• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಬ್ಬದ ಸಂದರ್ಭದಲ್ಲಿ ಚಿನ್ನದ ಬೆಲೆ ಏರಿಕೆ, 6 ವರ್ಷಗಳಲ್ಲೇ ಅಧಿಕ!

|

ಬೆಂಗಳೂರು, ನವೆಂಬರ್ 04: ದೀಪಾವಳಿ ಹಬ್ಬಕ್ಕೂ ಮುನ್ನ ಚಿನ್ನ, ಬೆಳ್ಳಿ ದರದಲ್ಲಿ ಏರಿಳಿತ ಶುರುವಾಗಿದೆ. ಕಳೆದ ಕೆಲ ದಿನಗಳಿಂದ ಚಿನ್ನ, ಬೆಳ್ಳಿ ಬೆಲೆ ಮೇಲ್ಮುಖವಾಗಿ ಚಲಿಸುತ್ತಿತ್ತು, ಆದರೆ, ಕಳೆದ ಶುಕ್ರವಾರವಂದು ಬೆಲೆಯಲ್ಲಿ ಇಳಿಕೆ ಕಂಡು ಬಂದಿತ್ತು. ಇನ್ನೆರಡು ದಿನಗಳಲ್ಲಿ ಚಿನ್ನದ ಬೆಲೆ ಏರಿಕೆಯಾಗಲಿದೆ ಎಂದು ಚಿನಿವಾರ ಪೇಟೆ ತಜ್ಞರು ಹೇಳಿದ್ದಾರೆ.

ನವರಾತ್ರಿ ಹಬ್ಬದ ಸೀಸನ್ ಮುಗಿದ ಬಳಿಕ ಚಿನ್ನ, ಬೆಳ್ಳಿಯ ಬೇಡಿಕೆ ತಗ್ಗಿದ್ದರಿಂದ ಚಿನ್ನ ಪ್ರಿಯರಿಗೆ ಶುಭ ಸುದ್ದಿ ಸಿಕ್ಕಿತ್ತು. ಬಂಗಾರ, ಬೆಳ್ಳಿ ಬೆಲೆಯಲ್ಲಿ ಇಳಿಕೆ ಕಂಡು ಬಂದಿತ್ತು. ಆದರೆ, ಕಳೆದ ಕೆಲ ದಿನಗಳಿಂದ ಚಿನ್ನ, ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ದೀಪಾವಳಿ ಸಂದರ್ಭದಲ್ಲಿ ಬೆಲೆ ಏರಿಕೆಯಾಗದೆ ಸ್ಥಿರವಾಗಿದ್ದರೆ ಸಾಕು ಎಂದು ಗ್ರಾಹಕರು ಹೇಳುತ್ತಿದ್ದಾರೆ.

ಆಭರಣ ಚಿನ್ನ ಗ್ರಾಮ್ ಗೆ 3 ಸಾವಿರ ರುಪಾಯಿ, ದೀಪಾವಳಿಗೆ ಏನು ಕಥೆ?

ಜಾಗತಿಕ ಮಾರುಕಟ್ಟೆಯಲ್ಲಿ ಸಕಾರಾತ್ಮಕ ಬೆಳವಣಿಗೆ ಹಾಗೂ ನಾಣ್ಯ ತಯಾರಿಕರಿಂದ ಬೇಡಿಕೆ ಹೆಚ್ಚಾದ ಕಾರಣ ಚಿನ್ನ, ಬೆಳ್ಳಿ ಬೆಲೆಯಲ್ಲಿ ಹೆಚ್ಚಳ ಕಂಡು ಬಂದಿತ್ತು. ಆದರೆ, ಈಗ ಮುಂದಿನ ಎರಡು ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಖರೀದಿ ನಿರೀಕ್ಷಿಸಲಾಗಿದೆ.

6 ವರ್ಷಗಳಲ್ಲಿ ಬೆಲೆ ಏರಿಕೆ: 10ಗ್ರಾಂ ಚಿನ್ನದ ಬೆಲೆ 32,780ರು ಏರಿಕೆಯಾಗಿದ್ದು, ಕಳೆದ 6 ವರ್ಷಗಳಲ್ಲೇ ಅಧಿಕ ಪ್ರಮಾಣಕ್ಕೆ ತಲುಪಿದೆ.

ಜಾಗತಿಕವಾಗಿ ಚಿನ್ನದ ಬೆಲೆ ಈ ವಾರದಲ್ಲಿ 1,233.20 ಯುಎಸ್ ಡಾಲರ್ ಪ್ರತಿ ಔನ್ಸ್ ತಲುಪಿತ್ತು. ಕಳೆದ ವಾರದ 1,233.80 ಯುಎಸ್ ಡಾಲರ್ ಪ್ರತಿ ಔನ್ಸ್ ನಂತೆ ವಹಿವಾಟು ನಡೆಸಿತ್ತು. ಬೆಳ್ಳಿ ಪ್ರತಿ ಔನ್ಸ್ ಗೆ 14.82 ಯುಎಸ್ ಡಾಲರ್ ನಷ್ಟಿತ್ತು.

ನವರಾತ್ರಿಯಲ್ಲಿ ಇಳಿದ ಚಿನ್ನ, ದೀಪಾವಳಿಯಲ್ಲಿ ರಾಕೆಟ್ ನಂತೆ ಏರಲಿದೆ?

ದೆಹಲಿಯಲ್ಲಿ ಈ ವಾರದ ಸರಾಸರಿಯಂತೆ 99.9% ಚಿನ್ನದ ಬೆಲೆ 32,550 ರು(10 ಗ್ರಾಂ) ಹಾಗೂ 99.5% ಚಿನ್ನದ ಬೆಲೆ 32400ರು ನಷ್ಟಿತ್ತು. 29 ನವೆಂಬರ್ 2012ರ ನಂತರ ಚಿನ್ನದ ಬೆಲೆ ಈ ಹಂತಕ್ಕೆ ಮುಟ್ಟಿದೆ.

ಬೆಂಗಳೂರಿನಲ್ಲಿ ಭಾನುವಾರ(ನವೆಂಬರ್ 04)ದಂದು 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 29,800ರು ಹಾಗೂ 24 ಕ್ಯಾರೆಟ್ 10 ಗ್ರಾಂ ಬೆಲೆ 31,610 ರು ನಷ್ಟಿತ್ತು. ಬೆಳ್ಳಿ 1 ಕೆಜಿ ಬೆಲೆ 41,450 ರು ನಷ್ಟಿತ್ತು.

English summary
Gold strengthened for the sixth straight week and gathered further grounds to hit an almost six-year high of Rs 32,780 and ended at Rs 32,650 per 10 gram at the bullion market, amid pick-up in buying activity ahead of Deepavali.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X