ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಳಿಕೆಯಾಗಿದ್ದ ಚಿನ್ನದ ಬೆಲೆ ದಿಢೀರ್ ಏರಿಕೆ, ಹಳದಿ ಲೋಹಕ್ಕೆ ಬೇಡಿಕೆ

|
Google Oneindia Kannada News

ನವದೆಹಲಿ, ಜೂನ್ 21: ಹಳದಿ ಲೋಹದ ಮೇಲೆ ಗ್ರಾಹಕರಿಗೆ ದಿಢೀರ್ ಮೋಹ ಉಂಟಾಗಿದೆ. ಇದಕ್ಕೆ ತಕ್ಕಂತೆ ಸ್ಥಳೀಯ ಆಭರಣ ತಯಾರಕರಿಂದ ಬೇಡಿಕೆ ಹೆಚ್ಚಾಗಿದೆ. ಜಾಗತಿಕ ಟ್ರೆಂಡ್ ಗೆ ತಕ್ಕಂತೆ ಚಿನ್ನದ ದರದಲ್ಲಿ ಗುರುವಾರ(ಜೂನ್ 21)ದಂದು ಏರಿಕೆ ಕಂಡು ಬಂದಿದೆ.

ರಾಜಧಾನಿ ದೆಹಲಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 280 ರೂಪಾಯಿ ಏರಿಕೆಯಾಗಿ 34,000ರು ಗಡಿ ದಾಟಿ, ಪ್ರತಿ 10ಗ್ರಾಂಗೆ 34,020ರು ನಂತೆ ಮಾರಾಟವಾಗಿದೆ ಎಂದು ಅಖಿಲ ಭಾರತ ಸರಾಫಾ ಅಸೋಸಿಯೇಷನ್ ವರದಿ ನೀಡಿದೆ.

ತಗ್ಗಿದ ಬೇಡಿಕೆ, ಚಿನ್ನದ ಬೆಲೆ ಅಲ್ಪ ಪ್ರಮಾಣದಲ್ಲಿ ಇಳಿಕೆ ತಗ್ಗಿದ ಬೇಡಿಕೆ, ಚಿನ್ನದ ಬೆಲೆ ಅಲ್ಪ ಪ್ರಮಾಣದಲ್ಲಿ ಇಳಿಕೆ

ಚಿನ್ನದ ಬೆಲೆ ವ್ಯತ್ಯಾಸಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬದಲಾವಣೆ, ಯುಎಸ್ ಹಾಗೂ ಚೀನಾ ನಡುವಿನ ತಿಕ್ಕಾಟ ಹಾಗೂ ಸ್ಥಳೀಯ ಆಭರಣ ತಯಾರಕರು ಚಿನ್ನದ ಖರೀದಿಯಲ್ಲಿ ಹೆಚ್ಚಿನ ಆಸಕ್ತಿ ತೋರಿದ್ದು ಬೆಲೆ ಏರಿಕೆಗೆ ಎಂದು ಎಐಎಸ್ಎ ಹೇಳಿದೆ.

ಇದೇ ವೇಳೆ ಬೆಳ್ಳಿ ಬೆಲೆ ಕೂಡಾ ಏರಿಕೆ ಕಂಡಿದ್ದು, 710 ರು ಏರಿಕೆಯಾಗಿ 39,060 ಪ್ರತಿ 1 ಕೆಜಿಯಂತೆ ಮಾರಾಟ ಕಂಡಿದೆ. ನಾಣ್ಯ ತಯಾರಕರು, ಕೈಗಾರಿಕೆಗಳಿಂದ ಬೇಡಿಕೆ ಹೆಚ್ಚಾಗಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ. ಕಳೆದ ಐದು ವರ್ಷಗಳಲ್ಲೇ ಅಧಿಕ ಪ್ರಮಾಣದ ಏರಿಕೆ ಕಂಡಿದೆ.

ಜಾಗತಿಕ ಟ್ರೆಂಡ್ ತಕ್ಕಂತೆ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆಜಾಗತಿಕ ಟ್ರೆಂಡ್ ತಕ್ಕಂತೆ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ

ಜಾಗತಿಕವಾಗಿ ಚಿನ್ನದ ಬೆಲೆ ವ್ಯತ್ಯಯವಾಗಿದ್ದು, ನ್ಯೂಯಾರ್ಕ್ ನಲ್ಲಿ ಚಿನ್ನದ ಬೆಲೆ ಪ್ರತಿ ಔನ್ಸಿಗೆ 1,385.54 ಡಾಲರ್ ನಷ್ಟಿದೆ. ಬೆಳ್ಳಿ ಬೆಲೆ 15.35 ಡಾಲರ್ ಪ್ರತಿ ಔನ್ಸ್ ಆಗಿದೆ.

ಚಿನ್ನದ ಬೆಲೆ ದಿಢೀರ್ ಏರಿಕೆ, ಹಳದಿ ಲೋಹಕ್ಕೆ ಬೇಡಿಕೆ

ಚಿನ್ನದ ಬೆಲೆ ದಿಢೀರ್ ಏರಿಕೆ, ಹಳದಿ ಲೋಹಕ್ಕೆ ಬೇಡಿಕೆ

ದೆಹಲಿಯಲ್ಲಿ 99.9% ಪರಿಶುದ್ಧ ಚಿನ್ನ ಹಾಗೂ 99.5% ಪರಿಶುದ್ಧ ಚಿನ್ನ ಬೆಲೆ ಕ್ರಮವಾಗಿ 280 ರು ಏರಿಕೆಯಾಗಿ 10 ಗ್ರಾಂಗೆ 34,020ರು ಹಾಗೂ 33,850ರು ಪ್ರತಿ 10ಗ್ರಾಂ ನಂತೆ ಮಾರಾಟ ಕಂಡಿದೆ. ಕಳೆದ ವಾರದಲ್ಲಿ 10 ಗ್ರಾಂಗೆ 33,720ನಂತೆ ಮಾರಾಟವಾಗಿತ್ತು.

ಸವರನ್ ಚಿನ್ನದ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ, 8 ಗ್ರಾಂಗೆ 26,800ರು ನಷ್ಟಿದೆ. ಬೆಳ್ಳಿ ನಾಣ್ಯಗಳು 100ಕ್ಕೆ 80,000ರು ಖರೀದಿಗೆ ಹಾಗೂ 81,000 ರು ಮಾರಾಟಕ್ಕೆ ದರ ಪಡೆದುಕೊಂಡಿವೆ.

ಕಳೆದ 4 ದಿನಗಳಲ್ಲಿ ಬೆಂಗಳೂರಲ್ಲಿ ಚಿನ್ನ ಬೆಳ್ಳಿ ದರ

ಕಳೆದ 4 ದಿನಗಳಲ್ಲಿ ಬೆಂಗಳೂರಲ್ಲಿ ಚಿನ್ನ ಬೆಳ್ಳಿ ದರ

ಚಿನ್ನದ ದರ (ಪ್ರತಿ 10ಗ್ರಾಂ) ರುಗಳಲ್ಲಿ
ಜೂನ್ 21: 32,050(22 ಕ್ಯಾರೆಟ್), 34,880 (24 ಕ್ಯಾರೆಟ್)
ಜೂನ್ 20 : 31,550 ಹಾಗೂ 34,380
ಜೂನ್ 19: 30,900 ಹಾಗೂ 33,730
ಜೂನ್ 18: 30,900 ಹಾಗೂ 33,730

ಬೆಳ್ಳಿದರ ಬೆಳ್ಳಿ 1 ಕೆಜಿ ರುಗಳಲ್ಲಿ
ಜೂನ್ 21 : 40,000
ಜೂನ್ 20: 40,000
ಜೂನ್ 19: 39,950
ಜೂನ್ 18: 39,550

ಕಳೆದ 4 ದಿನಗಳಲ್ಲಿ ಚೆನ್ನೈನಲ್ಲಿ ಚಿನ್ನ ಬೆಳ್ಳಿ ದರ

ಕಳೆದ 4 ದಿನಗಳಲ್ಲಿ ಚೆನ್ನೈನಲ್ಲಿ ಚಿನ್ನ ಬೆಳ್ಳಿ ದರ

ಚಿನ್ನದ ದರ (ಪ್ರತಿ 10ಗ್ರಾಂ) ರುಗಳಲ್ಲಿ
ಜೂನ್ 21 : 32,710 (22 ಕ್ಯಾರೆಟ್), 35,720 (24 ಕ್ಯಾರೆಟ್)
ಜೂನ್ 20: 32,110 ಹಾಗೂ 35,020
ಜೂನ್ 19: 31,440 ಹಾಗೂ 34,290
ಜೂನ್ 18: 31,480 ಹಾಗೂ 33,800

ಬೆಳ್ಳಿದರ ಬೆಳ್ಳಿ 1 ಕೆಜಿ ರುಗಳಲ್ಲಿ
ಜೂನ್ 21 : 40,000
ಜೂನ್ 20: 40,000
ಜೂನ್ 19: 39,950
ಜೂನ್ 18: 39,550

ಕಳೆದ 4 ದಿನಗಳಲ್ಲಿ ಮುಂಬೈನಲ್ಲಿ ಚಿನ್ನ ಬೆಳ್ಳಿ ದರ

ಕಳೆದ 4 ದಿನಗಳಲ್ಲಿ ಮುಂಬೈನಲ್ಲಿ ಚಿನ್ನ ಬೆಳ್ಳಿ ದರ

ಚಿನ್ನದ ದರ (ಪ್ರತಿ 10ಗ್ರಾಂ) ರುಗಳಲ್ಲಿ
ಜೂನ್ 21 : 33,200 (22 ಕ್ಯಾರೆಟ್), 34,200 (24 ಕ್ಯಾರೆಟ್)
ಜೂನ್ 20: 32,350 ಹಾಗೂ 33,350
ಜೂನ್ 19: 32,350 ಹಾಗೂ 33,350
ಜೂನ್ 18: 32,350 ಹಾಗೂ 33,350

ಬೆಳ್ಳಿದರ ಬೆಳ್ಳಿ 1 ಕೆಜಿ ರುಗಳಲ್ಲಿ
ಜೂನ್ 21 : 40,000
ಜೂನ್ 20: 40,000
ಜೂನ್ 19: 39,950
ಜೂನ್ 18: 39,550

English summary
Gold prices Thursday surged by Rs 280 to cross Rs 34,000-mark in the national capital on strong global sentiment and fresh buying from local jewellers, according to All India Sarafa Association.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X