Gold Price Today: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಏರಿಕೆ, ಇಂದು ಎಷ್ಟಿದೆ?

ದೇಶಿಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿತ್ಯ ನಡೆಯುವ ಬೆಳವಣಿಗೆಗಳು ಚಿನ್ನ ಹಾಗೂ ಬೆಳ್ಳಿ ದರ ಹೆಚ್ಚಳದ ಮೇಲೆ ಪ್ರತಿಕೂಲ ಪ್ರಭಾವ ಬೀರುತ್ತಿವೆ. ಈ ವಾರದ ಆರಂಭದ ಮೊದಲ ದಿನವೇ ಸೋಮವಾರ (ಅಕ್ಟೋಬರ್ 06) ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆ ಆಗಿದೆ. ಕಳೆದ ಒಂದು ವಾರದಲ್ಲಿ ಒಂದೇ ದಿನ ಮಾತ್ರವೇ ಚಿನ್ನದ ದರವು ಇಳಿಕೆ ಆಗಿದ್ದು. ಉಳಿದೆಲ್ಲ ದಿನವು ಹೆಚ್ಚಾಗಿದೆ.

ಈ ಮೊದಲು ಅಮೆರಿಕಾ ದೇಶದ ಸುಂಕ ನೀತಿಯಿಂದಾಗಿ ಚಿನ್ನ ಮಾರುಕಟ್ಟೆಯಲ್ಲಿ 22 ಕ್ಯಾರಟ್ ಮತ್ತು 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಭಾರೀ ಹೆಚ್ಚಾಗಿತ್ತು. ಇದೀಗ ಚೀನಾ ಮತ್ತು ಭಾರತದ ಬ್ಯಾಂಕ್‌ಗಳೂ ಚಿನ್ನ ಖರೀದಿ ಮಾಡುತ್ತಿವೆ. ಇದರೊಂದಿಗೆ ಅಮೆರಿಕಾದಲ್ಲಿ ಹೂಡಿಕೆದಾರರು ಸುರಕ್ಷಿತ ಹೂಡಿಕೆಯತ್ತ ಮುಖ ಮಾಡಿದ್ದಾರೆ. ಸರ್ಕಾರಿ ಕೆಲಸಗಳು ಸ್ಥಗತಿಗೊಂಡ ಕಾರಣದಿಂದಾಗಿ ಚಿನ್ನ ಬೆಲೆಯು ಗಗನಕ್ಕೇರುತ್ತಿದೆ.

Gold Prices Surge Rs 1 250 In a Day Ahead of Diwali Silver Price today Also Jumps

ಸೆಪ್ಟಂಬರ್ 30ರಿಂದ ಇವತ್ತಿನವರೆಗೆ ಒಟ್ಟು ಏಳು ದಿನಗಳಲ್ಲಿ ಒಂದು ದಿನ ಮಾತ್ರ ಚಿನ್ನ ಇಳಿಕೆ ಆಗಿದೆ. ಎರಡು ದಿನ ಯಥಾಸ್ಥಿತಿ ಕಾಯ್ದುಕೊಂಡಿದೆ. ಉಳಿದ ದನ ದಾಖಲೆಯ ಮಟ್ಟದಲ್ಲಿ ದರ ಹೆಚ್ಚಾಗಿದೆ. ಇಂದು ಸೋಮವಾರ ಚಿನ್ನ ಮತ್ತು ಬೆಳ್ಳಿಯ ಬೆಲೆಗಳಲ್ಲಿ ಭರ್ಜರಿ ಏರಿಕೆ ಆಗಿದೆ. 24 ಕ್ಯಾರಟ್ ಚಿನ್ನ 1 ಗ್ರಾಂಗೆ 137 ರೂಪಾಯಿ ಏರಿಕೆ ಆಗಿದೆ. 22 ಕ್ಯಾರಟ್ ಚಿನ್ನದ ಒಂದು ಗ್ರಾಂ ಗೆ 125 ರೂಪಾಯಿ ಹೆಚ್ಚಾಗಿದೆ.

ಇಂದು 10 ಗ್ರಾಂ ಚಿನ್ನದ ಬೆಲೆ ಎಷ್ಟಿದೆ

22 ಕ್ಯಾರಟ್ ಚಿನ್ನದ 10 ಗ್ರಾಂ ಚಿನ್ನ ಬೆಲೆಯು ನೆನ್ನೆ 1,09,450 ರೂಪಾಯಿ ಇದ್ದದ್ದು ಇಂದು 1,10,700 ರೂ.ಗೆ ಏರಿಕೆ ಆಗಿದ್ದು, ಒಂದೇ ದಿನಕ್ಕೆ ಬರೋಬ್ಬರಿ 1,250 ರೂಪಾಯಿ ಏರಿಕೆ ಆದಂತಾಗಿದೆ. ಇನ್ನೂ 24 ಕ್ಯಾರಟ್ ಚಿನ್ನ 10 ಗ್ರಾಂ ಚಿನ್ನಕ್ಕೆ ಇಂದು 1,370 ರೂ. ಹೆಚ್ಚಾಗಿದೆ. ಇದರಿಂದ ನೆನ್ನೆ 1,19,400 ರೂಪಾಯಿಗೆ ಸಿಕ್ಕಿದ್ದ ಚಿನ್ನವು ಇಂದು ಮಾರುಕಟ್ಟೆಯಲ್ಲಿ 1,20,770 ರೂಪಾಯಿಗೆ ಮಾರಾಟವಾಗಿದೆ. ಚಿನ್ನ ಮಾತ್ರವಲ್ಲ ಬೆಳ್ಳಿಯ 10 ಗ್ರಾಂ ₹100 ಹೆಚ್ಚಿಸಿಕೊಂಡು ಇಂದು 15,600 ರೂಪಾಯಿಗೆ ತಲುಪಿದೆ. ಒಂದು ಕೆಜಿ. ಬೆಳ್ಳಿ ಬೆಲೆ ಬರೋಬ್ಬರಿ 1000 ರೂಪಾಯಿ ಏರಿಕೆ ಆಗಿದ್ದು, ದರ 1,56,000 ರೂ.ಗೆ ತಲುಪಿದೆ.

ದೀಪಾವಳಿ ಹಬ್ಬ ಸಮೀಪುತ್ತಲೇ ಚಿನ್ನದ ಬೆಲೆಯಲ್ಲಿ ದಿಢೀರ್ ಏರಿಕೆ ಆಗಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಕಳೆದ ಕೆಲವು ತಿಂಗಳುಗಳಿಂದ ಚಿನ್ನ ಬೆಲೆಯಲ್ಲಿ ಕುಸಿತವೇ ಇಲ್ಲ. ಅದು ಮುಂದಿನ ದಿನಗಳಲ್ಲೂ ಮತ್ತಷ್ಟು ನಿರಂತರವಾಗಿ ಹೆಚ್ಚಾಗುತ್ತಲೇ ಹೋಗುತ್ತದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಇಂದಿನ ನಗರವಾರು 22k ಚಿನ್ನದ 10ಗ್ರಾಂ ದರಪಟ್ಟಿ

* ಬೆಂಗಳೂರು:1,10,700 ರೂಪಾಯಿ

* ಮುಂಬೈ: 1,10,700 ರೂಪಾಯಿ

* ಹೈದರಾಬಾದ್:1,10,700 ರೂಪಾಯಿ

* ಕೋಲ್ಕತ್ತಾ: 1,10,700 ರೂಪಾಯಿ

* ಕೇರಳ:1,10,700 ರೂಪಾಯಿ

* ಪುಣೆ:1,10,700 ರೂಪಾಯಿ

* ಭುವನೇಶ್ವರ:1,10,700 ರೂಪಾಯಿ

* ಚೆನ್ನೈ: 1,10,600 ರೂಪಾಯಿ

* ದೆಹಲಿ: 1,10,850 ರೂಪಾಯಿ

* ಜೈಪುರ: 1,10,850 ರೂಪಾಯಿ

* ಲಕ್ನೋ: 1,10,850 ರೂಪಾಯಿ

* ಚಂಡೀಗಢ: 1,10,850 ರೂಪಾಯಿ

* ನೋಯ್ಡಾ: 1,10,850 ರೂಪಾಯಿ

* ಘಜಿಯಾಬಾದ್: 1,10,850 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+