Gold-Silver Rate: ಚಿನ್ನಾಭರಣ ಪ್ರಿಯರಿಗೆ ಸಿಹಿ ಸುದ್ದಿ: ವರ್ಷಾಂತ್ಯಕ್ಕೆ ಚಿನ್ನ-ಬೆಳ್ಳಿ ದರದಲ್ಲಿ ಇಳಿಕೆ

ಬೆಂಗಳೂರು, ಡಿಸೆಂಬರ್ 28: ಭಾರತದ ದೇಶಿಯ ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ಏರಿಳಿತ ಮುಂದುವರಿದಿದೆ. ಜನರು ಚಿನ್ನದ ಬೆಲೆ ಎಷ್ಟೇ ಏರಿದರೂ ಕೊಳ್ಳುವುದನ್ನು ಬಿಡುತ್ತಿಲ್ಲ. ವರ್ಷಾಂತ್ಯಕ್ಕೆ ಚಿನ್ನದ ಬೆಲೆಯಲ್ಲಿ ಇಳಿಕೆ ಆಗಿದ್ದು, ಬೆಳ್ಳಿ ದರದಲ್ಲೂ ಕೊಂಚ ಇಳಿಕೆ ಕಂಡಿದೆ. ಈ ಮೂಲಕ ಚಿನ್ನಾಭರಣ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಈ ಇಳಿಕೆಯ ಬೆಲೆಯೇ ಜನವರಿವರೆಗೂ ಮುಂದುವರಿಯಲಿದೆ ಎಂದು ಅಂದಾಜಿಸಲಾಗಿದೆ.

ಬೆಂಗಳೂರಿನಲ್ಲಿ ಇಂದು (ಡಿಸೆಂಬರ್ 28) ಚಿನ್ನದ ಬೆಲೆ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನಕ್ಕೆ 7,135 ರೂಪಾಯಿ ಇದೆ. ಇನ್ನೂ 24 ಕ್ಯಾರಟ್ ಚಿನ್ನಕ್ಕೆ 7,784 ರೂಪಾಯಿ ಇದೆ. ವಾಸ್ತವದಲ್ಲಿ ಇತ್ತೀಚಿನ ಮಾರುಕಟ್ಟೆಯಲ್ಲಿ ಚಿನ್ನಕ್ಕೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ವರ್ಷಾಂತ್ಯದವರೆಗೂ ಚಿನ್ನ ಖರೀದಿಯಲ್ಲಿ ಗ್ರಾಹಕರು ನಿರತರಾಗಿದ್ದಾರೆ. ಹೀಗಾಗಿ ಆಗಾಗ ಚಿನ್ನದ ಬೆಲೆಯಲ್ಲಿ ಏರಿಕೆ ಆಗುತ್ತಲೇ ಇತ್ತು. ಕೆಲವು ವಾರಗಳ ಹಿಂದೆ ಅತೀ ಗರಿಷ್ಠ ಪ್ರಮಾಣದಲ್ಲಿ ಹೆಚ್ಚಾಗಿತ್ತು.

Gold Silver Rate Reduce on December 28th Know Today Gold price here

ಇಂದು ಚಿನ್ನದ ಬೆಲೆ ಪ್ರತಿ ಗ್ರಾಂಗೆ 22 ಕ್ಯಾರೆಟ್ ಚಿನ್ನಕ್ಕೆ 15 ರೂಪಾಯಿ ಇಳಿಕೆ ಆಗಿದೆ. ಇನ್ನೂ 24 ಕ್ಯಾರಟ್ ಚಿನ್ನಕ್ಕೆ 16 ರೂಪಾಯಿ ಕುಸಿತ ಕಂಡಿದೆ.

24 ಕ್ಯಾರಟ್ 10 ಗ್ರಾಂ ಬಂಗಾರಕ್ಕೆ 77840 ರೂಪಾಯಿ ಇದ್ದು, ನೆನ್ನೆ ಶುಕ್ರವಾರ 78000 ರೂಪಾಯಿ ಇತ್ತು. ಇಂದಿಗೆ ಒಟ್ಟು 100 ಗ್ರಾಂ ಚಿನ್ನಕ್ಕೆ ಬರೋಬ್ಬರಿ 1600 ರೂಪಾಯಿ ಕುಸಿತ ಕಂಡಿದೆ.

ಅದೇ ರೀತಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 72350 ರೂಪಾಯಿ ಇದ್ದು, ನೆನ್ನೆ ಶುಕ್ರವಾರ 71500 ರೂಪಾಯಿಗೆ ಏರಿಕೆ ಆಗಿತ್ತು. ಇಂದು ಒಟ್ಟು 100 ಗ್ರಾಂ ಚಿನ್ನಕ್ಕೆ ಬರೋಬ್ಬರಿ 1500 ರೂಪಾಯಿ ಇಳಿಕೆ ಆಗಿದೆ ಎಂದು ಮಾರುಕಟ್ಟೆಯ ಮೂಲಗಳು ಮಾಹಿತಿ ನೀಡಿವೆ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+