ಅ.25 ರಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ?
ನವದೆಹಲಿ, ಅಕ್ಟೋಬರ್ 25: ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆಯಾಗಿದೆ. ಸೋಮವಾರ ಅಕ್ಟೋಬರ್ 25ರಂದು 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 10 ರೂ ಏರಿಕೆಗೊಂಡು 46,670 ರೂ. ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 47,670 ರೂ ಆಗಿದ್ದು, 10 ರೂ. ಆರಿಕೆಯಾಗಿದೆ.
ದೆಹಲಿಯಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ದರ 46,920 ರೂ ಆಗಿದೆ, 24 ಕ್ಯಾರೆಟ್‌ನ ಅಪರಂಜಿ ಚಿನ್ನ 51,180 ರೂ. ಇದೆ. ಇನ್ನು ಮುಂಬೈನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 46,670 ರೂ ಆಗಿದ್ದು, 24 ಕ್ಯಾರೆಟ್‌ನ ಚಿನ್ನದ ಬೆಲೆ 47,670 ರೂ.ಇದೆ. ಇನ್ನು ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 44,850 ರೂ ಆಗಿದೆ. 24 ಕ್ಯಾರೆಟ್‌ನ ಚಿನ್ನ 48,950 ರೂ. ಆಗಿದೆ.
ವಿಶ್ವ ಚಿನ್ನ ಪರಿಷತ್ತು, ಭಾರತೀಯ ಚಿನ್ನ ಮಾರುಕಟ್ಟೆಯ ಆಳ - ವಿಸ್ತೃತ ವಿಶ್ಲೇಷಣೆಯ ಸರಣಿಯ ಮೊದಲ ಕಂತಾದ 'ಭಾರತೀಯ ಚಿನ್ನ ಬೇಡಿಕೆಯ ಚಾಲಕರು' ಎಂಬ ವರದಿಯನ್ನು ಮಂಗಳವಾರ ಬಿಡುಗಡೆಗೊಳಿಸಿದೆ. ಎಕನೋಮೆಟ್ರಿಕ್ ಮಾದರಿಯನ್ನು ಬಳಸಿ ತಯಾರಾಗಿರುವ ಈ ವರದಿ, 1990 ರಿಂದ 2020 ರವರೆಗಿನ ಮೂರು ದಶಕಗಳ ವಾರ್ಷಿಕ ದತ್ತಾಂಶಗಳ ಮೇಲೆ ಬೆಳಕು ಚೆಲ್ಲಿದ್ದು, ಭಾರತದ ಚಿನ್ನದ ಬೇಡಿಕೆಯ ಮೇಲಿನ ಕೆಲ ಪ್ರಮುಖ ಪ್ರಭಾವಗಳ ಕುರಿತು ವಿಶ್ಲೇಷಿಸಿದೆ.
ಈ ವರದಿಯು ಪ್ರಮಾಣ ಹಾಗೂ ಗುಣಮಟ್ಟ ಎರಡೂ ದೃಷ್ಟಿಕೋನದಿಂದ ಚಿನ್ನದ ಬೇಡಿಕೆಯನ್ನು ವಿಶ್ಲೇಷಿಸಿದೆ. ಭಾರತದಲ್ಲಿ ದೀರ್ಘಾವಧಿ ಹಾಗೂ ಅಲ್ಪಾವಧಿಯ ಚಿನ್ನದ ಬೇಡಿಕೆಯ ಸಮಗ್ರ ವಿಶ್ಲೇಷಣೆಯ ಜೊತೆಗೆ, ಈ ಬೇಡಿಕೆಯನ್ನು ರೂಪಿಸುವ ಜನಸಂಖ್ಯಾ ಶಾಸ್ತ್ರ, ಸಾಮಾಜಿಕ - ಆರ್ಥಿಕ ಮತ್ತು ಸಂಬಂಧಿಸಿದ ಬೆಳವಣಿಗೆಗಳನ್ನು ಪರಿಶೀಲಿಸುತ್ತದೆ. ಇದು ಭವಿಷ್ಯದ ಬೇಡಿಕೆಯ ಏರುಪೇರಿನ ಮೇಲೆ ಕೂಡ ಬೆಳಕು ಚೆಲ್ಲುತ್ತದೆ.
ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆ ಕಂಡು ಬಂದಿದ್ದರೆ, ಬೆಳ್ಳಿ ಬೆಲೆಯಲ್ಲಿಯೂ ಕೆಲವು ಕಡೆಗಳಲ್ಲಿ ಏರಿಕೆ ಕಂಡು ಬಂದು ಉಳಿದೆಡೆ ಏಕರೂಪವಿದೆ. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ.

ಬೆಂಗಳೂರಲ್ಲಿ ಕಳೆದ 5 ದಿನಗಳ ಧಾರಣೆ
ಬೆಲೆ 22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 25: 44,850 ರೂ , 48,930 ರೂ
ಅಕ್ಟೋಬರ್ 24: 44, 760 ರೂ (10 ರೂ ಏರಿಕೆ)-- 48,830 ರೂ(10 ರೂ ಏರಿಕೆ)
ಅಕ್ಟೋಬರ್ 23: 44, 750 ರೂ---48,820 ರೂ
ಅಕ್ಟೋಬರ್ 22: 44, 550 ರೂ--- 48,600 ರೂ
ಅಕ್ಟೋಬರ್ 21: 44, 550 ರೂ---48,600ರೂ
ಬೆಳ್ಳಿ ಬೆಲೆ ಕೆ.ಜಿಗೆ 66,000ರೂಪಾಯಿ

ದೆಹಲಿ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 25: 46,920 ರೂ, 51,180 ರೂ
ಅಕ್ಟೋಬರ್ 24: 46,910ರೂ(10 ರೂ ಏರಿಕೆ)-- 51,170 ರೂ (10 ರೂ ಏರಿಕೆ)
ಅಕ್ಟೋಬರ್ 23: 46,900ರೂ, --51,160ರೂ
ಅಕ್ಟೋಬರ್ 22: 46,700ರೂ,-- 50,950ರೂ
ಅಕ್ಟೋಬರ್ 21: 46,610 ರೂ,-- 50,850ರೂ
ಬೆಳ್ಳಿ ಬೆಲೆ ಕೆ.ಜಿಗೆ 66,000ರೂಪಾಯಿ

ಮುಂಬೈ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 25: 46,670 ರೂ, 47,670 ರೂ
ಅಕ್ಟೋಬರ್ 24: 46,660ರೂ,(10 ರೂ ಏರಿಕೆ) 47,660 ರೂ (10 ರೂ ಏರಿಕೆ)
ಅಕ್ಟೋಬರ್ 23: 46,650ರೂ,(190 ರೂ ಏರಿಕೆ) 47,650 ರೂ(190 ರೂ ಏರಿಕೆ)
ಅಕ್ಟೋಬರ್ 22: 46,460ರೂ, --47,460 ರೂ -
ಅಕ್ಟೋಬರ್ 21: 46,470ರೂ-- 47,470 ರೂ

ಕಳೆದ 5 ದಿನಗಳ ಚಿನ್ನ, ಬೆಳ್ಳಿ ದರ ಏರಿಳಿತ ಎಷ್ಟು?
ಹೈದರಾಬಾದ್‌ನಲ್ಲಿ 5 ದಿನಗಳ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 25:44,850 ರೂ, 48,930 ರೂ
ಅಕ್ಟೋಬರ್ 24: 44,760 ರೂ,(10 ರೂ ಏರಿಕೆ) --48, 830 ರೂ (10 ರೂ ಏರಿಕೆ)
ಅಕ್ಟೋಬರ್ 23: 44,750 ರೂ,--- 47,450 ರೂ
ಅಕ್ಟೋಬರ್ 22: 44,550 ರೂ, ---48,600ರೂ
ಅಕ್ಟೋಬರ್ 21: 44,550 ರೂ,---- 48,600ರೂ
ಬೆಳ್ಳಿ ಬೆಲೆ ಕೆ.ಜಿಗೆ 70,300 ರೂಪಾಯಿ

ಕೋಲ್ಕತ್ತಾದಲ್ಲಿ ಚಿನ್ನ, ಬೆಳ್ಳಿ ದರ
22 ಕ್ಯಾರೆಟ್ 24 ಕ್ಯಾರೆಟ್ (ಬೆಲೆ ರೂ ಗಳಲ್ಲಿ)
ಅಕ್ಟೋಬರ್ 25:47,020 ರೂ., 49,720 rU.
ಅಕ್ಟೋಬರ್ 24: 47, 010 ರೂ,(10 ರೂ ಏರಿಕೆ) -- 49,710 ರೂ (10 ರೂ ಏರಿಕೆ)
ಅಕ್ಟೋಬರ್ 23: 47,000 ರೂ--- 49,700 ರೂ
ಅಕ್ಟೋಬರ್ 22: 46,950 ರೂ----49,650 ರೂ
ಅಕ್ಟೋಬರ್ 21: 46,900 ರೂ, ---49,600 ರೂ
ಬೆಳ್ಳಿ: 1 ಕೆ.ಜಿಗೆ 66,000 ರೂಪಾಯಿ












Click it and Unblock the Notifications