Gold Rate Today: ಚಿನ್ನ ಕೊಳ್ಳುವವರಿಗೆ ಇವತ್ತೇ ಸುವರ್ಣಾವಕಾಶ; ಮೊದಲು ಇಂದಿನ ದರ ನೋಡಿ ಖರೀದಿಸಿ

ಬಂಗಾರ ಪ್ರಿಯರೇ ಗಮನಿಸಿ, ಕಳೆದ ಕೆಲವು ದಿನಗಳಿಂದ ಸತತವಾಗಿ ಏರುತ್ತಾ, ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕುತ್ತಿದ್ದ ಚಿನ್ನದ ದರ ಇವತ್ತು ಭಾರಿ ಅಚ್ಚರಿಯೊಂದನ್ನು ನೀಡಿದೆ. ಚಿನ್ನದ ಬೆಲೆಯಲ್ಲಿ ಪ್ರತಿದಿನ ಆಗುತ್ತಿದ್ದ ಆ ಒಂದು ಬದಲಾವಣೆಗೆ ಇಂದು ದಿಢೀರ್ ಬ್ರೇಕ್ ಬಿದ್ದಿದೆ. ಹಾಗಾದ್ರೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು ಚಿನ್ನದ ಎಷ್ಟಿದೆ? ಇವತ್ತು ಚಿನ್ನ ಕೊಳ್ಳುವುದು ಲಾಭದಾಯಕವೇ? ಇಲ್ಲಿದೆ ವಿವರ.

ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಏರಿಕೆಯಾಗುತ್ತಾ ಗ್ರಾಹಕರಿಗೆ ಶಾಕ್ ನೀಡಿದ್ದ ಹಳದಿ ಲೋಹದ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆಯಾಗಿಲ್ಲ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರವು ನಿನ್ನೆಯ ಮಟ್ಟದಲ್ಲೇ ಸ್ಥಿರವಾಗಿದ್ದು, ಗ್ರಾಹಕರು ಹಾಗೂ ಹೂಡಿಕೆದಾರರು ನಿಟ್ಟುಸಿರು ಬಿಡುವಂತಾಗಿದೆ.

Gold Rate Today

ಎಷ್ಟಿದೆ ಇಂದಿನ ದರ?

24 ಕ್ಯಾರೆಟ್ ಚಿನ್ನದ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇಂದು ಕೂಡ ಪ್ರತಿ ಗ್ರಾಂಗೆ ₹15,273ರಂತೆ ಸ್ಥಿರವಾಗಿದೆ. 22 ಕ್ಯಾರೆಟ್ ಚಿನ್ನದ ದರವು ನಿನ್ನೆಯಂತೆಯೇ ಪ್ರತಿ ಗ್ರಾಂಗೆ ₹14,000 ಮುಂದುವರಿದಿದೆ. ಇನ್ನು 18 ಕ್ಯಾರೆಟ್ ಚಿನ್ನದ ದರವು ಪ್ರತಿ ಗ್ರಾಂಗೆ ₹11,455 ರೇಟ್‌ನಲ್ಲೇ ಮುಂದುವರಿದಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಸ್ಥಿರತೆ ಹಾಗೂ ದೇಶೀಯವಾಗಿ ಬೇಡಿಕೆಯಲ್ಲಿನ ಸಣ್ಣ ಮಟ್ಟದ ಏರಿಳಿತಗಳಿಂದಾಗಿ ದರಗಳು ಯಥಾಸ್ಥಿತಿಯಲ್ಲಿವೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ. ಬೆಲೆಗಳು ಮತ್ತಷ್ಟು ಏರಿಕೆಯಾಗುವ ಮುನ್ನವೇ ಆಭರಣ ಖರೀದಿಸಲು ಪ್ಲಾನ್ ಮಾಡುತ್ತಿರುವವರಿಗೆ ಇಂದು ಸೂಕ್ತ ದಿನವಾಗಿದೆ.

10 ಗ್ರಾಂ (ಒಂದು ತೊಲ) 24 ಕ್ಯಾರೆಟ್ ಚಿನ್ನದ ಒಟ್ಟು ಬೆಲೆ ಬರೋಬ್ಬರಿ ₹1,52,730 ತಲುಪಿದಂತಾಗಿದೆ. ಇನ್ನು 8 ಗ್ರಾಂ ಪ್ರಮಾಣದ 24 ಕ್ಯಾರೆಟ್ ಚಿನ್ನದ ಬೆಲೆ ಇಂದು ಮಾರುಕಟ್ಟೆಯಲ್ಲಿ ₹1,22,184ರಷ್ಟಿದ್ದರೆ, 100 ಗ್ರಾಂ ಖರೀದಿಸುವವರಿಗೆ ₹15,27,300 ದರ ಮುಂದುವರಿದಿದೆ. 22 ಕ್ಯಾರೆಟ್ ಹಾಲ್‌ಮಾರ್ಕ್ ಚಿನ್ನದ ದರದಲ್ಲೂ ಇಂದು ಯಾವುದೇ ಏರಿಳಿತ ಕಂಡಿಲ್ಲ. ನಿನ್ನೆಯ ಬೆಲೆಯಾದ ಪ್ರತಿ ಗ್ರಾಂಗೆ ₹14,000 ದರವೇ ಇಂದೂ ಕೂಡ ಯಥಾವತ್ತಾಗಿ ಮುಂದುವರಿದಿದೆ.

ಈ ದರದ ಪ್ರಕಾರ, ಆಭರಣ ಪ್ರಿಯರು ಹೆಚ್ಚಾಗಿ ಖರೀದಿಸುವ 8 ಗ್ರಾಂ ಅಥವಾ ಒಂದು ಪವನ್ ಒಡವೆ ಚಿನ್ನದ ಬೆಲೆ ಲಕ್ಷದ ಗಡಿ ದಾಟಿ ₹1,12,000 ಆಗಿದೆ. ಹಾಗೆಯೇ, 10 ಗ್ರಾಂ ಅಥವಾ ಒಂದು ತೊಲ ಆಭರಣ ಚಿನ್ನದ ಬೆಲೆ ₹1,40,000 ಹಾಗೂ 100 ಗ್ರಾಂ ಚಿನ್ನದ ಬೆಲೆ ಭಾರಿ ₹14,00,000 ಆಗಿದೆ. 18 ಕ್ಯಾರೆಟ್ ಚಿನ್ನದ ದರವು ಇಂದು ಪ್ರತಿ ಗ್ರಾಂಗೆ ₹11,455 ರಂತೆ ಮಾರಾಟವಾಗುತ್ತಿದೆ. ಈ ವಿಭಾಗದಲ್ಲಿ 8 ಗ್ರಾಂ ಚಿನ್ನಕ್ಕೆ ₹91,640, 10 ಗ್ರಾಂ ಚಿನ್ನಕ್ಕೆ ₹1,14,550 ಹಾಗೂ 100 ಗ್ರಾಂ ಚಿನ್ನಕ್ಕೆ ₹11,45,500 ದರ ನಿಗದಿಯಾಗಿದೆ.

Gold Price: ಅಧಿಕ ಮಾಸ ಅಂತ ಮದ್ವೆ, ಮುಂಜಿ ಆಗದಿದ್ದರೇನು? ಚಿನ್ನದ ಬೆಲೆ ಇಳಿದಿದೆ, ತಗೋಬಹುದು, ಹೇಗಿದೆ ಚಿನ್ನ, ಬೆಳ್ಳಿ ಬೆಲೆ?
Gold Price: ಅಧಿಕ ಮಾಸ ಅಂತ ಮದ್ವೆ, ಮುಂಜಿ ಆಗದಿದ್ದರೇನು? ಚಿನ್ನದ ಬೆಲೆ ಇಳಿದಿದೆ, ತಗೋಬಹುದು, ಹೇಗಿದೆ ಚಿನ್ನ, ಬೆಳ್ಳಿ ಬೆಲೆ?

ಬೆಳ್ಳಿ-ಪ್ಲಾಟಿನಂ ದರ ಎಷ್ಟಿದೆ?

ಬೆಂಗಳೂರಿನಲ್ಲಿ ಇಂದು ಪ್ರತಿ ಗ್ರಾಂ ಬೆಳ್ಳಿಯ ಬೆಲೆ ₹265ರಂತೆ ಮಾರಾಟವಾಗುತ್ತಿದೆ. ಇದರೊಂದಿಗೆ ಆಭರಣ ಪ್ರಿಯರು ಮತ್ತು ಸಣ್ಣ ಪ್ರಮಾಣದ ಹೂಡಿಕೆದಾರರು ಹೆಚ್ಚಾಗಿ ಖರೀದಿಸುವ 10 ಗ್ರಾಂ ಬೆಳ್ಳಿಯ ಒಟ್ಟು ಬೆಲೆ ಇಂದು ₹2,650 ಕ್ಕೆ ಬಂದು ನಿಂತಿದೆ. ಇನ್ನೊಂದೆಡೆ, ಮದುವೆ ಹಾಗೂ ಹಬ್ಬ ಹರಿದಿನಗಳಿಗಾಗಿ ದೊಡ್ಡ ಪ್ರಮಾಣದಲ್ಲಿ ಬೆಳ್ಳಿ ಸಾಮಗ್ರಿ ಹಾಗೂ ವಿಗ್ರಹಗಳನ್ನು ಖರೀದಿಸುವವರಿಗೆ ಇಂದಿನ ದರ ಭಾರಿ ಹೊರೆಯಾಗಿ ಪರಿಣಮಿಸಿದೆ. ಬೆಂಗಳೂರಿನಲ್ಲಿ ಇಂದು ಒಂದು ಕಿಲೋಗ್ರಾಂ (1 KG) ಬೆಳ್ಳಿಯ ದರವು ಬರೋಬ್ಬರಿ ₹2,65,000 ತಲುಪಿದೆ.

ಪ್ಲಾಟಿನಂ ಬೆಲೆ ಇಂದು ಮಾರುಕಟ್ಟೆಯಲ್ಲಿ ಗಣನೀಯ ಮಟ್ಟದಲ್ಲೇ ಮುಂದುವರಿದಿದೆ. ಇಂದಿನ ತಾಜಾ ಮಾರುಕಟ್ಟೆ ವರದಿಯ ಪ್ರಕಾರ, ಬೆಂಗಳೂರಿನಲ್ಲಿ ಇಂದು ಪ್ರತಿ ಗ್ರಾಂ ಪ್ಲಾಟಿನಂ ದರವು ₹5,440ರಂತೆ ಮಾರಾಟವಾಗುತ್ತಿದೆ. ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಅಥವಾ ಪ್ಲಾಟಿನಂ ಆಭರಣಗಳನ್ನು ಖರೀದಿಸಲು ಇಷ್ಟಪಡುವ ಗ್ರಾಹಕರಿಗೆ 10 ಗ್ರಾಂನ ಲೆಕ್ಕಾಚಾರವೇ ಪ್ರಮುಖವಾಗಿರುತ್ತದೆ.

ಬೆಂಗಳೂರಿನಲ್ಲಿ ಇಂದು 10 ಗ್ರಾಂ ಪ್ಲಾಟಿನಂ ದರವು ₹54,400ಕ್ಕೆ ಬಂದು ನಿಂತಿದೆ. ಚಿನ್ನದ ಬೆಲೆಗೆ ಹೋಲಿಸಿದರೆ ಪ್ಲಾಟಿನಂ ದರವು ಸದ್ಯ ಅರ್ಧಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಸಿಗುತ್ತಿರುವುದರಿಂದ, ಆಧುನಿಕ ಶೈಲಿಯ ಆಭರಣ ಪ್ರಿಯರು ಹಾಗೂ ವೈವಿಧ್ಯಮಯ ಹೂಡಿಕೆಯತ್ತ ಮುಖ ಮಾಡಿರುವ ಐಟಿ ಉದ್ಯೋಗಿಗಳು ಚಿನ್ನದ ಬದಲಾಗಿ ಪ್ಲಾಟಿನಂ ಖರೀದಿಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+