Gold Price Today: ಬಂಗಾರ ಬೆಲೆ ಇಳಿಕೆ: ಇಲ್ಲಿದೆ ಜನವರಿ 3ರ ದರಪಟ್ಟಿ
Gold Price on January 3: ಏರಿಕೆಯತ್ತ ಹೊರಟಿದ್ದ ಬಂಗಾರ ದರ ದಿಢೀರ್ ಇಳಿಕೆ ಆಗಿದೆ. ಹಾಗಾದ್ರೆ, ಇಂದು (ಜನವರಿ 3) ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ ಹಾಗೂ ಬೆಳ್ಳಿ ದರ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳ ಸಹಿತ ಸಂಪೂರ್ಣ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಬಂಗಾರ ದರಗಳ ವಿವರ: ನಿನ್ನೆ (ಜನವರಿ 2, 2026) ಬೆಂಗಳೂರು ಸೇರಿದಂತೆ ದೇಶದ ಬಹುತೇಕ ಕಡೆಗಳಲ್ಲಿ 10 ಗ್ರಾಂ (22 ಕ್ಯಾರೆಟ್) ಬಂಗಾರ ದರ 1,24,850 ರೂಪಾಯಿ ಇದ್ದರೆ, ಇಂದು (ಜನವರಿ 3, 2026) 1,24,500 ರೂಪಾಯಿಗೆ ಇಳಿಕೆ ಆಗಿದೆ. ಇನ್ನೂ 10 ಗ್ರಾ (24 ಕ್ಯಾರೆಟ್) ನಿನ್ನೆ ದರ 1,36,200ರೂಪಾಯಿ ಇತ್ತು. ಇನ್ನು ಇಂದು 1,35,820 ರೂಪಾಯಿಗೆ ಇಳಿದಿದೆ. ಹಾಗಾದ್ರೆ ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ ಉಳಿದ ದೇಶದ ಪ್ರಮುಖ ನಗರಗಳಲ್ಲಿ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

8 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ಬೆಲೆ - 99,600 ರೂಪಾಯಿ
* 24 ಕ್ಯಾರೆಟ್ ಚಿನ್ನದ ಬೆಲೆ (ಅಪರಂಜಿ) - 1,08,656 ರೂಪಾಯಿ
10 ಗ್ರಾಂ ಬಂಗಾರ ದರ
* 22 ಕ್ಯಾರೆಟ್ ಚಿನ್ನದ ದರ - 1,24,500 ರೂಪಾಯಿ
* 24 ಕ್ಯಾರೆಟ್ ಬಂಗಾರ ದರ (ಅಪರಂಜಿ) - 1,35,820 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 22 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 1,24,500 ರೂಪಾಯಿ
* ಚೆನ್ನೈ - 1,25,200 ರೂಪಾಯಿ
* ಮುಂಬೈ - 1,24,500 ರೂಪಾಯಿ
* ಕೋಲ್ಕತ್ತಾ - 1,24,500 ರೂಪಾಯಿ
* ನವದೆಹಲಿ - 1,24,650 ರೂಪಾಯಿ
* ಹೈದರಾಬಾದ್ - 1,24,500 ರೂಪಾಯಿ
ವಿವಿಧ ನಗರಗಳಲ್ಲಿ ಬಂಗಾರ ದರ 24 ಕ್ಯಾರೇಟ್ (10 ಗ್ರಾಂ)
* ಬೆಂಗಳೂರು - 1,35,820 ರೂಪಾಯಿ
* ಚೆನ್ನೈ - 1,36,580 ರೂಪಾಯಿ
* ಮುಂಬೈ - 1,35,820 ರೂಪಾಯಿ
* ಕೋಲ್ಕತ್ತಾ - 1,35,820 ರೂಪಾಯಿ
* ನವದೆಹಲಿ - 1,35,970 ರೂಪಾಯಿ
* ಹೈದರಾಬಾದ್ - 1,35,820 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ (ಕೆಜಿ ಲೆಕ್ಕದಲ್ಲಿ)
* ಬೆಂಗಳೂರು - 2,40,000 ರೂಪಾಯಿ (2,000 ರೂಪಾಯಿ ಇಳಿಕೆ)
* ಚೆನ್ನೈ - 2,56,000 ರೂಪಾಯಿ (4,000 ರೂಪಾಯಿ ಇಳಿಕೆ)
* ಮುಂಬೈ - 2,40,000 ರೂಪಾಯಿ (2,000 ರೂಪಾಯಿ ಇಳಿಕೆ)
* ಕೋಲ್ಕತ್ತಾ - 2,40,000 ರೂಪಾಯಿ (2,000 ರೂಪಾಯಿ ಇಳಿಕೆ)
* ನವದೆಹಲಿ - 2,40,000 ರೂಪಾಯಿ (2,000 ರೂಪಾಯಿ ಇಳಿಕೆ)
* ಹೈದರಾಬಾದ್ - 2,56,000 ರೂಪಾಯಿ (4,000 ರೂಪಾಯಿ ಇಳಿಕೆ)
ಆಭರಣಗಳ ದರ ಹೆಚ್ಚಾದರೂ ಸಹ ಕೊಳ್ಳುವವರ ಸಂಖ್ಯೆ ಮಾತ್ರ ಕಡಿಮೆ ಆಗುವುದಿಲ್ಲ. ಬದಲಾಗಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಕಷ್ಟದ ಕಾಲಕ್ಕೆ ಆಗುತ್ತವೆ ಎನ್ನುವ ನಿಟ್ಟಿನಲ್ಲಿ ಖರೀದಿ ಮಾಡುತ್ತಲಿದ್ದಾರೆ. ಹೊಸ ವರ್ಷಕ್ಕೂ ಮುನ್ನಾ ದಿನ ಬಂಗಾರ ದರ ಇಳಿಕೆಯಾಗಿತ್ತು. ಆದರೆ, 2026ನೇ ವರ್ಷದ ಎರಡನೇ ದಿನ ಬಹುತೇಕ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ ದರ ಹೆಚ್ಚಾಗಿತ್ತು. ಆದರೆ, ಇದೀಗ ಮೂರನೇ ದಿನ ಇಳಿಕೆಯಾಗಿದ್ದು, ಕೊಳ್ಳುವವರಿಗೆ ಇದು ಉತ್ತಮ ಸಮಯವಾಗಿದೆ. ಯಾಕಂದ್ರೆ, ಮುಂದಿನ ದಿನಗಳಲ್ಲಿ ಮತ್ತಷ್ಟು ಇಳಿಕೆ ಆಗಲೂಬಹುದು ಅಥವಾ ಏರಿಕೆ ಆಗಲೂಬಹುದು.












Click it and Unblock the Notifications