆ ಯಾವ ಕಡಿತವನ್ನು ಮಾಡಿಕೊಳ್ಳಲಾಗುತ್ತಿರಲಿಲ್ಲ. ಈಗಲೂ ಸಹ ಇದೇ ನೀತಿ ಮುಂದುವರಿಯಲಿದ್ದು ವಿಥ್ ಡ್ರಾ ಮಿತಿ ಮಾತ್ರ ಏರಿಕೆ ಕಂಡಿದೆ.[ಆನ್ ಲೈನ್ ಮೂಲಕ ಆಧಾರ್ ಕಾರ್ಡ್ ಡೌನ್ ಲೋಡ್ ಹೇಗೆ?]

60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು 15 ಜಿ ಸಲ್ಲಿಕೆ ಮಾಡಬೇಕು, 60 ವರ್ಷಕ್ಕಿಂತ ಕೆಳಗಿನವರು 15 ಎಚ್ ಸಲ್ಲಿಕೆ ಮಾಡಬೇಕು ಎಂದು ತಿಳಿಸಲಾಗಿದೆ. ವಿಥ್ ಡ್ರಾ 50 ಸಾವಿರ ರು. ಮೀರಿದ್ದರೆ ಶೇ. 34.608ಕ್ಕಿಂತ ಅಧಿಕ ಟಿಡಿಎಸ್ ಮುರಿದುಕೊಳ್ಳುವಂತಿಲ್ಲ ಎಂದು ತಿಳಿಸಲಾಗಿದೆ.[ಕಾರ್ಮಿಕರ ಮೇಲೆ ಲಾಠಿ ಬೀಸಿದ್ದ ಬೆಂಗಳೂರು ಪೊಲೀಸರು]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The government has decided not to deduct tax at source for PF withdrawals of up to Rs 50,000 from June 1. The decison has come as major relief to subscribers of retirement fund body EPFO.The government has notified raising the threshold limit of PF withdrawal for deduction of tax (TDS) from existing Rs 30,000 to Rs 50,000, a senior official told PTI.
Please Wait while comments are loading...