Gold Rate Jan 27: ಚಿನ್ನದ ಬೆಲೆ ಹೊಸ ದಾಖಲೆ, ಬೆಳ್ಳಿ 10,000 ರೂ. ಹೆಚ್ಚಳ - ಚಿನ್ನದ ಬೆಲೆ ಹೆಚ್ಚಳಕ್ಕೆ ಕಾರಣವೇನು
Gold Rate Jan 27: ಚಿನ್ನದ ಬೆಲೆಯು ನಿರಂತರವಾಗಿ ಹೆಚ್ಚಳವಾಗುತ್ತಿದ್ದು, ಅಚ್ಚರಿ ಎನ್ನುವಂತೆ ಜನವರಿ 27ರಂದು ಚಿನ್ನದ ಬೆಲೆಯು ಹೊಸ ದಾಖಲೆಯನ್ನು ಬರೆದಿದೆ. ಚಿನ್ನದ ಬೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಭಾರೀ ಹೆಚ್ಚಳವಾಗುತ್ತಿದ್ದು, ಚಿನ್ನ ಪ್ರಿಯರಿಗೆ ಶಾಕ್ ಎದುರಾಗಿದೆ. ಇನ್ನು ಚಿನ್ನದೊಂದಿಗೆ ಬೆಳ್ಳಿ ಬೆಲೆಯಲ್ಲೂ ಹೊಸ ದಾಖಲೆ ಸೃಷ್ಟಿಯಾಗಿದೆ. ಜನವರಿ 27ರ ಚಿನ್ನ ಮತ್ತು ಬೆಳ್ಳಿ ಬೆಲೆಯ ಸಂಪೂರ್ಣ ವಿವರ ಇಲ್ಲಿದೆ.
ಅಮೆರಿಕ ಹಾಗೂ ಯೂರೋಪ್ ರಾಷ್ಟ್ರಗಳಿಗೆ ಪೈಪೋಟಿ ನೀಡುವುದಕ್ಕೆ ಬ್ರಿಕ್ಸ್ ಮುಂದಾಗಿದೆ. ಬ್ರಿಕ್ಸ್ ದೇಶಗಳು ಹೆಚ್ಚಾಗಿ ಚಿನ್ನವನ್ನು ಸಂಗ್ರಹ ಮಾಡುತ್ತಿರುವುದು ಸೇರಿದಂತೆ ಹಲವು ಕಾರಣಗಳಿಗೆ ಚಿನ್ನದ ಬೆಲೆಯು ನಿರಂತರವಾಗಿ ಹೆಚ್ಚಳವಾಗುತ್ತಿದೆ. ಬ್ರಿಕ್ಸ್ (BRICS) ವಿಶ್ವದ ಪ್ರಮುಖ ಉದಯೋನ್ಮುಖ ಆರ್ಥಿಕ ರಾಷ್ಟ್ರಗಳಾದ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಒಕ್ಕೂಟವಾಗಿದೆ. ಜಾಗತಿಕ ಆರ್ಥಿಕತೆ, ರಾಜಕೀಯ ಮತ್ತು ಭೌಗೋಳಿಕ ಏಕೀಕರಣವನ್ನು ಬಲಪಡಿಸಲು ಹಾಗೂ ಪಾಶ್ಚಾತ್ಯ ರಾಷ್ಟ್ರಗಳ ಪ್ರಭಾವಕ್ಕೆ ಪರ್ಯಾಯವಾಗಿ ಈ ವೇದಿಕೆ ಸೃಷ್ಟಿಯಾಗಿದೆ. ಬ್ರಿಕ್ಸ್‌ನ ಭಾಗವಾಗಿರುವ ದೇಶಗಳು ಹೆಚ್ಚು ಚಿನ್ನ ಸಂಗ್ರಹದಲ್ಲಿ ತೊಡಗಿವೆ. ಆದರೆ ಭಾರತ ಸರ್ಕಾರವು ಹೆಚ್ಚು ಚಿನ್ನ ಖರೀದಿ ಮಾಡುತ್ತಿಲ್ಲವಾದರೂ ಚಿನ್ನದ ಬೆಲೆ ಭಾರತದಲ್ಲಿ ಹೆಚ್ಚಳವಾಗಿದೆ. ಇಂದಿನ ಚಿನ್ನ ಮತ್ತು ಬೆಳ್ಳಿಯ ನಿಖರ ಬೆಲೆ ನೋಡೋಣ.

24 ಕ್ಯಾರೆಟ್ ಚಿನ್ನದ ಬೆಲೆ: 24 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯು 16,195 ರೂಪಾಯಿ ಆಗಿದೆ. 10 ಗ್ರಾಂನ ಚಿನ್ನದ ಬೆಲೆಯು 1,61,950 ರೂಪಾಯಿ ಆಗಿದೆ. ನೆನ್ನೆಗೆ ಹೋಲಿಕೆ ಮಾಡಿದರೆ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಯಥಾಸ್ಥಿತಿ ಮುಂದುವರಿದಿದೆ.
22 ಕ್ಯಾರೆಟ್ ಚಿನ್ನದ ಬೆಲೆ: 22 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯು 14,845 ರೂಪಾಯಿ ಆಗಿದೆ. 22 ಕ್ಯಾರೆಟ್ 10 ಗ್ರಾಂನ ಚಿನ್ನದ ಬೆಲೆಯು 1,48,450 ರೂಪಾಯಿ ಆಗಿದೆ.
18 ಕ್ಯಾರೆಟ್ ಚಿನ್ನದ ಬೆಲೆ: 18 ಕ್ಯಾರೆಟ್‌ನ 1 ಗ್ರಾಂ ಚಿನ್ನದ ಬೆಲೆಯು 12,146 ರೂಪಾಯಿ ಆಗಿದೆ. 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು 1,21,460 ರೂಪಾಯಿ ಆಗಿದೆ. ಇನ್ನು 18 ಕ್ಯಾರೆಟ್‌ನ ಚಿನ್ನದ ಬೆಲೆಯಲ್ಲೂ ಯಥಾಸ್ಥಿತಿ ಮುಂದುವರಿದಿದೆ.
ಬೆಳ್ಳಿ ಬೆಲೆ ಎಷ್ಟಿದೆ ?
ಮಂಗಳವಾರ ಜನವರಿ 27ರಂದು ಚಿನ್ನದ ಬೆಲೆಯು ಯಥಾಸ್ಥಿತಿ ಮುಂದುವರಿದಿದ್ದು, ಯಾವುದೇ ಬದಲಾವಣೆ ಆಗಿಲ್ಲ. ಆದರೆ ಬೆಳ್ಳಿ ಬೆಲೆಯು ಭಾರೀ ಹೆಚ್ಚಳವಾಗಿದೆ. ಬೆಳ್ಳಿ ಬೆಲೆಯು 1 ಗ್ರಾಂಗೆ 370 ರೂಪಾಯಿ ಆಗಿದೆ. ಒಂದು ಕೆ.ಜಿ ಬೆಳ್ಳಿ ಬೆಲೆಯು 3,70,000 ರೂಪಾಯಿ ಆಗಿದೆ. ಬೆಳ್ಳಿ ಬೆಲೆಯು ಒಂದು ಗ್ರಾಂಗೆ 10 ರೂಪಾಯಿ ಹೆಚ್ಚಳವಾಗಿದೆ. ಒಂದು ಕೆ.ಜಿ ಬೆಳ್ಳಿ ಬೆಲೆಯು 10,000 ರೂಪಾಯಿ ಹೆಚ್ಚಳವಾಗಿದೆ. ಚಿನ್ನದೊಂದಿಗೆ ಬೆಳ್ಳಿಯ ಮೇಲೆಯೂ ಹೂಡಿಕೆ ಪ್ರಮಾಣ ಹೆಚ್ಚಳವಾಗುತ್ತಿರುವುದು ಬೆಳ್ಳಿ ಬೆಲೆಯು ಹೆಚ್ಚಳವಾಗುವುದಕ್ಕೆ ಕಾರಣವಾಗಿದೆ.












Click it and Unblock the Notifications